ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ರಕ್ಷಿತಾ ಪ್ರಾಯ 21 ವರ್ಷ ತಂದೆ;ಆನಂದ ಪೂಜಾರಿ ವಾಸ: ಕನಾಲು ಮನೆ, ನಾವೂರು  ಗ್ರಾಮ, ಬೆಳ್ತಂಗಡಿ ತಾಲೂಕು ರವರು ದಿನಾಂಕ: 14-05-2021 ರಂದು ತನ್ನ ಬಾಬ್ತು ಕೆಎ ಕೆಎ 09 ಎನ್ 1858 ನೇ ಕಾರಿನಲ್ಲಿ ಸಹ ಪ್ರಯಾಣಿಕರಾಗಿ ಅವರ ಅಕ್ಕ ರಂಜಿತಾ ರವರನ್ನು ಕುಳ್ಳಿರಿಸಿಕೊಂಡು ನಾವೂರು ಕಡೆಯಿಂದ ಲಾಯಿಲ ಕಡೆಗೆ ಚಲಾಯಿಸಿಕೊಂಡು ಬರುತ್ತಾ ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಪುತ್ರಬೈಲು ಎಂಬಲ್ಲಿಗೆ ತಲುಪುತ್ತಿದ್ದಂತೆ ಪಿರ್ಯಾದಿದಾರರ ವಿರುದ್ದ ದಿಕ್ಕಿನಿಂದ ಅಂದರೆ ಲಾಯಿಲ ಕಡೆಯಿಂದ ನಾವೂರು ಕಡೆಗೆ ಕೆಎ 21 ಎಕ್ಸ್ 6858 ನೇ ದ್ವಿ ಚಕ್ರ ವಾಹನವನ್ನು ಅದರ ಸವಾರ ದುಡುಕುತನದಿಂದ ರಸ್ತೆಯ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನ ಜಖಂ ಆಗಿ ದ್ವಿ ಚಕ್ರ ವಾಹನ ಸವಾರ ಜೋಸೇಫ್ ಕೋರ್ಡೆರೋ ರವರು ದ್ವಿಚಕ್ರ ವಾಹನ ಸಮೇತ ರಸ್ತೆಗೆ ಬಿದ್ದು ತಲೆಗೆ, ಕಾಲುಗಳಿಗೆ ಗುದ್ದಿದ ರಕ್ತಗಾಯಗೊಂಡು ಚಿಕಿತ್ಸೆ ಬಗ್ಗೆ ಮಂಗಳೂರು ಎಜೆ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 45/2021, ಕಲಂ; 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಜೀವಬೆದರಿಕೆ ಪ್ರಕರಣ: 1

ಕಡಬ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಧ್ರುವ ಕುಮಾರ್ ಪ್ರಾಯ 35  ವರ್ಷ ತಂದೆ : ಬಾಲಪ್ಪ ಗೌಡ  ವಾಸ: ಮುಂಡಡ್ಕ ಮನೆ, ಐತ್ತೂರು ಗ್ರಾಮ  ಕಡಬ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 14 -05- 2021 ರಂದು  ಪಿರ್ಯಾದುದಾರರು  ಮನೆಯಲ್ಲಿ ಇರುವ ಸಮಯ  ಪಿರ್ಯಾದಿಯ ಮನೆಯ ಹತ್ತಿರದಲ್ಲಿ ಪ್ರತ್ಯೇಕ ಮನೆ ಮಾಡಿಕೊಂಡಿರುವ ಪಿರ್ಯಾದಿಯ ತಂದೆಯ ಎರಡನೆಯ ಪತ್ನಿಯ ಮಗ ಪ್ರೀತಮ್ ಪಿರ್ಯಾದಿಯ ಮನೆಯ ಅಂಗಳಕ್ಕೆ  ಅಕ್ರಮ ಪ್ರವೇಶ ಮಾಡಿ  ನಾನು ಬಾರ್ ನಲ್ಲಿ ಕುಡಿದು ಗಲಾಟೆ ಮಾಡಿದ್ದಾಗಿ ಊರಿನಲ್ಲಿ ಅಪಪ್ರಚಾರ ಮಾಡಿ ನನ್ನ ಮಾನ  ತೆಗೆದಿಯಲ್ಲ ಎಂದು  ಹೇಳಿ ಅವ್ಯಾಚ್ಯ ಶಬ್ದಗಳಿಂದ ಬೈಯುತ್ತ ಆತನ ಕೈಯಲ್ಲಿದ್ದ ಲಾಂಗ್ ನಿಂದ ಪಿರ್ಯಾದಿಯ ಬಲಬದಿ  ಎದೆಗೆ  ಬಲವಾಗಿ  ಕಡಿದಿದ್ದು ಅಷ್ಟರಲ್ಲಿ ಹೆಂಡತಿ ನಿಖಿತಾ. ಜೊತೆಯಲ್ಲಿ  ಕೆಲಸ ಮಾಡುವ ಪ್ರಶಾಂತ್.  ಹಾಗೂ ನೆರೆಮನೆಯ ಸಂದೀಪ್. ರವರು ಬಂದು ಆರೋಪಿ  ಪ್ರೀತಮ್  ಪಿರ್ಯಾದಿಯ ಮೇಲೆ  ಲಾಂಗ್ ನಿಂದ  ಹಲ್ಲೇ ಮಾಡುವುದನ್ನು  ತಡೆದಾಗ ಆತನ ಕೈಯಲ್ಲಿದ್ದ  ಲಾಂಗ್ ಅನ್ನು ಅಲ್ಲೇ ಬಿಸಾಡಿ  ಇಂದು ಮುಂದಕ್ಕೆ  ನೀನು  ನನ್ನ ಬಗ್ಗೆ  ಅಪಪ್ರಚಾರ ಮಾಡಿದರೆ  ನಿನ್ನನ್ನು  ಕೊಲ್ಲದೇ  ಬಿಡುವುದಿಲ್ಲ ವಾಗಿ  ಬೆದರಿಕೆ  ಹಾಕಿ  ಹೋಗಿರುತ್ತಾನೆ ಈ ಬಗ್ಗೆ ಕಡಬ ಠಾಣಾ ಅ ಕ್ರ  ನಂಬ್ರ: 41/2021 ಕಲಂ :  447. 504. 326. 506. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರೆ ಪ್ರಕರಣ: 1

ವೇಣೂರು ಪೊಲೀಸ್ ಠಾಣೆ : ಪೊಲೀಸ್ ಉಪ ನಿರೀಕ್ಷಕರು, ವೇಣೂರು ಪೊಲೀಸ್ ಠಾಣೆ ರವರು ದಿನಾಂಕ 14.05.2021 ರಂದು  ಸಿಬ್ಬಂದಿಯವರ ಜೊತೆ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ಬೆಳ್ತಂಗಡಿ ತಾಲೂಕು ಗುಂಡೂರಿ ಗ್ರಾಮದ  ತುಂಬೆದಲೆಕ್ಕಿ ಎಂಬಲ್ಲಿ ಹರೀಶ್ ಪೂಜಾರಿಯವರ ಅಂಗಡಿಯ ಹೊರಭಾಗದಲ್ಲಿದ್ದ ಸಿಮೆಂಟ್ ಕಟ್ಟೆಯಲ್ಲಿ ಸಾರ್ವಜನಿಕರಿಗೆ ಅನಧಿಕೃತವಾಗಿ ಮದ್ಯ ಸೇವಿಸಲು ಅವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು ಪಂಚರೊಂದಿಗೆ ಗುಂಡೂರಿ ಗ್ರಾಮದ ಹರೀಶ್ ಪೂಜಾರಿ ಎಂಬವರ ಅಂಗಡಿ ಬಳಿಯ ಕಟ್ಟೆಗೆ ದಾಳಿ  ನಡೆಸಿದ್ದು,  ಮಧ್ಯ ಸೇವಿಸುತ್ತಿದ್ದ ಓರ್ವ ವ್ಯಕ್ತಿ ಅನೂಪ್ ಎಂಬವರು ಓಡಿ  ಹೋಗಿದ್ದು,   ಮಧ್ಯ ಸೇವಿಸಲು ಅವಕಾಶ ಮಾಡಿಕೊಟ್ಟ ಅಂಗಡಿಯ ಮಾಲೀಕ ಹರೀಶ ಪೂಜಾರಿಯನ್ನು ಮತ್ತು 90 ಎಮ್ ಎಲ್ ಸಾಮರ್ಥ್ಯದ MYSORE LANCER WHISKY ಎಂದು ಲೇಬಲ್ ಇರುವ ಮಧ್ಯ ತುಂಬಿದ 02 ಪ್ಯಾಕೆಟ್ , ಇದರ ಅಂದಾಜು ಮೌಲ್ಯ 90/- ರೂ ಹಾಗೂ ಮಧ್ಯ ಸೇವಿಸಿ ಉಳಿದ  90 ಎಮ್ ಎಲ್ ಸಾಮರ್ಥ್ಯದ MYSORE LANCER WHISKY ಎಂದು ಲೇಬಲ್ ಇರುವ 02 ಪ್ಯಾಕೆಟ್ , ಸ್ಟೀಲಿನ ಗ್ಲಾಸ್ 1, ನೀರಿನ ಪ್ಲಾಸ್ಟಿಕ್ ಬಾಟಲಿ ಒಂದು ಇವುಗಳನ್ನು ಸ್ವಾಧೀನಪಡಿಸಿಕೊಂಡು ವೇಣೂರು ಠಾಣಾ ಅ.ಕ್ರ ನಂಬ್ರ 31/2021  ಕಲಂ: 269 ಐ ಪಿಸಿ ಮತ್ತು  15 (ಎ) 32 (3) ಕೆ.ಇ. ಕಾಯ್ದೆ ಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ: 1

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪದ್ಮನಾಭ.ಎನ್.ಎಸ್,  55 ವರ್ಷ, ತಂದೆ: ದಿ|| ಸುಬ್ಬ ಪಾಟಾಳಿ, ವಾಸ: ಜೋಗಿಯಡ್ಕ ಮನೆ, ಅಮರಮುಡ್ನೂರು ಗ್ರಾಮ, ಸುಳ್ಯ ತಾಲೂಕು ರವರ ತಮ್ಮ ಬಾಲಕೃಷ್ಣ.ಎನ್.ಎಸ್, 46 ವರ್ಷ ರವರು ಸುಳ್ಯ ತಾಲೂಕು ಅಮರಮುಡ್ನೂರು ಗ್ರಾಮದ ಮಾಯಿಪಡ್ಕ ಮನೆ ಎಂಬಲ್ಲಿ ಓರ್ವರೇ ವಾಸವಾಗಿದ್ದು ಕೂಲಿ ಕೆಲಸ ಮಾಡಿಕೊಂಡಿದ್ದರು. ಬಾಲಕೃಷ್ಣರು ಎನ್.ಎಸ್ ರವರು ಹಿಂದಿನಿಂದಲೂ ವಿಪರೀತ ಮದ್ಯ ಸೇವಿಸುವ ಅಭ್ಯಾಸವನ್ನು ಹೊಂದಿದ್ದು, ಅದೇ ಕಾರಣದಿಂದ ಅವರ ಪತ್ನಿ ಹಾಗೂ ಮಗಳು ಸುಮಾರು 6 ವರ್ಷಗಳಿಂದ ತವರು ಮನೆಯಲ್ಲಿಯೇ ಇರುತ್ತಾರೆ. ದಿನಾಂಕ 10-05-2021 ರಂದು ಬಾಲಕೃಷ್ಣರು ಕೂಲಿ ಕೆಲಸಕ್ಕೆ ಹೋದವರು ರಾತ್ರಿ ಮನೆಗೆ ಬರುವುದನ್ನು ನೋಡಿದವರಿದ್ದು, ದಿನಾಂಕ 14-05-2021 ರಂದು 11-00 ಗಂಟೆಗೆ ಬಾಲಕೃಷ್ಣರ ಮನೆಯ ನೆರೆಮನೆ ವಾಸಿ ಆಶೋಕ ಎಂಬವರು ಬಾವಿಯಿಂದ ನೀರು ತರಲು ಹೋದವರು ಬಾಲಕೃಷ್ಣನ ಮನೆಯಿಂದ ವಾಸನೆ ಬರುವುದನ್ನು ಕಂಡು ಪ್ರಕರಣದ ಪಿರ್ಯಾದಿದಾರರಿಗೆ ಕರೆ ಮಾಡಿ ತಿಳಿಸಿದಂತೆ ಪಿರ್ಯಾದಿದಾರರು ತಮ್ಮ ಬಾಲಕೃಷ್ಣನ ಮನೆಗೆ ಬಂದು ಪರಿಶೀಲಿಸಿದ ವೇಳೆ ಮನೆಯ ಕಿಟಿಕಿಯಲ್ಲಿ ನೊಣಗಳು ಹಾರಾಡುತ್ತಿದ್ದುದನ್ನು ನೋಡಿ ಸಂಶಯಗೊಂಡು ಒಳಗಿನಿಂದ ಚಿಲಕ ಹಾಕಿ ಭದ್ರಪಡಿಸಿದ ಬಾಗಿಲನ್ನು ದೂಡಿ ತೆರೆದು ಒಳಹೋಗಿ ನೋಡಲಾಗಿ ಬಾಲಕೃಷ್ಣನ ಮೃತದೇಹವು ಮನೆಯ ಹಾಲ್ ನಲ್ಲಿರುವ ಮಂಚದಲ್ಲಿ ಕೊಳೆತಿರುವುದು ಕಂಡು ಬಂದಿರುತ್ತದೆ. ಬಾಲಕೃಷ್ಣನು ವಿಪರೀತ ಮದ್ಯ ಸೇವಿಸುವ ಹವ್ಯಾಸವನ್ನು ಹೊಂದಿದ್ದು, ಅದೇ ರೀತಿ ದಿನಾಂಕ 10-05-2021 ರಂದು ರಾತ್ರಿ ಮದ್ಯ ಸೇವಿಸಿ ಮಲಗಿದ್ದವರು ಹಸಿವು, ಬಾಯಾರಿಕೆಯಿಂದ ಅಥವಾ ಅವರಿಗಿದ್ದ ಇನ್ಯಾವುದೋ ಖಾಯಿಲೆಯಿಂದ ಅಸ್ವಸ್ಥಗೊಂಡವರನ್ನು ಉಪಚರಿಸುವವರಿಲ್ಲದೇ, ಮಲಗಿದ್ದಲ್ಲಿಯೇ ಮೃತಪಟ್ಟಿರುವ ಸಾಧ್ಯತೆ ರುತ್ತದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಯು.ಡಿ.ಆರ್ ನಂ 13/2021 ಕಲಂ 174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 15-05-2021 12:39 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080