ಅಪಘಾತ ಪ್ರಕರಣ: ೦3
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ತಾರಾನಾಥ ಪ್ರಾಯ:48 ವರ್ಷ ತಂದೆ: ಚನಿಯಪ್ಪ ವಾಸ: ಬೃಂದಾವನ ಮನೆ ನಿಡ್ಪಳ್ಳಿ ಗ್ರಾಮ ಎಂಬವರ ದೂರಿನಂತೆ ಫಿರ್ಯಾದಿದಾರವರು ದಿನಾಂಕ 05.11.2021ರಂದು ಕುರಿಯದಲ್ಲಿ ಲೀಸ್ ಗೆ ಪಡೆದುಕೊಂಡಿದ್ದ ಅಡಿಕೆ ತೋಟದಲ್ಲಿ ಬಿದ್ದಿದ್ದ ಅಡಿಕೆಯನ್ನು ಹೆಕ್ಕಲು ಮಧ್ಯಾಹ್ನ ಮನೆಯಿಂದ ಹೊರಟು ಮಾಣಿ –ಮೈಸೂರು ಹೆದ್ದಾರಿಯಲ್ಲಿ ಬರುತ್ತಾ ಮಧ್ಯಾಹ್ನ ಸಮಯ ಸುಮಾರು 1.45 ಗಂಟೆಗೆ ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಕಲ್ಲರ್ಪೆ ಎಂಬಲ್ಲಿಗೆ ತಲುಪಿ ಕುರಿಯ ಕಡೆಗೆ ಹೋಗುವ ರಸ್ತೆಗೆ ಹೋಗಲೆಂದು ಬಲ ಕಡೆ ಇಂಡಿಕೇಟರ್ ಹಾಕಿದಾಗ ಫಿರ್ಯಾದಿದಾರರ ಮುಂದಿನಿಂದ ಅಂದರೆ ಸಂಪ್ಯ ಕಡೆಯಿಂದ ಸಂಟ್ಯಾರು ಕಡೆಗೆ ಕೆಎ-21-ಪಿ-5786ನೇ ಕಾರನ್ನು ಅದರ ಚಾಲಕನು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಕೆಎ-19-ಇಪಿ-5473 ನೇ ಆಕ್ಟಿವಾ ಸ್ಕೂಟರಿಗೆ ಢಿಕ್ಕಿ ಹೊಡದ ಪರಿಣಾಮ ಫಿರ್ಯಾದಿದಾರರು ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದಿದ್ದು, ಅಷ್ಟರಲ್ಲಿ ಫಿರ್ಯಾದಿದಾರರ ಪರಿಚಯದ ಶ್ರೀಪ್ರಸಾದ್ ಮತ್ತು ಇತರರು ಹಾಗೂ ಕಾರಿನ ಚಾಲಕ ಫಿರ್ಯಾದಿದಾರರ ಬಳಿಗೆ ಬಂದು ಅವರನ್ನು ಉಪಚಿರಿಸಿ ನೋಡಿದಾಗ ಫಿರ್ಯಾದಿದಾರರ ಎಡ ಕೈಯ ತೋಳಿಗೆ ಗುದ್ದಿದ ಗಾಯ, ಎರಡೂ ಕಾಲುಗಳ ಮೊಣ ಕಾಲಿಗೆ ರಕ್ತ ಗಾಯ ಮತ್ತು ತಲೆಯ ಎಡ ಭಾಗಕ್ಕೆ ಗುದ್ದಿದ ಗಾಯವಾಗಿದ್ದು, ಬಳಿಕ ಶ್ರೀಪ್ರಸಾದ್ ಮತ್ತು ಕಾರಿನ ಚಾಲಕ ಮಸೂದ್ ರವರು ಆಟೋ ರಿಕ್ಷಾವೊಂದರಲ್ಲಿ ಫಿರ್ಯಾದಿದಾರರನ್ನು ಚಿಕಿತ್ಸೆಯ ಬಗ್ಗೆ ದರ್ಬೆಯ ಹಿತಾ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಪರೀಕ್ಷಿಸಿ ಒಳರೋಗಿಯನ್ನಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಅಕ್ರ 98/2021 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಸುಬ್ರಮಣ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ದೇವಿಪ್ರಸಾದ್ ಎನ್ ಡಿ, ಪ್ರಾಯ: 29 ವರ್ಷ, ತಂದೆ: ದೊಡ್ಡಣ್ಣ ಗೌಡ, ವಾಸ: ಕಂಬಳ ಪೈಕ ಮನೆ, ಗುತ್ತಿಗಾರು ಗ್ರಾಮ ಮತ್ತು ಅಂಚೆ , ಸುಳ್ಯ ತಾಲೂಕು, ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ: 04-11-2021 ರಂದು ಸುಮಾರು ಸಂಜೆ 6:15 ಗಂಟೆಗೆ ತೋಟದಿಂದ ಅಡಕೆ ಹೆಕ್ಕಿ ಮನೆಗೆ ಬಂದು ಬಳಿಕ ಅವರ ಹೆಂಡತಿ ಮನೆಗೆ ಅವರ ಬಾಭ್ತು ಕೆಎ 21 ಎಲ್ 3054 ನೇ ಮೋಟಾರ್ ಸೈಕಲ್ ನಲ್ಲಿ ಹೊರಟಾಗ ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ವಳಲಂಬೆ ಎಂಬಲ್ಲಿರುವ ಸೇತುವೆ ಬಳಿ ತಲುಪುವಾಗ ಸಮಯ ಸುಮಾರು 6:30 ಗಂಟೆಗೆ ಎದುರುಗಡೆಯಿಂದ ಅಂದರೆ ಸುಳ್ಯ-ಎಲಿಮಲೆ ಕಡೆಯಿಂದ ಕೆಎ 21 ಕ್ಯೂ 4662 ನೇ ಮೋಟಾರ್ ಸೈಕಲ್ ನ್ನು ಅದರ ಚಾಲಕನು ರಸ್ತೆಯ ತೀರ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿಯು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಅವರ ಬಲಕಣ್ಣಿನ ಕೆಳಭಾಗಕ್ಕೆ ರಕ್ತಗಾಯವಾಗಿದ್ದು, ಎದುರು ಬೈಕ್ ನ ಸವಾರನಿಗೂ ತಲೆಗೆ ಹಾಗೂ ಬಲಕಾಲಿಗೆ ರಕ್ತಗಾಯ ವಾಗಿರುತ್ತದೆ. ಬಳಿಕ ಪಿರ್ಯಾದಿದಾರರನ್ನು ಅವರ ಪರಿಚಯದ ರಿಕ್ಷಾ ಚಾಲಕರಾದ ವೆಂಕಟ್ರಮಣ ಗೌಡ ಎಂಬವರು ಖಾಸಗಿ ವಾಹನವೊಂದರಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದು ಕೊಂಡಿರುವುದಾಗಿದೆ. .ಈ ಬಗ್ಗೆ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ : 79-2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸತೀಶ್ ಶೆಟ್ಟಿ, ಪ್ರಾಯ : 46 ವರ್ಷ ತಂದೆ : ಸುಂದರ ಶೆಟ್ಟಿ, ವಾಸ: ಅಗರಿ ಗುಡ್ಡೆ ಮನೆ, ಕೋಳ್ನಾಡು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 05-11-2021 ರಂದು ಪಿರ್ಯಾದಿದಾರರು ತನ್ನ ಬಾಬ್ತು KA-19-MJ-6395 ನೇ ಮಾರುತಿ ಸ್ವಿಪ್ಟ್ ಡಿಸೈರ್ ಕಾರಿನಲ್ಲಿ ಅಗತ್ಯ ಕೆಲಸದ ನಿಮಿತ್ತ ಕಲ್ಲಡ್ಕಕ್ಕೆ ಹೋಗಿ ಅಲ್ಲಿ ಕೆಲಸ ಮುಗಿಸಿ ವಾಪಾಸು ಬಿ.ಸಿ.ರೋಡ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಸಮಯ ಸುಮಾರು ಮಧ್ಯಾಹ್ನ 12:45 ಗಂಟೆಗೆ ಬಂಟ್ವಾಳ ತಾಲೂಕು ಪಾಣೆಮಂಗಳೂರು ಗ್ರಾಮದ ಮೇಲ್ಕಾರ್ ಉಲ್ಲಾಸ್ ಐಸ್ ಕ್ರೀಮ್ ಪಾರ್ಲರ್ ಬಳಿ ತಲುಪಿದಾಗ ಪಿರ್ಯಾದಿದಾರರ ಹಿಂದಿನಿಂದ ಅಂದರೆ ಕಲ್ಲಡ್ಕ ಕಡೆಯಿಂದ AP-39-DD-1213 ನೇ ಮಾರುತಿ ಈರ್ಟಿಗಾ ಕಾರನ್ನು ಅದರ ಚಾಲಕ ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಹಿಂಬದಿಗೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಕಾರು ಮುಂದಕ್ಕೆ ಬಲಕ್ಕೆ ಚಲಿಸಿ ಮೇಲ್ಕಾರ್ ಉಲ್ಲಾಸ್ ಐಸ್ ಕ್ರೀಮ್ ಪಾರ್ಲರ್ ಬಳಿ ಪಾರ್ಕಿಂಗ್ ಮಾಡಿದ್ದ KA-19-N-4220 ನೇ ಕಾರಿಗೆ ಡಿಕ್ಕಿಯಾಗಿ ಸದ್ರಿ ಕಾರು ಎಡಕ್ಕೆ ವಾಲಿ ನೊಂದಣಿಯಾಗದ ಆಲ್ಟೋ ಕಾರಿಗೆ ಬಲ ಬದಿಗೆ ಡಿಕ್ಕಿಯಾಗಿ ಅಪಘಾತವಾಗಿ 4 ವಾಹನಗಳು ಜಖಂಗೊಂಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 115/2021 ಕಲಂ 279 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಜೀವ ಬೆದರಿಕೆ ಪ್ರಕರಣ: ೦1
ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅಮೃತ್ ಆಲ್ಬರ್ಟ ಮೋನಿಸ್ ,ಪ್ರಾಯ;52 ವರ್ಷ ತಂದೆ;ದಿ: ಚಾರ್ಲ್ಸ ಮೋನಿಸ್, ವಾಸ; ಅಮೃತ್ ನಿಲಯ, ರೆಂಜಾಳ, ಉಜಿರೆ ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ 03.11.2021 ರಂದು ಬೆಳೆಗ್ಗೆ ಸಮಯ 08.00 ಗಂಟೆಗೆ ಪಿರ್ಯಾದಿದಾರರು ಉಜಿರೆ ಪೇಟೆಯಲ್ಲಿರುವ ಸೋಮಂತಡ್ಕ ಆಟೋ ಪಾರ್ಕ್ ನಲ್ಲಿ ಅವರ ಬಾಬ್ತು ಆಟೋ ರಿಕ್ಷಾವನ್ನು ನಿಲ್ಲಿಸಿ ಬಾಡಿಗೆ ಮಾಡುವ ಸಮಯ ಪಿರ್ಯಾದಿದಾರರ ಆಟೋದಲ್ಲಿ ಪ್ರಯಾಣಿಕರು ಕುಳಿತಿರುವ ಸಮಯ ಆರೋಪಿಗಯಾದ ನಿಜಾಮುದ್ದೀನ್ ಎಂಬಾತನು ಪಿರ್ಯಾದಿದಾರರ ಆಟೋದಿಂದ ಪ್ರಯಾಣಿಕರನ್ನು ಕರದುಕೊಂಡು ಹೋಗಿ ತನ್ನ ಜೀಪಿನಲ್ಲಿ ಕುಳ್ಳಿರಿಸಿದ್ದು ಆ ಸಮಯ ಪಿರ್ಯಾದಿದಾರರು ಆಕ್ಷೇಪಿಸಿದಾಗ ಆರೋಪಿತನಾದ ನಿಜಾಮುದ್ದೀನನು ಶೀನಪ್ಪ ಎಂಬುವನನ್ನು ಕರೆದುಕೊಂಡು ಬಂದು ಪಿರ್ಯಾದಿದಾರರಿಗೆ ಶೀನಪ್ಪನು ಕೈಯಿಂದ ಎದೆ ಮತ್ತು ಭುಜಕ್ಕೆ ಹೊಡೆದು ನಿಜಾಮುದ್ದಿನನು ಕಬ್ಬಿಣದ ರಾಡಿನಿಂದ ಎಡ ಕೈಗೆ ಮತ್ತು ಎಡ ಕಾಲಿನ ತೊಡೆಗೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣಾ ಅ.ಕ್ರ 96/2021, ಕಲಂ: 323,324,504,506, ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೆ ಪ್ರಕರಣ: ೦7
ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಎಸ್ ಐ ಮಹಮ್ಮದ್ ಹನೀಫ್ (62) ತಂದೆ: ಜಿ ಎಂ ಇಬ್ರಾಹಿಂ ವಾಸ: ಗಾಂಧಿನಗರ ಮನೆ, ಸುಳ್ಯ ಕಸಬಾ ಗ್ರಾಮ ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರ ತಮ್ಮ ಜಿ ಐ ಅಬ್ದುಲ್ ಖಾದರ್(48) ಎಂಬಾತನು ಕೂಲಿ ಕೆಲಸ ಮಾಡಿಕೊಂಡಿದ್ದು, ಅದರಂತೆ ದಿನಾಂಕ 05.11.2021 ರಂದು ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಗಾಂಧಿನಗರದಲ್ಲಿರುವ ಮಲ್ನಾಡು ಗೇರು ಬೀಜ ಪ್ಯಾಕ್ಟರಿಯ ಹಳೆ ಕಟ್ಟಡದ ದುರಸ್ತಿ ಕೆಲಸವನ್ನು ಕಟ್ಟಡ ಮಾಲಕರ ನಿರ್ದೇಶದಂತೆ ಮಾಡುತ್ತಿರುವ ಸಮಯ ಸುಮಾರು 09.30 ಗಂಟೆಗೆ ಹಳೆಯ ಕಟ್ಟಡದ ಗೋಡೆ ಪಿರ್ಯಾದುದಾರರ ತಮ್ಮನ ಮೇಲೆ ಬಿದ್ದು ಗಾಯಗೊಂಡು ಸೃತಿ (ಪ್ರಜ್ಞೆ) ಕಳೆದುಕೊಂಡವನನ್ನು ಚಿಕಿತ್ಸೆಯ ಬಗ್ಗೆ ಸುಳ್ಯ ಸರ್ಕಾರಿ ಆಸ್ಪತ್ರೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಜಿ ಐ ಅಬ್ದುಲ್ ಖಾದರ್ ನನ್ನ ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಅ,ಕ್ರ 85/2021 ಕಲಂ: 304(A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ದ.ಕ ಮಹಿಳಾ ಪೊಲೀಸ್ ಠಾಣೆ : ದಿನಾಂಕ 05.11.2021 ರಂದು ದ.ಕ ಮಹಿಳಾ ಪೊಲೀಸ್ ಠಾಣಾ ಅ.ಕ್ರ 38/2021 ಕಲಂ: ,376 ಐಪಿಸಿ ಮತ್ತು ಕಲಂ:4 ಪೋಕ್ಸೋ ಕಾಯಿದೆ-2012 ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ 05.11.2021 ರಂದು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ,ಕ್ರ 135/2021 ಕಲಂ 376(ಡಿ) 506,ಜೊತೆಗೆ34 ಐಪಿಸಿ ಮತ್ತು ಕಲಂ 4,5(ಜಿ) ಮತ್ತು 6 ಪೋಕ್ಸೋ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬೆಳ್ಳಾರೆ ಪೊಲೀಸ್ ಠಾಣೆ : ದಿನಾಂಕ 05.11.2021 ರಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ 53/2021 ಕಲಂ 505(2) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಉಪ್ಪಿನಂಗಡಿ ಪೊಲೀಸ್ ಠಾಣೆ : ದಿನಾಂಕ: 05-11-2021 ರಂದು ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ 128/2021 ಕಲಂ 447 354 504 323 506 509 ಜೊತೆಗೆ 34 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುಂಜಾಲಕಟ್ಟೆ ಪೊಲೀಸ್ ಠಾಣೆ : ದಿನಾಂಕ: 05.11.2021 ರಂದು ಪುಂಜಾಲಕಟ್ಟೆ ಠಾಣಾ ಅ.ಕ್ರ 79/2021 ಕಲಂ: 341,354 (ಡಿ) 506, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ದ.ಕ ಮಹಿಳಾ ಪೊಲೀಸ್ ಠಾಣೆ : ದಿನಾಂಕ: 05.11.2021 ದ.ಕ ಮಹಿಳಾ ಪೊಲೀಸ್ ಠಾಣಾ ಅ.ಕ್ರ 37/2021 ಕಲಂ: ,509 ಐಪಿಸಿ ಮತ್ತು ಕಲಂ:67(A) IT Act -2008 ಯಂತೆ ಪ್ರಕರಣ ದಾಖಲಾಗಿರುತ್ತದೆ.