ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

 

ವಿಟ್ಲ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಮಹಮ್ಮದ್‌ ಮುಸ್ತಾಪ.ಎಂ (30) ತಂದೆ: ಇಸ್ಮಾಯಿಲ್‌ ವಾಸ: ಆಯಿಷಾ ಮಂಜೀಲ್‌  ತೋಟಮನೆ ಚೆಯರ್‌ಗೋಳಿ ಮಂಗಲ್ಪಪಾಡಿ ಪಂಚಾಯತ್‌ಮಂಜೇಶ್ವರ ತಾಲೂಕು ಎಂಬವರ ದೂರಿನಂತೆ ದಿನಾಂಕ:19-06-2021 ರಂದು ಮುಂಜಾನೆ  ಸುಮಾರು 01.00 ಗಂಟೆಗೆ  ಉಪ್ಪಳದಿಂದ ಕಲ್ಲಡ್ಕಕಕ್ಕೆ ಹೋಗಿ ಕೋಳಿ ತರುವರೇ ಪಿಕ್ಅಪ್ ವಾಹನ  KL-14-P-1947ರಲ್ಲಿ ಮಹಮ್ಮದ್‌ ಇರ್ಷಾದ್‌ ಚಾಲಕನಾಗಿ ತಾನು ಸಹಾಯಕನಾಗಿ ಪ್ರಯಾಣಿಸಿಕೊಂಡು ಕಲ್ಲಡ್ಕಕ್ಕೆ ಹೋಗಿ ಕೋಳಿ ಲೋಡ್‌ ಮಾಡಿಕೊಂಡು ಉಪ್ಪಳಕ್ಕೆ ಹೋಗುವರೇ ಬೆರಿಪದವು- ಬಾಯಾರು ಸಾರ್ವಜನಿಕ ಡಾಮಾರು ರಸ್ತೆಯ ಮಾರ್ಗವಾಗಿ ಪ್ರಯಾಣಿಸಿಕೊಂಡು ಸಮಯ ಸುಮಾರು ಬೆಳಿಗ್ಗೆ 06.00 ಗಂಟೆಗೆ ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮದ ಪೆರುವಾಯಿ ಸೇತುವೆ ಬಳಿ ಇಳಿಜಾರು ರಸ್ತೆಯಲ್ಲಿ  ಪಿಕ್ಅಪ್‌ ವಾಹನ ಚಾಲಕ ಮಹಮ್ಮದ್‌ ಇರ್ಷಾದ್‌ರವರು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ಪಿಕ್ಅಪ್‌ ವಾಹನ ಚಾಲಕನ ಹತೋಟಿ ತಪ್ಪಿ ಸೇತುವೆಯ ಬಳಿ ಮಗುಚಿ ಬಿದ್ದಾಗ ನೆರೆಕರೆಯವರು ಬಂದು ಪಿರ್ಯಾಧಿ ಹಾಗೂ ಚಾಲಕನನ್ನು ಪಿಕ್ಅಪ್ ವಾಹನದಿಂದ ಹೊರ ತೆಗೆದು ಆರೈಕೆ ಮಾಡಿ ನೋಡಿದಾಗ ಪಿರ್ಯಾಧಿದಾರರ ಬಲ ತೊಡೆಗೆ ಮತ್ತು ಸೊಂಟಕ್ಕೆ ತರಚಿದ ಗಾಯವಾಗಿರುತ್ತದೆ. ಚಾಲಕನ ಬಲ ಕೈ ಮಣಿಗಂಟಿನ ಬಳಿ ರಕ್ತಗಾಯ ಹಾಗೂ ತಲೆಯ ಬಲ ಬದಿ ರಕ್ತವಾಗಿರುತ್ತದೆ. ಗಾಯಗೊಂಡ ಚಾಲಕ ಮಹಮ್ಮದ್‌ ಇರ್ಷಾದ್‌ ಚಿಕಿತ್ಸೆಯ ಬಗ್ಗೆ ಕುಂಬಳೆ ಡಾಕ್ಟರ್ಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು. ಪಿರ್ಯಾಧಿದಾರರು ತನಗಾದ ಗಾಯದ ಬಗ್ಗೆ ಹತ್ತಿರದ ಆಸ್ಪತ್ರೆಯಿಂದ ಹೊರರೋಗಿಯಾಗಿ ಔಷಧಿ  ಪಡೆದುಕೊಂಡಿರುತ್ತಾರೆ. ಈ ಅಪಘಾತದಿಂದ ಪಿಕಾಆಪ್‌ ವಾಹನ ಜಖಂಗೊಂಡಿರುತ್ತದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 85/2021 ಕಲಂ:279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ:  ದಿನಾಂಕ 23-06-2021 ರಂದು 10-30 ಗಂಟೆಗೆ ಆರೋಪಿ ಅಟೋರಿಕ್ಷಾ ಚಾಲಕ ಗಿರೀಶ ಎಂಬವರು KA-21-A-8719 ನೇ ನೋಂದಣಿ ನಂಬ್ರದ ಅಟೋರಿಕ್ಷಾವನ್ನು ವಿಟ್ಲ ಕಡೆಯಿಂದ  ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕಬಕ ಗ್ರಾಮದ ಕಬಕ ಜಂಕ್ಷನ್ ಎಂಬಲ್ಲಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಒಮ್ಮೆಲೇ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಪಿರ್ಯಾದಿದಾರರಾದ ತೀರ್ಥರಾಜ್‌ , ಪ್ರಾಯ 29 ವರ್ಷ, ತಂದೆ: ಪರಮೇಶ್ವರ ನಾಯ್ಕ್‌ , ವಾಸ: ಪದವು ಮನೆ, ಉಜ್ರುಪಾದೆ ಅಂಚೆ, ಬಲ್ನಾಡು ಗ್ರಾಮ, ಪುತ್ತೂರು ತಾಲೂಕು ರವರು ಹೆದ್ದಾರಿಯಲ್ಲಿ ಪುತ್ತೂರು ಕಡೆಯಿಂದ ಮೂಡಬಿದ್ರೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ  KA-03-MJ-8954  ನೇ ನೋಂದಣಿ ನಂಬ್ರದ ಕಾರಿಗೆ ಅಪಘಾತವಾಗಿ, ಅಟೋರಿಕ್ಷಾ ಮಗುಚಿ ಬಿದ್ದು, ಅದರಲ್ಲಿದ್ದ ಚಾಲಕ ಮತ್ತು ಪ್ರಯಾಣಿಕ ಗಣೇಶ್ ಪೂಜಾರಿ ಎಂಬವರು ರಸ್ತೆಗೆ ಬಿದ್ದು, ಅಟೋರಿಕ್ಷಾ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಣೇಶ್ ಪೂಜಾರಿ ರವರಿಗೆ ಕುತ್ತಿಗೆಗೆ ಗುದ್ದಿದ ಗಾಯಗಳಾಗಿದ್ದು, ಚಿಕಿತ್ಸೆ ಬಗ್ಗೆ ಪುತ್ತೂರು ಹಿತ ಆಸ್ಪತ್ರೆಗೆ  ಕರೆದುಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  91/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ಳಾರೆ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಕೆ ಸುಬ್ರಾಯ ನಾಯ್ಕ ,ಪ್ರಾಯ 59  ವರ್ಷ ತಂದೆ; ದಿ| ಚನಿಯಪ್ಪ ನಾಯ್ಕ ಕೆಮ್ಮೂರು ಮನೆ ,ಐವತ್ತೊಕ್ಲು  ಗ್ರಾಮ ,ಸುಳ್ಯ ತಾಲೂಕು, ಎಂಬವರು  ದಿನಾಂಕ 22-06-2021 ರಂದು ತನ್ನ  ಬಾಬ್ತು ಕೆಎ  19-ಇಎ-2392 ನೇ ಸುಜುಕಿ ಆಕ್ಸಿಸ್ -125  ನೇ ಸ್ಕೂಟರ್ ನಲ್ಲಿ ಬೆಳ್ಳಾರೆ ಪೇಟೆಗೆ ಬಂದು ಅಲ್ಲಿ ಕೆಲಸ ಮುಗಿಸಿ ವಾಪಾಸ್ಸು ತನ್ನ ಮನೆ ಕಡೆಗೆ ಬೆಳ್ಳಾರೆ ನಿಂತಿಕಲ್ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು 11-00 ಗಂಟೆಗೆ ಮುಪ್ಪೇರ್ಯ ಗ್ರಾಮದ ಟಪ್ಪಾಲುಕಟ್ಟೆ ಎಂಬಲ್ಲಿಗೆ ತಲುಪಿದಾಗ ಪಿರ್ಯಾದಿದಾರರ  ಹಿಂಬದಿಯಿಂದ ಒಂದು ಮಾರುತಿ ಕಾರು ನಂ ಕೆಎ 12-ಎನ್ -4612  ನೇದನ್ನು ಅದರ ಚಾಲಕ  ಮಧುಸೂಧನ ಎಂಬವರು ತೀರಾ ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರ್ ಅನ್ನು ಓವರ್ ಟೇಕ್ ಮಾಡಲು ಪ್ರಯತ್ನಿಸಿ ಎದುರಿನಿಂದ ಅಂದರೆ ನಿಂತಿಕಲ್ ಕಡೆಯಿಂದ  ಕಾರೊಂದು ಬಂದಾಗ ಓಮ್ನಿ ಕಾರನ್ನು ಒಮ್ಮೆಲೇ ಎಡಕ್ಕೆ ಚಲಾಯಿಸಿ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಸ್ಕೂಟರ್ ಗೆ ಹಿಂದಿನಿಂದ ಢಿಕ್ಕಿ ಉಂಟು ಮಾಡಿದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ  ಬಿದ್ದು ಅವರ  ಎಡಕಾಲಿನ ಪಾದಕ್ಕೆ ,ಎರಡೂ ಕಾಲಿನ ಮೊಣಗಂಟಿಗೆ ಮತ್ತು ಕೈಗೆ ರಕ್ತ ಬರುವ ಗಾಯ ಹಾಗೂ ಬಲಭುಜದ ಬಳಿ ಗುದ್ದಿದ ನಮೂನೆಯ ಗಾಯವಾಗಿದ್ದು  ಚಿಕಿತ್ಸೆ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ಸೆಗೆ ದಾಖಲಾಗಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾಗಿದೆ ಈ ಬಗ್ಗೆ ಬೆಳ್ಳಾರೆ ಠಾಣಾ 32/2021 ಕಲಂ  279,337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

 

ಕಡಬ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸುಕೇಶ ಪ್ರಾಯ:24 ವರ್ಷ, ತಂದೆ: ದಿ| ಬಾಬು ಗೌಡ,ವಾಸ: ಅಲೆಪ್ಪಾಡಿ  ಮನೆ, ಹಳೆನೆರಂಕಿ ಗ್ರಾಮ ಕಡಬ ತಾಲೂಕು ಎಂಬವರು ತನ್ನ ತಾಯಿಯವರೊಂದಿಗೆ ವಾಸ ಮಾಡಿಕೊಂಡಿದ್ದು ಕೃಷಿ ಕೆಲಸ ಮಾಡಿಕೊಂಡಿದ್ದು  ಪಿರ್ಯಾದುದಾರರಿಗೆ  ಮನೆಯಲ್ಲಿ ಸುಮಾರು 3 ಎಕ್ರೆ ಕೃಷಿ ಜಾಗವಿದ್ದು ಕೃಷಿ ತೋಟವಿದ್ದು  ತೋಟದಲ್ಲಿ ಬೆಳೆದ ಅಡಿಕೆಯನ್ನು ಪಿರ್ಯಾದುದಾರರು ಸುಮಾರು 25 ದಿನಗಳ ಹಿಂದೆ ಓಣಗಲು ಮನೆಯ ಆರ್‌.ಸಿ.ಸಿ ಕಟ್ಟಡದ ಮೇಲೆ ಹಾಕಿದ್ದು  ದಿನಾಂಕ:23.06.2021 ರಂದು ಅಡಿಕೆ ಸುಲಿದು ಮಾರಾಟ ಮಾಡುವರೇ ಪಿರ್ಯಾದುದಾರರು ಮನೆಯ ಮೇಲೆ ಪ್ಲಾಸ್ಟೀಕ್‌ ಪಾಲಿಥೀನ್‌ ಚೀಲದಲ್ಲಿ ತುಂಬಿಸಿಟ್ಟಿದ್ದ ಎರಡು ಗೋಣಿ ಚೀಲ ಅಡಿಕೆಯನ್ನು ಮನೆಯ ಅಂಗಳದಲ್ಲಿ ಇರಿಸಿರುತ್ತಾರೆ. ಪಿರ್ಯಾದುದಾರರು   ಮನೆಯ ಪಕ್ಕದಲ್ಲಿಯೇ ಇರುವ ತೋಟಕ್ಕೆ ಮನೆಯ ಹಸುವೊಂದನ್ನು ಮೇಯಲು ಕಟ್ಟಿ ಹಾಕಿ ಬರುವರೇ ಹೋಗಿ ವಾಪಾಸ್ಸು ಮನೆ ಕಡೆಗೆ ಸಮಯ ಸುಮಾರು ಬೆಳಗ್ಗೆ 10.30 ಗಂಟೆಗೆ ಬರುತ್ತಿರುವಾಗ ಮನೆಯ ಎದುರು ಹಳೆನೇರಂಕಿ ಗ್ರಾಮದ ಆರೋಪಿತನಾದ  ಪರಮೇಶ್ವರ ಎಂಬಾತನು ಮೊಟಾರ್‌ ಸೈಕಲ್‌ನಲ್ಲಿ ಬಂದು ಪಿರ್ಯಾದುದಾರರ ಮನೆಯ ಅಂಗಳದಲ್ಲಿ ಇರಿಸಿದ್ದ ಒಂದು ಪ್ಲಾಸ್ಟೀಕ್ ಚೀಲ ಅಡಿಕೆಯನ್ನು ಮೊಟಾರ್‌ ಸೈಕಲ್‌ಗೆ ಕಟ್ಟುತ್ತಿದ್ದು ಅದನ್ನು ನೋಡಿದ ಪಿರ್ಯಾದಿ ಜೋರಾಗಿ ಬೊಬ್ಬೆ ಹಾಕಿಕೊಂಡು ತೋಟದಿಂದ ಓಡಿ ಬಂದಿರುತ್ತಾರೆ ಆದರೆ ಆರೋಪಿತನು ಮೋಟಾರ್‌ ಸೈಕಲ್‌ ನಿಲ್ಲಿಸದೇ ಒಂದು ಪ್ಲಾಸ್ಟೀಕ್ ಚೀಲ ಅಡಿಕೆಯನ್ನು ಕಳವು ಮಾಡಿಕೊಂಡು ಹೋಗಿರುತ್ತಾನೆ ಕಳವಾದ ಪ್ಲಾಸ್ಟೀಕ್ ಪಾಲೀಥೀನ್ ಚೀಲದಲ್ಲಿ ಸುಮಾರು 35 ಕೆ.ಜೆ ಸುಲಿಯದ ಓಣ ಅಡಿಕೆ ಇದ್ದು  ಅಂದಾಜು ಮೌಲ್ಯ ಸುಮಾರು 8000/-ಆಗಬಹುದು.ಈ ಬಗ್ಗೆ ಕಡಬ ಠಾಣಾ ಅ.ಕ್ರ 47/2021  ಕಲಂ 457.380 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 2

 

ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಸುಗಂಧಿ, ಪ್ರಾಯ: 37 ವರ್ಷ, ಗಂಡ: ಬಾಬು ನಾಯ್ಕ, ವಾಸ: ಮಜಲು ಕಾರಿಂಜ, ಕಾವಳ ಮುಡೂರು ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಗಂಡ ಬಾಬು ನಾಯ್ಕ ರವರು ವಿಪರೀತ ಅಮಲು ಪದಾರ್ಥ ಸೇವಿಸುವ ಚಟ ಹೊಂದಿದ್ದು, ಅಮಲು ಪದಾರ್ಥ ಸೇವಿಸಿದ ಸಮಯ ಪಿರ್ಯಾದಿ ಹಾಗೂ ಮಗ ಸಾತ್ವಿಕ್ ಎಂಬಾತನೊಂದಿಗೆ ಕ್ಷುಲ್ಲಕ ವಿಚಾರದಲ್ಲಿ ಗಲಾಟೆ ನಡೆಸಿ ಪಿರ್ಯಾದಿ ಹಾಗೂ ಮಗನನ್ನು ಕೊಲೆ ಮಾಡಿ ತಾನು ಕೂಡಾ ಅತ್ಮಹತ್ಯೆ ಮಾಡುವುದಾಗಿ ಬೆದರಿಸುತ್ತಿದ್ದು, ದಿನಾಂಕ 23.06.2021 ರಂದು ಬೆಳಿಗ್ಗೆ ಸುಮಾರು 11.00 ಗಂಟೆಯಿಂದ ಮದ್ಯಾಹ್ನ ಸುಮಾರು 2.00 ಗಂಟೆಯ ಮದ್ಯೆ ಅವಧಿಯಲ್ಲಿ ಪಿರ್ಯಾದಿದಾರರು ತನ್ನ ತವರು ಮನೆಯಲ್ಲಿರುವ ಸಮಯ ಪಿರ್ಯಾದಿಯ ಗಂಡ ಬಾಬು ನಾಯ್ಕ ರವರು ಅಮಲು ಪದಾರ್ಥ ಸೇವಿಸಿಕೊಂಡು ಬಂದು ತನ್ನ ಬಾಡಿಗೆ ಬಿಡಾರವಾದ ಬಂಟ್ವಾಳ ತಾಲೂಕು ಪಿಲಾತಬೆಟ್ಟು ಗ್ರಾಮದ ದೈಕಿನಕಟ್ಟೆ ಶ್ರೀರಾಮನಗರ ಎಂಬಲ್ಲಿ ಪಿರ್ಯಾದಿಯ ಮಗ ಸಾತ್ವಿಕ್ ಎಂಬಾತನೊಂದಿಗೆ ಗಲಾಟೆ ನಡೆಸಿ ಮಾರಕಾಯುಧವಾದ ಕತ್ತಿಯಿಂದ  ಸಾತ್ವಿಕ್ ನ ಕುತ್ತಿಗೆಗೆ ಕತ್ತಿಯಿಂದ ಕಡಿದು ಚೂರಿಯಿಂದ ತಿವಿದು ಗಂಭೀರ ಗಾಯಗೊಳಿಸಿ ಕೊಲೆ ಮಾಡಿ ತಾನು ಕೂಡಾ ಮನೆಯ ಅಟ್ಟದ ಅಡ್ಡಕ್ಕೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣಾ  ಅ.ಕ್ರ 36/2021 ಕಲಂ 302 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಉಪ್ಪಿನಂಗಡಿ ಪೊಲೀಸ್ ಠಾಣೆ : ದಿನಾಂಕ 23.06.2021 ರಂದು ಪೊಲೀಸು ಉಪನಿರೀಕ್ಷಕರು , ಉಪ್ಪಿನಂಗಡಿ ಪೊಲೀಸ್ ಠಾಣೆ ರವರು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಖಚಿತ ಮಾಹಿತಿ ಮೇರೆಗೆ ಪುತ್ತೂರು ತಾಲೂಕು ಉಪ್ಪಿನಂಗಡಿ  ಗ್ರಾಮದ ಉಪ್ಪಿನಂಗಡಿಯ ರಾಜಧಾನಿ ಟವರ್ಸ್ ಬಿಲ್ಡಿಂಗ್ ನ ಸಾಥಿ ಲಾಡ್ಜಿನ ರೂಮ್ ನಂಬ್ರ 113 ನೇದರಲ್ಲಿ ಹಣವನ್ನು ಪಣವಾಗಿಟ್ಟು ಉಲಾಯಿ-ಪಿದಾಯಿ ಇಸ್ಪಿಟ್‌ ಆಟ ಆಡುತ್ತಿದ್ದವರನ್ನು 18-00 ಗಂಟೆಗೆ ಪಂಚರ ಸಮಕ್ಷಮ ದಾಳಿ ನಡೆಸಿ 14 ಜನ ಆರೋಪಿಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ರೂ 18,805/- ನಗದು ಹಣವನ್ನು, ಇಸ್ಪೀಟ್ ಎಲೆಗಳನ್ನು ಮತ್ತು 01 ಚಾಪೆಯನ್ನು ವಶಪಡಿಸಿಕೊಂಡಿರುವುದಲ್ಲದೇ 14 ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಠಾಣಾ ಅ.ಕ್ರ 59/2021 ಕಲಂ:79,80 ಕರ್ನಾಟಕ ಪೊಲೀಸ್‌ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 24-06-2021 12:15 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080