ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

ಕಡಬ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ವಿಜೇತ್ ಪ್ರಾಯ:21 ವರ್ಷ ತಂದೆ: ರುಕ್ಮಯ್ಯಗೌಡ ವಾಸ: ನೆಕ್ಕಿಲಾಡಿ  ಮನೆ, ಅಲಂಕಾರು ಗ್ರಾಮ ಕಡಬ ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ:01.07.2021 ರಂದು ಬೆಳಗ್ಗೆ ತನ್ನ ಬಾಬ್ತು  ಮೋಟಾರ್‌ ಸೈಕಲ್‌ನಲ್ಲಿ ನೂಜಿ ಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಎಂಬಲ್ಲಿಗೆ ಸೆಂಟ್ರಿಂಗ್‌ ಕೆಲಸಕ್ಕೆ ಹೋಗುವರೇ ಕಡಬ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ಹೋಗುತ್ತಿರುವಾಗ ಕಡಬ ತಾಲೂಕು ಬಲ್ಯ ಗ್ರಾಮದ ಮಾಣಿಗ ಪಾಲ್ತಿಮಾರ್‌ ಕ್ರಾಸ್‌ ಎಂಬಲ್ಲಿಗೆ ಸಮಯ 09.30 ಗಂಟೆಗೆ ತಲುಪಿದಾಗ ಪಿರ್ಯಾದುದಾರರ  ಎದುರುಗಡೆಯಿಂದ ರಸ್ತೆ ಎಡಬದಿಯಲ್ಲಿ KA-21 EB-0366 ಡಿಯೋ ಸ್ಕೂಟಿ ವಾಹನದಲ್ಲಿ ಸವಾರನೊಬ್ಬನು ಸಹಸವಾರನನ್ನು ಕುಳ್ಳಿರಿಸಿಕೊಂಡು  ಕಡಬ ಕಡೆಗೆ ಹೋಗುತಿದ್ದು  ಆ ವೇಳೆಗೆ ಎದುರುಗಡೆಯಿಂದ ಅಂದರೆ ಕಡಬ ಕಡೆಯಿಂದ KA-21 N-8032 ನೇ ಮಾರುತಿ ಓಮಿನಿ ಕಾರು ಚಾಲಕನಾದ ಆರೋಪಿತನು ತೀರಾ ಅಜಾಗರೂಕತೆಯಿಂದ ಹಾಗೂ ನಿರ್ಲಕ್ಷ್ಯತನದಿಂದ ಓಮಿನಿ ಕಾರು ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಎದುರು ಹೋಗುತ್ತಿದ್ದ KA-21 EB-0366ನೇ ಡಿಯೋ ಸ್ಕೂಟಿ ವಾಹನಕ್ಕೆ ಡಿಕ್ಕಿಯನ್ನುಂಟು ಮಾಡಿದ ಪರಿಣಾಮ ಡಿಯೋ ಸ್ಕೂಟಿ ಸವಾರ ಮತ್ತು ಸಹಸವಾರರು ಮೋಟಾರ್‌ ಸೈಕಲ್‌ ಸಮೇತಾ ರಸ್ತೆಗೆ ಬಿದ್ದವರನ್ನು  ಪಿರ್ಯಾದುದಾರರು ಮತ್ತು ಸಾರ್ವಜನಿಕರು ಉಪಚರಿಸಿ ನೋಡಲಾಗಿ ಡಿಯೋ ಸ್ಕೂಟಿ ಸವಾರ ಪಿರ್ಯಾದುದಾರರ  ಪರಿಚಯದ ದೀಕ್ಷಿತ್‌ ಆಗಿದ್ದು ಸಹಸವಾರ ಶೀನಪ್ಪಗೌಡ ಎಂಬವರಾಗಿರುತ್ತಾರೆ ದೀಕ್ಷೀತ್‌ರವರಿಗೆ ಮೂಗಿನಲ್ಲಿ ಮತ್ತು ಬಲಕಾಲಿಗೆ ರಕ್ತಗಾಯವಾಗಿರುತ್ತದೆ. ಶೀನಪ್ಪಗೌಡರವರಿಗೆ ಬಲಕಾಲಿಗೆ ರಕ್ತಗಾಯವಾಗಿರುತ್ತದೆ.ನಂತರ ಓಮಿನಿ ಕಾರು ವಾಹನದಲ್ಲಿದ್ದ ಮಹಿಳೆಗೆ ಸಣ್ಣಪುಟ್ಟಗಾಯವಾಗಿರುತ್ತದೆ. ಈ ಬಗ್ಗೆ ಕಡಬ ಠಾಣಾ ಅ.ಕ್ರ 52/2021 ಕಲಂ 279 337  IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

ಸುಳ್ಯ ಪೊಲೀಸ್ ಠಾಣೆ : ದಿನಾಂಕ 01.07.2021 ರಂದು ಸುಳ್ಯ ಪೊಲೀಸ್‌ ಠಾಣೆಯಲ್ಲಿ ಅಕ್ರ 47/2021 ಕಲಂ 323,504,498(a)  ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಬೆಳ್ಳಾರೆ ಪೊಲೀಸ್ ಠಾಣೆ : ದಿನಾಂಕ 01-07-2021 ರಂದು ಬೆಳ್ಳಾರೆ ಪೊಲೀಸ್ ಠಾಣಾ  ಅಕ್ರ 35/2021 ಕಲಂ   269.35 IPC AND SEC 5(4) THE KARNATAKA EPIDEMIC DISEASES ACT 2020 ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 02-07-2021 09:45 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080