ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಅಶ್ವಥ್ ಕುಮಾರ್ ಕೆ ಬಿ, ಪ್ರಾಯ 31 ರ್ಷ, ತಂದೆ: ಬಾಳಪ್ಪ ಪೂಜಾರಿ, ವಾಸ:  ಕೂಡು ರಸ್ತೆ , ನರಿಮೊಗರುಗ್ರಾಮ ಮತ್ತು ಅಂಚೆ, ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 08-04-2021 ರಂದು ಆರೋಪಿ ಮೋಟಾರ್ ಸೈಕಲ್ ಸವಾರ ಚರಣ್ ಬಿ ಎಂಬವರು KA-05-KB-6603 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲ್ನ್ನು ಪುತ್ತೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಕೂಡುರಸ್ತೆ ಕಡೆಯಿಂದ ದರ್ಬೆ ಕಡೆಗೆ  ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕಿನ ಪುತ್ತೂರು ಕಸ್ಬಾ ಗ್ರಾಮದ ದರ್ಬೆ ಎಂಬಲ್ಲಿ ರಾಜೇಶ್ ಪ್ರೆಸ್ನ ಮುಂಬದಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಕೂಡುರಸ್ತೆ ಕಡೆಯಿಂದ ದರ್ಬೆ ಕಡೆಗೆ  ಹೇಮಲ್ (7ವರ್ಷ) ಎಂಬವರನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ಚಲಾಯಿಸಿಕೊಂಡು ಹೋಗುತ್ತಿದ್ದ KA-21-Y-3069  ನೇ ನೋಂದಣಿ ನಂಬ್ರದ ಮೋಟಾರ್ ಸೈಕಲ್ಗೆ  ಅಪಘಾತವಾಗಿ, ಪಿರ್ಯಾದುದಾರರು ಮತ್ತು ಹೇಮಲ್ ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಹೇಮಲ್ಗೆ ತಲೆ, ಕೈ-ಕಾಲಿಗೆ ಗಾಯ ಮತ್ತು ಪಿರ್ಯಾದುದಾರರಿಗೆ ಎಡ ಹೆಬ್ಬೆರಳು, ಎಡಭುಜ, ಬಲಕೈ, ಎಡ, ಬಲ ಕಾಲಿಗೆ ಗಾಯವಾಗಿ ಪುತ್ತೂರು ಹಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  65/2021 ಕಲಂ: 279, 337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 1

 

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಗುಣ ಟಿ ಪ್ರಾಯ 29 ವರ್ಷ, ತಂದೆ: ತಂಗವೇಲು, ವಾಸ: ಸಿ.ಆರ್.ಸಿ ಕಾಲನಿ, ಪೆರ್ಲಂಪಾಡಿ, ಕೊಳ್ತಿಗೆ ಗ್ರಾಮ, ಪುತ್ತೂರು ತಾಲೂಕು, ದ.ಕ. ರವರು ಬೆಳ್ಳಾರೆ ಗ್ರಾಮದ ಬೆಳ್ಳಾರೆ ಪೇಟೆಯಲ್ಲಿ ಶ್ರೀ ಮೊಬೈಲ್‌ ಎಂಬ ಹೆಸರಿನ ಮೊಬೈಲ್‌ ರಿಪೇರಿ ಅಂಗಡಿಯ ಮಾಲೀಕರಾಗಿದ್ದು, ದಿನಾಂಕ 08.04.2021 ರಂದು ರಂದು ರಾತ್ರಿ 8-00 ಗಂಟೆಗೆ ಅಂಗಡಿಗೆ ಬೀಗ ಹಾಕಿ ಭದ್ರಪಡಿಸಿ ಮನೆ ಕಡೆಗೆ ಹೋದವರು ವಾಪಾಸ್‌ ದಿನಾಂಕ 09.04.2021 ರಂದು ಬೆಳಿಗ್ಗೆ 09-30 ಗಂಟೆಗೆ ತನ್ನ ಅಂಗಡಿಗೆ ಬಂದಾಗ ಅಂಗಡಿಯ ಎದುರು ಬಾಗಿಲು ತೆರೆದಿಟ್ಟಿರುವುದು ಕಂಡು ಒಳಪ್ರವೇಶಿಸಿ ಪರಿಶೀಲಿಸಲಾಗಿ ಅಂಗಡಿಯ ಒಳಗಡೆ ಇರಿಸಿದ್ದ ಗ್ರಾಹಕರು ರೀಪೇರಿಗೆಂದು ತಂದು ಕೊಟ್ಟಿದ್ದ ವಿವಿಧ ಕಂಪೆನಿಯ ಹಳೆಯ 15 ಮೋಬೈಲ್‌ ಪೋನ್‌ ಸೆಟ್‌ ಹಾಗೂ ಅಂಗಡಿಯ ಡ್ರಾವರ್‌ ನಲ್ಲಿ ಇರಿಸಿದ್ದ ನಗದು ಹಣ ರೂ 15,000 ಕಳವು ಆಗಿರುವುದು ಕಂಡು ಬಂದಿದ್ದು, ಕಳವಾದ ಮೊಬೈಲ್ ಪೋನ್ ಸೆಟ್ ಗಳ ಅಂದಾಜು ಮೌಲ್ಯ ರೂ 20,000/- ಹಾಗೂ ನಗದು ಹಣ ರೂ 15,000/- ಸೇರಿ ಒಟ್ಟು ಮೌಲ್ಯ ರೂ 35,000/- ಆಗಬಹುದು ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. ಅ.ಕ್ರ 16/2021 ಕಲಂ 457, 380 IPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 3

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ವೆಂಕಟರಮಣ ಗೌಡ ತಂದೆ: ಬೆಳ್ಳಿಯಪ್ಪ ಗೌಡ ವಾಸ: ದೇರ್ಲ ಕೆಯ್ಯೂರು ಗ್ರಾಮ ಪುತ್ತೂರು ರವರು ದಿನಾಂಕ 08.04.2021 ರಂದು ಸಂಸಾರ ಸಮೇತರಾಗಿ ಸುಳ್ಯ ತಾಲೂಕಿನ ಕನಕ ಮಜಲಿನ ತರವಾಡು ಮನೆಗೆ ಭೂತದ ಕಾರ್ಯಕ್ರಮಕ್ಕೆ ಹೋಗಿದ್ದು, ಫಿರ್ಯಾದಿದಾರರ ಮಗಳಾದ ಮೇಘನಾ ಮದ್ಯಾಹ್ನವೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಫಿರ್ಯಾದಿದಾರರ ಮನೆಗೆ ಬಂದಿದ್ದು,  ಮಗ ಶಿವರಾಜನು ಕೂಡಾ ರಾತ್ರಿ ಕನಕಮಜಲಿನಿಂದ ಕೆಯ್ಯೂರಿನ ದೇರ್ಲದಲ್ಲಿರುವ  ಫಿರ್ಯಾದಿದಾರರ ಮನೆಗೆ ಬಂದು ಆತನು ಮಲಗುವ ಕೋಣೆಯಲ್ಲಿ ರಾತ್ರಿ 12-00 ಗಂಟೆಗೆ ಬಂದು ಮಲಗಿದವನು ದಿನಾಂಕ 9-4-2021 ರಂದು ಬೆಳಿಗ್ಗೆ 6-00 ಗಂಟೆಯ ಮಧ್ಯೆ ಯಾವುದೋ ವಿಚಾರದಲ್ಲಿ ಮನಸ್ಸಿನಲ್ಲಿ ಬೇಸರಗೊಂಡು ಮೊಬೈಲ್‌ ಹಾಗೂ ಹಣದ ಪರ್ಸನ್ನು ಬಚ್ಚಲು ಮನೆಯ ಒಲೆಯಲ್ಲಿ ಹಾಕಿ ನೈಲಾನ್‌ ಹಗ್ಗವನ್ನು ಶಿವ ರಾಜನು ಮಲಗಿದ ಕೋಣೆಯ ಅಡ್ಡಕ್ಕೆ ಕಟ್ಟಿ ಇನ್ನೊಂದು ತುದಿಯನ್ನು ಕುಣಿಕೆಯನ್ನಾಗಿ ಮಾಡಿ ಕುತ್ತಿಗೆಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಯುಡಿಆರ್  ನಂಬ್ರ  14/2021 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀ ಮತಿ ಲಕ್ಷ್ಮೀ (60) ಗಂಡ: ದಿ|| ಬಾಬು ನಳೀಕೆ ವಾಸ:ಮಣಿಮಜಲು ಮನೆ, ಗೋಳ್ತಮಜಲು ಗ್ರಾಮ ಬಂಟ್ವಾಳ ತಾಲೂಕು ರವರು ಕೂಲಿ ಕೆಲಸ ಮಾಡಿಕೊಂಡಿದ್ದು ಪಿರ್ಯಾದುದಾರರಿಗೆ ಎರಡು ಗಂಡು ಮತ್ತು 3 ಜನ ಹೆಣ್ಣು ಮಕ್ಕಳಿದ್ದು ಹೆಣ್ಣು ಮಕ್ಕಳಿಗೆ ಮದುವೆಯಾಗಿ ಗಂಡನ ಮನೆಯಲ್ಲಿರುತ್ತಾರೆ. ಪಿರ್ಯಾದುದಾರರ ಮಗನಿಗೆ ಮದುವೆಯಾಗಿದ್ದು ಎರಡು ಜನ ಮಕ್ಕಳಿರುತ್ತಾರೆ. ಪಿರ್ಯಾದುದಾರರ ಮಗನು ದಿನಾಂಕ: 08.04.2021 ರಂದು ತನ್ನ ಪತ್ನಿಯ ಮನೆಗೆ ಹೋಗಿದ್ದು ಪಿರ್ಯಾದುದಾರರು ಎಂದಿನಂತೆ ಕೆಲಸಕ್ಕೆ ಹೋಗಿದ್ದು ಸಂಜೆ 6-00 ಗಂಟೆಗೆ ಮನೆಗೆ ಬಂದು ಬಾಗಿಲನ್ನು ತೆರೆದಾಗ ತನ್ನ ಮಗನಾದ ಕೇಶವನು ಕೊಣೆಯ ಎದುರಲ್ಲೆ ಮನೆಯ ಅಡ್ಡಕ್ಕೆ ಲುಂಗಿಯಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಪಿರ್ಯಾದುದಾರರ ಮಗನು ಯಾವುದೋ ಕಾರಣಕ್ಕೊ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಈ ಬಗ್ಗೆ ಬಂಟ್ವಾಳ ನಗರ ಠಾಣಾ ಯುಡಿಆರ್ ನಂ: 13/2021 ಕಲಂ: 174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವಿಟ್ಲ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಅನಿತಾ (40) ಗಂಡ:ರಘು ಪೂಜಾರಿ ವಾಸ:ಕರೈ ಕುಡ್ತಮುಗೇರು ಮನೆ ಕೊಳ್ನಾಡು  ಗ್ರಾಮ ಬಂಟ್ವಾಳ ತಾಲೂಕು ರವರ ಗಂಡ ರಘು ಪೂಜಾರಿ(55) ರವರು ಮಂಗಳೂರಿನ ಪಂಪ್‌ವೇಲ್‌ನಲ್ಲಿ ಬಸ್ಸುಗಳನ್ನು ತೊಳೆಯುವ ಕೆಲಸವನ್ನು ಮಾಡಿಕೊಂಡಿದ್ದವರು ದಿನಾಂಕ:09.04.2021ರಂದು ಕೈ ನೋವು ಎಂದು ಕೆಲಸಕ್ಕೆ ಹೋಗದೇ ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕರೈಕುಡ್ತಮುಗೇರು ಎಂಬಲ್ಲಿರುವ ಮನೆಯ ಬಳಿ ಇರುವ ತಮ್ಮ ಅಡಿಕೆ ತೋಟದಲ್ಲಿ  ಕೆಲಸ ಮಾಡಿಕೊಂಡಿದ್ದವರು ಸಮಯ ಸುಮಾರು 12:30 ಗಂಟೆಯಿಂದ ಸಂಜೆ 4:45 ಗಂಟೆಯ ಮದ್ಯದ ಅವದಿಯಲ್ಲಿ ತೋಟದ ಬದಿಯಲ್ಲಿರುವ ಬಾವಿಯ ಒಳಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಉಸಿರುಗಟ್ಟಿ ಮೃತಪಟ್ಟಿರುವುದಾಗಿರಬಹುದು ಈ ಬಗ್ಗೆ  ವಿಟ್ಲ  ಠಾಣಾ  ಯು ಡಿ ಅರ್ ನಂಬ್ರ 12/2021  ಕಲಂ 174  ಸಿ ಅರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

ಇತ್ತೀಚಿನ ನವೀಕರಣ​ : 10-04-2021 10:53 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080