ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ಸುಬ್ರಹ್ಮಣ್ಯ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ  ಜಯಂತ್ ಕುಮಾರ್ ಡಿ ಎಸ್,  ಪ್ರಾಯ: 35 ವರ್ಷ,    ,ತಂದೆ: ಶಿವರಾಮ ಗೌಡ   ವಾಸ: ದೇವಶ್ಯ ಮನೆ ,ಮಡಪ್ಪಾಡಿ ಗ್ರಾಮ ಮತ್ತು ಅಂಚೆ ,  ಸುಳ್ಯ ತಾಲೂಕು .ದ.ಕ ಜಿಲ್ಲೆ ಎಂಬವರ ದೂರಿನಂತೆ ದಿನಾಂಕ: 29-07-2021 ರಂದು ಗುತ್ತಿಗಾರು ಗ್ರಾಮದ ಅವರ ಬಾಬ್ತು ಅಂಗಡಿಯ ಸಮೀಪ ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ಶ್ರೀ ಮುತ್ತಪ್ಪ ದೇವಸ್ಥಾನದ ಬಳಿ ಇರುವ ದೇವಸ್ಥಾನದ ಪಾರ್ಕಿಂಗ್ ಭಾಗದಲ್ಲಿ ಅವರ ಬಾಭ್ತು TATA TIAGO KA 21 P 8329 ನೇದನ್ನು ಪಾರ್ಕ್ ಮಾಡಿದ್ದು, ಮದ್ಯಾಹ್ನ ಸುಮಾರು 1:15 ರ ಸಮಯಕ್ಕೆ ಒಂದು ಪಿಕಪ್ ವಾಹನವನ್ನು ಅದರ ಚಾಲಕನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಹಿಮ್ಮುಖವಾಗಿ ಚಲಾಯಿಸಿ ಪಿರ್ಯಾದಿದಾರರ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಹಿಂಬದಿ ಬಲಗಡೆ ಜಖಂಗೊಂಡಿರುತ್ತದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಅ.ಕ್ರ  : 52-2021 ಕಲಂ: 279   ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

 

ವಿಟ್ಲ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಕಾರ್ತಿಕ್ ತಂದೆ: ಗೋವಿಂದ  ನಾಯ್ಕ ವಾಸ: ಮನಿಮುಂಡ ಮನೆ, ಆಡ್ಯನಡ್ಕ ಕೇಪು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಅವರ ತಾಯಿ ಶಶಿಕಲಾ ಪ್ರಾಯ 45 ವರ್ಷರವರು ಸಣ್ಣ ಸಣ್ಣ ವಿಚಾರಕ್ಕೆ ಒತ್ತಡಕ್ಕೆ ಒಳಗಾದವರ ರೀತಿ ಉದ್ವೇಗಕ್ಕೆ ಒಳಗಾಗುತ್ತಿದ್ದರು. ಈ ಬಗ್ಗೆ ಮಾನಸಿಕವಾಗಿ ನೊಂದವರ ರೀತಿ ಒಬ್ಬರೇ ಇರುತ್ತಿದ್ದರು. ದಿನಾಂಕ:30.07.2021 ರಂದು ರಾತ್ರಿ 08:30 ಗಂಟೆಗೆ ಪಿರ್ಯಾಧಿಯ ಮನೆಯವರೆಲ್ಲರು ಊಟ ಮಾಡಿ ಮಲಗಿದ್ದು. ಆ ಬಳಿಕ ಮದ್ಯ ರಾತ್ರಿ ಸಮಯ ಸುಮಾರು 01.00 ಗಂಟೆಗೆ ಪಿರ್ಯಾಧಿಯ ತಮ್ಮಸ ಕೃತಿಕ್ ತಾಯಿ ಪಕ್ಕದಲ್ಲಿ ಇಲ್ಲದಿರುವುದು ತಿಳಿದು ಪಿರ್ಯಾಧಿದಾರರನ್ನು ಎಬ್ಬಿಸಿದಾಗ ಎದ್ದು ಮನೆಯ ಒಳಗೆ ಹೊರಗೆ ಹುಡುಕಲಾಗಿ ಮನೆಯ ಮುಂಭಾಗದಲ್ಲಿರುವ ದನದ ಕೊಠಡಿಯಲ್ಲಿ ಮರದ ಪಕಾಸಿಗೆ ತನ್ನ ಕುತ್ತಿಗೆಗೆ ನೈಲನ್‌ ಹಗ್ಗದಿಂದ ನೇಣು ಬಿಗಿದು ಮೃತಪಟ್ಟಿರುವಂತೆ ಕಂಡು ಕೂಡಲೇ ಕೆಳಗೆ ಇಳಿಸಿ ಬಳಿಕ ಆ್ಯಂಬುಲೆನ್ಸ್‌‌‌ನಲ್ಲಿ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 20/2021  ಕಲಂ 174   ಸಿ ಅರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರ ಉದಯ ಕುಮಾರ್ ಗೌಡ, ಪ್ರಾಯ 43 ವರ್ಷ, ತಂದೆ: ಚೆನ್ನಪ್ಪ ಗೌಡ,   ವಾಸ: ಬರಮೇಲು ಮನೆ,ನೆಲ್ಯಾಡಿ ಅಂಚೆ, ಕೌಕ್ರಾಡಿ ಗ್ರಾಮ,ಕಡಬ ತಾಲೂಕು ಎಂಬವರ ದೂರಿನಂತೆ ಅವರ ತಮ್ಮ ರಾಮಕೃಷ್ಣ ಬಿ ಪ್ರಾಯ 36 ವರ್ಷ ಎಂಬವರು ಪ್ರತೀ ದಿನ ವಿಪರೀತ ಶರಾಬು ಕುಡಿಯುವ ಚಟ ಹೊಂದಿದವನು ದಿನಾಂಕ 31-07-2021ರಂದು ಮದ್ಯಾಹ್ನ ಸುಮಾರು 12.00 ಗಂಟೆಗೆ ಪಿರ್ಯಾದಿಯ ತಮ್ಮ ಮನೆಯಲ್ಲಿ ಯಾರೂ ಇಲ್ಲದ ಸಮಯ ಯಾವುದೋ ವಿಷಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡವನನ್ನು ಗೋಪಾಲ ರವರ ರಿಕ್ಷಾದಲ್ಲಿ ಮನೋಜ್ ಮತ್ತು ಇನ್ನೊಬ್ಬ ಸೇರಿ ಚಿಕಿತ್ಸೆ ಬಗ್ಗೆ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಅಲ್ಲಿನ ವೈದ್ಯರು ರಾಮಕೃಷ್ಣನನ್ನು ಪರೀಕ್ಷಿಸಿ ಚಿಕಿತ್ಸೆ ನೀಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಂಜೆ 4.45 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಸುಳ್ಯ ಉಪ್ಪಿನಂಗಡಿ ಪೊಲೀಸ್ ಠಾಣಾ ಯುಡಿಆರ್ ನಂಬ್ರ 25/2021 ಕಲಂ:174  ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 01-08-2021 01:36 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080