ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

 

ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಯೋಗೀಶ್ ಶೆಟ್ಟಿ ಪ್ರಾಯ 43 ವರ್ಷ ತಂದೆ: ನಾರಾಯಣ ಶೆಟ್ಟಿ ವಾಸ: ಕಾಶಿ ಮಠ ಮನೆ, ವಿಟ್ಲ ಕಸಬಾ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿದಾರರು ವಿಟ್ಲ ಕಸಬಾ ಗ್ರಾಮದ ಕಾಶಿಮಠ ಎಂಬಲ್ಲಿ ದಿನಾಂಕ 08-02-2021 ರಂದು ಸುಮಾರು 10.45 ಗಂಟೆಗೆ ತನ್ನ ಗ್ಯಾರೇಜ್‌ನ ಮುಂದುಗಡೆ ನಿಂತುಕೊಂಡಿರುವ ಸಮಯ ಗ್ಯಾರೇಜ್‌ನಿಂದ ಸುಮಾರು 50 ಮೀಟರ್ ದೂರದಲ್ಲಿ ಉತ್ತರದಲ್ಲಿ ಗ್ಯಾರೇಜ್ ಮುಂದೆ ಇರುವ ಕಲ್ಲಡ್ಕ-ಕಾಂಞಗಾಡ್ ರಾ. ಹೆದ್ದಾರಿಯಲ್ಲಿ ವಿಟ್ಲ ಕಡೆಯಿಂದ ಉಕ್ಕುಡ ಕಡೆಗೆ ಕೆಎ-19-ಇಆರ್-2601ನೇ ಮೋಟಾರ್ ಸೈಕಲ್ಲನ್ನು ಅದರ ಸವಾರ ಸವಾರಿ ಮಾಡಿಕೊಂಡು ಬರುತ್ತಿರುವಾಗ ಅದರ ಹಿಂದಿನಿಂದ ವಿಟ್ಲ ಕಡೆಯಿಂದ ಉಕ್ಕುಡ ಕಡೆಗೆ ಕೆಎ-09-ಎಂಬಿ -0336ನೇ ಬೋಲೆರೋ ವಾಹನವನ್ನು ಅದರ ಚಾಲಕ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲಿನ ಹಿಂದುಗಡೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರ ರಸ್ತೆಗೆ ಬಿದ್ದು ಎರಡು ಕಾಲಿನ ಮೊಣ ಗಂಟಿನ ಬಳಿ ತೀವ್ರ ತರಹದ ಗುದ್ದಿದ ಗಾಯ ಮತ್ತು ತಲೆಗೆ ತೀವ್ರ ತರಹದ ಗುದ್ದಿದ್ದ ಗಾಯವಾಗಿರುತ್ತದೆ. ನಂತರ ಆತನ ಹೆಸರು ನಂತರ ಕೇಳಿ ತಿಳಿಯಲಾಗಿ ಬಾಲಕೃಷ್ಣ ಶೆಟ್ಟಿ ಎಂದು ತಿಳಿಯಿತು. ಅಪಘಾತಪಡಿಸಿದ ಬೋಲೆರೋ ವಾಹನದ ಚಾಲಕನ ಹೆಸರು ಕೇಳಿ ತಿಳಿಯಲಾಗಿ ಪ್ರವೀಣ್ ಕುಮಾರ್ ಎಂದು ತಿಳಿಯಿತು. ಗಾಯಳು ಬಾಲಕೃಷ್ಣ ಶೆಟ್ಟಿ ಪ್ರಾಯ 55 ರವರನ್ನು ಅದೇ ಬೋಲೆರೋ ವಾಹನದಲ್ಲಿ ವಿಟ್ಲದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 24/2021 ಕಲಂ:279,304 (ಎ)  ಬಾಧಂಸಂ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸುಧೀರ್‌ ಬಿ,  ಪ್ರಾಯ 43  ವರ್ಷ, ತಂದೆ: ಕೊರಗಪ್ಪ, ವಾಸ: ಶಿವನಿಲಯ, ಸಾಮೆತ್ತಡ್ಕ ಮನೆ, ರಾಘವೇಂದ್ರ ಮಠದ ಬಳಿ, ಪುತ್ತೂರು. ಎಂಬವರ ದೂರಿನಂತೆ ದಿನಾಂಕ 08-02-2021 ರಂದು 11-00 ಗಂಟೆಗೆ ಆರೋಪಿ ಪಿಕಪ್‌ ವಾಹನ ಚಾಲಕ ಹಮೀದ್‌ ಎಂಬವರು KA-21-A-7485 ನೇ ನೋಂದಣಿ ನಂಬ್ರದ ಪಿಕಪ್‌ ವಾಹನವನ್ನು ಮುಕ್ರಂಪಾಡಿ-ಮುಂಡೂರು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ನೈತಾಡಿ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್‌ಸೈಡ್‌ಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರ ಮುಂದಿನಿಂದ ಪ್ರಸಾದ್‌ ಕೆ ಎಂಬವರು ಸವಾರರಾಗಿ ನೈತಾಡಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21V-2087 ನೇ ನೋಂದಣಿ ನಂಬ್ರದ ಸ್ಕೂಟರ್‌ಗೆ ಅಪಘಾತವಾಗಿ, ಸ್ಕೂಟರನ್ನು ಪಿಕಪ್ ವಾಹನವು ದೂಡಿಕೊಂಡು ಹೋಗಿ, ರಸ್ತೆ ಬದಿಯಲ್ಲಿ ನಿಂತಿದ್ದು, ಅಪಘಾತದಿಂದ ಸ್ಕೂಟರ್‌ ಸವಾರನು ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ಬಗ್ಗೆ ಪುತ್ತೂರಿನ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  29/2021  ಕಲಂ: 279, 304(ಎ) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಲಕ್ಷ್ಮಣ ಪ್ರಾಯ 41 ವರ್ಷ ತಂದೆ: ದಿ|| ಜನಾರ್ಧನ ನಾಯ್ಕ್ ವಾಸ: ಮೊಟ್ಟೆತ್ತಡ್ಕ ಮನೆ, ಕೆಮ್ಮಿಂಜೆ ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಫಿರ್ಯಾದಿರವರು ತನ್ನ ಗೆಳೆಯನಾದ ಭರತ್‌‌ರಾಜ್‌ರವರ ಮನೆಗೆ ಹೋಗಲು ಕಾರೊಂದನ್ನು ಚಲಾಯಿಸಿಕೊಂಡು ಹೋಗುತ್ತಿದ್ದು ಪಿರ್ಯಾದಿದಾರರ ಗೆಳೆಯ ಭರತ್‌ರಾಜ್ ಮೋಟಾರ್ ಸೈಕಲ್ ನಂಬ್ರ ಕೆಎ-21-ಎಲ್-5630ನೇದನ್ನು ಚಲಾಯಿಸಿಕೊಂಡು ಪುತ್ತೂರಿನಿಂದ ಕುಂಬ್ರ ಕಡೆಗೆ ಹೋಗುತ್ತಾ ರಾತ್ರಿ ಸುಮಾರು 10.00 ಗಂಟೆಗೆ ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಸಂಪ್ಯ ಶಾಲೆಯ ಬಳಿ ಇರುವ ಕಿರು ಸೇತುವೆ ಬಳಿಗೆ ತಲುಪಿದಾಗ ಪಿರ್ಯಾದಿದಾರರ ಮುಂಭಾಗದಲ್ಲಿ ಭರತ್ ರಾಜ್ ತಾನು ಚಲಾಯಿಸಿಕೊಂಡಿದ್ದ ಮೋಟಾರ್ ಸೈಕಲನ್ನು ಅಗಾಜಗೂಕತೆ ಮತ್ತು ನಿರ್ಲಕ್ಷ್ಯತನದಿಂದ  ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ ಕಿರು ಸೇತುವೆಯ ಗೋಡೆಗೆ ಡಿಕ್ಕಿ ಉಂಟುಮಾಡಿ ಭರತ್‌ರಾಜ್ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು,  ಪಿರ್ಯಾದಿದಾರರು ಕೂಡಲೇ ಕಾರನ್ನು ನಿಲ್ಲಿಸಿ ಭರತ್‌ರಾಜ್‌ನನ್ನು ಉಪಚರಿಸಿ ನೋಡಲಾಗಿ ಆತನ ತಲೆ, ಕುತ್ತಿಗೆ ಮತ್ತು ದೇಹದ ಇತರ ಭಾಗಗಳಿಗೆ ರಕ್ತಗಾಯ ಮತ್ತು ಗುದ್ದಿದ್ದ ಗಾಯವಾಗಿದ್ದು, ಕೂಡಲೇ ಪಿರ್ಯಾದಿದಾರರು ಅಪಘಾತದ ಮಾಹಿತಿಯನ್ನು ಭರತ್‌ರಾಜ್‌ನ ತಂದೆಗೆ ತಿಳಿಸಿ ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದಲ್ಲಿ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಮಂಗಳೂರು ಎಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ  ಪೊಲೀಸ್ ಠಾಣೆಯಲ್ಲಿ ಆ.ಕ್ರ 09/21 ಕಲಂ: 279,337  ಐ.ಪಿ.ಸಿ.ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಡಬ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶ್ರೀಮತಿ ಆಯಿಷಾ  ವಾಸ ; ಬಿಜತ್ತಳಿ   ಮನೆ , ರಾಮಕುಂಜ ಗ್ರಾಮ ಕಡಬ ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ:07.02.2021 ರಂದು  ಕೊಯಿಲಾ ಮಸೀದಿಯ ಬಳಿ  ಹಫ್ವಾ ಪ್ಯಾಮಿಲಿ ಕಾರ್ಯಕ್ರಮವನ್ನು  ಮುಗಿಸಿಕೊಂಡು  ವಾಪಾಸ್ಸು ತನ್ನ ಬಾಬ್ತು KA-04 Z-3473 ನೇ ಮಾರುತಿ ಸುಜುಕಿ 800 ಕಾರಿನಲ್ಲಿ ಮನೆ ಕಡೆಗೆ ಹೊರಟು ಕಡಬ ತಾಲೂಕು ಆತೂರು  ಎಂಬಲ್ಲಿಗೆ ಸಮಯ 03.00 ಗಂಟೆಗೆ ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಎಡಬದಿಯ ಕಚ್ಚಾ ಮಣ್ಣು ರಸ್ತೆಯಲ್ಲಿ ನಿಂತಿರುವಾಗ ಉಪ್ಪಿನಂಗಡಿ ಕಡೆಯಿಂದ ಬರುತ್ತಿದ್ದ KA-20,Z-8866 ಬಿ.ಎಂ.ಡ್ಬ್ಲೂಕಾರಿನ ಚಾಲಕನಾದ ಆರೋಪಿತನು ತೀರಾ ಅಜಾಗರೂಕತೆಯಿಂದ ತನ್ನ ಕಾರನ್ನು ಚಲಾಯಿಸಿಕೊಂಡು ಬಂದು ಕಡಬ ಕಡೆಯಿಂದ  ಬರುತ್ತಿದ್ದ KA-70-E-6242 ನೇ ಆ್ಯಕ್ಟೀವಾ ಸವಾರನಿಗೆ ಡಿಕ್ಕಿಯನ್ನುಂಟು ಮಾಡಿದ ಪರಿಣಾಮ ಆ್ಯಕ್ಟೀವಾ ಸವಾರನು ಮೊಟಾರ್‌ ಸೈಕಲ್‌ನಿಂದ ಹಾರಿ ರಸ್ತೆಯ ಕಚ್ಚಾ ಮಣ್ಣು ರಸ್ತೆಯಲ್ಲಿ ನಿಲ್ಲಿಸಿದ್ದ ಪಿರ್ಯಾದುದಾರರ ಬಾಬ್ತು ಕಾರಿಗೆ ತಾಗಿ ಆ್ಯಕ್ಟೀವಾ ಸವಾರನಿಗೆ ತಲೆಗೆ ,ಮೈ ಕೈಗೆ  ತರಚಿದ ಗಾಯವಾಗಿರುತ್ತದೆ ನಂತರ ಸ್ಥಳದಲ್ಲಿ ಕಾರಿನಲ್ಲಿದ್ದ ಪಿರ್ಯಾದುದಾರರು ಮತ್ತು ಸಾರ್ವಜನಿಕರು ಗಾಯಗೊಂಡವನನ್ನು ಉಪಚರಿಸಿ ಹೆಸರು ಕೇಳಲಾಗಿ ಹರೀಶ್‌ ಎಂಬಾತನಾಗಿರುತ್ತಾನೆ.ನಂತರ ಗಾಯಗೊಂಡವರನ್ನು ಖಾಸಗಿ ವಾಹನದಲ್ಲಿ ಪುತ್ತೂರು ಆಸ್ಪತ್ರೆಗೆ  ಕಳುಹಿಸಿಕೊಟ್ಟಿರುತ್ತಾರೆ.ಈ ಬಗ್ಗೆ ಕಡಬ ಠಾಣಾ ಅ.ಕ್ರ 11/2021 ಕಲಂ 279 337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ   ಜೆರೋಂ ಪೆರ್ನಾಂಡಿಸ್ ಪ್ರಾಯ 66 ವರ್ಷ ತಂದೆ; ರೈಮಂಡ್ ಪೆರ್ನಾಂಡಿಸ್ ವಾಸ; ಕೊಪ್ಪಲ ಮನೆ ತೆಂಕಬೆಳ್ಳೂರು ಗ್ರಾಮ ಬಂಟ್ವಾಳ ತಾಲೂಕು ರವರ  ಮಗ  ಪ್ರಾಯ ಸುಮಾರು 32 ವರ್ಷ ದ ಸಂತೋಷ್   ಜೀವನ್ ಪೆರ್ನಾಂಡಿಸ್ ರವರು ಲಾಕ್ ಡೌನ್ ನ ಮೊದಲು ಹೊರ ದೇಶದಲ್ಲಿ ಉದ್ಯೋಗದಲ್ಲಿದ್ದು ಲಾಕ್ ಡೌನ್ ಆದ ಬಳಿಕ  ಮನೆಗೆ ಬಂದವನು ಮನೆಯಲ್ಲಿಯೇ ಇದ್ದು ಪಿರ್ಯಾದಿದಾರರ ಪತ್ನಿ  ತಮ್ಮನ  ಮನೆಯಾದ    ಬರಿಮಾರು ಪುರುಷಕೋಡಿ ವಲೇರಿಯನ್ ಲಸ್ರಾದೋ ರವರ ಮನೆಯಲ್ಲಿ  ತೋಟದ ಕೆಲಸ ಮಾಡುತ್ತಿದ್ದನು . ದಿನಾಂಕ 08.02.2021 ರಂದು ಪಿರ್ಯಾದಿದಾರರಿಗೆ ವಲೇರಿಯನ್ ಲಸ್ರಾದೋ ರವರು ಪೋನು ಮಾಡಿ   ಸಂತೋಷ್   ಜೀವನ್ ಪೆರ್ನಾಂಡಿಸ್ ನು ದಿನಾಂಕ 07.02.2021 ರಂದು ಮನೆ ಸಾಮಾಗ್ರಿಗಳನ್ನು  ಬೆಂಗಳೂರಿಗೆ ಶಿಪ್ಟ್  ಮಾಡಲು ಹೋಗುತ್ತೇನೆಂದು ಹೇಳಿ ಮನೆಯಿಂದ ಹೋಗಿರುತ್ತಾನೆ, ದಿನಾಂಕ 08.02.2021 ರಂದು ಬೆಳಿಗ್ಗೆ  7.00 ಗಂಟೆಗೆ  ತೋಟಕ್ಕೆ ವೀಳ್ಯದೆಲೆ  ಕೊಯ್ಯಲು ಹೋಗಿದ್ದು  ಬೆಳಿಗ್ಗೆ 10.45 ಗಂಟೆಗೆ  ತೋಟದಿಂದ ವಾಪಾಸು  ಮನೆಗೆ ಬರುತ್ತಿದ್ದ ಸಮಯ ಮನೆಯ ಒಳಗೆ ಮಂಚದಲ್ಲಿ ಸಂತೋಷ್  ಜೀವನ್ ಪೆರ್ನಾಂಡಿಸ್ ನ ತಲೆಯು ಮಂಚದ ಮೇಲೆ  ದೇಹ  ಅರ್ದ ನೆಲದಲ್ಲಿ ಮಲಗಿದ ರೀತಿಯಲ್ಲಿ   ಇರುತ್ತದೆ . ನಂತರ 108 ಆಂಬುಲೆನ್ಸ್ ಗೆ ಕರೆ ಮಾಡಿ ಮಾಣಿ  ಪ್ರಾಥಮಿಕ ಆಸ್ಪತ್ರೆಗೆ ಕರೆದುಕೊಂಡು  ಹೋಗಿ ಅಲ್ಲಿನ ವೈದ್ಯರು ಪರೀಕ್ಷಿಸಿ ಬಂಟ್ವಾಳ  ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಖಾಸಗಿ ಅಂಬುಲೆನ್ಸ್ ನಲ್ಲಿ  ಬಂಟ್ವಾಳ ಆಸ್ಪತ್ರೆಗೆ  ಮದ್ಯಾಹ್ನ 2.00 ಗಂಟೆಗೆ  ಕರೆದುಕೊಂಡು ಬಂದಲ್ಲಿ ವೈದ್ಯರು ಪರೀಕ್ಷಿಸಿ  ದಾರಿ ಮದ್ಯೆ  ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಯುಡಿಆರ್ ನಂ 04/2021 ಕಲಂ 174 (3)(|v) ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸ್ವಸ್ತೀಕ್, ಪ್ರಾಯ: 20 ವರ್ಷ, ತಂದೆ: ಕೃಷ್ಣ ಶೆಟ್ಟಿ, ವಾಸ: ಮುದೆಲ್ಕಡಿ ಮನೆ, ಮುನಿಯಾಲು, ವರದಂಗ ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ರವರ ತಂದೆ ತುಮಕೂರಿನ ತಿಪಟೂರಿನ ಕೆಂಪರಹಳ್ಳಿ ಎಂಬಲ್ಲಿ ಟಿಪ್ಪರ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಕೆಂಪರ ಹಳ್ಳಿಯಲ್ಲಿದ್ದ ಸಮಯ ಸುಮಾರು 3-4 ದಿನಗಳ ಹಿಂದೆ  ಅಡುಗೆ ಮಾಡುವಾಗ ಎಡಕಾಲಿನ ಮೊಣಗಂಟಿನ ಕೆಳಗೆ ಬಿಸಿನೀರು ಬಿದ್ದು ಗಾಯವಾಗಿದ್ದು, ಚಿಕಿತ್ಸೆ ಹಾಗೂ ವಿಶ್ರಾಂತಿ ಪಡೆಯುವರೇ ತನ್ನ ಮನೆಯಾದ ಕಾರ್ಕಳ ತಾಲೂಕಿನ ಮುನಿಯಾಲು ಎಂಬಲ್ಲಿಗೆ ದಿನಾಂಕ: 07-02-2021 ರಂದು ಒಂದು ಕಾರಿನಲ್ಲಿ ಹೊರಟು ಬರುತ್ತಿರುವಾಗ ದಾರಿ ಮದ್ಯೆ  ಎಡಭಾಗದ  ಕೈ ಮತ್ತು ಕಾಲು ವಿಪರೀತ ನೋವು ಎಂಬುದಾಗಿ ತಿಳಿಸಿದವರನ್ನು  ಕಾರಿನ  ಚಾಲಕ  ದಿಲೀಪ್  ಮತ್ತು ಅಸ್ಲಂ ಎಂಬವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅಲ್ಲಿನ ವೈದ್ಯಾಧಿಕಾರಿ ಯವರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದು,  ಮೃತ ಕೃಷ್ಣ ಶೆಟ್ಟಿಯವರು ದಾರಿ ಮದ್ಯೆ ಹೃದಯಘಾತಗೊಂಡೋ ಅಥವಾ ಇನ್ಯಾವುದೋ ಅಸೌಖ್ಯದ ಕಾರಣದಿಂದಲೋ ಮೃತ ಪಟ್ಟಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಠಾಣಾ UDR ನಂಬ್ರ: 05/2020 06/2021 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 09-02-2021 12:10 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080