ಅಪಘಾತ ಪ್ರಕರಣ: ೦2
ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪ್ರಶಾಂತ್ ಶೆಟ್ಟಿ (28 )ತಂದೆ:ಕೃಷ್ಣ ಶೆಟ್ಟಿ ವಾಸ:ದುರ್ಗಾಪ್ರಸಾದ್ ನಿಲಯ ನೆತ್ತೆರಕೆರೆ ,ವಿಟ್ಲ ಕಸಬ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾಧಿದಾರರು ನಿನ್ನೆ ದಿನಾಂಕ:18-07-2021 ರಂದು ಸಂಜೆ 5.30 ಗಂಟೆಗೆ ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕಾಡುಮಠ ವಿಟ್ಲ -ಸಾಲೆತ್ತೂರು ಡಾಮಾರು ರಸ್ತೆ ಬದಿಯಲ್ಲಿ ನಿಂತುಕೊಂಡಿರುವಾಗ ವಿಟ್ಲ ಕಡೆಯಿಂದ ಸಾಲೆತ್ತೂರು ಕಡೆಗೆ ಸ್ಕೂಟರ್ ನಂಬ್ರ ಕೆಎ-19-ಇಎಫ್-4905ನೇದನ್ನು ಅದರ ಸವಾರ ಅತೀವೇಗ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ಸ್ಕೂಟರನಿಂದ ಸವಾರ ಹಾಗೂ ಸಹ ಸವಾರ ಡಾಮಾರು ರಸ್ತೆಗೆ ಬಿದ್ದರು ಕೂಡಲೇ ಪಿರ್ಯಾಧಿದಾರರು ಅವರ ಬಳಿ ಹೋಗಿ ನೋಡಲಾಗಿ ಸವಾರ ವಿಜೇತ್ ಆಗಿದ್ದು. ಸಹ ಸವಾರ ಪ್ರದೀಪಕುಮಾರ ಎಂಬವನಾಗಿದ್ದು ಪ್ರದೀಪ್‌ಕುಮಾರನು ಅಸ್ವಸ್ಥಗೊಂಡು ತಲೆಗೆ ಗಾಯವಾಗಿದ್ದು ಆತನನ್ನು ಚಿಕಿತ್ಸೆಯ ಬಗ್ಗೆ ಒಂದು ಅಂಬುಲೆನ್ಸನಲ್ಲಿ ದೇರಳಕಟ್ಟೆ ಯನಪೊಯ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಯ ಬಗ್ಗೆ ದೇರಳಕಟ್ಟೆಯ ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಅ.ಕ್ರ 98/2021 ಕಲಂ: 279,337 ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಎಸ್ ದೇವರಾಜ್ ಪ್ರಾಯ 35 ವರ್ಷ ತಂದೆ: ದಿ| ಶಿವಣ್ಣ ವಾಸ: 1 ನೇ ಕ್ರಾಸ್, ಎ ಡಿ ನಗರ, ವಾರ್ಡ್ ನಂಬ್ರ: 10, ವಿವೇಕನಂದ ನಗರ, ಚನ್ನರಾಯಪಟ್ಟಣ ತಾಲೂಕು, ಹಾಸನ ಎಂಬವರ ದೂರಿನಂತೆ ದಿನಾಂಕ: 19-07-2021 ರಂದು ಪಿರ್ಯಾಧಿದಾರರು ತನ್ನ ಬಾಬ್ತು ಕೆಎ 19 ಪಿ 3943 ನೇ ಕಾರಿನಲ್ಲಿ ಸಂಬಂಧಿಕರನ್ನು ಸಹ ಪ್ರಯಾಣಿಕರಾಗಿ ಕುಳ್ಳಿರಿಸಿಕೊಂಡು ಧರ್ಮಸ್ಥಳ ಕಡೆಯಿಂದ ಕೊಕ್ಕಡ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಸಮಯ ಸುಮಾರು ಮಧ್ಯಾಹ್ನ 2.00 ಗಂಟೆಗೆ ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಮದ ಪಾರ್ಪಿಕಲ್ಲು ಎಂಬಲ್ಲಿ ತಲುಪುತ್ತಿದ್ದಂತೆ ಪಿರ್ಯಾಧಿದಾರರ ಹೆಂಡತಿಗೆ ವಾಂತಿ ಬಂದ ಕಾರಣ ಪಿರ್ಯಾಧಿದಾರರು ಕಾರನ್ನು ರಸ್ತೆಯ ಎಡಬದಿಯ ಮಣ್ಣು ರಸ್ತೆಯಲ್ಲಿ ನಿಲ್ಲಿಸುತ್ತಿದ್ದಂತೆ ಪಿರ್ಯಾಧಿದಾರರ ವಿರುದ್ದ ದಿಕ್ಕಿನಿಂದ ಅಂದರೆ ಕೊಕ್ಕಡ ಕಡೆಯಿಂದ ಧರ್ಮಸ್ಥಳ ಕಡೆಗೆ ಕೆಎ 19 ಝೆಡ್ 2884 ನೇ ಕಾರನ್ನು ಅದರ ಚಾಲಕ ದುಡುಕುತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಎರಡೂ ಕಾರು ಜಖಂ ಆಗಿ ಪಿರ್ಯಾಧಿದಾರರ ಕಾರಿನಲ್ಲಿದ್ದ ಮಮತಾ ರವರಿಗೆ ಎಡಕಣ್ಣಿನ ಬಳಿ, ಮೀನಾಕ್ಷಿ ರವರಿಗೆ ಸೊಂಟಕ್ಕೆ, ಕಾವ್ಯಾಶ್ರೀ ರವರಿಗೆ ಬಲಕಾಲಿನ ಮೊಣಗಂಟಿಗೆ, ಎಡ ಕಿವಿಯ ಬಳಿ, ದುಷ್ಯಂತ್ ಗೌಡ ರವರಿಗೆ ತಲೆಯ ಎಡಬದಿಗೆ ಗುದ್ದಿದ, ರಕ್ತಗಾಯ ಹಾಗೂ ಅಪಘಾತ ನಡೆಸಿದ ಕಾರಿನಲ್ಲಿದ್ದ ಚಾಲಕ ಬೈರವನಾಥ ರವರಿಗೆ ಬಲ ಕಿಬ್ಬೊಟ್ಟೆಗೆ, ರೇಣುಕಮ್ಮ ರವರಿಗೆ ತುಟಿಗೆ ಗುದ್ದಿದ, ರಕ್ತಗಾಯವಾಗಿದ್ದು ಗಾಯಾಳುಗಳ ಪೈಕಿ ಮಮತಾ, ಮೀನಾಕ್ಷಿ, ಕಾವ್ಯಾಶ್ರೀ, ದುಷ್ಯಂತ್ ಗೌಡ ರವರು ಉಜಿರೆ ಬೆನಕ ಆಸ್ಪತ್ರೆಯಲ್ಲಿ ಹಾಗೂ ಬೈರವನಾಥ, ರೇಣುಕಮ್ಮ ರವರು ಉಜಿರೆ ಎಸ್ ಡಿ ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣಾ ಅ.ಕ್ರ: 57/2021, ಕಲಂ; 279,337 ಭಾದಂಸಂ. ಮತ್ತು ಕಲಂ: 7 ಆರ್ ಆರ್ ರೂಲ್ಸ್ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಾಣೆ ಪ್ರಕರಣ: ೦1
ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಖದಿಜ (33) ಗಂಡ: ಅಬ್ದುಲ್ ಕುಂಞ ವಾಸ: ದೊಡ್ಡಡ್ಕ, ಸಂಪಾಜೆ ಗ್ರಾಮ,ಸುಳ್ಯ ತಾಲುಕು ಎಂಬವರ ದೂರಿನಂತೆ ಪಿರ್ಯಾದುದಾರರು ಮತ್ತು ಅವರ ಗಂಡ ಪಿರ್ಯಾದುದಾರರ ತವರು ಮನೆಗೆ ಒಂದು ತಿಂಗಳ ಹಿಂದೆ ಬಂದಿದ್ದು, ಅದರಂತೆ ಪಿರ್ಯಾದುದಾರರ ಗಂಡ ಅಬ್ದುಲ್ ಕುಂಞ (36 ) ಎಂಬಾತನು ದಿನಾಂಕ 16.07.2021 ರಂದು ಅತ್ತೆಯ ಮನೆಯಾದ ಸುಳ್ಯ ತಾಲೂಕು ಸಂಪಾಜೆ ಗ್ರಾಮದ ದೊಡ್ಡಡ್ಕ ಎಂಬಲ್ಲಿಂದ ಸುಳ್ಯ ಕ್ಕೆ ಹೋಗಿ ಬರುತ್ತೆನೆ ಎಂದು ಹೇಳಿ ಸಮಯ ಸುಮಾರು 10:30 ಗಂಟೆಗೆ ಹೋದವರು ಈ ವರೆಗೆ ಮನೆಗೆ ಬಾರದೇ, ಸಂಬಂಧಿಕರ ಮನೆಗೂ, ಹಾಗೂ ಸ್ನೇಹಿತರ ಮನೆಗೂ ಹೋಗದೇ ಕಾಣೆಯಾಗಿದ್ದು, ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅಕ್ರ 50/2021 Sec: ಗಂಡಸು ಕಾಣೆ. ಯಂತೆ ಪ್ರಕರಣ ದಾಖಲಾಗಿರುತ್ತದೆ.
ಜೀವ ಬೆದರಿಕೆ ಪ್ರಕರಣ: ೦2
ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಆನಂದ ಪೂಜಾರಿ (55) ತಂದೆ: ದಿ ವೆಂಕಪ್ಪ ಪೂಜಾರಿ ವಾಸ: ಪರಾರಿಬೆಟ್ಟು ಮನೆ, ತೆಂಕಕಜೆಕಾರು ಗ್ರಾಮ , ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ: 14.07.2021 ರಂದು ರಾತ್ರಿ 9.00 ಗಂಟೆಗೆ ಪಿರ್ಯಾಧಿದಾರರಾದ ಆನಂದ ಪೂಜಾರಿ ಎಂಬವರು ಬಂಟ್ಚಾಳ ತಾಲೂಕು ತೆಂಕಕಜೆಕಾರು ಗ್ರಾಮದ ಪರಾರಿಬೆಟ್ಟು ಎಂಬಲ್ಲಿ ತನ್ನ ಮನೆಯಲ್ಲಿರುವ ಸಮಯ ಆರೋಪಿ ಪ್ರಶಾಂತ್ ಎಂಬಾತನು ಪಿರ್ಯಾಧಿದಾರರ ಮನೆಯ ಮುಂಭಾಗ ಕಾರನ್ನು ನಿಲ್ಲಿಸಿ ಮಾತನಾಡುತ್ತಿರುವಾಗ ಫಿರ್ಯಾಧಿದಾರರು ಮನೆಯ ಹೊರಗೆ ಬಂದು ಟಾರ್ಚ್ ಲೈಟ್ ಹಾಕಿ ನೋಡಿದ್ದು, ಆ ಸಮಯ ಆರೋಪಿಯು ಕಾರಿನಿಂದ ಇಳಿದು ಫಿರ್ಯಾಧಿದಾರರ ಮನೆಯ ಸಿಟ್‌ಔಟ್‌ಗೆ ಬಂದು ನಿಂತುಕೊಂಡಿರುವುದನ್ನು ಪ್ರಶ್ನಿಸಿದ ಪಿರ್ಯಾಧಿದಾರರನ್ನು ಉದ್ದೇಶಿಸಿ ನಿನ್ನ ಅಪ್ಪನವರು ಹೋಗಬಹುದು ಈ ರೋಡ್ ನಲ್ಲಿ ನಾನು ಹೋಗಬಾರದಾ ಎಂಬುವುದಾಗಿ ಕುಡಿದ ಅಮಲಿನಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ನಡೆಸಿ ಬಳಿಕ ಗೇಟ್ ನ ಉರುವಾಲಿನಲ್ಲಿರುವ ಮರದ ದೊಣ್ಣೆಯನ್ನು ತೆಗೆದು ಪಿರ್ಯಾಧಿದಾರರಿಗೆ ಹೊಡೆದು ಹಲ್ಲೆ ಮಾಡಿದ ಪರಿಣಾಮ ಪಿರ್ಯಾಧಿದಾರರು ನೆಲಕ್ಕೆ ಬಿದ್ದು ತಲೆಗೆ ಗಾಯವಾಗಿರುತ್ತದೆ. ಅಲ್ಲದೆ ಬಳಿಕ ಪಿರ್ಯಾಧಿದಾರರ ಹೆಂಡತಿ ಹಾಗೂ ಮಗಳನ್ನು ಕೂಡಾ ದೂಡಿ ಹಾಕಿ ಗಾಯಗೊಳಿಸಿದ್ದು, ಗಾಯಗೊಂಡ ಪಿರ್ಯಾಧಿದಾರರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದು,.ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 47/2021 ಕಲಂ: 323,324 504 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಕು||ಹರೀಣಾಕ್ಷಿ ತಂದೆ:ಸದಾನಂದ ಬಳ್ಳಾಲ ವಾಸ:ಕೂಜಪ್ಪಾಡಿ ,ಹೊಯ್ಗೆ ಮನೆ ,ವಿಟ್ಲ ಕಸಬ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ:17-07-2021 ರಂದು 12.30 ಗಂಟೆಯ ಸಮಯಕ್ಕೆ ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮದ ಕೂಜಪ್ಪಾಡಿ ಹೊಯ್ಗೆ ಮನೆ ಎಂಬಲ್ಲಿ ಪಿರ್ಯಾಧಿದಾರರ ತಂದೆ ಆರೋಪಿ ಸದಾನಂದ ಬಲ್ಲಾಳ ಎಂಬವರು ಬಂದು ಪಿರ್ಯಾಧಿದಾರರು ಹಾಗೂ ಅವರ ತಂಗಿಯನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾಧಿದಾರರ ತಂಗಿಗೆ ಕೈಯಿಂದ ಹಾಗೂ ದೊಣ್ಣೆಯಿಂದ ಹೊಡೆದು ,ಕಲ್ಲು ಎಸೆದು ಹಲ್ಲೆ ಮಾಡಿದ್ದು ಅಲ್ಲದೇ 2ನೇ ಆರೋಪಿಯು ಕೂಡಾ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಲು ಪ್ರಚೋದನೆ ನೀಡಿರುತ್ತಾರೆ ಅಲ್ಲದೇ ಪಿರ್ಯಾಧಿದಾರರು ಮನೆಯ ಒಳಗೆ ಹೋದರೆ ಕೈಕಾಲು ಕಡಿದು ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದು ಹಲ್ಲೆ ನಡೆಸಿದಿ ಪರಿಣಾಮ ಪಿರ್ಯಾಧಿದಾರರ ತಲೆಗೆ,ಕೆನ್ನೆಗೆ,ಎದೆಗೆ ಗಾಯವಾಗಿದ್ದು. ಪಿರ್ಯಾಧಿದಾರರ ತಂಗಿಯ ಬಲಕಾಲಿನ ಮಣಿಗಂಟಿಗೆ ಹಾಗೂ ಬಲ ಕಿವಿಯ ಭಾಗಕ್ಕೆ ಗಾಯವಾಗಿರುತ್ತದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಅ.ಕ್ರ 99/2021 ಕಲಂ: 323,324,504,506 ಜೊತೆಗೆ 34 ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ
ಇತರೆ ಪ್ರಕರಣ: ೦1
ಪೊಲೀಸ್ ಠಾಣೆ : ಅವಿನಾಶ್ ಹೆಚ್. ಗೌಡ ಪೊಲೀಸ್ ಉಪ ನಿರೀಕ್ಷಕರು, ಬಂಟ್ವಾಳ ನಗರ ಪೊಲೀಸ್ ಠಾಣೆರವರು ದಿನಾಂಕ: 19-07-2021 ರಂದು 11-45 ಗಂಟೆಗೆ ಸಜಿಪಮುನ್ನೂರು ಗ್ರಾಮದ, ಕಂದೂರು ಎಂಬಲ್ಲಿ ಇಲಿಯಾಸ್ @ ಎಲಿಯಾಸ್ 36ವರ್ಷ ತಂದೆ: ಮಹಮ್ಮದ್, ವಾಸ: 02-21/ಬಿ.ಟಿ. ಸುಭಾಶ್ ನಗರ ಮನೆ, ಸಜಿಪಮೂಡ ಗ್ರಾಮ, ಬಂಟ್ವಾಳ ತಾಲೂಕು ಎಂಬಾತನನ್ನು ವಶಕ್ಕೆ ಪಡೆದು ಆತನನ್ನು ತಪಾಸಣೆ ನಡೆಸಲಾಗಿ ಆತನು ಧರಿಸಿದ್ದ ಪ್ಯಾಂಟಿನ ಜೀಬಿನಲ್ಲಿ 3 ಚಿಕ್ಕ ಪ್ಲಾಸ್ಟಿಕ್ ತೊಟ್ಟೆಗಳಲ್ಲಿ ಮಾದಕ ವಸ್ತು ಗಾಂಜಾ ಇದ್ದುದಲ್ಲದೇ, ಮೋಟಾರ್ ಸೈಕಲ್ ನ ಸೀಟಿನ ಅಡಿಯ ಬಾಕ್ಸ್ ನಲ್ಲಿ ಗಾಂಜಾ ತುಂಬಿದ ಪ್ಲಾಸ್ಟಿಕ್ ತೊಟ್ಟೆ ಇರುವುದು ಕಂಡು ಬಂದಿರುತ್ತದೆ. ಕಿಟ್ ಬಾಕ್ಸ್ ನಲ್ಲಿದ್ದ ಇಲೆಕ್ಟ್ರಾನಿಕ್ ಸ್ಕೇಲ್ ನಲ್ಲಿ ತೂಕ ಮಾಡಲಾಗಿ ತಲಾ 49 ಗ್ರಾಂ ತೂಕದ ಗಾಂಜಾ ತುಂಬಿದ ಪ್ಲಾಸ್ಟಿಕ್ ತೊಟ್ಟೆಗಳು -02, 55 ಗ್ರಾಂ ತೂಕದ ಗಾಂಜಾ ತುಂಬಿದ ಪ್ಲಾಸ್ಟಿಕ್ ತೊಟ್ಟೆ-01, 1,270 ಗ್ರಾಂ ತೂಕದ ಗಾಂಜಾ ತುಂಬಿದ ಪ್ಲಾಸ್ಟಿಕ್ ತೊಟ್ಟೆ -01 ಇತ್ತು. ಅಲ್ಲದೇ, ಅಪಾದಿತ ಇಲಿಯಾಸ್ @ ಎಲಿಯಾಸ್ ನ ಪ್ಯಾಂಟ್ ನ ಜೇಬಿನಲ್ಲಿ ಒ.ಸಿ.ಬಿ. ಸ್ಲಿಮ್ ಪ್ರೀಮಿಯಮ್ ಎಂದು ಅಂಗ್ಲ ಭಾಷೆಯಲ್ಲಿ ಬರೆದ ಚಿಕ್ಕ ಪ್ಯಾಕೆಟ್ ಗಳು ಒಟ್ಟು 10 ಇದ್ದು, ಅವುಗಳ ಬಗ್ಗೆ ವಿಚಾರಿಸಲಾಗಿ, ಗಾಂಜಾ ಸೇವನೆಗೆ ಬಳಸುವ ಸ್ಟ್ರಿಪ್ ಆಗಿರುವುದಾಗಿ ನುಡಿದಿರುತ್ತಾನೆ. ಹಾಗು ಗಾಂಜಾ ಸಾಗಾಟಕ್ಕೆ ಬಳಸಿದ ಆಕ್ಟಿವಾ 5 ಜಿ. ಕಪ್ಪ ಬಣ್ಣದ ಮೋಟಾರ್ ಸೈಕಲ್ ನಂ; ಕೆ.ಎ.70.ಇ.2529 ಮತ್ತು ಗಾಂಜಾ ಹಾಗೂ ಸೇವನೆಗೆ ಬಳಸುವ ಸ್ಟ್ರಿಪ್ ನ್ನು ಸ್ವಾಧೀನಪಡಿಸಿಕೊಂಡಿರುತ್ತೇನೆ. ಗಾಂಜಾದ ಅಂದಾಜು ಮೌಲ್ಯ ರೂ.30,000/- ಆಗಬಹುದು. ಮೋಟಾರ್ ಸೈಕಲ್ ನ ಅಂದಾಜು ಮೌಲ್ಯ ರೂ.50,000/- ಆಗಿದ್ದು, ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣಾ ಅಕ್ರ: 84/2021 ಕಲಂ: 8 (c), ಜೊತೆ 20(B)2(b) NDPS Act ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦1
ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮಲ್ಲಿಕಾ ಪ್ರಾಯ:24 ಗಂಡ ಸದಾನಂದ ವಾಸ; ನಾರ್ಯ ನೇರೋಳ್ ಪಲ್ಕೆ ಮನೆ ಕನ್ಯಾಡಿ-2 ಧರ್ಮಸ್ಥಳ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರ ಪತಿ ಸದಾನಂದ ರವರು (44) ದಿನಾಂಕ:19-07-2021 ರಂದು ಬೆಳಿಗ್ಗೆ ಸಮಯ 08.00 ಗಂಟೆಗೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಸುದೆಕ್ಕಾರು ಎಂಬಲ್ಲಿ ಟಿ ವಿ ದೇವಸ್ಯ ರವರ ಜಮೀನಿಗೆ ಕೂಲಿ ಕೆಲಸದ ನಿಮಿತ್ತ ಹೊರಟು ಹೋಗಿದ್ದು ಸಂಜೆ ಸಮಯ ಸುಮಾರು 16.20 ಗಂಟೆಗೆ ದೇವಸ್ಯ ರವರು ಪಿರ್ಯಾದುದಾರರ ಮನೆಗೆ ಬಂದು ಪಿರ್ಯಾದುದಾರರಲ್ಲಿ ನಿಮ್ಮ ಪತಿ ನಮ್ಮ ಜಮೀನಿನಲ್ಲಿ ಲೊಕೇಶ ರವರೊಂದಿಗೆ ಕೆಲಸ ಮಾಡುತ್ತಿರುವಾಗ ಸಮಯ 16.10 ಗಂಟೆಗೆ ಕುಸಿದು ಬಿದ್ದು ಮೃತಪಟ್ಟಿರುತ್ತಾರೆ ಎಂಬುದಾಗಿ ತಿಳಿಸಿದ ಮೇರೆಗೆ ಪಿರ್ಯಾದುದಾರರು ಸದ್ರಿ ಸ್ಥಳಕ್ಕೆ ಹೋಗಿ ನೋಡಿದಾಗ ಕೆಲಸ ಮಾಡುತ್ತಿರುವ ಜಮೀನಿನಲ್ಲಿರುವ ಶೆಡ್ ನಲ್ಲಿ ಅಂಗಾತ ಮಲಗಿದ ಸ್ಥಿತಿಯಲ್ಲಿ ಮೃತ ದೇಹವು ಕಂಡು ಬಂದಿದ್ದು ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಯು ಡಿ ಆರ್ 42/2021 ಕಲಂ;174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.