ಕೊಲೆ ಬೆದರಿಕೆ ಪ್ರಕರಣ: ೦1
ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಎಮ್ ಪಿ ಭದ್ರಿನಾಥ್,ತಂದೆ: ಎಮ್ ಎಸ್ ಪಾಂಡುರಂಗಾಚಾರ್, ವಾಸ: ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠ, ಕಡಬ ತಾಲೂಕು, ಎಂಬವರ ದೂರಿನಂತೆ ಪಿರ್ಯಾದಿದಾರರು ಕಡಬ ತಾಲೂಕಿನ ಮಠವೊಂದರಲ್ಲಿ ವಾಹನ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿದೆ. ದಿನಾಂಕ: 25.03.2021 ರಂದು ಸುಮಾರು 3:30 ಗಂಟೆಗೆ ಪಿರ್ಯಾದಿದಾರರು ಪೇಟೆಯಿಂದ ಮನೆಗೆ ಬೇಕಾದ ಸಾಮಗ್ರಿಗಳನ್ನು ತರಲು ಅಂಗಡಿಗೆ ಹೋದಾಗ ಆರೋಪಿತನು ಪಿರ್ಯಾದಿದಾರರನ್ನು ಅಡ್ಡಗಟ್ಟಿ ವ್ಯಂಗ್ಯವಾಗಿ ಏಕವಚನದಲ್ಲಿ ವಿಚಾರಿಸಿ ನಿಂಧಿಸಿರುತ್ತಾನೆ. ಇದಾದ ನಂತರ ಸುಮಾರು ಸಂಜೆ 5 ಗಂಟೆಗೆ ಪೇಟೆಯಲ್ಲಿ ಇರುವ ಅಂಗಡಿಗೆ ದಿನಸಿ ಸಾಮಾನುಗಳನ್ನು ಪಿರ್ಯಾದಿದಾರರು ಹಾಗೂ ದಿನೇಶ್ ಕೆ ಹೆಚ್ ಎಂಬವರೊಂದಿಗೆ ಬೈಕ್ ನಲ್ಲಿ ಹೋಗುವ ಸಂದರ್ಭ ಅದೇ ರಿಕ್ಷಾ ನಿಲ್ದಾಣದ ಬಳಿ ಪಿರ್ಯಾದಿದಾರರನ್ನು ಅಡ್ಡಗಟ್ಟಿ ಮುಖಾಮುಖಿಯಾಗಿ ದೈಹಿಕ ಹಲ್ಲೆಗೆ ಯತ್ನಿಸಿದನು. ಹಾಗೂ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಒಡ್ಡಿರುವುದಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣಾ ಅ.ಕ್ರನಂಬ್ರ:18-2021 ,ಕಲಂ: 341, 504, 506, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೆ ಪ್ರಕರಣ: ೦4
ಬೆಳ್ತಂಗಡಿ ಪೊಲೀಸ್ ಠಾಣೆ : ದಿನಾಂಕ: 26-03-2021 ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 30/2021 ಕಲಂ: 498(ಎ),504,506 ಜೊತೆಗೆ 34 ಐಪಿಸಿ ಮತ್ತು ಕಲಂ; 4 ಡಿ.ಪಿ ಆಕ್ಟ್‌ಯಂತೆ ಪ್ರಕರಣ ದಾಖಲಾಗಿರುತ್ತದೆ.
ದ.ಕ ಮಹಿಳಾ ಪೊಲೀಸ್ ಠಾಣೆ : ಪ್ರಕರಣದ ಅಪ್ರಾಪ್ತ ಪ್ರಾಯದ ಪಿರ್ಯಾಧಿಯು ಪಿಯುಸಿ ವ್ಯಾಸಂಗ ಮಾಡುತಿದ್ದು, ಕಳೆದ ವರ್ಷ ಕೋರೋನ ಸಂದರ್ಭದಲ್ಲಿ ನೆರೆಯ ಯುವಕನ ಪರಿಚಯವಾಗಿರುತ್ತದೆ. ಆತನು ಪಿರ್ಯಾದುದಾರರನ್ನು ಪ್ರೀತಿಸುವಂತೆ ಒತ್ತಾಯಪಡಿಸುತಿದ್ದು, ನಂತರ ಎರಡು ತಿಂಗಳು ಕಳೆದು ಆರೋಪಿಯು ಪಿರ್ಯಾದಿದಾರರ ಮನೆ ಬಳಿ ಬಂದು ಅಂಗಡಿಗೆ ಬಿಡುತ್ತೇನೆಂದು ಹೇಳಿ ಪಿರ್ಯಾದುದಾರರು ಮತ್ತು ಆಕೆಯ ತಂಗಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಕೊಪ್ಪ ಮಾದೇರಿ ರಸ್ತೆಯಲ್ಲಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ್ದು, ಪಿರ್ಯಾದುದಾರರು ಮತ್ತು ಅವರ ತಂಗಿ ಜೋರಾಗಿ ಕೂಗಾಡಿದಾಗ ಆರೋಪಿಯು ಯಾರಲ್ಲೂ ಹೇಳಬೇಡಿ ಎಂದು ಚಾಕಲೇಟ್ ಕಟ್ಟನ್ನು ನೀಡಿ ವಾಪಾಸು ಮನೆಗೆ ಕರೆದುಕೊಂಡು ಬಂದು ಬಿಟ್ಟಿರುವುದಾಗಿದೆ. ದಿನಾಂಕ 25.03.2021 ರಂದು ರಾತ್ರಿ ಸುಮಾರು 9.30 ಗಂಟೆಗೆ ಆರೋಪಿತನು ಪಿರ್ಯಾದುದಾರರ ಮನೆಯಲ್ಲಿ ಪಿರ್ಯಾದಿಯ ತಂದೆ ತಾಯಿ ಇಲ್ಲದ ಸಮಯದಲ್ಲಿ ಮನೆಯ ಬಂದು ಲೈಂಗಿಕ ಕಿರುಕುಳ ನೀಡಿರುತ್ತಾನೆ. ಆಗ ಪಿರ್ಯಾದಿದಾರರು ಬೊಬ್ಬೆ ಹಾಕಿದ್ದು, ಈ ವೇಳೆ ಆರೋಪಿಯು ಮಾನಭಂಗ ಮಾಡಿ ಕೊಲ್ಲುತ್ತೇನೆ ಎಂದು ಜೀವ ಬೆದರಿಕೆ ಹಾಕಿರುತ್ತಾನೆ. ಈ ಬಗ್ಗೆ ದ.ಕ ಮಹಿಳಾ ಪೊಲೀಸ್ ಠಾಣಾ ಅ.ಕ್ರ 15/2021 ಕಲಂ: 354,354(ಎ),506 ಐಪಿಸಿ ಮತ್ತು8 ಪೊಕ್ಸೋ ಕಾಯಿದೆ 2012 ಯಂತೆ ಪ್ರಕರಣ ದಾಖಲಾಗಿರುತ್ತದೆ.
ದ.ಕ ಮಹಿಳಾ ಪೊಲೀಸ್ ಠಾಣೆ : ದಿನಾಂಕ 26.03.2021 ರಂದು ದ.ಕ ಮಹಿಳಾ ಪೊಲೀಸ್ ಠಾಣೆ ಪುತ್ತೂರು ಅ.ಕ್ರ 16/2021 ಕಲಂ: 376,506,323 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ವಿಟ್ಲ ಪೊಲೀಸ್ ಠಾಣೆ : ಕೇರಳದ ಮಂಜೇಶ್ವರ ಪೊಲೀಸು ಠಾಣಾ ವ್ಯಾಪ್ತಿಯ ಮೀಯಪದವು ಎಂಬಲ್ಲಿ ಪೊಲೀಸರ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಆರೋಪಿಗಳು ತಪ್ಪಿಸಿಕೊಂಡು ಕರ್ನಾಟಕ ಕಡೆಗೆ ಬರುತ್ತಿದ್ದ ಬಗ್ಗೆ ದೊರೆತ ಮಾಹಿತಿಯಂತೆ ವಿಟ್ಲ ಠಾಣಾ ಪಿ.ಎಸ್ ಐ ಹಾಗೂ ಅಧಿಕಾರಿ ಸಿಬ್ಬಂದಿಗಳು ವಶಕ್ಕೆ ಪಡೆಯಲು ಬಂಟ್ವಾಳ ತಾಲೂಕು ಸಾಲೆತ್ತೂರು ಗ್ರಾಮದ ಕೊಡಂಗೆ ಎಂಬಲ್ಲಿ ಬಾಕ್ರಬೈಲು- ಸಾಲೆತ್ತೂರು ಡಾಮಾರು ರಸ್ತೆಯಲ್ಲಿ ತಾತ್ಕಾಲಿಕ ಚೆಕ್ ಪೋಸ್ಟ್ ನ್ನು ಮಾಡಿ ಕಾಯುತ್ತಿರುವಾಗ ದಿನಾಂಕ;26.03.2021 ರಂದು ಬೆಳಗ್ಗಿನ ಜಾವ 04.00 ಗಂಟೆಯ ಸಮಯಕ್ಕೆ ಆರೋಪಿಗಳಾದ 1 ಅಬ್ದುಲ್ ಲತೀಫ್, ಪ್ರಾಯ;23 ವರ್ಷ, ತಂದೆ; ಮಹಮ್ಮದ್, ಬೈತಿಲ ಮನೆ, ಮಂಗಲ್ಪಾಡಿ ಪಂಚಾಯತ್, ಸಿರಿಯಾ ಅಂಚೆ, ಮಂಜೇಶ್ವರ ತಾಲೂಕು, ಕಾಸರಗೋಡು ಜಿಲ್ಲೆ. 2. ಮಹಮ್ಮದ್ ಶಾಕೀರ್, ಪ್ರಾಯ;26 ವರ್ಷ, ತಂದೆ; ಖಾಸಿಂ, ಬೆಚ್ಚಂಗಳ ಮೀಯಪದವು ಮನೆ, ಮೀಂಜ ಅಂಚೆ ಮತ್ತು ಗ್ರಾಮ, ಮಂಜೇಶ್ವರ ತಾಲೂಕು, ಕಾಸರಗೋಡು ಜಿಲ್ಲೆ, 3. ಮಹಮ್ಮದ್ ಆಶ್ಪಕ್, ಪ್ರಾಯ;25 ವರ್ಷ, ತಂದೆ; ಅಬೂಬಕ್ಕರ್, ವಾಸ; ಅಡ್ಕಂತಗುರಿ, ಮೂಡಂಬೈಲು ಅಂಚೆ, ಮಂಜೇಶ್ವರ ತಾಲೂಕು, ಕಾಸರಗೋಡು ಜಿಲ್ಲೆ. ಮತ್ತು ಓಡಿ ಹೋದ ಅಬ್ದುಲ್ ರಹಿಮಾನ್ ಹಾಗೂ ಮಹಾರಾಷ್ಟ್ರ ಕಡೆಯ ರಾಕೇಶ್ ಕಿಶೋರ್ ಬಾವಿಸ್ಕರ್ ರವರು ಅಕ್ರಮಕೂಟ ಸೇರಿಕೊಂಡು, ಕೈಯಲ್ಲಿ ಶಸ್ತ್ರಾಸ್ತ್ರಗಳನ್ನು ವಶದಲ್ಲಿಟ್ಟುಕೊಂಡು ಹ್ಯುಂಡಾಯಿ ಐ 20 ಬಿಳಿ ಬಣ್ಣದ ಕಾರು ಬರುತ್ತಿರುವುದನ್ನು ಕಂಡು ನಿಲ್ಲಿಸಲು ಸೂಚನೆ ನೀಡಿದಾಗ ಆರೋಪಿ ಅಬ್ದುಲ್ ಲತೀಫ್ ಪಿ.ಎಸ್ಐ ರವರನ್ನು ಕೊಲೆಗೈದು ಪರಾರಿಯಾಗುವ ಉದ್ದೇಶದಿಂದ ಪಿಸ್ತೂಲ್ ನಿಂದ ಗುಂಡು ಹಾರಿಸಿ ಕೊಲೆಗೆ ಪ್ರಯತ್ನಿಸಿ ಪರಾರಿಯಾಗುವ ವೇಳೆಯಲ್ಲಿ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದಿದ್ದು, ಆರೋಪಿಗಳ ವಶದಿಂದ 1) 7.62 MM ಪಿಸ್ತೂಲ್ , 2) ಪಿಸ್ತೂಲ್ ಮ್ಯಾಗ್ಸಿನ್ -1,3)ನಿಂದ ಸಿಡಿದ ಖಾಲಿ ತೋಟೆ-1,4) ಜೀವಂತ ತೋಟೆ-2, 5) ಮೆಟಲ್ ನ ಪಂಚ್-2,6) ಚೂರಿ-1, 7) ಕೊಡಲಿ-1, 8) LSD-1.20 ಗ್ರಾಂ,9) MDMA - 3.19 ಗ್ರಾಂ, 10) ಜೀವಂತ ತೋಟೆ-11,11) ಖಾಲಿ ಮ್ಯಾಗ್ಸಿನ್-1,12) ಹ್ಯುಂಡಾಯಿ ಕಾರು I-20 -1 ನ್ನು ಪಂಚರ ಸಮಕ್ಷಮ ಮಹಜರು ಮುಖೇನ ಸ್ವಾಧೀನಪಡಿಸಿಕೊಂಡಿರುವುದಾಗಿದೆ, ವಶಪಡಿಸಿಕೊಂಡ ಎಲ್ಲಾ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 581,700.00 ರೂ ಆಗಬಹುದು . ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ವಿಟ್ಲ ಪೊಲೀಸ್ ಠಾಣಾ ಅ.ಕ್ರ 42/2021 ಕಲಂ: 143,147,148,353,307 ಜೊತೆಗೆ 149 ಭಾ.ದಂ.ಸಂ ಹಾಗೂ ಕಲಂ; 3 ಜೊತೆಗೆ 25,27 ಭಾರತೀಯ ಶಸ್ತ್ರ್ತಾಸ್ತ್ರ ಕಾಯ್ದೆ ಹಾಗೂ ಕಲಂ; 8(A)(c) ಜೊತೆಗೆ 21 (b),22(c)NDPS Act 1985 ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.