ಅಭಿಪ್ರಾಯ / ಸಲಹೆಗಳು

ಅಂತರ್ ರಾಜ್ಯ ಮನೆ ಕಳ್ಳತನ ಹಾಗೂ ದೇವಸ್ಥಾನ ಕಳ್ಳತನದ ಆರೋಪಿಗಳ ಪತ್ತೆ ಹಾಗೂ ಚಿನ್ನಾಭರಣ ಮತ್ತು ಬೆಳ್ಳಿ ವಶ

ದಿನಾಂಕ 26-02-2022 ರಂದು ರಾತ್ರಿ ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ  ಬಲ್ನಾಡು ಉಜ್ರುಪ್ಪಾದೆ ಎಂಬಲ್ಲಿ ಮನೆಯ ಬೀಗವನ್ನು ಮುರಿದು ಸುಮಾರು 160 ಗ್ರಾಂ ಚಿನ್ನಾಭರಣ ಕಳ್ಳತನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಆಕ್ರ 26/2022 ರಂತೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿ ತನಿಖೆ ನಡೆಸಲಾಗಿ ಆರೋಪಿಗಳಾದ  

  • 1) ಮಹಮ್ಮದ್ ಅಶ್ರಫ್ ಯಾನೆ ತಾರಿ ಗುಡ್ಡೆ ಅಶ್ರಫ್ ಯಾನೇ ಮನ್ಸೂರ್ ಯಾನೇ ಕಳ್ಳ ಅಶ್ರಫ್, ಪ್ರಾಯ 42  ವರ್ಷ ತಾರಿಗುಟ್ಟೆ ಮನೆ ಚಿಕ್ಕಮೂಡ್ನೂರು ಪುತ್ತೂರು ತಾಲೂಕು 

 

  • 2) ಕೆ. ಮೊಹಮ್ಮದ್ ಸಲಾಂ, ವಾಸ: ಕೆರೆಮೂಲೆ ಮನೆ, ಸಾಲ್ಮರ, ಚಿಕ್ಕಮುಡ್ನೂರು ಗ್ರಾಮ, ಪುತ್ತೂರು ತಾಲೂಕು,ಪ್ರಸ್ತುತ: ಸೈಯದ್ ಮಲೆ, ಗುಂಪಕಲ್ಲು ಮನೆ, ಸಾಲ್ಮರ, ಚಿಕ್ಕಮುಡ್ನೂರು ಗ್ರಾಮ, ಪುತ್ತೂರು ತಾಲೂಕು ಎಂಬವರನ್ನು ದಸ್ತಗಿರಿ ಮಾಡಲಾಗಿರುತ್ತದೆ.

            ಸದರಿ ಆರೋಪಿಗಳನ್ನು ತನಿಖೆ ಮಾಡಲಾಗಿ ಇವರುಗಳು ವಿಟ್ಲ ಠಾಣಾ ವ್ಯಾಪ್ತಿಯ ಪುಣಚ ಗ್ರಾಮದ ಅಜ್ಜನಡ್ಕ ಮಹಮ್ಮದ್ ಅಲಿ ಎಂಬವರ ಮನೆ ಕಳ್ಳತನ, ಬಲ್ನಾಡು ಗ್ರಾಮದ ವಿಷ್ಣು ಮೂರ್ತಿ ದೈವಸ್ಥಾನ ಕಳ್ಳತನ ಪ್ರಕರಣ, ಇರ್ದೆ ಶ್ರಿ ವಿಷ್ಣು ಮೂರ್ತಿ  ದೇವಸ್ಥಾನ, ಕಾವು ಸಿರಿ ಭೂಮಿ ಕೃಷಿ ಉತ್ಪನ್ನ ಅಂಗಡಿ ಕಳ್ಳತನ, ಉತ್ತರ ಕನ್ನಡ ಜಿಲ್ಲೆ ಭಟ್ಕಳ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣ ಹಾಗೂ ಕೇರಳ ರಾಜ್ಯದ ಕಾಸರಗೋಡು ಆದೂರು ಪೊಲೀಸ್ ಠಾಣಾ ವ್ಯಾಪ್ತಿಯ ಚೆರ್ಕಳ ದಲ್ಲಿ ಎರಡು  ಮನೆ ಕಳ್ಳತನ ಪ್ರಕರಣಗಳ ಬಗ್ಗೆ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದು, ಆರೋಪಿತರಿಂದ ಸುಮಾರು 5 ಲಕ್ಷ ಮೌಲ್ಯದ ಚಿನ್ನಾಭರಣ,ಬೆಳ್ಳಿಯ ವಸ್ತುಗಳು, ಲ್ಯಾಪ್ ಟಾಪ್, ಸಿಸಿ ಕ್ಯಾಮರ ಡಿವಿಆರ್ ಹಾಗೂ  ಕಳ್ಳತನಕ್ಕೆ ಉಪಯೋಗಿಸಿದ  ಮೋಟಾರು ಸೈಕಲನ್ನು ವಶಪಡಿಸಿಕೊಳ್ಳಲಾಗಿದೆ. ಈ ಎಲ್ಲಾ ಸೊತ್ತುಗಳ  ಒಟ್ಟು ಮೌಲ್ಯ ಸುಮಾರು 6.5 ಲಕ್ಷ ರೂ ಆಗಬಹುದು.

       

           ಸದರಿ ಆರೋಪಿಗಳು ಈ ಹಿಂದೆ ಕೇರಳ ಮತ್ತು ಕರ್ನಾಟಕ ರಾಜ್ಯದಲ್ಲಿ ಹಲವು ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದು ಇವರುಗಳ ಮೇಲೆ ಈ ಹಿಂದೆ ಉಪ್ಪಿನಂಗಡಿ ಪೊಲೀಸ್ ಠಾಣೆ, ಸುಳ್ಯ ಪೊಲೀಸ್ ಠಾಣೆ, ಪುತ್ತೂರು ನಗರ ಠಾಣೆ, ಬೆಳ್ಳಾರೆ ಪೊಲೀಸ್ ಠಾಣೆ, ಬಂಟ್ವಾಳ ಪೊಲೀಸ್ ಠಾಣೆ, ಧರ್ಮಸ್ಥಳ ಪೊಲೀಸ್ ಠಾಣೆ, ವಿಟ್ಲ ಪೊಲೀಸ್ ಠಾಣೆ, ಕೇರಳ ರಾಜ್ಯದ ಮಲಪ್ಪುರಂ ಕೊಂಡೆಟ್ಟಿ ಪೊಲೀಸ್ ಠಾಣೆ, ಆದೂರೂ ಪೊಲೀಸ್ ಠಾಣೆ, ಕೊಡಗಿನ ಸೋಮಾವಾರ ಪೇಟೆ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣ ದಾಖಲಾಗಿದ್ದು, ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಇವರುಗಳ ಮೇಲೆ ವಾರಂಟ್ ಜ್ಯಾರಿಯಾಗಿ ತಲೆಮರೆಸಿಕೊಂಡಿರುವುದಾಗಿದೆ.

        ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಮಾನ್ಯ ಪೊಲೀಸು ಅಧೀಕ್ಷಕರು ಋಷೀಕೇಶ್ ಸೋನಾವಣೆ ಮತ್ತು ಮಾನ್ಯ ಹೆಚ್ಚುವರಿ ಪೊಲೀಸು ಅದೀಕ್ಷಕರು ಕುಮಾರ ಚಂದ್ರ ರವರ  ಮಾರ್ಗದರ್ಶನದಲ್ಲಿ, ಮಾನ್ಯ ಪೊಲೀಸು ಉಪಾಧೀಕ್ಷಕರು ಡಾ|| ಗಾನ ಪಿ ಕುಮಾರ್ ಪುತ್ತೂರು ರವರ ನೇತೃತ್ವದಲ್ಲಿ, ಶ್ರೀ ಉಮೇಶ್ ಯು, ಪೊಲೀಸು ವೃತ್ತ ನಿರೀಕ್ಷಕರು ಪುತ್ತೂರು ಗ್ರಾಮಾಂತರ ವೃತ್ತ, ಶ್ರೀ ಉದಯರವಿ ಎಂ ವೈ, ಶ್ರೀ ಅಮೀನ್ ಸಾಬ್ ಅತ್ತಾರ್ ಪಿಎಸ್ಐ ಪುತ್ತೂರು ಗ್ರಾಮಾಂತರ ಠಾಣೆ ರವರ ವಿಶೇಷ  ತಂಡದ ಸಿಬಂದಿಗಳಾದ  ಅದ್ರಾಮ್, ಪ್ರವೀಣ್ ರೈ ಪಾಲ್ತಾಡಿ, ವರ್ಗಿಸ್, ಕೃಷ್ಣಪ್ಪ ಗೌಡ, ಜಗದೀಶ್ ಅತ್ತಾಜೆ, ಧರ್ಮಪಾಲ್, ಎಎಸ್ಐ ಮುರುಗೇಶ್, ಶಿವರಾಮ ಗೌಡ, ಧರ್ಣಪ್ಪ ಗೌಡ, ದೇವರಾಜ್, ಹರ್ಷೀತ್, ಗಿರೀಶ್, ಗುಡದಪ್ಪ ತೋಟದ್, ವಿನೋದ್ ಹಾಗೂ  ಮಪಿಸಿ ಗಾಯತ್ರಿ ಮತ್ತು ಜಿಲ್ಲಾ ಗಣಕ ಯಂತ್ರ ವಿಭಾಗದ ಸಂಪತ್ ಮತ್ತು ದಿವಾಕರ ರವರು  ಭಾಗವಹಿಸಿರುತ್ತಾರೆ. ಪ್ರಕರಣ ನಡೆದ ಒಂದೇ ತಿಂಗಳಿನಲ್ಲಿ ಪ್ರಕಣವನ್ನು ಭೇದಿಸಿದ  ಪೊಲೀಸ್ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಬಹುಮಾನವನ್ನು ಘೋಷಿಸಿರುತ್ತಾರೆ ಹಾಗೂ ಸಾರ್ವಜನಿಕರ ಪ್ರಶಂಸೆಗೆ  ಪಾತ್ರರಾಗಿರುತ್ತಾರೆ.

 

ವೀಕ್ಷಿಸಿ

ಇತ್ತೀಚಿನ ನವೀಕರಣ​ : 23-11-2022 03:38 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080