ಅಭಿಪ್ರಾಯ / ಸಲಹೆಗಳು

ಕುಖ್ಯಾತ ಗ್ಯಾಂಗ್‌ ಸದಸ್ಯರನ್ನು ಬಂಧಿಸಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು

ದಿನಾಂಕ 25/3/2021 ರಂದು ಕೇರಳ ಮಂಜೇಶ್ವರದ ಮಿಯಪದವು ಪರಿಸರದಲ್ಲಿ D squad ಗ್ಯಾಂಗ್ ವ್ಯಕ್ತಿಗಳು ಎಂಬುದಾಗಿ ತಮ್ಮನ್ನು ಗುರುತಿಸಿಕೊಂಡಿದ್ದ ಗುಂಪೊಂದು ಮಂಜೇಶ್ವರ ಠಾಣಾ ವ್ಯಾಪ್ತಿಯ ಕ್ಲಬ್ ನಲ್ಲಿ ಫೈರಿಂಗ್ ನಡೆಸಿ ತಪ್ಪಿಸಿಕೊಂಡಿರುವ ಹಿನ್ನಲೆಯಲ್ಲಿ ಕಾಸರಗೋಡು ಜಿಲ್ಲಾ ಪೊಲೀಸರು ಮೀಯಪದವು ಎಂಬಲ್ಲಿ ಬಂಧಿಸಲು ಯತ್ನಿಸಿದಾಗ ಪೊಲೀಸರ ಮೇಲೆಯೇ ಆರೋಪಿಗಳು ಗುಂಡು ಹಾರಿಸಿ ತಪ್ಪಿಸಿಕೊಂಡು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಗಡಿ ಭಾಗದ ಕಡೆಗೆ ಸಂಚರಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ನಿರ್ಗಮಿತ ಮಾನ್ಯ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಬಿ ಎಂ ಲಕ್ಷ್ಮಿ ಪ್ರಸಾದ್ IPS ರವರ ನಿರ್ದೇಶನದಂತೆ ,ಬಂಟ್ವಾಳ ಪೊಲೀಸ್ ಉಪಾಧಿಕ್ಷರಾದ ವಲೈಂಟೆನ್ ಡಿಸೋಜ ರವರ ಸೂಚನೆಯಂತೆ, ಟಿ ಡಿ ನಾಗರಾಜ ಸಿಪಿಐ ರವರ ಮಾರ್ಗದರ್ಶನದಲ್ಲಿ ವಿಟ್ಲ ಸಬ್ ಇನ್ಸ್ಪೆಕ್ಟರ್ ವಿನೋದ ರೆಡ್ಡಿ ಮತ್ತು ಸಿಬ್ಬಂದಿಗಳು ಕೋಡಂಗೆ ಎಂಬಲ್ಲಿ ತಾತ್ಕಾಲಿಕ ಚೆಕ್ ಪೋಸ್ಟ್ ನಿರ್ಮಿಸಿ ಹೊಂಚು ಹಾಕಿ ಕಾಯುತ್ತಿರುವಾಗ ದಿನಾಂಕ 26/3/2021 ರಂದು ಬೆಳಗಿನ ಜಾವ ಸುಮಾರು 4 ಘಂಟೆಗೆ ಬಿಳಿ ಬಣ್ಣದ ಐ - 20 ಕಾರ್ ನಲ್ಲಿ ಸಂಶಯಿತರಿದ್ದು ತಡೆದು ನಿಲ್ಲಿಸಲು ಪ್ರಯತ್ನಿಸಿದಾಗ ಪೊಲೀಸ್ ಮೇಲೆಯೇ ಆರೋಪಿಗಳು ಒಂದು ಸುತ್ತು ಗುಂಡು ಹಾರಿಸಿ ಪರಾರಿಯಾಗಲು ಪ್ರಯತ್ನಿಸಿದ್ದು, ಪೊಲೀಸ್ ತಂಡವು 3 ಜನ ಆರೋಪಿಗಳಾದ 1.ಆಸ್ಫಕ,2.ಶಾಕಿರ್, 3.ಲತೀಫ್ ಎಂಬುವವರನ್ನು ವಶಕ್ಕೆ ಪಡೆದು ಒಂದು ಪಿಸ್ತೂಲ್ ಮತ್ತು ಮದ್ದು ಗುಂಡುಗಳು ಮತ್ತು ಕೊಡಲಿ, ಡ್ರಾಗರ್,ಮಾದಕ ದ್ರವ್ಯಗಳನ್ನು ಕಾರ್ ಸಮೇತ ವಶಕ್ಕೆ ಪಡೆದಿದ್ದು ಆರೋಪಿಗಳಾದ  ರಹೀಂ ಮತ್ತು ರಾಕೇಶರವರು ಪರಾರಿ ಆಗಿದ್ದರು,

        ತನಿಖೆಯನ್ನು ಮುಂದುವರೆಸಿ ದಿನಾಂಕ 5/4/2021 ರಂದು ಈ ಹಿಂದೆ  ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ತನಿಖಾ ತಂಡವು ಬುಡೊಳಿ ಎಂಬಲ್ಲಿ 4 ಜನ ಆರೋಪಿಗಳನ್ನು ವಶಕ್ಕೆ ಪಡೆದು ಶಸ್ತ್ರಾಸ್ತ್ರಗಳನ್ನು ವಶ ಪಡಿಸಿಕೊಂಡಿರುತ್ತಾರೆ.

 ಈ ವರೆಗೆ ಸದ್ರಿ ಪ್ರಕರಣದಲ್ಲಿ ದಸ್ತಗಿರಿ ಆಗಿರುವ ಆರೋಪಿಗಳು

1). ಅಸ್ಫಾಖ್ ಮಿಯಾಪದವು

2).ಶಾಕಿರ್ ಮಿಯಾಪದವು

3).ಲತೀಫ್ ಮಿಯಾಪದವು

4).ರೆಹಮಾನ್ ಮೀಯಾಪದವು

5).ರಾಕೇಶ್ ಜಲಾಗಾವ್,ಮಹಾರಾಷ್ಟ್ರ

6). ಕೂವಾ ಫಯಾಜ್

7).ಹೈದರ್ ಆಲಿ ಅಲಿಯಾಸ್ ಹೈದರ್ ,ಮಂಗಲ್ಪಾಡಿ ನಿವಾಸಿ, ಮಿಯಾಪದವು

 

 ಸ್ವಾಧೀನಪಡಿಸಿಕೊಂಡಿರುವ ಮಾರಕಾಯುಧಗಳು

1) ಪಿಸ್ತೂಲುಗಳು = 4 ಮತ್ತು 27 ರೌಂಡ್ಸ್ ಗಳು

2). SBML ಕೋವಿ 1

3). ಕೊಡಲಿ 1

4). ಡ್ರ್ಯಾಗರ್ 1

5). ಹ್ಯಾಂಡ್ ಪಂಚ್ 2

6).MDMA ಮಾದಕ ದ್ರವ್ಯ

7).LSD ಮಾದಕ ದ್ರವ್ಯ

8) ಕಾರ್ ಗಳು 2

       

      ಈ ಕಾರ್ಯಾಚರಣೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಾದ ಶ್ರೀ ಋಷಿಕೇಶ ಭಗವಾನ್ ಸೋನೆವಾನೆ ಐಪಿಎಸ್ ರವರ ನಿರ್ದೇಶನದಂತೆ ,ಬಂಟ್ವಾಳ ಉಪಾಧಿಕ್ಷಕರಾದ ವ್ಯಾಲೆಂಟೈನ್ ಡಿಸೋಜ ರವರ ಮಾರ್ಗದರ್ಶನದಲ್ಲಿ , ಬಂಟ್ವಾಳ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಟಿ ಡಿ ನಾಗರಾಜರವರ ನೇತೃತ್ವದಲ್ಲಿ ವಿಟ್ಲ ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ವಿನೋದ ರೆಡ್ಡಿ ಮತ್ತು  ASI ಕರುಣಾಕರ,ಸಿಬ್ಬಂದಿಗಳಾದ  ಗಿರೀಶ್,ಪ್ರಸನ್ನ ,ಪ್ರತಾಪ, ಲೊಕೇಶ್,ವಿನಾಯಕ, ನಝೀರ್,ವಿವೇಕ,ಹೇಮರಾಜ್,ಪ್ರವೀಣರವರಿದ್ದ ತಂಡವು ಕಾರ್ಯಾಚರಣೆಯನ್ನು ಕೈಗೊಂಡಿದ್ದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿರುತ್ತದೆ.

ಇತ್ತೀಚಿನ ನವೀಕರಣ​ : 23-11-2022 04:34 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080