ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

 

ಕಡಬ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಎಂ ರಘುವೀರ್ ರಾವ್ ಪ್ರಾಯ 62 ವರ್ಷ, ತಂದೆ: ದಿ| ಎಂ ಸುಬ್ಬ ರಾವ್ ,ವಾಸ: ಮಣಿಕಳ ಮನೆ, ಬಜತ್ತೂರು ಗ್ರಾಮ ವಳಲು ಅಂಚೆ, ಪುತ್ತೂರು ತಾಲೂಕು ಎಂಬವರು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ  ವೈದಿಕ ಕೆಲಸವನ್ನು ಮಾಡಿಕೊಂಡಿದ್ದು ದಿನಾಂಕ 04.04.2021 ರಂದು ತನ್ನ ಬಾಬ್ತು KA-21 X-4845 ನೇ ಜುಪೀಟರ್  ಸ್ಕೂಟಿ ವಾಹನದಲ್ಲಿ  ಸುಬ್ರಹ್ಮಣ್ಯ ಕ್ಕೆ ಹೋಗಿ ನಂತರ ವಾಪಾಸ್ಸು ತನ್ನ ಮನೆಯಾದ ಬಜತ್ತೂರಿಗೆ ಹೋಗುವರೇ ಸುಬ್ರಹ್ಮಣ್ಯ -ಉಪ್ಪಿನಂಗಡಿ  ರಾಜ್ಯ ರಸ್ತೆಯಲ್ಲಿ ತನ್ನ ಮೋಟಾರ್‌ ಸ್ಕೂಟಿ ವಾಹನವನದಲ್ಲಿ ಬರುತ್ತಿರುವಾಗ ಕಡಬ ತಾಲೂಕು ಪೆರಾಬೆ ಗ್ರಾಮದ ಕೋಚಕಟ್ಟೆ ಎಂಬಲ್ಲಿಗೆ ತಲುಪಿದಾಗ ಅಲಂಕಾರು ಕಡೆಯಿಂದ ಕಡಬ ಕಡೆಗೆ ಬರುತ್ತಿದ್ದ KA-51 MN-5934 ನೇ ಕ್ವಿಡ್ ಕಾರು ವಾಹನದ ಚಾಲಕನು ತೀರಾ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಕಾರನ್ನು ಚಲಾಯಿಸಿಕೊಂಡು ಬಂದು  ರಸ್ತೆಯ ಎಡಬದಿಯಲ್ಲಿ ಕಡಬ ಕಡೆಯಿಂದ ಬರುತ್ತಿದ್ದ  ಪಿರ್ಯಾದುದಾರರಿಗೆ ಡಿಕ್ಕಿಯನ್ನುಂಟು ಮಾಡಿದ ಪರಿಣಾಮ ಪಿರ್ಯಾದುದಾರರು ನೆಲಕ್ಕೆ ಬಿದ್ದಿರುತ್ತಾರೆ ನಂತರ ಕಾರು ಚಾಲಕನ ನಿಯಂತ್ರಣ ತಪ್ಪಿ ಕಾರು ಮುಂದಕ್ಕೆ ಹೋಗಿ ಅಲ್ಲೇ ಪಕ್ಕದಲ್ಲಿದ್ದ  ಕಲ್ಲು ಮತ್ತು ಸಿಮೆಂಟ್ ನಿಂದ ನಿರ್ಮಿಸಿದ್ದ ದೇವರ ಕಟ್ಟೆಗೆ  ಗುದ್ದಿ  ಕಾರು ಪುನ:ಅಲಂಕಾರು ಕಡೆಗೆ ಮುಕ ಮಾಡಿಕೊಂಡಿರುತ್ತದೆ ನಂತರ ಅಪಘಾತವನ್ನು ನೋಡಿದ ಸಾರ್ವಜನಿಕರು ಸ್ಥಳಕ್ಕೆ ಬಂದು ಪಿರ್ಯಾದಿಯನ್ನು ಉಪಚರಿಸಿ ನೋಡಲಾಗಿ  ಪಿರ್ಯಾದುದಾರರ ಬಲಕಾಲಿನ ಮಂಡಿ, ಮತ್ತು ಎಡಕಾಲಿನ ಪಾದಕ್ಕೆ ರಕ್ತಗಾಯವಾಗಿರುತ್ತದೆ.  ಹಾಗೂ ಅಪಘಾತವನ್ನುಂಟು ಮಾಡಿದ ಕಾರು ವಾಹನದ ಚಾಲಕನಿಗೂ ಗಾಯವಾಗಿರುತ್ತದೆ ಈ ಬಗ್ಗೆ ಕಡಬ ಠಾಣಾ ಅ.ಕ್ರ 29/2021 ಕಲಂ 279 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಡಬ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಶಶಿಧರ ಪಿಕೆ ಪ್ರಾಯ 49 ವರ್ಷ, ತಂದೆ: ದಿ| ಕುಟ್ಯಪ್ಪನ್ , ವಾಸ: ಪಾಲೆತ್ತಡ್ಕ ಮನೆ, ನೂಜಿಬಾಳ್ತಿಲ ಗ್ರಾಮ ಕಡಬ ತಾಲೂಕು ಎಂಬವರು  ದಿನಾಂಕ:04.04.2021 ರಂದು ಕಡಬ ಗ್ರಾಮದ ಕೊಣಾಜೆ ಎಂಬಲ್ಲಿಗೆ ತನ್ನ ಬಾಬ್ತು ವಾಹನ  KA-21 K-2853ನೇ ಸ್ಪ್ಲೆಂಡರ್ ಮೋಟಾರ್‌ ಸೈಕಲ್‌ನಲ್ಲಿ  ತನ್ನ ಪತ್ನಿಯಾದ ವೀಣಾ ಎಸ್ ಎಂಬವರನ್ನು  ಹಿಂಬದಿ ಸವಾರೆಯಾಗಿ ಕುಳ್ಳಿರಿಸಿಕೊಂಡು  ಹೋಗಿ ನಂತರ ವಾಪಾಸ್ಸು  ತನ್ನ ಮನೆಯಾದ ನೂಜಿಬಾಳ್ತಿಲಾ ಗ್ರಾಮಕ್ಕೆ ಸುಬ್ರಹ್ಮಣ್ಯ  -ಉಪ್ಪಿನಂಗಡಿ ರಾಜ್ಯ ಡಾಮಾರು ರಸ್ತೆಯಲ್ಲಿ ಬರುತ್ತಿರುವಾಗ ಕಡಬ ತಾಲೂಕು ಐತೂರು ಗ್ರಾಮದ ಮರ್ಧಾಳ ಜಂಕ್ಷನ್ ಬಳಿಗೆ ಸಂಜೆ ಸಮಯ 04.30 ಗಂಟೆಗೆ ತಲುಪಿದಾಗ  ಅದೇ ಮಾರ್ಗವಾಗಿ ನೆಟ್ಟಣ ಕಡೆಯಿಂದ ಬರುತ್ತಿದ್ದ ಕಾರು ನಂಬ್ರ:KA-19 MB-0746 ಚಾಲಕನು ತೀರಾ ಅಜಾಗರೂಕತೆಯಿಂದ ಕಾರನ್ನು ಚಲಾಯಿಸಿಕೊಂಡು ಬಂದು ಪಿರ್ಯಾದಿಯ ಮೊಟಾರ್‌ ಸೈಕಲ್‌ನ್ನು ಓವರ್‌ ಟೇಕ್‌ ಮಾಡುವಾಗ ಕಾರಿನ ಎಡಬಾಗವು ಪಿರ್ಯಾದುದರರ ಮೋಟರ್‌ ಸೈಕಲನ್  ಹ್ಯಾಂಡಲ್‌ಗೆ ಡಿಕ್ಕಿಯನ್ನುಂಟು ಮಾಡಿದ ಪರಿಣಾಮ ಮೋಟಾರ್‌ ಸೈಕಲ್‌ ಸಮೇತಾ ಸವಾರ ಪಿರ್ಯಾದುದಾರರು  ಮತ್ತು ಸಹ ಸವಾರೆಯಾದ ವೀಣಾ ಎಸ್ ಎಂಬವರು  ಡಾಮಾರು ರಸ್ತೆಗೆ  ಬಿದ್ದಿರುತ್ಥಾರೆ ನಂತರ ಅಲ್ಲಿಯೇ ಸ್ಥಳದಲ್ಲಿದ್ದ ಸಾರ್ವಜನಿಕರು ಬಂದು ಉಪಚರಿಸಿ ನೋಡಲಾಗಿ ಪಿರ್ಯಾದುದಾರರಿಗೆ ಬಲ ಕೈ ರಟ್ಟೆಗೆ ಗಾಯ ಹಾಗೂ ಎಡ ಕೈ ಹೆಬ್ಬೆರಳಿಗೆ ಗುದ್ದಿದ ಗಾಯ ಹಾಗೂ  ಬಲ ಪಾದಕ್ಕೆ ತರಚಿದ ರಕ್ತ ಗಾಯವಾಗಿರುತ್ತದೆ. ಹಾಗೂ ಮೋಟಾರ್‌ ಸೈಕಲ್‌ನ ಹಿಂಬದಿ ಸಹ ಸವಾರೆಯಾದ ವೀಣಾ ಎಸ್ ರವರಿಗೂ ಮುಖದ ಬಲ ಬಾಗಕ್ಕೆ,ಬಲ ಕೈ ಮಣಿಗಂಟಿಗೆ,ಎಡ ಕೈ ಹೆಬ್ಬೆರಳಿಗೆ  ತರಚಿದ ರಕ್ತ ಗಾಯವಾಗಿರುತ್ತದೆ ಅಪಘಾತವನ್ನುಂಟು ಮಾಡಿದ ಕಾರು ಚಾಲಕನ ಹೆಸರು ಎಸ್.ಬಿ ಇಸ್ಮಾಯಿಲ್ ಎಂದು ತಿಳಿದು ಬಂದಿರುತ್ತದೆ . ಈ ಬಗ್ಗೆ ಕಡಬ ಠಾಣಾ ಅ.ಕ್ರ 30/2021 ಕಲಂ 279 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಸುಬ್ರಹ್ಮಣ್ಯ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಪುಟ್ಟಣ್ಣ ಗೌಡ, ಪ್ರಾಯ: 60 ವರ್ಷ, ತಂದೆ: ಬೋಮಣ್ಣ ಗೌಡ, ವಾಸ: ಅಂತಿಬೆಟ್ಟು ಮನೆ, ಐತ್ತೂರು ಗ್ರಾಮ, ಸುಂಕದ ಕಟ್ಟೆ ಅಂಚೆ, ಕಡಬ ತಾಲೂಕು, ರವರು ಮತ್ತು ಅವರ ಮಗ ಹರಿಪ್ರಸಾದ್ ರವರು ದಿನಾಂಕ: 04.04.2021 ರಂದು ತಮ್ಮ ಪತ್ನಿಯ ಮನೆಯಾದ ಸುಳ್ಯ ತಾಲೂಕು ಕಲ್ಮಕಾರಿಗೆ ಹೋಗಿ ವಾಪಸ್ಸು ಅವರ ಮನೆಗೆ ಸುಬ್ರಹ್ಮಣ್ಯ-ಕಡಬ ರಾಜ್ಯ ಹೆದ್ದಾರಿಯಲ್ಲಿ ಅವರ ಬಾಬ್ತು KA 21 EB 3006 ನೇದನ್ನು ಟೂರಿಸ್ಟ್ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಎಂಬಲ್ಲಿರುವ ಭಾರತ ಪೆಟ್ರೋಲ್ ಬಂಕ್ ಗೆ ಪೆಟ್ರೋಲ್ ಹಾಕಿಸುವರೇ ಬಲಭಾಗಕ್ಕೆ ತಿರುಗುವ ಸಮಯ ಸುಮಾರು ಧರ್ಮಸ್ಥಳ-ಸುಬ್ರಹ್ಮಣ್ಯ ಕಡೆಯಿಂದ  ಅದೇ ರಾಜ್ಯ ಹೆದ್ದಾರಿಯಲ್ಲಿ KA 02 AE 7936 ನೇ ಟೊಯಟೊ ಇತಿಯೋಸ್ ಟೂರಿಸ್ಟ್ ಕಾರನ್ನು ಎದುರುಗಡೆಯಿಂದ ಅದರ ಚಾಲಕನು ನಿರ್ಲಕ್ಷ್ಯತನ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಬಲಕೈಯ ಮಣಿಗಂಟು ಮುರಿತದ ಗಾಯ, ಎಡಕೆನ್ನೆಗೆ ರಕ್ತಗಾಯ ಹಾಗೂ ಎಡಕಾಲಿನ ಹೆಬ್ಬರಳಿಗೆ ಗುದ್ದಿದ ಗಾಯವಾಗಿರುತ್ತದೆ. ಮತ್ತು ಪಿರ್ಯಾದಿದಾರರ ಸಹಸವಾರನಾದ ಪಿರ್ಯಾದಿಯ ಮಗ ಹರಿಪ್ರಸಾದ್ ಎಂಬವರಿಗೆ ಎಡಕೈ ಮಣಿಗಂಟು ಮುರಿತದ ಗಾಯ ಮತ್ತು ಗಲ್ಲಕ್ಕೆ ಗುದ್ದಿದ ರಕ್ತಗಾಯ ಹಾಗೂ ಎಡಕಾಳಿನ ಮಣಿಗಂಟಿಗೆ ಗುದ್ದಿದ ಗಾಯವಾಗಿರುತ್ತದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಅ.ಕ್ರ ನಂಬ್ರ :19-2021 ,ಕಲಂ:279,337, ಐಪಿಸಿ  ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಉಪ್ಪಿನಂಗಡಿ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ನವೀನ್‌ ಕುಮಾರ್‌ ಸಿ  ಪಿ   ಪ್ರಾಯ  30 ವರ್ಷ ತಂದೆ.  ಪ್ರಭಾಕರ , ವಾಸ: ಗೊಲ್ಲರಹೊಸಳ್ಳಿ ಗ್ರಾಮ, ಕಸಬಾ ಹೋಬಳಿ, ಚೆನ್ನರಾಯಪಟ್ಟಣ ತಾಲೂಕು ಹಾಸನ ಜಿಲ್ಲೆ ರವರು ನೀಡಿದ ದೂರಿನಂತೆ ದಿನಾಂಕ; 05-04-2021 ರಂದು   ಕಡಬ ತಾಲೂಕು ಶಿರಾಡಿ ಗ್ರಾಮದ  ಪರವರಕೊಟ್ಯ ಎಂಬಲ್ಲಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ  ಹೆದ್ದಾರಿ  75 ರಲ್ಲಿ ಪಿರ್ಯಾದಿದಾರರು ತನ್ನ ಬಾಬ್ತು ಲಾರಿ ನಂಬ್ರ:ಕೆಎ:55 3177ನೇದನ್ನು ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಬರುತ್ತಾ ಇರುವಾಗ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಕೆಎ:19ಎಬಿ4101 ನೇ ಅಶೋಕ್‌ ಲೈಲಾಂಡ್‌ ಕಂಪೆನಿಯ  ದೋಸ್ತ್‌ ವಾಹನವನ್ನು ಅದರ ಚಾಲಕ ಅತೀ ವೇಗವಾಗಿ ಚಲಾಯಿಸಿಕೊಂಡು ಬರುತ್ತಾ  ನಿರ್ಲಕ್ಷತನದಿಂದ ಒಮ್ಮೆಲೆ ಲಾರಿಯನ್ನು ರಸ್ತೆಯ  ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಲಾರಿಗೆ ಡಿಕ್ಕಿ ಹೊಡೆದು  ಪರಿಣಾಮ ಎರಡು ವಾಹನಗಳು ಜಖಂಗೊಂಡಿದ್ದು  ಅಪಘಾತಪಡಿಸಿದ ದೋಸ್ತ್‌ ವಾಹನದ ಚಾಲಕ  ಹಾಗೂ ಇತರರು  ಚಿಕಿತ್ಸೆಯ ಬಗ್ಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದುಕೊಂಡಿದ್ದು  ಆ ಪೈಕಿ ಚಾಲಕ ಹನೀಪ್‌ ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆ ಅ ಕ್ರ 31/2021 ಕಲಂ:279, 337 304(A)  ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

 ಇತರೆ ಪ್ರಕರಣ: 1

 

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರೆ ನೊಂದ ಮಹಿಳೆಯ ಮನೆಗೆ ದಿನಾಂಕ: 05-04-2021 ರಂದು ಅವರ ನಾದಿನಿ ಹಾಗೂ ನಾದಿನಿಯ ಮಗಳು ಬಂದಿದ್ದಾಗ ಪಿರ್ಯಾದಿದಾರರಿಗೆ ನೋಡಿ ಪರಿಚಯದ ಕೂರ್ನಡ್ಕದ ಹಕೀಂ ರವರು ಏಕಾಏಕಿ ಜೋರಾಗಿ ಬೊಬ್ಬೆ ಹಾಕಿ ಕೂಗಿ ಪಿರ್ಯಾದಿದಾರರ ಗಂಡನಿಗೆ ಅವಾಚ್ಯ ಶಬ್ದದಿಂದ ಬೈಯುತ್ತಾ ಪಿರ್ಯಾದಿದಾರರ ಮನೆಯ ಒಳಗೆ ಬಂದು ಹುಡುಕಾಡಿದಾಗ ಪಿರ್ಯಾದಿದಾರರು ಆತನನ್ನು ವಿಚಾರಿಸಿ ಪಿರ್ಯಾದಿದಾರರ ಗಂಡ ಮನೆಯಲ್ಲಿ ಇಲ್ಲವೆಂದು ತಿಳಿಸಿದಾಗ ಹಕೀಂನು ಪಿರ್ಯಾದಿದಾರರನ್ನುದ್ದೇಶಿಸಿ ನಿಜ ಹೇಳು ನಿನ್ನ ಗಂಡ ಎಲ್ಲಿದ್ದಾನೆಂದು ಕೇಳಿ ಅವಾಚ್ಯ ಶಬ್ದಗಳಿಂದ ಬೈದಾಗ ಪಿರ್ಯಾದಿದಾರರ ಗಂಡ ಹೊರಗಡೆ ಹೋಗಿದ್ದವರು ಮನೆಗೆ ಬಂದಿದ್ದು ಆ ಸಮಯ ಹೊರಗೆ ಇನ್ನು ಕೆಲವು ಜನ ಸೇರಿದ್ದು ಹಕೀಂನು ಮನೆಯಿಂದ ಹೊರಗೆ ಹೋದವನು ಮನೆಯ ಅಂಗಳದಲ್ಲಿ ಬಿದ್ದಿದ್ದ ಇಂಟರ್ ಲಾಕ್ ತುಂಡನ್ನು ಹೆಕ್ಕಿಕೊಂಡು ಪಿರ್ಯಾದಿದಾರರ ಗಂಡನ ಹಣೆಗೆ ಹೊಡೆದು ರಕ್ತಗಾಯಗೊಳಿಸಿರುತ್ತಾನೆ. ಆ ಸಮಯ ಪಿರ್ಯಾದಿದಾರರು ಗಂಡನಿಗೆ ಹೊಡೆಯದಂತೆ ತಡೆಯಲು ಹೋದಾಗ ಹಕೀಂ ನು ಪಿರ್ಯಾದಿದಾರರನ್ನು ಕೈಯಿಂದ ದೂಡಿದ್ದು ಪಿರ್ಯಾದಿದಾರರು ಆಯ ತಪ್ಪಿ ಕೆಳಗೆ ಬಿದ್ದು ಪ್ರಜ್ಞೆ ತಪ್ಪಿ ಬಿದ್ದಿದ್ದು. ಪಿರ್ಯಾದಿದಾರರ ನಾದಿನಿ ಮತ್ತು ಆಕೆಯ ಮಗಳು ಪಿರ್ಯಾದಿದಾರರನ್ನು ಮತ್ತು  ಅವರ ಗಂಡನನ್ನು ಉಪಚರಿಸಿ ಚಿಕಿತ್ಸೆ ಬಗ್ಗೆ  ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಪಿರ್ಯಾದಿದಾರರ ಗಂಡನ ಜೊತೆಯಲ್ಲಿ ಆತನ ತಮ್ಮ ಮುಬಾಶಿರ್  ನು ಕೂಡಾ ಬಂದಿದ್ದು ಆತನು ಕೂಡಾ ಪಿರ್ಯಾದಿದಾರರ ಗಂಡನಿಗೆ ಹೊಡೆದಾಗ ತಡೆಯಲು ಬಂದಿದ್ದು ಆತನ ಕೈಯನ್ನು  ಹಿಡಿದು ತಿರುಚಿದ್ದು ಆತನ ಕೈಗೂ ನೋವಾಗಿರುತ್ತದೆ. ಹಕೀಂ ಹಾಗೂ ಪಿರ್ಯಾದಿದಾರರ ಗಂಡನಿಗೆ ಕೆಲಸದ ವಿಚಾರದಲ್ಲಿ ಇದ್ದ ತಕರಾರಿನ ದ್ವೇಷದಿಂದ ದಿನಾಂಕ: 05-04-2021 ರಂದು ರಾತ್ರಿ 8:30 ಗಂಟೆಗೆ ಪಿರ್ಯಾದಿದಾರರ ಮನೆಯಲ್ಲಿ ಗಂಡಸರು ಯಾರೂ ಇಲ್ಲದ ಸಮಯ ಮನೆಗೆ ಅಕ್ರಮ ಪ್ರವೇಶ ಮಾಡಿ ಈ ಕೃತ್ಯವೆಸಗಿರುವುದಾಗಿದೆ ಈ ಬಗ್ಗೆ ಪುತ್ತೂರು ನಗರ ಠಾಣಾ ಅ.ಕ್ರ: 25/2021  ಕಲಂ: 448, 504, 324, 354, 323 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಕಡಬ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಚೆನ್ನಪ್ಪ ಗೌಡ ಪ್ರಾಐ 51 ವರ್ಷ, ವಾಸ: ಹೊಸ ಮನೆ, ರಂಜಿಲಾಡಿ ಗ್ರಾಮ ಕಡಬ ತಾಲುಕು ರವರ ಮಗಳು  ದಿನಾಂಕ:05.04.2021 ರಂದು ಬೆಳಗ್ಗೆ ಪಿರ್ಯಾದಿ ಮತ್ತು ಪಿರ್ಯಾದಿ ಪತ್ನಿ ಸಿತಮ್ಮರವರು  ತೋಟಕ್ಕೆ ಹುಲ್ಲು ತರುವರೇ ಹೋಗಿದ್ದ ಸಮಯ  ಪುಷ್ಪಲತಾಳು ಪಿರ್ಯಾದಿ ಮನೆಯ ಎದುರು ಹಾಲ್‌ನಲ್ಲಿರುವ ಕಿಟಕಿಗೆ  ಚೂಡಿದಾರದಿಂದ ನೇಣು ಬಿಗುದುಕೊಂಡಿದ್ದು ಪಿರ್ಯಾದುದಾರರು ತೋಟದಿಂದ ಮನೆಗೆ ಬಂದು ನೋಡಿದಾಗ  ಮಗಳು ನೇಣು ಬಿಗಿದುಕೊಂಡು ಮೃತಪಟ್ಟಿರುವುದಾಗಿರುತ್ತದೆ. ಈ ಬಗ್ಗೆ ಕಡಬ ಠಾಣಾ ಯುಡಿಆರ್ ನಂಬ್ರ 06/2021 ಕಲಂ: 174 ಸಿಆರ್‌ಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 06-04-2021 10:52 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080