ಅಭಿಪ್ರಾಯ / ಸಲಹೆಗಳು

ಆಟೋ ಕಳ್ಳತನ ಪ್ರಕರಣವನ್ನು ಭೇಧಿಸಿ 2 ಮಂದಿ ಆರೋಪಿಗಳು ಮತ್ತು ಆಟೋ ರಿಕ್ಷಾ ವಶ

ದಿನಾಂಕ:19.06.2021 ರಂದು ನವೀನ್ ಕೆ ಎಂಬವರ ಮನೆಯ  ಶೆಡ್ ನಲ್ಲಿದ್ದ ಆಟೋ ರಿಕ್ಷಾ ಕಳ್ಳತನವಾಗಿರುವ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಕಳ್ಳತನದ ಪ್ರಕರಣವನ್ನು ಭೇಧಿಸಲು ವಿಶೇಷ ಪತ್ತೆ ತಂಡ ರಚಿಸಲು ಮಾನ್ಯ ಪೊಲೀಸು ಅಧೀಕ್ಷಕರಾದ ಸೋನಾವಣೆ ರಿಷಿಕೇಶ್ ಐಪಿಎಸ್ ರವರು ಆದೇಶಿಸಿದಂತೆ, ಉಪ್ಪಿನಂಗಡಿ ಪೊಲಿಸ್ ಠಾಣಾ ಪೊಲಿಸ್ ಉಪನಿರೀಕ್ಷಕ ಕುಮಾರ್ ಸಿ ಕಾಂಬ್ಳೆ ರವರ ನೇತೃತ್ವದಲ್ಲಿ ವಿಶೇಷ ಪತ್ತೆ ತಂಡ ರಚಿಸಿ  ಈ ವಿಶೇಷ ತಂಡವು ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ  ಭಾಸ್ಕರ ಒಕ್ಕಲಿಗ  ರವರ  ಮತ್ತು ಮಾನ್ಯ ಪೊಲೀಸ್ ಉಪಾಧೀಕ್ಷಕರು ಪುತ್ತೂರು ಉಪ ವಿಭಾಗದ  ಕು|| ಗಾನ ಪಿ ಕುಮಾರ್ ರವರ ಹಾಗೂ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ರವರ ಮಾರ್ಗದರ್ಶನದಲ್ಲಿ,  ಸದ್ರಿ ಪತ್ತೆ ತಂಡವು ದಿನಾಂಕ 29-06-2021 ರಂದು  ನೆಕ್ಕಿಲಾಡಿ ಪೊಲೀಸ್ ಚೆಕ್ ಪೋಸ್ಟ್ ಬಳಿ  02 ಜನ ಆರೋಪಿಗಳಾದ 1)  ಯತಿರಾಜ್ (30) ತಂದೆ:ಡೊಂಬಯ್ಯ ಪೂಜಾರಿ ವಾಸ:ಸೀಂತೂರು ಮನೆ ಪಾತೂರು ಗ್ರಾಮ ಮತ್ತು ಅಂಚೆ ಮಂಜೇಶ್ವರ  ತಾಲೂಕು ಕಾಸರಗೋಡು ಜಿಲ್ಲೆ ಕೇರಳ ರಾಜ್ಯ2)  ಸಂತೋಷ್ (18) ತಂದೆ:ಚಂದ್ರ ಟಿ    ವಾಸ:ಬಿಳಿನೆಲೆ ಬೈಲು ಮನೆ, ಬಿಳಿನೆಲೆ ಗ್ರಾಮ ಕಡಬ ತಾಲೂಕು  ಎಂಬವರುಗಳನ್ನು ಮತ್ತು ಅವರ ಜೊತೆಯಲ್ಲಿದ್ದ ಆಟೋ ರಿಕ್ಷಾವನ್ನು  ವಶಕ್ಕೆ ಪಡೆಯಲಾಗಿರುತ್ತದೆ.

                    ಈ ವಿಶೇಷ ಪತ್ತೆ ತಂಡ ಕುಮಾರ್ ಸಿ ಕಾಂಬ್ಳೆ ಪಿ.ಎಸ್.ಐ ಉಪ್ಪಿನಂಗಡಿ,ರವರ ನೇತೃತ್ವದಲ್ಲಿ, ಸಿಬ್ಬಂದಿಗಳಾದ ಎಎಸ್ಐ ವಿಜಯೇಂದ್ರ,ಎಎಸ್ಐ ಸೀತಾರಾಮ ಗೌಡ,ಹೆಚ್ ಸಿ ಹರಿಶ್ಚಂದ್ರ, ವಿನಾಯಕ ಎಸ್ ಬಾರ್ಕಿ,ನವೀನ, ಪ್ರತಾಪ್ ಎನ್,ನಂಜುಂಡಯ್ಯ,ದ.ಕ ಜಿಲ್ಲಾ ಗಣಕ ಯಂತ್ರ ಸಿಬ್ಬಂದಿಗಳಾದ ಸಂಪತ್ ಕುಮಾರ್,ದಿವಾಕರ್,ರವರು  ಭಾಗವಹಿಸಿರುತ್ತಾರೆ.ಈ ಪ್ರಕರಣದಲ್ಲಿನ ಎರಡು ಜನ ಆರೋಪಿಗಳನ್ನು ಮಾನ್ಯ ನ್ಯಾಯಲಯಕ್ಕೆ ಹಾಜರುಪಡಿಸಲಾಗಿರುತ್ತದೆ.

https://www.dkpolice.karnataka.gov.in/gallery/Uppinangady PS Vehicle Theft Case Detection 1 6 2021/kn

ಇತ್ತೀಚಿನ ನವೀಕರಣ​ : 23-11-2022 04:29 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080