ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಎಂ ಆದಿತ್ಯಕುಮಾರ್ ತಂದೆ: ದಿ|| ಶಂಕರನಾರಾಯಣ ಭಟ್ ಪಳನೀರು ಮನೆ, ಕಾವು ಪುತ್ತೂರು ತಾಲೂಕು ಎಂಬವರ ದೂರಿನಂತೆ ಫಿರ್ಯಾದಿರವರು ದಿನಾಂಕ 20.06.2021 ರಂದು ಸಂಜೆ ಸುಮಾರು 6.00 ಗಂಟೆಗೆ ಪುತ್ತೂರಿನ ಹಿತ ಆಸ್ಪತ್ರೆಗೆ ಹೋಗುವ ಸಮಯ ಮಾಣಿ-ಮೈಸೂರು ಹೆದ್ದಾರಿಯ ಆರ್ಯಾಪು ಗ್ರಾಮದ ಸಂಪ್ಯ ವೆಂಕಟೇಶ್ವರ ಮಿಲ್‌ ಎದುರುಗಡೆ ತಲುಪಿದಾಗ ಅವರ ಮುಂದುಗಡೆಯಿಂದ ಮೋಟಾರ್ ಸೈಕಲ್ ನಂಬ್ರ ಕೆಎ-21-ಯು-1204 ನೇದನ್ನು ಅದರ ಸವಾರರು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿದರ ಪರಿಣಾಮ ಸ್ಕಿಡ್ ಆಗಿ ಬಿದ್ದಿದ್ದು, ಕೂಡಲೇ ಪಿರ್ಯಾದಿದಾರರು ಮತ್ತು ಇತರ ವಾಹನ ಚಾಲಕರು ಹೋಗಿ ನೋಡಲಾಗಿ ಪಿರ್ಯಾದಿದಾರರ ಪರಿಚಯದ ಶಿವಕುಮಾರ್ ಜಿ.ಎಸ್‌ ಎಂಬುವರಾಗಿದ್ದು, ಅವರ ತಲೆಯ ಹಿಂಭಾಗ ರಕ್ತಗಾಯವಾಗಿ ಮಾತನಾಡದೇ ಇದ್ದು, ಪಿರ್ಯಾದಿದಾರರು ಮತ್ತು ಸೂರ್ಯನಾರಾಯಣ ಭಟ್ ಎಂಬವರು ಉಪಚರಿಸಿ ಪಿರ್ಯಾದಿದಾರರ ಬಾಬ್ತು ಕಾರಿನಲ್ಲಿ ಪುತ್ತೂರಿನ ಹಿತ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಎಜೆ ಆಸ್ಪತ್ರೆಗ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆ ಆ.ಕ್ರ 54/21 ಕಲಂ: 279,338  ಐ.ಪಿ.ಸಿ.ಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಡಬ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಕೆ. ಭರತ್ ಕುಮಾರ್ ಪ್ರಾಯ 31 ವರ್ಷ ತಂದೆ; ದಿ. ಮೇದಪ್ಪ ಗೌಡ ವಾಸ ; ಕಾಯತಡ್ಕ ಮನೆ ಕೊಂಬಾರು ಗ್ರಾಮ ಕಡಬ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರವರು ದಿನಾಂಕ:20.06.2021 ರಂದು ತನ್ನ ಪತ್ನಿ ಜೋತೆ KA21W3056 ಮೋಟಾರ್ ಸೈಕಲ್ ನಲ್ಲಿ ಕಾಣಿಯೂರು – ಎಡಮಂಗಲ ಡಾಮಾರು ರಸ್ತೆಯಲ್ಲಿ ಬೆಳಿಗ್ಗೆ 9-45 ಗಂಟೆಗೆ ಬರುತ್ತಿರುವಾಗ ಕಡಬ ತಾಲೂಕು ಚಾರ್ವಾಕ ಗ್ರಾಮದ ಮಂಟಮೆ ಎಂಬಲ್ಲಿಗೆ ತಲುಪಿದಾಗ ಪಿರ್ಯಾದುದಾರರ ಎದುರುಗಡೆಯಿಂದ ಅಂದರೆ ಎಡಮಂಗಳ ಕಡೆಯಿಂದ ಚಾರ್ವಾಕ ಕಡೆಗೆ  ಒಂದು  ಮಾರುತಿ ಒಮ್ನಿ  ಕಾರನ್ನು ಅದರ  ಚಾಲಕ ತೀರಾ ಅಜಾಗರುಕತೆ ಹಾಗೂ ನಿರ್ಲಕ್ಷತನದಿಂದ ರಸ್ತೆಯ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಪತ್ನಿ ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿಉಂಟು ಮಾಡಿದ ಪರಿಣಾಮ ಪಿರ್ಯಾದುದಾರರು ಹಾಗೂ ಪಿರ್ಯಾದುದಾರರ ಪತ್ನಿ ಇಬ್ಬರು  ಡಾಮಾರು ರಸ್ತೆಗೆ ಬಿದ್ದಿದ್ದು ಮೋಟಾರ್ ಸೈಕಲ್ ಚಲಾಯಿಸುತ್ತಿದ್ದ  ಪಿರ್ಯಾದುದಾರರ ಪತ್ನಿಗೆ ಯಾವುದೇ ಗಾಯಗಳು ಅಗದೇ ಇದ್ದು ಸಹಸವಾರ ಭರತ್ ಕುಮಾರ್ ಎಂಬುವರಿಗೆ  ಬಲ ತೊಡೆಗೆ  ಬಲ ಕೈಯ ರಟ್ಟೆಗೆ ಗುದ್ದಿದ್ದ ನೋವಾಗಿದ್ದು ಹಾಗೂ ಎಡಕಿವಿಗೆ ರಕ್ತಗಾಯವಾಗಿರುತ್ತಾದೆ  ಡಿಕ್ಕಿಉಂಟು ಮಾಡಿದ ಮಾರುತಿ ಒಮ್ನಿ ಕಾರನ್ನು ನೋಡಲಾಗಿ KA01N5007 ಅಗಿದ್ದು ಆತನ ಹೆಸರು  ಅನಂತಕೃಷ್ಣ ಭಟ್ ಎಂಬುದಾಗಿ ತಿಳಿದ್ದಿದ್ದು ನಂತರ ಪಿರ್ಯಾದುದಾರರು ತನ್ನ ಮಾವರಾದ  ಗೋಪಲ ಗೌಡ ಎಂಬುವರಿಗೆ ದೂರವಾಣಿ ಕರೆ ಮಾಡಿ ಘಟನ ಸ್ಥಳಕ್ಕೆ ಬರುವಂತೆ ತಿಳಿಸಿದ್ದು ನಂತರ ಕೂಡಲೇ ಅವರು ಪಿರ್ಯಾದುದಾರರ ಭಾವನಾದ ಸೀತರಾಮ ಎಂಬುವರು ಅಲ್ಲಿಗೆ ಕರೆದುಕೊಂಡು ಬಂದು 108 ಅಂಬುಲೆನ್ಸ್ ನಲ್ಲಿ ಪುತ್ತೂರು ಹಿತ ಆಸ್ವತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಈ ಬಗ್ಗೆ ಕಡಬ ಪೊಲೀಸ್‌  ಠಾಣಾ ಅ.ಕ್ರ 46/2021  ಕಲಂ 279 337 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅರ್ಫಿತ್‌ ಎಸ್‌ ಪಿ(23) ತಂದೆ:ಸಂತೋಷ್‌ ಕುಮಾರ್ ಶರತ್‌ ನಿವಾಸ, ಪುತ್ತಿಲ ಮನೆ, ಪುತ್ತಿಲ ಗ್ರಾಮ, ಬೆಳ್ತಂಗಡಿ ತಾಲೂಕು.  ಎಂಬವರ ದೂರಿನಂತೆ ದಿನಾಂಕ: 11-06-2021 ರಂದು ಪಿರ್ಯಾದುದಾರರು ತನ್ನ ಬಾಬ್ತು ಕಾರು ನಂಬ್ರ ಕೆಎ40 ಎಮ್‌ 0980 ನೇದನ್ನು ಬೆಳ್ತಂಗಡಿಯಿಂದ ಗುರುವಾಯನಕೆರೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಸಮಯ ಸುಮಾರು ಮಧ್ಯಾಹ್ನ 13.30 ಗಂಟೆಗೆ ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಗುರುವಾಯನಕೆರೆ ಜಂಕ್ಷನ್‌ ಬಳಿ ತಲುಪುತ್ತಿದ್ದಂತೆ ಅವರ ಮುಂದಿನಿಂದ ಅಂದರೆ ಬೆಳ್ತಂಗಡಿ ಕಡೆಯಿಂದ ಗುರುವಾಯನಕೆರೆ ಕಡೆಗೆ ಕೆಎ19 ಎಬಿ9528 ನೇ ಲಾರಿಯನ್ನು ಅದರ ಚಾಲಕ ಲಾರಿಯ ಹಿಂಭಾಗದ ಬಾಗಿಲನ್ನು ಬ್ರೇಕ್‌ ಲೈಟ್‌ ಕಾಣದ ರೀತಿಯಲ್ಲಿ ಇಳಿಸಿ ಹಾಗೂ ಟರ್ಪಾಲನ್ನು ಸುತ್ತಿ ಚಲಾಯಿಸಿಕೊಂಡು ಹೋಗುತ್ತಿದ್ದವರು  ಯಾವುದೇ ಸೂಚನೆ ನೀಡದೆ ದುಡುಕುತನದಿಂದ ಓಮ್ಮೆಲೇ ಬ್ರೇಕ್‌ ಹಾಕಿದ ಪರಿಣಾಮ ಪಿರ್ಯಾದಿದಾರರ ಕಾರು ಲಾರಿಯ ಹಿಂಬದಿಗೆ ಢಿಕ್ಕಿ ಹೊಡೆದು ಕಾರಿಗೆ ಜಖಂಗಳಾಗಿರುತ್ತದೆ. ಈ ಅಪಘಾತದಿಂದಾಗಿ ಯಾರಿಗೂ ಗಾಯಗಳು ಆಗಿರುವುದಿಲ್ಲ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 50/2021, ಕಲಂ; 279 ಭಾದಂಸಂ ಮತ್ತು ಕಲಂ CMV Rule 108 r/w 177 IMV Act  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 22-06-2021 11:51 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080