ಅಪಘಾತ ಪ್ರಕರಣ: ೦4
ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ದಿನಾಂಕ: 14-03-2021 ರಂದು ಪಿರ್ಯಾದಿದಾರರಾದ ಜುಬೈರ ಪ್ರಾಯ 37 ವರ್ಷ ತಂದೆ: ಅಬ್ದುಲ್ ಖಾದರ್ ವಾಸ: ಆದರ್ಶ್ ನಗರ ಮನೆ, ಲಾಯಿಲ ಗ್ರಾಮ. ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ ಎಂಬವರು ಕೆಎ 19 ಕ್ಯೂ 5521 ಮೋಟಾರ್ ಸೈಕಲ್ ನ್ನು ಲಾಯಿಲ ಕಡೆಯಿಂದ ಗುರುವಾಯನಕೆರೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ 7.30 ಗಂಟೆಗೆ ಬೆಳ್ತಂಗಡಿ ತಾಲೂಕು ಬೆಳ್ತಂಗಡಿ ಕಸಬ ಗ್ರಾಮದ ಹಳೇಕೊಟೆ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರ ವಿರುದ್ದ ದಿಕ್ಕಿನಿಂದ ಅಂದರೆ ಗುರುವಾಯನಕೆರೆ ಕಡೆಯಿಂದ ಲಾಯಿಲ ಕಡೆಗೆ ಲಾರಿ ನಂಬ್ರ ಕೆಎ 19 ಎಸಿ 1463 ನೇದನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಢಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿದಾರರು ಬೈಕ್ ಸಮೇತ ರಸ್ತೆಗೆ ಬಿದ್ದುದರಿಂದ ಪಿರ್ಯಾದಿದಾರರ ಬಲಕಾಲಿನ ಪಾದ ಹಾಗೂ ಬಲಕಾಲಿನ ಮಣಿಗಂಟಿಗೆ ಗುದ್ದಿದ ನಮೂನೆಯ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ತಾಲೂಕು ಸಾರ್ವಜನಿಕ ಆಸ್ಪತ್ರೆ ಬೆಳ್ತಂಗಡಿಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣಾ ಅ.ಕ್ರ: 23/2021, ಕಲಂ; 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ವೇಣೂರು ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಮಹಮ್ಮದ್ ಆದೀಲ್ (21), ತಂದೆ: ಅಬ್ದುಲ್ ಖಾದರ್, ವಾಸ: ಆದಿಲ್ ಕಂಪೌಂಡ್, ಪೆರಿಂಜೆ , ಹೊಸಂಗಡಿ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ:14.03.2021 ರಂದು ತನ್ನ ಅಜ್ಜಿ ಖತೀಜಮ್ಮ (60) ರವರೊಂದಿಗೆ ಪೆರಿಂಜೆ ಗಾಣದ ಕೊಟ್ಟಿಗೆ ಎಂಬಲ್ಲಿ ಮೂಡಬಿದ್ರೆಗೆ ತೆರಳುವರೇ ಬೆಳ್ತಂಗಡಿ ಯಿಂದ ಮೂಡಬಿದ್ರೆಗೆ ಹೋಗುವ ಬಲ್ಲಾಳ್ ಬಸ್ ನಂಬ್ರ KA 70 3122 ನೇದರಲ್ಲಿ ಹತ್ತಿದ್ದು,, ಬಸ್ಸಿನಲ್ಲಿ ಕುಳಿತುಕೊಳ್ಳಲು ಸ್ಥಳಾವಕಾಶವಿಲ್ಲದೇ ಇದ್ದುದರಿಂದ ಬಸ್ಸಿನ ಮುಂಬಾಗಿಲಿನ ಬಳಿ ಗಟ್ಟಿಯಾಗಿ ಹಿಡಿದು ನಿಂತುಕೊಂಡು ಪ್ರಯಾಣ ಮಾಡುತ್ತಿದ್ದು, ಸಮಯ ಸುಮಾರು 12:05 ಗಂಟೆ ಸಮಯಕ್ಕೆ ಹೊಸಂಗಡಿ ಗ್ರಾಮದ ಪೆರಿಂಜೆ ಹಾಲಿನ ಡಿಪ್ಪೊ ಬಳಿ ತಿರುವು ರಸ್ತೆಯಲ್ಲಿ ಬಲ್ಲಾಳ್ ಬಸ್ಸ್ ಚಾಲಕನು ಬಸ್ಸನ್ನು ನಿಧಾನವಾಗಿ ಚಲಾಯಿಸದೆ ಅತೀ ವೇಗ, ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದುದರಿಂದ ಫಿರ್ಯಾದಿದಾರರ ಅಜ್ಜಿಯವರು ಬಸ್ಸಿನ ಮುಂಬಾಗಿಲಿನಿಂದ ರಸ್ತೆಗೆ ಎಸೆಯಲ್ಪಟ್ಟಿದ್ದು,, ಬಸ್ಸನ್ನು ಸ್ವಲ್ಪ ಮುಂದಕ್ಕೆ ಚಾಲಕನು ನಿಲ್ಲಿಸಿದ್ದು, ಕೂಡಲೇ ಫಿರ್ಯಾದಿದಾರರು ಹಾಗೂ ಇತರರು ಬಸ್ಸಿನಿಂದ ಇಳಿದು ನೋಡಿದಾಗ, ಖತೀಜಮ್ಮರವರಿಗೆ ತಲೆಯ ಎಡಭಾಗಕ್ಕೆ ರಕ್ತಬರುವ ಗಾಯವಾಗಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು,, ಖತೀಜಮ್ಮರವರನ್ನು ಉಪಚರಿಸಿ, ಅಲ್ಲಿಗೆ ಬಂದ ಕಾರಿನವರ ಸಹಾಯದಿಂದ ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ಕರೆದುಕೊಂಡುಬಂದಲ್ಲಿ ಅಲ್ಲಿ ಪರೀಕ್ಷಿಸಿದ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮೇಲ್ದರ್ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಆಳ್ವಾಸ್ ಆಸ್ಪತ್ರೆಯ ಆಂಬ್ಯುಲೆನ್ಸ್ ನಲ್ಲಿ ಮಂಗಳೂರು ಎ ಜೆ ಆಸ್ಪತ್ರೆಗೆ ಕರೆದುಕೊಂಡು ಬಂದು, ದಾಖಲು ಮಾಡಿದ್ದು, ಅಲ್ಲಿ ವೈದ್ಯರು ಪರೀಕ್ಷಿಸಿ ಸಂಜೆ 3.06 ಗಂಟೆಗೆ ಖತೀಜಮ್ಮರವರು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 19-2021 ಕಲಂ: 279,,304(A), ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ವೇಣೂರು ಪೊಲೀಸ್ ಠಾಣೆ: ದಿನಾಂಕ13.03.2021 ರಂದು ಪಿರ್ಯಾದಿದಾರರಾದ ಹರ್ಷಿಕೇಶ್ ಪ್ರಾಯ 18 ವರ್ಷ ತಂದೆ: ದಿ. ಕಿಶೋರ್ ವಾಸ: ಮೂಕಡ್ಡ ಮನೆ , ಮುಂಡೂರು ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ಸಂಬಂಧಿ ನಿತೇಶ್ ಎಂಬವರೊಂದಿಗೆ ಬೆಳ್ತಂಗಡಿಗೆ ಕೆಲಸ ನಿಮಿತ್ತ ಹೋಗಿ ಕೆಲಸ ಮುಗಿಸಿ ಅಲ್ಲಿಂದ ಮರಳಿ ಅಳದಂಗಡಿಗೆ ಬರುವರೇ ಪಿರ್ಯಾದಿದರರ ಬಾಬ್ತು ಮೋಟಾರ್ ಸೈಕಲ್ ನಂಬ್ರ ಕೆಎ70 ಹೆಚ್ 3632 ನೇಯದನ್ನು ನಿತೇಶ್ ಎಂಬವರು ಚಲಾಯಿಸಿಕೊಂಡು ಪಿರ್ಯಾದಿದರರು ಸಹ ಸವಾರನಾಗಿ ಕುಳಿತುಕೊಂಡು ಅಳದಂಗಡಿ ಕಡೆಗೆ ಬೆಳ್ತಂಗಡಿ- ಕಾರ್ಕಳ ರಾಜ್ಯ ರಸ್ತೆಯಲ್ಲಿ ಬರುತ್ತಾ ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ಕಾಪಿನಡ್ಕ ಸೇತುವೆ ಮೇಲೆ ಹೋಗುತ್ತಿರುವಾಗ ಸಮಯ ಸುಮಾರು 15.35 ಗಂಟೆಯ ವೇಳೆಗೆ ಪಿರ್ಯಾದಿದಾರರು ಹೋಗುತ್ತಿದ್ದ ಮೋಟಾರ್ ಸೈಕಲ್ ಮುಂದಿನಿಂದ ಕಾರ್ಕಳ ಕಡೆಗೆ ಹೋಗುತ್ತಿದ್ದ ಒಂದು ಇನ್ನೋವಾ ಕಾರಿನ ಚಾಲಕನು ತನ್ನ ಕಾರನ್ನು ಒಮ್ಮೆಲೇ ನಿಧಾನಗೊಳಿಸಿದಾಗ ಅದರ ಹಿಂದಿನಿಂದ ಮೊಟಾರ್ ಸೈಕಲ್ ಅನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ನಿತೇಶನು ಒಮ್ಮೆಲೇ ಬ್ರೇಕ್ ಹಾಕಿದಾಗ ವೇಗವಾಗಿದ್ದ ಮೋಟಾರ್ ಸೈಕಲ್ ಅವನ ನಿಯತ್ರಣ ತಪ್ಪಿ ರಸ್ತೆಯ ಬಲ ಬದಿಗೆ ಚಲಾಯಿಸಲ್‌ಪಟ್ಟು ಎದುರಿನಿಂದ ಬರುತ್ತಿದ್ದ ಮೋಟಾರ್ ಸೈಕಲ್ ನಂಬ್ರ ಕೆಎ 21 ಡಬ್ಲೂ 3923 ನೇಯದಕ್ಕೆ ಡಿಕ್ಕಿ ಹೊಡೆದು ಪರಿಣಾಮವಾಗಿ ಪಿರ್ಯಾದಿದರರು ಹಾಗೂ ಸವಾರ ನಿತೇಶ ಎಂಬವರು ರಸ್ತೆಗೆ ಎಸೆಯಲ್‌ಪಟ್ಟು ಪಿರ್ಯಾದಿದಾರ ಎರಡು ಕೈಗಳಿಗೆ , ಎಡ ಹುಬ್ಬಿಗೆ ಹಾಗೂ ತಲೆಗೆ ಗುದ್ದಿದ ಹಾಗೂ ತರಚಿದ ರೀತ್ಯಾ ಗಾಯ ಮತ್ತು ಸವಾರ ನಿತೇಶರವರಿಗೆ ಬಲ ಕಾಲಿನಲ್ಲಿ ಮುಳೆ ಮುರಿತದ ಗಾಯ, ಹೊಟ್ಟೆಗೆ , ಎದೆಗೆ ಹಾಗೂ ತಲೆಗೆ ತೀವ್ರ ಸ್ವರೂಪದ ಗಾಯವಾಗಿದ್ದು , ಕೆಎ 21 ಡಬ್ಲೂ 3923 ನೇ ಮೋಟಾರ್ ಸೈಕಲ್ ಸವಾರ ಜಗದೀಶ್ ಎಂಬವರಿಗೂ ಕೂಡ ಕಾಲಿಗೆ ಮೂಳೆ ಮುರಿತದ ರೀತ್ಯಾ ಗಾಯವಾಗಿ ಗಾಯಾಳುಗಳನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರಯಲ್ಲಿ ಚಿಕಿತ್ಸೆಯ ಬಗ್ಗೆ ದಾಖಲಿಸಿ ನಿತೇಶ್ ಹಾಗೂ ಜಗದೀಶರವರುಗಳನ್ನ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಮಂಗಳೂರಿನ ಎ. ಜೆ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆಯಲ್ಲಿದ್ದ ನಿತೇಶನು ದಿನಾಂಕ 14.03.2021 ರಂದು ಮುಂಜಾನೆ 04.33 ಗಂಟೆಗೆ ಮೃತಪಟ್ಟಿರುವುದಾಗಿದ್ದು. ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 18-2021 ಕಲಂ: 279,337,338,304(A), ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಅಭಿಲಾಷ್ ಕೆ ವೈ, ಪ್ರಾಯ 24 ವರ್ಷ, ತಂದೆ: ಯೋಗೇಶ್, ವಾಸ: ಕಾಜಿನಾಯಕನ ಹಳ್ಳಿ ಗ್ರಾಮ, ಕೌಶಿಕ ಅಂಚೆ, ಶಾಂತಿಗ್ರಾಮ, ಹಾಸನ ತಾಲೂಕು ಮತ್ತು ಜಿಲ್ಲೆ ಎಂಬವರದೂರಿನಂತೆ ದಿನಾಂಕ 13-03-2021 ರಂದು 13-30 ಗಂಟೆಗೆ ಆರೋಪಿ ಟ್ಯಾಂಕರ್ ಚಾಲಕ ಮಹೇಶ್ ಎಂಬವರು KA-06-C-7845ನೇ ನೋಂದಣಿ ನಂಬ್ರದ ಡೀಸೆಲ್ ಟ್ಯಾಂಕರ್ ನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಮಂಗಳೂರು ಕಡೆಯಿಂದ ಕೋಲಾರ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು 34 ನೇ ನೆಕ್ಕಿಲಾಡಿ ಗ್ರಾಮದ ಬೊಳ್ಳಾರು ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಟ್ಯಾಂಕರ್ ಲಾರಿಯು ಚಾಲಕನ ಹತೋಟಿ ತಪ್ಪಿ ಹೆದ್ದಾರಿಯಲ್ಲಿ ಮಗುಚಿ ಬಿದ್ದು, ಟ್ಯಾಂಕರ್ನಲ್ಲಿದ್ದ ಡೀಸೆಲ್ ಹೊರ ಚೆಲ್ಲಿ, ಟ್ಯಾಂಕರ್ ಲಾರಿಯು ಜಖಂಗೊಂಡಿರುತ್ತದೆ. ಆರೋಪಿ ಚಾಲಕನಿಗೆ ಬಲಕೈ ಅಂಗೈಗೆ ಗಾಯವಾಗಿ ಉಪ್ಪಿನಂಗಡಿ ದನ್ವಂತರಿ ಆಸ್ಪತ್ರೆಯಲ್ಲಿ ಔಷಧಿ ಪಡೆದಿರುತ್ತಾರೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 47/2021 ಕಲಂ: 279 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಾಣೆ ಪ್ರಕರಣ: ೦1
ಕಡಬ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಕಾಂತಪ್ಪ ಗೌಡ ಪ್ರಾಯ 51 ವರ್ಷ ತಂದೆ ; ಮಲ್ಲಣ್ಣ ಗೌಡ ವಾಸ ;ಕುತ್ಯಾಡಿ ಮನೆ ಕೋಡಿಂಬಾಳ ಗ್ರಾಮ ಕಡಬ ತಾಲೂಕು ಎಂಬವರು ನೀಡಿದ ದೂರಿನಂತೆ ಪಿರ್ಯಾದುದಾರರಿಗೆ ಮೂರು ಗಂಡು, ಮತ್ತು ಎರಡು ಹೆಣ್ಣು ಮಕ್ಕಳಿದ್ದು, ಪಿರ್ಯಾದಿಯ ದೊಡ್ಡ ಮಗ ದೇವಿಪ್ರಸಾದ್ ಪ್ರಾಯ 25 ವರ್ಷ ರವರು ಕಡಬ ಪೇಟೆಯಲ್ಲಿ ಕೆನರಾ ಪರ್ನಿಚರ್ ಶಾಫ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಂಪ್ರತಿ ಮನೆಗೆ ಬಂದು ಕೆಲಸಕ್ಕೆ ಹೋಗುತ್ತಿದ್ದನ್ನು ದಿನಾಂಕ: 09.03.2021 ರಂದು ಎಂದಿನಂತೆ ಬೆಳಿಗ್ಗೆ 08.30 ಗಂಟೆಗೆ ಕಡಬಕ್ಕೆ ಕೆಲಸಕ್ಕೆ ಹೋಗುವುದಾಗಿ ಮನೆಯಿಂದ ಹೇಳಿ ಹೋದವನು ಕೆಲಸಕ್ಕೂ ಹೋಗದೇ ಮನೆಗೂ ಬಾರದೇ ಇದ್ದು, ಈ ಮದ್ಯೆ ಅದೇ ದಿನದಂದು ಬೆಳಿಗ್ಗೆ 11.00 ಗಂಟೆ ಸಮಯಕ್ಕೆ ಆತನು ಕೆಲಸ ಮಾಡುತ್ತಿರುವ ಅಂಗಡಿ ಮಾಲಿಕನು ಪಿರ್ಯಾದುದಾರರಿಗೆ ದೂರವಾಣಿ ಕರೆ ಮಾಡಿ ನಿಮ್ಮ ಮಗ ದೇವಿಪ್ರಸಾದ್ ಅಂಗಡಿಯಲ್ಲಿ ಇರುವುದಿಲ್ಲವಾಗಿ ತಿಳಿಸಿದ್ದು, ಆ ಕೂಡಲೇ ಪಿರ್ಯಾದುದಾರರು ಮಗನಿಗೆ ದೂರವಾಣಿ ಕರೆ ಮಾಡಿ ಪಿರ್ಯದುದಾರರು ಮತ್ತು ಅವರ ಪತ್ನಿ ಮಾತಾನಾಡಿದ್ದಲ್ಲಿ ಕಾಣೆಯಾದ ದೇವಿಪ್ರಸಾದ್ ರವರು ನಾನು ಕೆಲವು ದಿವಸ ಮನೆಗೆ ಬರುವುದಿಲ್ಲವೆಂದು ಹಾಗೂ ನಾನು ಮಂಗಳೂರಿನಲ್ಲಿ ಕೆಲಸಕ್ಕೆ ಸೇರುವುದಾಗಿ ತಿಳಿಸಿದ್ದು, ನಂತರದ ಸಮಯದಲ್ಲಿ ದೂರವಾಣಿ ಕರೆ ಮಾಡಿದ್ದಲ್ಲಿ ಮೊಬೈಲ್ ಪೋನ್ ಸ್ವಿಚ್ ಆಫ್ ಆಗಿದ್ದು ಈ ತನಕ ದೂರವಾಣಿ ಕರೆಗೆ ಸಿಗದೆ ಇದ್ದು. ಈ ಬಗ್ಗೆ ನೆರೆಕರೆ ಹಾಗೂ ಸಂಬಂದಿಕರವರಲ್ಲಿಯು ವಿಚಾರಿಸಿದರೂ ಎಲ್ಲಿಯೂ ಪತ್ತೆಯಾಗದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಕಡಬ ಠಾಣಾ ಅ.ಕ್ರ 21/2021 ಕಲಂ: 00 MP man Missing ನಂತೆ ಪ್ರಕರಣ ದಾಖಲಾಗಿರುತ್ತದೆ.