ಅಭಿಪ್ರಾಯ / ಸಲಹೆಗಳು

12 ಲಕ್ಷಗಳಿಗೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣವನ್ನು ಕ್ಷಿಪ್ರ ಕಾರ್ಯಾಚರಣೆಯಲ್ಲಿ ಬಂಧಿಸಿದ ಬೆಳ್ತಂಗಡಿ ಪೊಲೀಸರು

ದಿನಾಂಕ : 31-10-2021 ರಂದು ಫಿರ್ಯಾಧಿ ಮಹಮ್ಮದ್, ವಾಸ : ದೇರಾಜೆ ಮನೆ , ಇಂದಬೆಟ್ಟು ಗ್ರಾಮ , ಬೆಳ್ತಂಗಡಿ  ತಾಲೂಕು ಎಂಬವರ ಮನೆಯಲ್ಲಿ ಯಾರೂ ಇಲ್ಲದ ಸಮಯ ಯಾರೋ ಕಳ್ಳರು ಮನೆಗೆ ನುಗ್ಗಿ ಮನೆಯ ಗೋದ್ರೇಜ್ ನಲ್ಲಿಟ್ಟಿದ್ದ ಸುಮಾರು 12,05,200 ರೂಪಾಯಿ ಮೌಲ್ಯದ ವಿವಿಧ ರೀತಿಯ 40 ಪವನ್ ಚಿನ್ನಾಭರಣಗಳು ಮತ್ತು ನಗದು ಹಣ 5200 ರೂಪಾಯಿ ಕಳವಾಗಿರುತ್ತದೆ . ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 95/2021 ಕಲಂ 454,380 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ಪ್ರಕರಣದಲ್ಲಿ ಆರೋಪಿಗಳ ಪತ್ತೆಗಾಗಿ ಮಾನ್ಯ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಸೋನವನ ಋಷಿಕೇಶ್ ಭಗವಾನ್ ಐ.ಪಿ.ಎಸ್ , ಶ್ರೀ ಶಿವಕುಮಾರ್ ಗುಣಾರೆ , ಹೆಚ್ಚುವರಿ ಪೊಲೀಸ್ ಅಧೀಕ್ಷಕರು ರವರುಗಳ ನಿರ್ದೇಶನದಂತೆ ,, ಶ್ರೀ ಶಿವಾಂಶು ರಜಪೂತ್ ಬಂಟ್ವಾಳ ಸಹಾಯಕ ಪೊಲೀಸ್ ಅಧೀಕ್ಷಕರು , ರವರ ಸೂಚನೆಯಂತ ಈ ಪ್ರಕರಣದ ತನಿಖಾಧಿಕಾರಿಯಾದ ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ಶ್ರೀ ಶಿವಕುಮಾರ ಬಿ , ಬೆಳ್ತಂಗಡಿ ಪೊಲೀಸ್ ಠಾಣಾ ಪಿ.ಎಸ್.ಐ ಶ್ರೀ ನಂದ ಕುಮಾರ್ , ಪ್ರೊ.ಪಿಎಸ್‌ಐ ಮೂರ್ತಿ , ಎಎಸೈ , ದೇವಪ್ಪ ಎಂಕ , ಸಿಬ್ಬಂದಿಗಳಾದ ಲಾರೆನ್ಸ್ ರಾಜೇಶ್ ಎನ್ , ವೃಷಭ , ಪ್ರಮೋದ್ ನಾಯ್ಕ , ಇಬ್ರಾಹಿಂ ಗರ್ಡಾಡಿ , ಲತೀಫ್ , ವಿಜಯ ಕುಮಾರ್ ರೈ , ವೆಂಕಟೇಶ್ , ಬಸವರಾಜ್ , ಚರಣ್ , ಅವಿನಾಶ್ , ವಾಹನ ಚಾಲಕರಾದ ಮಹಮ್ಮದ್ ಆಸೀಫ್ , ಸತೀಶ್ , ತಾಂತ್ರಿಕ ಸಿಬ್ಬಂದಿಗಳಾದ ದಿವಾಕರ , ಸಂಪತ್ ಕುಮಾರ್ ಗಳ ಸಹಾಯದಿಂದ ಆರೋಪಿಗಳನ್ನು ಪತ್ತೆ ಮಾಡಿ ಆರೋಪಿಗಳಾದ 1 ) ಮಹಮ್ಮದ್ ಸ್ವಾಲಿ ಪ್ರಾಯ 26 ವರ್ಷ , ತಂದೆ : ಅಬ್ದುಲ್ ರಹಿಮಾನ್ , ವಾಸ : ನಿರಿಂದಿ ಮನೆ , ನಾವೂರು ಗ್ರಾಮ , ಬೆಳ್ತಂಗಡಿ ತಾಲೂಕು , 2 ) ಯಾಹ್ಯಾ ಪ್ರಾಯ 32 ವರ್ಷ , ತಂದೆ : ಅಬ್ಬಾಸ್ ವಾಸ : ಕುಂಟಿನಿ ಮನೆ , ಲಾಯಿಲಾ ಗ್ರಾಮ , ಬೆಳ್ತಂಗಡಿ ತಾಲೂಕು 3 ) ಬಿ.ಹೆಚ್ ನೌಫಲ್ ಪ್ರಾಯ 27 ವರ್ಷ , ತಂದೆ : ಹುಸೈನ್ , ವಾಸ : ಕಿರ್ನಡ್ಕ ಮನೆ , ನಾವೂರು ಗ್ರಾಮ , ಬೆಳ್ತಂಗಡಿ ತಾಲೂಕು ಎಂಬವರುಗಳನ್ನು ಮತ್ತು ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ ಅಲ್ಲೋ ಕಾರು , ಮೋಟಾರು ಸೈಕಲ್ , ನಾಲ್ಕು ಮೊಬೈಲ್ ಹ್ಯಾಂಡ್ ಸೆಟ್ ಇವುಗಳ ಒಟ್ಟು ಮೌಲ್ಯ 1,69,500 ರೂಗಳು , , ಹಾಗೂ ಕಳವಾದ 12,05,200 ರೂಪಾಯಿ ಮೌಲ್ಯದ 320 ಗ್ರಾಂ ಚಿನ್ನಾಭರಣಗಳು , ನಗದು 1230 ರೂ ಗಳನ್ನು ಸ್ವಾಧೀನಪಡಿಸಿಕೊಂಡು , ಸ್ವಾಧೀನ ಪಡಿಸಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯ 13,75,930 ರೂಪಾಯಿ ಆಗಿದ್ದು, ಆರೋಪಿಗಳನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುವುದಾಗಿದೆ .

Photos

ಇತ್ತೀಚಿನ ನವೀಕರಣ​ : 23-11-2022 04:12 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080