ಅಭಿಪ್ರಾಯ / ಸಲಹೆಗಳು

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು

ಪುತ್ತೂರು ಗ್ರಾಮಾಂತರ ಠಾಣಾ ಅ.ಕ್ರ 24/2006 ಕಲಂ 87, 71 (ಎ) ಕೆ.ಎಫ್ ಆಕ್ಟ್ ಪ್ರಕರಣದಲ್ಲಿ ಪುತ್ತೂರಿನಿಂದ ಕೇರಳ ರಾಜ್ಯಕ್ಕೆ ಅಕ್ರಮವಾಗಿ ಸುಮಾರು 2 ಲೀಟರ್  ಶ್ರೀಗಂಧದ ಎಣ್ಣೆಯನ್ನು ಸಾಗಾಟ ಮಾಡುತ್ತಿದ್ದ ಪ್ರಕರಣದಲ್ಲಿ ಬಂಧಿತನಾಗಿ ಮಾನ್ಯ ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಗೊಂಡಿದ್ದ ಆರೋಪಿ ಮಹಮ್ಮದ್ ರಫೀಕ್.ಎಮ್.ಎಮ್, ಪ್ರಾಯ: 41 ವರ್ಷ, ತಂದೆ: ಅಬ್ದುಲ್ ಖಾದರ್, ವಾಸ: ತಾಯಲ್ ಮನೆ, ಕೊಲ್ಲಂಬಾಡಿ, ಕಾಸರಗೋಡು ಎಂಬಾತನು ನಂತರ ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ಸುಮಾರು 16 ವರ್ಷಗಳಿಂದ ತಲೆಮರೆಸಿಕೊಂಡಿದ್ದು ಈತನ ಪತ್ತೆಗಾಗಿ ಮಾನ್ಯ ನ್ಯಾಯಾಲಯವು ದಸ್ತಗಿರಿ ವಾರೆಂಟ್ ನ್ನು ಹೊರಡಿಸಿರುತ್ತದೆ.  ಈತನನ್ನು ಡಾ| ಗಾನಾ ಪಿ. ಕುಮಾರ್, ಪೊಲೀಸ್ ಉಪಾಧೀಕ್ಷಕರು ಪುತ್ತೂರು ಉಪ ವಿಭಾಗರವರು ಹಾಗೂ ಉಮೇಶ್ ಉಪ್ಪಳಿಕೆ, ವೃತ್ತ ನಿರೀಕ್ಷಕರು, ಪುತ್ತೂರು ಗ್ರಾಮಾಂತರ ರವರ ಮಾರ್ಗದರ್ಶನದಂತೆ  ಠಾಣಾ ಉಪನಿರೀಕ್ಷಕರುಗಳಾದ ಶ್ರೀ ಉದಯರವಿ.ಎಂ.ವೈ, ಮತ್ತು ಶ್ರೀ ಅಮೀನಸಾಬ ಎಮ್ ಅತ್ತಾರ ಹಾಗೂ ಸಿಬ್ಬಂದಿಗಳಾದ ಹೆಚ್ ಸಿ ಅದ್ರಾಮ್, ಮತ್ತು ಪ್ರವೀಣ್,ರೈ ರವರು  ದಿನಾಂಕ- 17/11/2021 ರಂದು ಅಪರಾಹ್ನ 02:00 ಗಂಟೆಗೆ ಕೇರಳ ರಾಜ್ಯದ ಕಣ್ಣೂರ ಎಂಬಲ್ಲಿ ಪತ್ತೆ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುವುದಾಗಿದೆ.

 

Photo

ಇತ್ತೀಚಿನ ನವೀಕರಣ​ : 23-11-2022 04:08 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080