ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

ಉಪ್ಪಿನಂಗಡಿ ಪೊಲೀಸ್ ಠಾಣೆ: ದಿನಾಂಕ 10-07-2021ರಂದು ಪಿರ್ಯಾದುದಾರರಾದ ಉದಯ್ ಹೆಚ್ ಎ ಪ್ರಾಯ 25 ವರ್ಷ: ತಂದೆ: ಅಣ್ಣೇಗೌಡ,ವಾಸ: ಲಕ್ಷ್ಮೀ ಕಾಂಪ್ಲೆಕ್ಸ್ 3ನೇ ಮಹಡಿ, ಬೇಲೂರು ರಸ್ತೆ, ಹೆಚ್. ಡಿ ಸಿಸಿ ಬ್ಯಾಂಕ್ ಎದುರು  ಗುಡ್ಡೇನಹಳ್ಳಿ ಕೊಪ್ಪಲು ಗ್ರಾಮ,ತಣ್ಣೀರುಹಳ್ಳ ಹಾಸನ ತಾಲೂಕು, ಮತ್ತು ಜಿಲ್ಲೆ. ಎಂಬವರು ತನ್ನ ಬಾಬ್ತು ನಂಬ್ರ ಕೆಎ-13-ಬಿ-1809ನೇ ಲಾರಿಗೆ ಕೋಕ್ ಲೋಡ್ ಮಾಡಿ ಸಂಜೆ ಸುಮಾರು 5.30 ಗಂಟೆಗೆ ಮಂಗಳೂರುನಿಂದ ಹಾಸನಕ್ಕೆ ಕಂಡಕ್ಟರ್ ಸಂದೀಪ್ ಎಂಬವನ್ನು ಕುಳ್ಳಿರಿಸಿ, ರಾ.ಹೆ. 75ರಲ್ಲಿ ಬಿ.ಸಿ.ರೋಡ್,ನೆಲ್ಯಾಡಿ, ಗುಂಡ್ಯ ಆಗಿ ಚಲಾಯಿಸಿಕೊಂಡು ಹೋಗುತ್ತಾ, ರಾತ್ರಿ ಸುಮಾರು 11.00 ಗಂಟೆಗೆ ಕಡಬ ತಾಲೂಕು ಶಿರಾಡಿ ಗ್ರಾಮದ ಬರ್ಚಿನಹಳ್ಳ ಎಂಬಲ್ಲಿಗೆ ತಲುಪುತಿದ್ದಂತೆ, ಪಿರ್ಯಾದಿಯ ಎದುರಿನಿಂದ ಅಂದರೆ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಒಂದು ಕೆಎ-01-ಎಂಎಂ-9786ನೇ ಫಾರ್ಚುನರ್ ಕಾರನ್ನು ಅದರ ಚಾಲಕ ಅತೀವೇಗ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿ ಚಲಾಯಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು, ಲಾರಿ ಮತ್ತು ಕಾರು ಜಖಂಗೊಂಡು, ಪಿರ್ಯಾದಿದಾರರ ಬಲ ಭುಜಕ್ಕೆ ಗುದ್ದಿದ ನೋವಾಗಿದ್ದು, ಕಂಡಕ್ಟರ್ ಸಂದೀಪನಿಗೆ ಗಾಯ ನೋವು ಆಗಿರುವುದಿಲ್ಲ. ಫಾರ್ಚುನರ್ ಕಾರಿನಲ್ಲಿ ಚಾಲಕ ಸೇರಿ ಒಟ್ಟು 7 ಜನರು ಇದ್ದು ಎಲ್ಲರಿಗೂ ಗಾಯನೋವು ಆಗಿದ್ದವರನ್ನು ಖಾಸಗಿ ವಾಹನದಲ್ಲಿ ಚಿಕಿತ್ಸೆಗಾಗಿ ನೆಲ್ಯಾಡಿ ಕಡೆಗೆ ಕಳುಹಿಸಿಕೊಟ್ಟಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ:67 /2021 ಕಲಂ:279, 337 ಭಾ ದಂ ಸಂಯಂತೆ ಪ್ರಕರಣ ದಾಖಲಾಗಿರುತ್ತದೆ.

ವಿಟ್ಲ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ದಯಾನಂದ ಪ್ರಾಯ 33 ವರ್ಷ ತಂದೆ ರಾಮಣ್ಣ ಗೌಡ ವಾಸ ಕರಿಂಕ ಮನೆ ನೆಟ್ಲಮುಡ್ನೂರು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 11.07.2021 ರಂದು ಮದ್ಯಾಹ್ನ  ಸಮಯ ಸುಮಾರು 14.30 ಗಂಟೆಗೆ ಮನೆಯಿಂದ ಊಟ ಮಾಡಿ ಕೆಎ 19 ಇಸಿ 1595 ನೇಯ ಮೋಟಾರು ಸೈಕಲ್ ನಲ್ಲಿ ಮಂಗಲಪದವು - ಕೊಡಾಜೆ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಅನಂತಾಡಿ ಕಡೆಯಿಂದ ಮಂಗಲಪದವು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವ ಸಮಯ ಸುಮಾರು 14.45 ಗಂಟೆಗೆ ವಿಟ್ಲ ಕಸಬಾ ಗ್ರಾಮದ ಮಾಮೇಶ್ವರ ಎಂಬಲ್ಲಿಗೆ ತಲುಪಿದಾಗ ಮಂಗಲಪದವು ಕಡೆಯಿಂದ ಕೊಡಾಜೆ ಕಡೆಗೆ ಒಂದು ಕಾರನ್ನು ಅದರ ಚಾಲಕ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲ್ ಗೆ ಡಿಕ್ಕಿನುಂಟು ಮಾಡಿದ ಪರಣಾಮ ಮೋಟಾರು ಸೈಕಲ್ ಸಮೇತ ರಸ್ತೆಗೆ ಪಿರ್ಯಾದಿದಾರರು ಬಿದ್ದಿದ್ದು ಈ ಅಪಘಾತ ನೋಡಿದ ಸ್ಥಳಿಯರು ಆರೈಕೆ ಮಾಡಿ ನೋಡಿದಾಗ ಪಿರ್ಯಾದಿಗೆ ಬಲಕಾಲಿನ ಪಾದದ ಬಳಿ ರಕ್ತ ಗಾಯ, ಬಲಕಾಲಿನ ಮೋಣಗಂಟಿಗೆ ಗುದ್ದಿದ ಗಾಯವಾಗಿರುತ್ತದೆ,  ಅಪಘಾತ ಪಡಿಸಿದ ಕಾರಿನ ನಂಬ್ರ ನೋಡಲಾಗಿ ಕೆಎ 51 ಎಂಸಿ 8883 ಆಗಿದ್ದು ಚಾಲಕನ ಹೆಸರು ಕೇಳಲಾಗಿ ಶೇಖ್ ಶಮೀರ್ ಎಂದು ತಿಳಿದಿರುತ್ತದೆ,ಬಳಿಕ ಸ್ಥಳಿಯರಯ ಗಾಯಾ ಗೊಂಡ ಪಿರ್ಯಾದಿಯನ್ನು ವಿಟ್ಲ ಬೆನಕ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಕೆರದಿಕೊಂಡು ಹೋಗಿ ವೈದ್ಯಾರು ಪರಿಕ್ಷೀಸಿ ಹೋರ ರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಿರುವುದಾಗಿದೆ ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 94/2021 ಕಲಂ: 279.337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಜೀವ ಬೆದರಿಕೆ ಪ್ರಕರಣ: 1

ಬೆಳ್ತಂಗಡಿ ಪೊಲೀಸ್ ಠಾಣೆ : ದಿನಾಂಕ:11.07.2021 ರಂದು ಬೆಳಿಗ್ಗೆ 10.30 ಗಂಟೆಗೆ ಆರೋಪಿತನು ತನ್ನ ಬಾಬ್ತು ಕೆಎ51ಇಜೆ174 ನೇ ಮೋಟಾರ್ ಸೈಕಲ್ಲಿನಲ್ಲಿ ಪಿರ್ಯಾದಿದಾರರಾದ ಸೋಮನಾಥ ಕುಲಾಲ್(45) ತಂದೆ:ದಿ|ಬಾಬು ಕುಲಾಲ್, ವಾಸ:ವಿವೇಕಾನಂದನಗರ, ಹಳೆಪೇಟೆ, ಲಾಯಿಲ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ಮನೆಯ ಬಳಿ ಬಂದು ಏಕಾಏಕಿ  ಸಿಟೌಟ್‌ ಗೆ ನುಗ್ಗಿ ಅಲ್ಲಿದ್ದ ಫಿರ್ಯಾದಿದಾರರ ಹೆಂಡತಿ ಹಾಗೂ ಮಗಳನ್ನು ಕಂಡು ಅವಾಚ್ಯ ಶಬ್ದಗಳಿಂದ ಬೈದು ನನಗೆ ನಿನ್ನ ಮಗಳನ್ನು ಮದುವೆ ಮಾಡಿಕೊಡುವುದಿಲ್ಲವಾ, ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಆತನ ಕೈಯಲ್ಲಿದ್ದ ಬ್ಯಾಗಿನಿಂದ ಮಂಡೆಕತ್ತಿಯೊಂದನ್ನು ತೆಗೆದು ಫಿರ್ಯಾದಿದಾರರನ್ನು ಕೊಲೆ ಮಾಡುವ ಉದ್ದೇಶದಿಂದ  ತಲೆಗೆ ಕಡಿಯುವ ಸಮಯ ಅವರು ತಡೆಯುವ ವೇಳೆ ಫಿರ್ಯಾದಿದಾರರ ಎಡಕೈಯ ಅಂಗೈಗೆ ಸೀಳಿದ ರಕ್ತಗಾಯವಾಗಿದ್ದು ಅಲ್ಲದೇ ಬಿಡಿಸಲು ಬಂದ ಪಕ್ಕದ ಮನೆಯ ಮಹೇಶರವರಿಗೆ ಕೈಗೆ ತಾಗಿ ರಕ್ತಗಾಯವಾಗಿರುತ್ತದೆ.  ಆ ಸಮಯ ಬೊಬ್ಬೆ ಕೇಳಿ ಇತರರು ಬರುವುದನ್ನು ಕಂಡು ಆರೋಪಿಯು “ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ” ಎಂಬುವುದಾಗಿ ಜೀವಬೆದರಿಕೆಯೊಡ್ಡಿರುವುದಾಗಿದೆ.ಈ ಬೆಳ್ತಂಗಡಿ ಪೊಲೀಸ್‌ ಠಾಣಾ ಅ.ಕ್ರ 61/2021 ಕಲಂ: 448,504,307,324, 506 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ: 2

 

ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಜನಾರ್ಧನ ಗೌಡ (58) ತಂದೆ: ಡುಬ್ಬ ಗೌಡ ವಾಸ: ಕುಡ್ಪಾಜೆ ಮನೆ, ನೆಲ್ಲೂರು ಕೆಮ್ರಾಜೆ ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ಹರಿಪ್ರಸಾದ್ (31) ಎಂಬಾತನು ತನ್ನ ತಂದೆ ತೀರಿಕೊಂಡ ನಂತರ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ದಿನಾಂಕ 11.07.2021 ರಂದು ಸಮಯ ಸುಮಾರು 08.00  ಗಂಟೆಗೆ ಸುಳ್ಯ ತಾಲೂಕು ಮರ್ಕಂಜ ಗ್ರಾಮದ ಉಬ್ರಾಳ ಎಂಬಲ್ಲಿರುವ ತಮ್ಮ ಮನೆಯ ಸ್ನಾನದ ಕೋಣೆಯಲ್ಲಿರುವ ಅಡ್ಡಕ್ಕು ಮತ್ತು ತನ್ನ ಕುತ್ತಿಗೆಗೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ ಯುಡಿಅರ್‌ ನಂಬ್ರ 27/2021 ಕಲಂ 174ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಡಬ ಪೊಲೀಸ್ ಠಾಣೆ : ಪಿರ್ಯಾದುದಾರರಾದ ಅಶೋಕ್  ಪ್ರಾಯ:30 ವರ್ಷ, ತಂದೆ: ದಿ|ಬಾಬುಗೌಡ ವಾಸ: ಒಡ್ಯಮ್ಮೆ  ಮನೆ, ಬಜತ್ತೂರು  ಗ್ರಾಮ, ಕಾಂಚಾನ  ಅಂಚೆ, ಪುತ್ತೂರು ತಾಲೂಕುರವರ ದೂರಿನಂತೆ ಪಿರ್ಯಾದುದಾರರ  ಚಿಕ್ಕಪ್ಪನಾದ ಬಾಳಪ್ಪಗೌಡ ಪ್ರಾಯ:56 ವರ್ಷ ತಂದೆ: ದಿ|ದುಗ್ಗಣ್ಣಗೌಡ ವಾಸ: ಕಟ್ಟೆ ಮನೆ,ಕೊಯಿಲಾ ಕೆ.ಸಿ ಫಾರಂ, ಕೊಯಿಲಾ ಕಡಬ ತಾಲೂಕು ಎಂಬವರು ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದು ಕೊಯಿಲಾ ಗ್ರಾಮದ ಕೆ.ಸಿ ಫಾರಂನಲ್ಲಿ ತನ್ನ ಹೊಸ ಮನೆ ನಿರ್ಮಾಣ ಮಾಡುತ್ತಿದ್ದು  ದಿನಾಂಕ:01.07.2021 ರಂದು ಬೆಳಗ್ಗೆ 08.00 ಗಂಟೆ ಸಮಯದಲ್ಲಿ ಹೊಸ ಮನೆ ಆರ್‌.ಸಿ.ಸಿ ಕಟ್ಟಡದ ಮೇಲೆ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಆರ್.ಸಿ.ಸಿ ಕಟ್ಟಡದ ಮೇಲಿನಿಂದ ಕೆಳಗ್ಗೆ ಬಿದ್ದು ಗಂಭೀರಗಾಯವಾಗಿರುವುದರಿಂದ ಗಾಯಳುವನ್ನು ಚಿಕಿತ್ಸೆಯ ಬಗ್ಗೆ ಒಂದು ಆಟೋ ರಿಕ್ಷಾದಲ್ಲಿ ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಓಳರೋಗಿಯಾಗಿ ದಾಖಲು ಮಾಡಿ ಆಸ್ಪತ್ರೆಯಲ್ಲಿ ಐ.ಸಿ.ಯುನಲ್ಲಿ ಚಿಕಿತ್ಸೆಯಲ್ಲಿರುತ್ತಾರೆ. ದಿನಾಂಕ:10.07.2021 ರಂದು ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯರು ಗಾಯಾಳು ಬಾಳಪ್ಪಗೌಡರವರ ಆರೋಗ್ಯದಲ್ಲಿ ಯಾವುದೇ ಬದಲಾವಣೆಯಾಗದೇ ಇದ್ದು  ಚಿಕಿತ್ಸೆ ಫಲಕಾರಿಯಾಗುವ ಸಾದ್ಯತೆ ಕಡಿಮೆ ಇರುತ್ತದೆ.ಆದುದರಿಂದ ಸದ್ರಿ ಗಾಯಾಳು ಬಾಳಪ್ಪಗೌಡರವರನ್ನು ಕರೆದುಕೊಂಡು ಹೋಗಲು ತಿಳಿಸಿದ ಮೇರೆಗೆ ಗಾಯಾಳುವಾದ ಬಾಳಪ್ಪಗೌಡರವರನ್ನು ದಿನಾಂಕ:10.07.2021 ರಂದು ಕೆ.ಎಸ್.ಹೆಗ್ಡೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ನಂತರ ನೇರವಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಿನಾಂಕ:10.07.2021 ರಂದು ಸಮಯ ಸಂಜೆ 07.45 ಗಂಟೆಗೆ ಓಳರೋಗಿಯಾಗಿ ದಾಖಲು ಮಾಡಲಾಗಿರುತ್ತದೆ. ಸದ್ರಿಯವರು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 11.07.2021 ರಂದು ಸಮಯ ಬೆಳಗ್ಗೆ 04.10 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿರುತ್ತದೆ. ಈ ಬಗ್ಗೆ ಸುಳ್ಯ ಕಡಬ ಠಾಣಾ ಯು.ಡಿ.ಆರ್ ನಂಬ್ರ 13/2021 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 12-07-2021 12:07 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080