ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ: 1

 

ವಿಟ್ಲ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಉಮ್ಮರ್ ಫಾರೂಕ್ (46)             ತಂದೆ: ದಿ. ಖಾದ್ರಿ ಬ್ಯಾರಿ  ವಾಸ: 3-126 ಪೆರ್ನಮುಗೇರು ಮನೆ, ಕರೋಪಾಡಿ ಗ್ರಾಮ      ಬಂಟ್ವಾಳ ತಾಲೂಕು ಎಂಬವರು KA-19-EA-1274 ನೇ ಮೋಟಾರು ಸೈಕಲ್ ನ ಮಾಲಕರಾಗಿದ್ದು, ಸದ್ರಿ ಮೋಟಾರು ಸೈಕಲ್‌ನ್ನು ಬಂಟ್ವಾಳ ತಾಲೂಕು ಕರೋಪಾಡ್ಡಿ ಗ್ರಾಮದ ಪೆರ್ನ ಮುಗೇರು ಎಂಬಲ್ಲಿರುವ ತನ್ನ ಮನೆಯ ಮುಂದೆ ಹಾಕಲಾದ ಸಿಟ್‌ಒಟ್‌ನಲ್ಲಿ ನಿಲ್ಲಿಸಿಕೊಂಡಿದ್ದು, ದಿನಾಂಕ: 05/08/2021 ರಂದು ರಾತ್ರಿ 11.45 ಗಂಟೆಯಿಂದ ದಿನಾಂಕ:06/08/2021 ರ ಬೆಳಿಗ್ಗೆ ಸುಮಾರು 05.30 ಗಂಟೆ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಕಳತನ ಮಾಡಿಕೊಂಡು ಹೋಗಿದ್ದು ನಂತರ ಪಿರ್ಯಾದಿದಾರರು ಕರೋಪಾಡಿ ಗ್ರಾಮ ಆನೆಕಲ್ಲು ಬೇಡ ಗುಡ್ಡೆ, ಸುಂಕದಕಟ್ಟೆ ಮುಂತಾದ ಕಡೆಗಳಲ್ಲಿ ಹುಡುಕಾಡಿದ್ದು, ಈ ವರೆಗೂ ಪತ್ತೆಯಾಗದೇ ಇದ್ದು ಸದ್ರಿ KA-19-EA-1274ನೇ ಮೋಟಾರ್‌ ಸೈಕಲ್‌ನ ಅಂದಾಜು ಮೌಲ್ಯ 10.000/- ರೂ ಆಗಬಹುದು.  ಈ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 108/2021 ಕಲಂ:379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ  ಸದಾನಂದ ಗೌಡ ಪ್ರಾಯ 43 ವರ್ಷ, ತಂದೆ: ಬೊಳಿಯ ಗೌಡ ಯಾನೆ ಬೆಳಿಯಪ್ಪ ಗೌಡ ವಾಸ: ಕಟ್ಟತ್ತಾರು ಮನೆ, ಕಾಣಿಯೂರು ಗ್ರಾಮ, ಕಡಬ ತಾಲೂಕು, ಎಂಬವರ ದೂರಿನಂತೆ ಕಡಬ ತಾಲೂಕು ಸವಣೂರು ಗ್ರಾಮದ ಮಾಂತೂರು ಜನತಾ ಕಾಲೋನಿ ಎಂಬಲ್ಲಿಯ ನಿವಾಸಿ ರಾಮಚಂದ್ರ ಪ್ರಾಯ 40 ವರ್ಷ, ತಂದೆ: ಬೊಳಿಯ ಗೌಡ ಯಾನೆ ಬೆಳಿಯಪ್ಪ ಗೌಡ ರವರು ಸವಣೂರಿನ ಹೋಟೆಲೊಂದರಲ್ಲಿ ಕ್ಲೀನರ್‌ ಕೆಲಸ ಮಾಡಿಕೊಂಡಿದ್ದು, ಬಾಲ್ಯದಿಂದಲೇ ಬುದ್ದಿಮಾಂದ್ಯನಾಗಿದ್ದು, ಯಾರೊಂದಿಗೂ ಹೆಚ್ಚು ಬೆರೆಯದೇ ಸುಮಾರು ಎಂಟು ವರ್ಷಗಳ ಹಿಂದೆ ಕಲ್ಲುಗುಡ್ಡೆ ನಿವಾಸಿ ವಾರಿಜ ಎಂಬವರನ್ನು ಮದುವೆಯಾಗಿ ಬಳಿಕ ಅವರಿಬ್ಬರ ದಾಂಪತ್ಯ ಜೀವನ ಸರಿ ಬಾರದೇ ಆತನ ಪತ್ನಿ ವಾರಿಜಳು ಸುಮಾರು 4 ವರ್ಷದ ಹಿಂದೆ ಬಿಟ್ಟು ತವರು ಮನೆಯಲ್ಲಿ ತನ್ನ ಮಗುವಿನೊಂದಿಗೆ ವಾಸವಿದ್ದು, ಇದೇ ವಿಚಾರದಲ್ಲಿ ರಾಮಚಂದ್ರನು ಕೊರಗಿಕೊಂಡಿದ್ದು, ದಿನಾಂಕ 10.08.2021 ರಂದು ಬೆಳಿಗ್ಗೆ 8-00 ಗಂಟೆಯಿಂದ ದಿನಾಂಕ 13.08.2021 ರಂದು 16-30 ಗಂಟೆಯ ಮಧ್ಯೆ ಅವಧಿಯಲ್ಲಿ ಸವಣೂರು ಗ್ರಾಮದ ಸವಣೂರು ಸಮೀಪದ ಹಳೆಯ ಬಾವಿಗೆ ಹಾರಿ ಅಥವಾ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್‌ ಠಾಣಾ ಯುಡಿಆರ್ ನಂ 19/2021ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 14-08-2021 11:38 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080