ಅಭಿಪ್ರಾಯ / ಸಲಹೆಗಳು

ಕೊಲೆ ಪ್ರಕರಣ: ೦1

 

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ನವೀನ್ ಕುಮಾರ್, 42 ವರ್ಷ, ತಂದೆ: ಬೆಳ್ಯಪ್ಪ ಮೂಲ್ಯ, ವಾಸ: ತಾರಿಗುಡ್ಡೆ ಮನೆ, ಚಿಕ್ಕಮುಡ್ನೂರು ಗ್ರಾಮ, ಪುತ್ತೂರು ತಾಲೂಕು, ಎಂಬವರ ದೂರಿನಂತೆ ಪಿರ್ಯಾದಿದಾರರ ಸ್ನೇಹಿತ ಚರಣ್ ರಾಜ್ ಎಂಬವರ ಪತ್ನಿಯ ತಂದೆ ಕಿಟ್ಟಣ್ಣ ರೈ ಎಂಬವರು ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಎಂಬಲ್ಲಿ ಮೆಡಿಕಲ್ ಶಾಪ್ ಪ್ರಾರಂಭಿಸುವವರಿದ್ದು, ಈ ಮೆಡಿಕಲ್ ಶಾಪ್ ನ ಪೂರ್ವ ತಯಾರಿ ಕೆಲಸಕ್ಕೆ ಸಹಾಯ ಮಾಡಲು ಪಿರ್ಯಾದಿದಾರರು ಚರಣ್ ರಾಜ್ ನ ಜೊತೆಗೆ ಆಗಾಗ ಪೆರ್ಲಂಪಾಡಿಗೆ ಬಂದು ಹೋಗುತ್ತಿದ್ದರು. ಅದರಂತೆ  ದಿನಾಂಕ 04-06-2022 ರಂದು ಪಿರ್ಯಾದಿದಾರರು ಸ್ನೇಹಿತ ಚರಣ್ ರಾಜ್ ನ ಜೊತೆಗೆ ಆತನ ಬಾಬ್ತು ಮಾರುತಿ ರಿಡ್ಜ್ ಕಾರ್ ನಂ KA19MF-1185 ನೇಯದ್ದರಲ್ಲಿ 11-00 ಗಂಟೆಗೆ ಪೆರ್ಲಂಪಾಡಿ ಎಂಬಲ್ಲಿಗೆ ಬಂದು ಮೆಡಿಕಲ್ ಶಾಪ್ ನ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು. ಸಂಜೆ ಸಮಯ ಸುಮಾರು 4-15 ಗಂಟೆಗೆ ಪಿರ್ಯಾದಿದಾರರು ಮೆಡಿಕಲ್ ಶಾಪ್ ನ ಒಳಗೆ ಕೆಲಸ ಕಾರ್ಯಗಳಲ್ಲಿ ನಿರತನಾಗಿದ್ದ ವೇಳೆ ಮೆಡಿಕಲ್ ಶಾಪ್ ನ ಹೊರಗೆ ಕಾರಿನ ಬಳಿ ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಿದ್ದ ಚರಣ್ ರಾಜ್ ನಿಗೆ ಯಾರೋ ಹಲ್ಲೆ ಮಾಡಿದ್ದು, ಆ ವೇಳೆ ಚರಣ್ ರಾಜ್ ಬೊಬ್ಬೆ ಹೊಡೆದುದನ್ನು ಕೇಳಿದ ನವೀನ್ ಕುಮಾರ್ ಅಂಗಡಿಯ ಹೊರಗೆ ಬಂದಾಗ ಯಾರೋ ಅಪರಿಚಿತ ಮೂರು ಮಂದಿ ಕೈಯಲ್ಲಿ ತಲವಾರು ಹಾಗೂ ರಾಡ್ ಹಿಡಿದುಕೊಂಡು ನೆಲದಲ್ಲಿ ಬಿದ್ದಿದ್ದ ಚರಣ್ ರಾಜ್ ನಿಗೆ ಆರೋಪಿಗಳು ತಲವಾರು ಹಾಗೂ ರಾಡ್ ನಿಂದ ಹಲ್ಲೆ ಮಾಡಿದ ಪರಿಣಾಮ ಚರಣ್ ರಾಜ್ ನ ಕುತ್ತಿಗೆಗೆ ತೀವ್ರ ತರಹದ ಭಾರಿ ಗಾಯ, ತಲೆಯಲ್ಲಿ ಅಲ್ಲಲ್ಲಿ ರಕ್ತಗಾಯಗಳಾಗಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. 49/2022 ಕಲಂ 302 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: ೦3

 

ಸುಬ್ರಮಣ್ಯ ಪೊಲೀಸ್ ಠಾಣೆ :ದಿನಾಂಕ  04-06-2022  ರಂದು  ಜಂಬುರಾಜ್ ಮಹಾಜನ್  ಪೊಲೀಸ್ ಉಪನಿರೀಕ್ಷಕರು, ಸುಬ್ರಹ್ಮಣ್ಯ ಪೊಲೀಸ್ ಠಾಣೆ ರವರು ಸಿಬ್ಬಂದಿಗಳೊಂದಿಗೆ  ಇಲಾಖಾ ಜೀಪು  ನಲ್ಲಿ ಠಾಣಾ  ವ್ಯಾಪ್ತಿಯಲ್ಲಿ    ರೌಂಡ್ಸ್‌ ಕರ್ತವ್ಯ ನಿರ್ವಹಿಸಿಕೊಂಡು  ಪಂಜ ಜಂಕ್ಷನ್‌ ಗೆ  ಬಂದು, ಅಲ್ಲಿಂದ  ಸುಬ್ರಹ್ಮಣ್ಯದ ಕಡೆಗೆ  ಬರುವಾಗ   ಸಮಯ  16-00  ಗಂಟೆಗೆ  ಸುಳ್ಯ ತಾಲೂಕು ಐವತ್ತೊಕ್ಲು ಗ್ರಾಮದ ಪಲ್ಲೋಡಿ  ಬಸ್ಸು  ಸ್ಟಾಪ್‌   ಬಳಿ ಒಬ್ಬ ವ್ಯಕ್ತಿಯು  ಕೈಯಲ್ಲಿ ಒಂದು ಚೀಲವನ್ನು  ಹಿಡಿದುಕೊಂಡು ನಿಂತಿದ್ದು , ಇಲಾಖಾ  ಜೀಪನ್ನು  ನೋಡಿದ ತಕ್ಷಣ  ಕೈಯಲ್ಲಿದ್ದ  ಜೀಲವನ್ನು  ಕೆಳಗೆ ಬಿಟ್ಟು  ಬಸ್ಸು  ಸ್ಟಾಪ್‌ನ  ಹಿಂಬದಿ  ಹೋಗಿ  ನಿಂತುಕೊಂಡಾಗ, ಸಂಶಯಗೊಂಡು  ಬಸ್ಸು ಸ್ಟಾಪ್‌ನ ಬಳಿ  ಹೋಗಿ  ವಾಹನವನ್ನು  ನಿಲ್ಲಿಸಿ ಸಿಬ್ಬಂದಿಗಳ ಸಹಾಯದಿಂದ ಆತನನ್ನು ಹಿಡಿದುಕೊಂಡು , ಪೊಲೀಸ್‌ ವಾಹನವನ್ನು  ನೋಡಿದ ತಕ್ಷಣ  ಮರೆ ಮಾಚಿಕೊಂಡಿದ್ದು ಏಕೆ ಎಂದು ಕೇಳಲಾಗಿ, ಆದಕ್ಕೆ ಆತನು ತಡವರಿಸುತ್ತಾ  ಏನು ಹೇಳದೆ ಹಾಗೆಯೇ  ನಿಂತುಕೊಂಡಿದ್ದು , ಮತ್ತೆ ಪುನ:  ಆತನನ್ನು ವಿಚಾರಿಸಿದಾಗ  ಚೀಲದಲ್ಲಿ ಮದ್ಯದ  ಪ್ಯಾಕೆಟ್‌ಗಳನ್ನು  ಸಂಗ್ರಹ ಮಾಡಿಕೊಂಡು  ಬಸ್ಸಿಗಾಗಿ  ಕಾಯುತ್ತಿರುವುದಾಗಿ ತಿಳಿಸಿದ್ದು, ಆತನನ್ನು ವಿಚಾರಿಸಲಾಗಿ ಮೇದಪ್ಪ   ಪ್ರಾಯ 34 ವರ್ಷ  ತಂದೆ:  ದಿ| ಗಣಪ್ಪಯ್ಯ  ಗೌಡ, ಕಾರ್ಜ  ಮನೆ, ಬೀದಿಗುಡ್ಡೆ  ಬಳ್ಪ ಗ್ರಾಮ ಕಡಬ ತಾಲೂಕು  ಎಂಬುದಾಗಿಯೂ, ಮದ್ಯವನ್ನು ಸಂಗ್ರಹ ಮಾಡಿಟ್ಟುಕೊಳ್ಳಲು ನಿಮ್ಮಲ್ಲಿ  ಪರವಾನಿಗೆ ಇದೆಯೇ  ಎಂದು ಕೇಳಿದಾಗ, ನನ್ನಲ್ಲಿ ಯಾವುದೇ ಪರವಾನಿಗೆ ಇಲ್ಲವೆಂದು  ತಿಳಿಸಿದ್ದು , ಆಕ್ರಮವಾಗಿ ಸಂಗ್ರಹ ಮಾಡಿಕೊಂಡು ಮಾರಾಟ ಮಾಡಿ  ಹೆಚ್ಚಿನ  ಲಾಭ ಗಳಿಸುವ ಉದ್ದೇಶದಿಂದ ಮದ್ಯವನ್ನು ಶೇಖರಿಸಿ   ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿರುವುದಾಗಿದೆ ಸದರಿ ಅಮಲು ಪದಾರ್ಥ ಸಹಿತ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಸುಬ್ರಮಣ್ಯ ಠಾಣೆ ಅ.ಕ್ರ   ನಂಬ್ರ  : 61/2022 ಕಲಂ 32, 34 K E ACT ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಅವಿನಾಶ್ ಗೌಡ ಪಿ ಎಸ್ ಐ (ಕಾ&ಸು) ಬಂಟ್ವಾಳ ನಗರ ಠಾಣೆ ಬಂಟ್ವಾಳ ರವರು ದಿನಾಂಕ 04.06.2022 ರಂದು ಅಪರಾಹ್ನ ಠಾಣಾ ವ್ಯಾಪ್ತಿಯಲ್ಲಿ ಸಿಬ್ಬಂದಿಗಳೊಂದಿಗೆ  ಇಲಾಖಾ ಜೀಪ್  ನಂಬ್ರ: ಕೆಎ-19-ಜಿ-495 ನೇ ದರಲ್ಲಿ ಸರಹದ್ದಿನಲ್ಲಿ ರೌಂಡ್ಸ್ ಮಾಡುತ್ತಾ ಅಪರಾಹ್ನ 4.45 ಗಂಟೆಯ ವೇಳೆಗೆ ಬಂಟ್ವಾಳ ಪೇಟೆಯಲ್ಲಿರುವಾಗ ಬ್ರಹ್ಮರ ಕೂಟ್ಲುವಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತುವನ್ನು ಸೇವಿಸಿ ನಶೆ ಹೊಂದಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದಾರೆಂದು ಬಂದ ಮಾಹಿತಿಯಂತೆ ಪಿರ್ಯಾಧಿದಾರರು ಸಿಬಂದಿಗಳೊಂದಿಗೆ ಬಂಟ್ವಾಳ ತಾಲೂಕು ಕಳ್ಳಿಗೆ  ಗ್ರಾಮದ  ಬ್ರಹ್ಮರ ಕೂಟ್ಲು ಗೆ  ಸಂಜೆ 4.55 ಗಂಟೆಗೆ ತಲುಪಿ ಅಲ್ಲಿದ್ದತನು ಮಹಮ್ಮದ್ ಅಪ್ಜಾನ್,  ಪ್ರಾಯ:25 ವರ್ಷ, ತಂದೆ: ಅಬು ಅಹಮ್ಮದ್,  ವಾಸ;  ಮೈಂದಾಳ ಮನೆ ನಾವೂರು   ಗ್ರಾಮ ಬಂಟ್ವಾಳ ತಾಲೂಕು ಎಂಬುದಾಗಿದ್ದು ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತುವನ್ನು ಸೇವಿಸಿ ನಶೆ ಹೊಂದಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 59/2022  ಕಲಂ: 27 ಬಿ ಎನ್ ಡಿ ಪಿ ಎಸ್  ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ನಗರ ಪೊಲೀಸ್ ಠಾಣೆ : ದಿನಾಂಕ  04.06.2022 ರಂದು ಬಂಟ್ವಾಳ ನಗರ ಪೊಲೀಸ್ ಠಾಣಾ ಉಪನಿರೀಕ್ಷಕರು ಕಲೈಮಾರ್ ರವರಿಗೆ ಬಂದ ಮಾಹಿತಿಯಂತೆ, ಮಾದಕ ವಸ್ತುವನ್ನು ಸೇವಿಸಿ ನಶೆ ಹೊಂದಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದಾರೆಂದು ತಿಳಿಸಿದಂತೆ ಪಿರ್ಯಾಧಿದಾರರು ಸಿಬ್ಬಂದಿಗಳೊಂದಿಗೆ ಬಂಟ್ವಾಳ ತಾಲೂಕು ಬಿ.ಮೂಡ  ಗ್ರಾಮದ  ತಲಪಾಡಿ ಮಸೀದಿ ರಸ್ತೆಗೆ   ಸಂಜೆ 5.10 ಗಂಟೆಗೆ ತಲುಪಿ ಮಾಹಿತಿಯ ಚಹರೆಯಲ್ಲಿದ್ದತನನ್ನು ವಿಚಾರಿಸಿ ಆತನ ಹೆಸರು ವಿಳಾಸ ಕೇಳಲಾಗಿ ಮಹಮ್ಮದ್ ನಿಜಾಮುದ್ದಿನ್ ಬಿ. ಪ್ರಾಯ: 30 ವರ್ಷ, ತಂದೆ;   ಉಮ್ಮರ್ ಫಾರೂಕ್,ವಾಸ: ಮನೆ ನಂಬ್ರ 25-5 ಬಿ ಕಸಬ ಬೆಂಗ್ರೆ ಮನೆ ಯಂ ಜೆ ಯಂ 898 ಮಂಗಳೂರು ಆಗಿದ್ದು ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತುವನ್ನು ಸೇವಿಸಿ ನಶೆ ಹೊಂದಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 60/2022  ಕಲಂ: 27 ಬಿ ಎನ್ ಡಿ ಪಿ ಎಸ್  ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತ್ತೀಚಿನ ನವೀಕರಣ​ : 06-06-2022 12:18 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080