ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ಉಪ್ಪಿನಂಗಡಿ ಪೊಲೀಸ್ ಠಾಣೆ:  ಫಿರ್ಯಾಧಿದಾರರಾದ  ಶಾಫೈಝಲ್ , ಪ್ರಾಯ: 26 ವರ್ಷ, ತಂದೆ: ಮೊಹಮ್ಮದ್ ಹನೀಫ್ , ವಾಸ: ಮನೆ,. ನಂಬ್ರ 3-180 ಮಲ್ಲಾರು ಗ್ರಾಮ ಕಾಫು ಅಂಚೆ , ಉಡುಪಿ ತಾಲೂಕು ಎಂಬವರು  KA 20 AA 8078 ನೇ ನಂಬರಿನ ಶ್ರೀದುರ್ಗಾ ಮೋಟಾರ್ಸ್ ಎಂಬ ಖಾಸಗಿ ಬಸ್ಸಿನ ಚಾಲಕನಾಗಿದ್ದು, ಎಂದಿನಂತೆ  ತಾರೀಕು 24-03-2021 ರಂದು  ರಾತ್ರಿ ಸುಮಾರು 7-45 ಗಂಟೆಗೆ  ಬಸ್ಸಿನಲ್ಲಿ  ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಹಾಗೂ ಕ್ಲೀನರ್ ಚಂದು ಮತ್ತು ಬಸ್ಸಿನ ಮ್ಯಾನೇಜರ್ ಅನ್ಸಾರ್.ಇ. ಎಂಬವರ ಜೊತೆಯಲ್ಲಿ ಕುಂದಾಪುರದಿಂದ ಚಲಾಯಿಸಿಕೊಂಡು ದಾರಿ ಮದ್ಯೆ ಇನ್ನಿತರ  ಪ್ರಯಾಣಿಕರನ್ನು  ಕೂಡಾ ತುಂಬಿಸಿಕೊಂಡು  ಒಟ್ಟು  23 ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು  ಮಂಗಳೂರು-ಬೆಂಗಳೂರು ರಾ.ಹೆ. 75 ರಲ್ಲಿ ಬಸ್ಸನ್ನು ಚಲಾಯಿಸಿಕೊಂಡು ಹೋಗುತ್ತಾ ಕಡಬ ತಾಲೂಕು ಕೌಕ್ರಾಡಿ ಗ್ರಾಮದ  ಮಣ್ಣಗುಂಡಿ ಎಂಬಲ್ಲಿಗೆ ರಾತ್ರಿ 12.00 ಗಂಟೆಗೆ ತಲುಪಿದಾಗ ಎದುರಿನಿಂದ ಅಂದರೆ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಕ್ಯಾಂಟರ್ ಗೂಡ್ಸ್ ಲಾರಿ ನಂಬ್ರ KA 51 AF 6308 ನೇದರ ಚಾಲಕನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಫಿರ್ಯಾಧಿದಾರರು ಚಲಾಯಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ಎರಡೂ ವಾಹನಗಳು ಜಖಂಗೊಂಡು ಬೆಂಕಿ ಹತ್ತಿ ಉರಿದ ಪರಿಣಾಮ  ಫಿರ್ಯಾಧಿದಾರರ ಬಲಕೈ ಮತ್ತು  ಎಡಕಾಲು ತಿರುಚಿಕೊಂಡು   ಬೆಂಕಿಯಿಂದ  ಸುಟ್ಟ ರಕ್ತ ಗಾಯವಾಗಿರುವುದಲ್ಲದೇ, ಬಸ್ಸಿನಲ್ಲಿದ್ದ  ಇತರ ಪ್ರಯಾಣಿಕರಿಗೆ ಕೂಡಾ ಸಣ್ಣ ಪುಟ್ಟ ಗಾಯವಾಗಿದ್ದು, ಡಿಕ್ಕಿ ಹೊಡೆದ ಕ್ಯಾಂಟರ್ ಗೂಡ್ಸ್ ಲಾರಿ ವಾಹನ ಕೂಡಾ ಬೆಂಕಿ ಹತ್ತಿಕೊಂಡು ಅದರ ಚಾಲಕ, ಚಾಲಕನ ಸೀಟಿನಲ್ಲಿ ಸಿಲುಕಿಕೊಂಡು ಬೆಂಕಿಯಲ್ಲಿ ಸುಟ್ಟು ಕರಕಲಾಗಿ ಸ್ಥಳದಲ್ಲಿ  ಮೃತಪಟ್ಟಿದ್ದು, ಅಲ್ಲದೇ ಬಸ್ಸಿನಲ್ಲಿದ್ದ ಕೆಲವು ಪ್ರಯಾಣಿಕರ ಲಗೇಜುಗಳು ಕೂಡಾ ಬೆಂಕಿಯಲ್ಲಿ ಸುಟ್ಟು ಹೋಗಿರುವುದಾಗಿದೆ. ಗಾಯಗೊಂಡ ಫಿರ್ಯಾದಿದಾರರನ್ನು ಬಸ್ಸಿನ ಮ್ಯಾನೇಜರ್ ಸ್ಥಳದಿಂದ ಒಂದು ಆ್ಯಂಬುಲೆನ್ಸಿನಲ್ಲಿ ಚಿಕಿತ್ಸೆಯ ಬಗ್ಗೆ ಮಂಗಳೂರು ಎ.ಜೆ.ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಅಲ್ಲಿಯ ವೈದ್ಯರು ಪರೀಕ್ಷಿಸಿ ಪ್ರಥಮ ಚಿಕಿತ್ಸೆಯನ್ನು ನೀಡಿರುತ್ತಾರೆ. ಅಲ್ಲದೇ ಕ್ಯಾಂಟರ್ ಗೂಡ್ಸ್ ಲಾರಿ ವಾಹನದ ಚಾಲಕನ ಮೃತ ಶರೀರವನ್ನು ಮಂಗಳೂರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆ ಠಾಣಾ ಅ ಕ್ರ 26/2021 ಕಲಂ:279,337,304(A)  ಐಪಿಸಿ, ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 2

 

 

ಪುತ್ತೂರು ನಗರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಶ್ರೀಧರ ಭಟ್ (36) ತಂದೆ: ಮೋಹನ್ ದಾಸ್ ವಾಸ: ಮಹಾಮಾಯ ಕೃಪಾ ಕೋರ್ಟ್ ರಸ್ತೆ ಪುತ್ತೂರು ಕಸಬಾ ಗ್ರಾಮ ಪುತ್ತೂರು ತಾಲೂಕು ಎಂಬವರು  ಸುಮಾರು ಆರು ವರ್ಷಗಳಿಂದ ಪುತ್ತೂರು ಮುಖ್ಯ ಪೇಟೆಯಲ್ಲಿ ಶ್ರೀಧರ್‌ ಭಟ್‌ ಜ್ಯುವೆಲ್ಲರ್ ಎಂಬ ಹೆಸರಿನ ಚಿನ್ನಾಭರಣ ಅಂಗಡಿಯನ್ನು ಹೊಂದಿದ್ದು, ಫಿರ್ಯಾದಿದಾರರು ದಿನಾಂಕ 24.03.2021 ರಂದು ಎಂದಿನಂತೆ ರಾತ್ರಿ ಸಮಯ ಸುಮಾರು 7 ಗಂಟೆಗೆ ಅಂಗಡಿಯ ಬಾಗಿಲನ್ನು ಮುಚ್ಚಿ ಮನೆಗೆ ಹೋಗಿದ್ದು, ದಿನಾಂಕ 25.03.2021 ರಂದು ಬೆಳಿಗ್ಗೆ ಸಮಯ ಸುಮಾರು 06.00 ಗಂಟೆ ಸಮಯಕ್ಕೆ ಫಿರ್ಯಾದಿದಾರರು ಅಂಗಡಿಯ ಬಳಿ ಬಂದು ನೋಡಿದಾಗ ಅಂಗಡಿಗೆ ಹಾಕಿದ ಬೀಗವು ಮುರುದುಕೊಂಡಿರುವಂತೆ ಕಂಡು ಬಂದಿದ್ದು, ಅಂಗಡಿಯೊಳಗೆ ಹೋಗಿ ನೋಡಿದಾಗ , ಫಿರ್ಯಾದಿದಾರರು ಕುಳಿತುಕೊಂಡು ವ್ಯಾಪಾರದ ಹಣವನ್ನು ಇಡುವ ಕ್ಯಾಶ್‌ ಡ್ರಾವರ್‌ನ್ನು ಕ್ಯಾಶ್‌ ಕೌಂಟರ್‌ ಮೇಜಿನಿಂದ ತೆಗೆದು ಮೇಜಿನ ಮೇಲ್ಗಡೆ ಇರಿಸಿರುವುದು ಕಂಡು ಬಂದಿದ್ದು, ಕ್ಯಾಶ್‌ ಡ್ರಾವರ್‌ ಬಳಿ ಹೋಗಿ ನೋಡಿದಾಗ ಕ್ಯಾಶ್‌ ಡ್ರಾವರ್‌ನ ಬಲಬದಿಯ ಚಿನ್ನವನ್ನು ಇರಿಸಿದ ಡ್ರಾವರ್‌ ಕಂಡು ಬರಲಿಲ್ಲ. ದಿನಾಂಕ 24.03.2021 ರಂದು ರಾತ್ರಿ 24.00 ಗಂಟೆಯಿಂದ ದಿನಾಂಕ 25.03.2021 ರಂದು ಬೆಳಿಗ್ಗೆ 05.00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿದಾರರ ಶ್ರೀಧರ್‌ ಭಟ್‌ ಜ್ಯುವೆಲ್ಲರ್‌ ಅಂಗಡಿಯಿಂದ ಚಿನ್ನಾಭರಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಚಿನ್ನದ ಅಂದಾಜು ತೂಕ 300 ಗ್ರಾಂ ಆಗಬಹುದು ಮತ್ತು ವಜ್ರದ ತೂಕ ಅಂದಾಜು ಸುಮಾರು 8 ರಿಂದ 10 ಕ್ಯಾರೆಟ್‌ ಆಗಬಹುದು , ಕಳವಾದ ಚಿನ್ನಾಭರಣ ಮತ್ತು ವಜ್ರದ ಒಟ್ಟು ಮೌಲ್ಯ 20 ಲಕ್ಷ ಆಗಬಹುದು. ಈ ಬಗ್ಗೆ ಪುತ್ತೂರು ನಗರ ಠಾಣಾ ಅ.ಕ್ರ: 20/2021 ಕಲಂ: 457,380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ನಗರ ಪೊಲೀಸ್ ಠಾಣೆ : ಫಿರ್ಯಾದಿದಾರರಾದ ವಾಸುದೇವ ಆಚಾರ್ಯ ಪ್ರಾಯ: 49 ವರ್ಷ, ತಂದೆ: ದಿವಂಗತ ಶಿವಣ್ಣ ಆಚಾರ್ಯ, ವಾಸ: ಸಂಕೇಶ ಮನೆ, ಅನಂತಾಡಿ ಗ್ರಾಮ, ಬಂಟ್ವಾಳ ತಾಲೂಕು  ಎಂಬವರು  ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಗ್ರಾಮ ಚಾವಡಿಯ ಬಳಿ ಶ್ರೀ ನವಮಿ ಚಿನ್ನದ ಅಂಗಡಿಯನ್ನು ಹೊಂದಿದ್ದು, ಹೆಚ್ಚಾಗಿ ಹಳೆಯ ಚಿನ್ನಾಭರಣಗಳ ಕೆಲಸ ಮಾಡುತ್ತಿರುವುದಾಗಿದೆ. ದಿನಾಂಕ 24.03.2021 ರಂದು ಎಂದಿನಂತೆ ಫಿರ್ಯಾದಿದಾರರು ಶ್ರೀ ನವಮಿ ಚಿನ್ನದ ಅಂಗಡಿಯನ್ನು ಮುಚ್ಚಿ ಮನೆಗೆ ಹೋಗಿದ್ದು, ದಿನಾಂಕ 25.03.2021 ರಂದು ಬೆಳಿಗ್ಗೆ 08.30 ಗಂಟೆಗೆ ಅಂಗಡಿಗೆ ಬಂದು ನೋಡಿದಾಗ ಅಂಗಡಿಯ ಶೆಟರ್‌ ತೆರೆದುಕೊಂಡಿದ್ದು , ಫಿರ್ಯಾದಿದಾರರು ಅಂಗಡಿಯ ಒಳಗೆ ಹೋಗಿ ನೋಡಿದಾಗ ರಿಪೇರಿ ಮತ್ತು ಇತರ ಕೆಲಸಗಳಿಗೆ ಬಂದ ಶೋಕೇಸಿನಲ್ಲಿ ಇರಿಸಿದ್ದ ಸುಮಾರು 40 ಗ್ರಾಂ  ಚಿನ್ನವು ಶೋಕೇಸಿನಲ್ಲಿ ಇರಲಿಲ್ಲ. ದಿನಾಂಕ 24.03.2021 ರಂದು ರಾತ್ರಿ ಸುಮಾರು 11.30 ಗಂಟೆಯಿಂದ ದಿನಾಂಕ 25.03.2021 ರಂದು ಬೆಳಿಗ್ಗೆ 5 ಗಂಟೆಯ ಅವಧಿಯಲ್ಲಿ ಫಿರ್ಯಾದಿದಾರರ ಶ್ರೀ ನವಮಿ ಜ್ಯುವೆಲ್ಲರಿಯಿಂದ ಸುಮಾರು 40 ಗ್ರಾಮ ಚಿನ್ನವನ್ನು  ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಚಿನ್ನದ ಮೌಲ್ಯ 1,60,000 ಆಗಬಹುದು.ಈ ಬಗ್ಗೆ ಪುತ್ತೂರು ನಗರ ಠಾಣಾ ಅ.ಕ್ರ: 22/2021 ಕಲಂ:457,380 ಐಪಿಸಿ    ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 26-03-2021 11:38 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080