ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 6

 • ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ವಿನೋದ್ ಕೆ ಪ್ರಾಯ 40 ವರ್ಷ   ತಂದೆ: ಮೋನಪ್ಪ ಪೂಜಾರಿ ವಾಸ:- ಕೂಡೂರು ಮನೆ ವಿಟ್ಲ ಕಸಬ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ: 03-04-2022 ರಂದು 00.30 ಗಂಟೆಗೆ ಆಟೋ ರಿಕ್ಷಾ ಕೆಎ-21-9743 ರಲ್ಲಿ ಚಾಲಕರಾಗಿ ಕೆ ಜಯಕುಮಾರ್ ರವರು ಪ್ರಯಾಣಿಕರಾಗಿ  ಶ್ರೀಮತಿ ಸುಮಿತ್ರಾ ಮತ್ತು ಶ್ರೀಮತಿ ಮಾಲತಿರವರು ಕುಳಿತುಕೊಂಡು ಆಟೋ ರಿಕ್ಷಾವನ್ನು ಚಾಲಕ ಅನಿಲಕಟ್ಟೆ- ಕುಕ್ಕುದಡ್ಕ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ  ಚಲಾಯಿಸಿಕೊಂಡು ಹೋಗಿ ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಕೂಡೂರು ಕುಕ್ಕುದಡ್ಕ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ಆಟೋ ರಿಕ್ಷಾವು ಚಾಲಕನ ಹತೋಟಿ ತಪ್ಪಿ ರಸ್ತೆಯ ಎಡ ಬದಿಗೆ ಮಗುಚಿ ಬಿದ್ದು. ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಶ್ರೀಮತಿ ಸುಮಿತ್ರಾರವರ ಬಲ ಕೈ ಯ ಮಣಿ ಗಂಟಿಗೆ, ಮತ್ತು ಎಡ ಕಾಲಿನ ಪಾದಕ್ಕೆ  ಗುದ್ದಿದ ಹಾಗೂ ರಕ್ತ ಗಾಯವಾಗಿ  ಗಾಯಾಳು ವಿಟ್ಲದ ಬೆನಕ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 56/2022 ಕಲಂ:279,337 ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ K ಅಶ್ರಫ್‌ ಪ್ರಾಯ 31 ವರ್ಷ, ತಂದೆ: ಅಬ್ದುಲ್ಲ ಬ್ಯಾರಿ ವಾಸ: ಸನ್ಯಾಸಿಗುಡ್ಡೆ ಮನೆ, ಕೆದಂಬಾಡಿ  ಗ್ರಾಮ & ಅಂಚೆ, ಪುತ್ತೂರು ಎಂಬವರ ದೂರಿನಂತೆ ದಿನಾಂಕ 03-04-2022 ರಂದು 20-45 ಗಂಟೆಗೆ ಆರೋಪಿ ಅಟೋರಿಕ್ಷಾ ಚಾಲಕ ವಿನೋದ್‌ ಎಂಬವರು  KA-21-B-4336 ನೇ ನೋಂದಣಿ ನಂಬ್ರದ ಅಟೋರಿಕ್ಷಾದಲ್ಲಿ ನವೀನ ಎಂಬವರನ್ನು ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು,  ಪುತ್ತೂರು ಕಡೆಯಿಂದ ಸುಳ್ಯ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಪತ್ರಾವೋ ಸರ್ಕಲ್‌ ಬಳಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ರಾಂಗ್‌ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಕೆ ಅಶ್ರಫ್‌ ಎಂಬವರು ಕೆದಂಬಾಡಿ ಕಡೆಯಿಂದ ಮುಡಿಪು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-52-M-1717  ನೇ  ನೋಂದಣಿ ನಂಬ್ರದ ಬೊಲೆರೋ ವಾಹನಕ್ಕೆ ಅಪಘಾತವಾಗಿ, ಅಟೋರಿಕ್ಷಾ ಪಲ್ಟಿಯಾಗಿ ರಸ್ತೆಗೆ ಬಿದ್ದು, ಪಿರ್ಯಾದುದಾರರಿಗೆ ಎಡಕೈ ಮಣಿಗಂಟಿಗೆ ಗುದ್ದಿದ ಗಾಯ ಮತ್ತು ರಿಕ್ಷಾ ಚಾಲಕ ವಿನೋದ್‌ರವರಿಗೆ ಎರಡು ಕಾಲುಗಳಿಗೆ, ತಲೆಗೆ  ಗುದ್ದಿದ ಮತ್ತು ರಕ್ತಗಾಯ ಹಾಗೂ  ನವೀನ ರವರಿಗೆ ತಲೆಗೆ ಗುದ್ದಿದ ಮತ್ತು ರಕ್ತ ಗಾಯವಾಗಿರುತ್ತದೆ. ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಸಿಟಿ ಆಸ್ಪತ್ರೆಗೆ ಕರೆತಂದಿದ್ದು, ಪಿರ್ಯಾದುದಾರರು ಪ್ರಥಮ ಚಿಕಿತ್ಸೆಯನ್ನು ಪಡೆದುಕೊಂಡಿರುತ್ತಾರೆ. ವಿನೋದ್‌ ಮತ್ತು ನವೀನ್‌ರವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  62/2022 ಕಲಂ: 279,337ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸುಬ್ರಹ್ಮಣ್ಯ ಶೆಣೈ ಹೆಚ್‌, ಪ್ರಾಯ 47 ವರ್ಷ, ತಂದೆ: ದಿ|| ರಾಮದಾಸ ಶೆಣೈ ಹೆಚ್‌, ವಾಸ: ವಿಜಯಶಾಂತ ಕಂಪೌಂಡ್‌, ನಟ್ಟಿಬೈಲು ಮನೆ, ರಾಮನಗರ ರಸ್ತೆ, ಉಪ್ಪಿನಂಗಡಿ ಗ್ರಾಮ, ಪುತ್ತೂರು ಎಂಬವರ ದೂರಿನಂತೆ ದಿನಾಂಕ 03-04-2022 ರಂದು 15-30 ಗಂಟೆಗೆ ಆರೋಪಿ ಇಕೋ ಕಾರು ಚಾಲಕ ಪ್ರವೀಣ್‌ ಎಂಬವರು  KA-04-mn-4776 ನೇ ನೋಂದಣಿ ನಂಬ್ರದ ಕಾರನ್ನು  ಮಂಗಳೂರು-ಬೆಂಗಳೂರು  ರಾಷ್ಟ್ರೀಯ ಹೆದ್ದಾರಿಯಲ್ಲಿ ನೆಲ್ಯಾಡಿ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಗಾಂಧಿ ಪಾರ್ಕ್ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡ ಬದಿಗೆ ಚಲಾಯಿಸಿದ ಪರಿಣಾಮ, ಹೆದ್ದಾರಿಯ ಬಲಬದಿಯಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ರಸ್ತೆ ದಾಟಲು ನಿಂತುಕೊಂಡಿದ್ದ ಪಾದಾಚಾರಿ ನಾಗೇಂದ್ರ ಶೆಣೈ ಎಂಬವರಿಗೆ ಅಪಘಾತವಾಗಿ ಅವರು ರಸ್ತೆಗೆ ಬಿದ್ದು, ಬಲಕಾಲಿಗೆ, ಬಲಕೈಗೆ  ಗುದ್ದಿದ ಹಾಗೂ ರಕ್ತಗಾಯ, ಎದೆಗೆ ಹಾಗೂ ತಲೆಗೆ ತರಚಿದ ಮತ್ತು ಗುದ್ದಿದ ಗಾಯವಾಗಿರುತ್ತದೆ. ಗಾಯಾಳುವನ್ನು ಚಿಕಿತ್ಸೆ ಬಗ್ಗೆ ಉಪ್ಪಿನಂಗಡಿ ಧನ್ವಂತರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆಯನ್ನು ಕೊಡಿಸಿ, ನಂತರ  ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  63/2022 ಕಲಂ: 279,337ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಕರುಣಾಕರ.ರೈ,ಪ್ರಾಯ: 35 ವರ್ಷ, ತಂದೆ: ಬಾಲಕೃಷ್ಣ.ರೈ, ವಾಸ: ಕೆದಂಬಾಡಿ ಗುತ್ತು ಮನೆ, ಕೆದಂಬಾಡಿ ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 04.04.2022 ರಂದು ಸದ್ರಿಯವರ ಮೋಟಾರು ಸೈಕಲಿನಲ್ಲಿ ಅಗತ್ಯ ಕೆಲಸದ ನಿಮಿತ್ತ ಬೆಳ್ಳಾರೆಗೆ ಹೋಗಲೆಂದು ಮನೆಯಿಂದ ಹೊರಟು ಕೆಯ್ಯೂರು ಗ್ರಾಮದ ಕೈಕಂಬ ಜಂಕ್ಷನ್ ಬಳಿಗೆ ಬಂದಾಗ ಅಲ್ಲಿದ್ದ ಸದ್ರಿಯವರ ಚಿಕ್ಕಪ್ಪ ಸತೀಶ್.ರೈ ರವರನ್ನು ನೋಡಿ ಯೋಗ ಕ್ಷೇಮ ವಿಚಾರಿಸಿದ್ದು ಬಳಿಕ ಸತೀಶ್.ರೈ ರವರು ಮನೆಗೆ ಹೋಗುವುದಾಗಿ ತಿಳಿಸಿ ಅವರ ಕೆಎ-21-ಆರ್-1815 ನೇ ಸ್ಕೂಟರಿನಲ್ಲಿ ಕೈಕಂಬದಿಂದ ಪಾಲ್ತಾಡಿಗೆ ಹೊರಟಿದ್ದು, ಫಿರ್ಯಾದಿದಾರರು ಕೂಡಾ ಅವರ ಮೋಟಾರು ಸೈಕಲಿನಲ್ಲಿ  ಸತೀಶ್.ರೈ ರವರ ಹಿಂದಿನಿಂದ ಬೆಳ್ಳಾರೆ ಕಡೆಗೆ ಹೋಗುತ್ತಾ ಮಧ್ಯಾಹ್ನ ಸಮಯ ಸುಮಾರು 1.30 ಗಂಟೆಗೆ ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ಪಂಚಾಯತ್ ಕಛೇರಿಯಿಂದ ಸ್ವಲ್ಪ ಮುಂದೆ ತಲುಪಿದಾಗ ಬೆಳ್ಳಾರೆ ಕಡೆಯಿಂದ ಕುಂಬ್ರ ಕಡೆಗೆ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಕೆಎ-21-ವೈ-2998 ನೇ ಮೋಟಾರು ಸೈಕಲನ್ನು ಅದರ ಸವಾರ ಹರಿಪ್ರಸಾದ್ ಎಂಬವರು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ಬಲ ಬದಿಗೆ ಸವಾರಿ ಮಾಡಿಕೊಂಡು ಬಂದು ಸತೀಶ್.ರೈ ರವರ ಸ್ಕೂಟರ್ ಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಸತೀಶ್.ರೈ ರವರು ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದವರನ್ನು ಫಿರ್ಯಾದಿದಾರರು ಮತ್ತು ಸಾರ್ವಜನಿಕರು ಎಬ್ಬಿಸಿ ಉಪಚರಿಸಿ ನೋಡಿದಾಗ ಸದ್ರಿಯವರ ಮುಖಕ್ಕೆ ಗುದ್ದಿದ ಮತ್ತು ರಕ್ತ ಗಾಯ, ತಲೆಗೆ ಮತ್ತು ಬಲ ಕಾಲಿನ ಮೊಣ ಗಂಟಿಗೆ ಗುದ್ದಿದ ಗಾಯವಾಗಿದ್ದು, ಹರಿಪ್ರಸಾದ್ ರವರ ಕೈ ಮತ್ತು ದೇಹದ ಇತರ ಭಾಗಗಳಿಗೆ ಗಾಯವಾಗಿದ್ದು ಬಳಿಕ  ಫಿರ್ಯಾದಿಯ ತಮ್ಮ ಅರುಣ್‌ ರವರು ಆಂಬುಲೆನ್ಸ್ ನ್ನು ಬರಲು ತಿಳಿಸಿ ಅದರಲ್ಲಿ ಸತೀಶ್.ರೈ ಮತ್ತು ಹರಿಪ್ರಸಾದ್‌ ರವರನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಸತೀಶ್.ರೈ ರವರಿಗೆ ಪ್ರಥಮ ಚಿಕಿತ್ಸೆಯನ್ನು ನೀಡಿ, ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿಗೆ ಕಳುಹಿಸಿಕೊಟ್ಟಿದ್ದು, ಹರಿಪ್ರಸಾದ್ ರವರನ್ನು ಸದ್ರಿ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಂಡಿದ್ದು, ಸತೀಶ್.ರೈ ರವರನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಒಳ ರೋಗಿಯನ್ನಾಗಿ ದಾಖಲಿಸಿಕೊಂಡಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ 279,337   ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಲತೀಫ್‌ ಪ್ರಾಯ 43 ವರ್ಷ ತಂದೆ: ಇಬ್ರಾಹಿಂ ವಾಸ: ಕುತ್ತಾಡಿ ಮನೆ, ಬಡಗಕಜೆಕಾರು ಗ್ರಾಮ, ಪಾಂಡವರಕಲ್ಲು ಅಂಚೆ, ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ: 04-04-2022 ರಂದು ತನ್ನ ಬಾಬ್ತು ಕೆಎ 45-9033 ನೇ ಮಹೀಂದ್ರ ಜೀತೋ ವಾಹನವನ್ನು ಉಜಿರೆ ಕಡೆಯಿಂದ ಧರ್ಮಸ್ಥಳ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ 11.45 ಗಂಟೆಗೆ ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ನೀರಚಿಲುಮೆ ಎಂಬಲ್ಲಿಗೆ ತಲುಪುತ್ತಿದ್ದಂತೆ ಪಿರ್ಯಾಧಿದಾರರ ವಿರುದ್ದ ದಿಕ್ಕಿನಿಂದ ಅಂದರೆ ಧರ್ಮಸ್ಥಳ ಕಡೆಯಿಂದ ಉಜಿರೆ ಕಡೆಗೆ ಕೆಎ 31 ಎನ್‌ 7872 ನೇ ಕಾರನ್ನು ಅದರ ಚಾಲಕ ದುಡುಕುತನದಿಂದ ರಸ್ತೆಯ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮಹೀಂದ್ರ ಜೀತೋ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನ ಜಖಂ ಆಗಿ ಪಿರ್ಯಾದಿದಾರರಿಗೆ ಬಲ ಕಾಲಿನ ಮೊಣಗಂಟಿಗೆ ಗುದ್ದಿದ ಗಾಯ, ಕಾರಿನಲ್ಲಿದ್ದ ಚಾಲಕ ನಾಗಪ್ಪ ಸಿದ್ದಿ ರವರಿಗೆ ಎದೆಗೆ ಗುದ್ದಿದ ಗಾಯ, ಸಹ ಪ್ರಯಾಣಿಕರಾದ ಬಸವರಾಜ್‌ ರವರಿಗೆ ಬಲ ಕಾಲಿನ ತೊಡೆಗೆ, ಎಡ ಕೈ ಅಂಗೈಗೆ ಗುದ್ದಿದ ಗಾಯವಾಗಿರುತ್ತದೆ.ಗಾಯಾಳುಗಳು ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ..ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 52/2022 ಕಲಂ; 279,337 IPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಕುಮಾರ್ @ ಕಲ್ಮೇಶ್ ದೋಟಿಹಾಳ್ ಪ್ರಾಯ:26 ವರ್ಷ ತಂದೆ: ಸಂಗಪ್ಪ ವಾಸ: ಸುನ್ನಾಳ್ ಗ್ರಾಮ ಮತ್ತು ಹೋಬಳಿ, ರಾಮದುರ್ಗಾ ತಾಲೂಕು, ಬೆಳಗಾವಿ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ:03.04.2021 ರಂದು  ಸಂದೀಪ್ ರವರ ಬಾಬ್ತು KA19EU2537ನೇ ಮೋಟರ್ ಸೈಕಲ್ ನಲ್ಲಿ ಸಹಸವಾರರಾಗಿ ಕುಳ್ಳಿತುಕೊಂಡು ಕಲ್ಲಡ್ಕ ಕಡೆಯಿಂದ ಹೊರಟು ಬಿಸಿರೋಡ್ ಗೆ ಹೋಗುತ್ತಾ ಸಮಯ ಸುಮಾರು 18:15 ಗಂಟೆಗೆ ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ಕೃಷ್ಣಕೋಡಿ  ಎಂಬಲ್ಲಿಗೆ ತಲುಪಿದಾಗ ಮೋಟರ್ ಸೈಕಲ್ ಸವಾರನು ಮೋಟರ್ ಸೈಕಲ್ ನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ  ಮೋಟರ್ ಸೈಕಲ್ ಸ್ಕಿಡ್ ಆಗಿ ಪಿರ್ಯಾದಿದಾರರು ಹಾಗೂ ಸವಾರನು ಮೋಟರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಅಪಘಾತವಾಗಿದ್ದು, ಅಪಘಾತದಲ್ಲಿ ಪಿರ್ಯಾದಿದಾರರ ಬಲಕಾಲಿನ ತೊಡೆಗೆ ಗುದ್ದಿದ ನೋವಾಗಿದ್ದು ಚಿಕಿತ್ಸೆ ಬಗ್ಗೆ ಬಿಸಿರೋಡಿನ ಸೋಮಯಾಜಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ..ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ 39/2022 ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಕಳವು ಪ್ರಕರಣ: 1

 • ಸುಬ್ರಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಪುಷ್ಪಲತಾ, ಪ್ರಾಯ: 48 ವರ್ಷ, ಗಂಡ:ಕೆ ಸಂತೋಷ್ ಕುಮಾರ್, ಸಹಾಯಕ ಕಾರ್ಯನಿರ್ವಹಣಾಧಿಕಾರಿ, ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಹಿಂದೂ ಧಾರ್ಮಿಕ ದತ್ತಿ ಇಲಾಖೆ, ಸುಬ್ರಹ್ಮಣ್ಯ ಗ್ರಾಮ, ಕಡಬ ಎಂಬವರ ದೂರಿನಂತೆ ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮದ ವಲ್ಲೀಶ ಸಭಾಭವನದಲ್ಲಿ ದಿನಾಂಕ:03-04-2022 ರಂದು ಕುಲ್ಕುಂದ ವಿವಾಹ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮವಾದ ನಂತರ ಮದುವೆ ಪಾತ್ರೆಗಳನ್ನು ಶುಚಿಗೊಳಿಸಿ ದಾಸ್ತಾನು ಕೊಠಡಿಯಲ್ಲಿರಿಸಿ ಸಭಾಭವನಕ್ಕೆ ಸಾಯಂಕಾಲ 6:30 ರ ಸಮಯಕ್ಕೆ ಬೀಗ ಹಾಕಿ ಬಂದಿದ್ದು, ಮತ್ತು ಸಭಾಭವನದ ಕಟ್ಟಡದ ಶುಚಿತ್ವಕ್ಕಾಗಿ ಪುನಃ   ದಿನಾಂಕ:04-04-2022 ರಂದು ಬೆಳಿಗ್ಗೆ 9:00 ಗಂಟೆಯ ಸುಮಾರಿಗೆ ಶುಚಿತ್ವದ ಆಳುಗಳೊಂದಿಗೆ ವಲ್ಲೀಶ ಸಭಾಭವನದ ಶುಚಿತ್ವ ಮೇಲ್ವಿಚಾರಕರಾದ ಶ್ರೀ ಬಿ.ದೇವಣ್ಣ ರವರು ವಲ್ಲೀಶ ಸಭಾಭವನಕ್ಕೆ ತೆರಳಿದಾಗ ಸಭಾಭವನದ ಮುಂಭಾಗದ ಕೊಲೆಪ್ಸಿಬಲ್ ಗೇಟ್ ನ ಬೀಗ ಒಡೆದು ದಾಸ್ತಾನು ಕೊಠಡಿಯಲ್ಲಿರುವ ಸಣ್ಣ ಸಣ್ಣ ಹಿತ್ತಾಳೆ ಹಾಗೂ ತಾಮ್ರದ ಸೊತ್ತುಗಳನ್ನು ಯಾರೋ ದುಷ್ಕರ್ಮಿಗಳು ಕಳವು ಮಾಡಿದ ಬಗ್ಗೆ ಶ್ರೀ ದೇವಳದ ಕಛೇರಿಗೆ ತಿಳಿಸಿದ್ದು, ಕಳುವಾದ ಸೊತ್ತುಗಳ ವಿವರ ಮತ್ತು ಮೌಲ್ಯ ಈ ಕೆಳಗಿನಂತಿದ್ದು, ಕಳವು ಮಾಡಿದ ಪಾತ್ರೆಗಳ ಒಟ್ಟು ಅಂದಾಜು ಮೌಲ್ಯ ರೂ.4680/- ಆಗಿದ್ದು,.ಈ ಬಗ್ಗೆ ಸುಬ್ರಮಣ್ಯ ಪೊಲೀಸ್‌ ಠಾಣೆಯಲ್ಲಿ  ಅ.ಕ್ರ ನಂಬ್ರ  : 44/2022 ಕಲಂ:   454,457,380 ಐಪಿಸಿ       ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 2

 • ಬೆಳ್ತಂಗಡಿ ಪೊಲೀಸ್ ಠಾಣೆ : ದಿನಾಂಕ: 04-04-2022 ರಂದು ಬೆಳ್ತಂಗಡಿ ಠಾಣೆಯಲ್ಲಿ ಅ.ಕ್ರ 22/2022 US 376 IPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ನಗರ ಪೊಲೀಸ್ ಠಾಣೆ : ದಿನಾಂಕ: 01.04.2022 ರಂದು ಸಂಜೆ 04.00 ಗಂಟೆ ಸಮಯಕ್ಕೆ ರಾಜಕೀಯ ಪಕ್ಷವೊಂದರ ವತಿಯಿಂದ ಪಿಕಪ್‌ ವಾಹನದಲ್ಲಿ ಯಾವುದೇ ಅನುಮತಿ ಪಡೆಯದೇ ದ್ವನಿವರ್ಧಕವನ್ನು ಬಳಸಿ ಪ್ರತಿಭಟನಾ ಕಾರ್ಯಕ್ರಮವನ್ನು ಕಾಲ್ನಡಿಗೆ ಜಾಥದ ಮೂಲಕ ಪುತ್ತೂರು-ದರ್ಬೆ ಜಂಕ್ಷನ್‌ನಿಂದ  ಪ್ರಾರಂಭಿಸಿ ಪುತ್ತೂರು ಮಿನಿ ವಿಧಾನ ಸೌಧದ ಕಡೆಗೆ ಹೊರಟು, ಸಂಜೆ 5.00 ಗಂಟೆಯ  ಸಮಯಕ್ಕೆ ಪುತ್ತೂರು ಮಿನಿ ವಿಧಾನ ಸೌಧದ ಬಳಿ ತಲುಪಿ, ಬಳಿಕ ಅಲ್ಲಿರುವ ಅಮರ್ ಜವಾನ್ ಜ್ಯೋತಿ ಬಳಿ ಸಾರ್ವಜನಿಕ ಸ್ಥಳದಲ್ಲಿ ದ್ವನಿವರ್ಧಕವನ್ನು ಬಳಸಿ ಸಾರ್ವಜನಿಕರನ್ನು ಉದ್ದೇಶಿಸಿ ಸಭೆ ನಡೆಸಿದ್ದು, ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ  ಅ.ಕ್ರ: 19/2022 ಕಲಂ:   109 KP ACT  ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಅಸ್ವಾಭಾವಿಕ ಮರಣ ಪ್ರಕರಣ: 2

 • ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸ್ವರ್ಣಲತಾ, ಪ್ರಾಯ: 38 ವರ್ಷ,  ಗಂಡ: ರಾಜೆಶ್ ಪೂಜಾರಿ, ವಾಸ: ನೂಜೇಲ್ ಮನೆ,  ಮೇಲಂತಬೆಟ್ಟು ಗ್ರಾಮ,  ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ :03-04-2022 ರಂದು 11-30 ಗಂಟೆಗೆ ಪಿರ್ಯಾದಿದಾರರು ಬಚ್ಚಲು  ಕೋಣೆಗೆ ಹೋದಾಗ ಒಳಗಿನಿಂದ ಚಿಲಕ ಹಾಕಿ ಪಿರ್ಯಾದಿದಾರರ ಗಂಡ ಕುಳಿತ ಸ್ಥಿತಿಯಲ್ಲಿದ್ದುದ್ದನ್ನು ಕಂಡು ಬೊಬ್ಬೆ ಹೊಡೆದಾಗ ಮನೆಯವರೆಲ್ಲರೂ ಬಂದು ಬಾಗಿಲು ಒಡೆದು ಹೊರಗೆ ಕರೆದುಕೊಂಡು ಬಂದು ಚಿಕಿ ತ್ಸೆಯ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಂಜೆ 5:48 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಠಾಣಾ UDR ನಂಬ್ರ: 13/2022 ಕಲಂ: 174 ಸಿ.ಆರ್.ಪಿ,ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಜಯಂತಿ (37) ಗಂಡ: ಸುರೇಶ್ ಡಿ ವಾಸ: ದೊಡ್ಡೆರಿ ಮನೆ, ಅಜ್ಜಾವರ ಗ್ರಾಮ ಮತ್ತು ಅಂಚೆ ಸುಳ್ಯ ಎಂಬವರ ದೂರಿನಂತೆ ಪಿರ್ಯಾದುದಾರರ ಗಂಡ ಸುರೇಶ್ ಡಿ (47) ಎಂಬಾತನು ದಿನಾಂಕ 30.03.2022 ರಂದು ಮದ್ಯಪಾನ ಮಾಡಿ ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ದೊಡ್ಡೇರಿ ಎಂಬಲ್ಲಿ ಆತನ ಮನೆಯ ಬಳಿ ಅಸ್ವಸ್ಥಗೊಂಡು ಬಿದ್ದುಕೊಂಡವನ್ನು ಪಿರ್ಯಾದುದಾರರು ಮತ್ತು ಆತನ ದೊಡ್ಡಪ್ಪನ ಮಗ ಸುಂದರ ಸೇರಿ ಉಪಚರಿಸಿ ಸುರೇಶ ನನ್ನು ಚಿಕಿತ್ಸೆಯ ಬಗ್ಗೆ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಒಳರೋಗಿಯಾಗಿ ದಾಖಲಿಸಿ  ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ದಿನಾಂಕ: 31.03.2022 ರಂದು ಸುಳ್ಯ ಕೆ,ವಿ,ಜಿ ಆಸ್ಪತ್ರೆಗೆ ಕರೆದುಕೊಂಡು ಬಂದು ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದವನು ದಿನಾಂಕ 04.04.2022 ರಂದು ಚಿಕಿತ್ಸೆ ಫಲಕಾರಿಯಾಗದೇ ಸಮಯ ಸುಮಾರು 14:30 ಗಂಟೆಗೆ ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ UDR No: 14/2022 Sec: 174 Crpc ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 05-04-2022 10:31 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080