ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಬೀಬ್ ರಹಿಮಾನ್ ಪ್ರಾಯ:20 ವರ್ಷ ವಾಸ: ಕಟ್ಟೇಜೆರು ಮನೆ ಕೆಯ್ಯೂರು ಗ್ರಾಮ ಎಂಬವರ ದೂರಿನಂತೆ ದಿನಾಂಕ 13.10.2021 ರಂದು ರಾತ್ರಿ  ಓಲೆಮುಂಡೋವಿನಿಂದ  ಕುಂಬ್ರಕ್ಕೆ ಹೋಗುವರೇ  ಕಟ್ಟೆಜೀರಿನ ತೌಸೀಫ್ ಎಂಬವರು ಸವಾರಿ ಮಾಡಿಕೊಂಡಿದ್ದ KA 21 Q 9115  ನೇ  ಮೋಟಾರ್ ಸೈಕಲಿನಲ್ಲಿ  ಹಿಂಬದಿ ಸವಾರನಾಗಿ ಕುಳಿತುಕೊಂಡು ಓಲೆಮುಂಡೋವಿನಿಂದ ಹೊರಟು ರಾತ್ರಿ ಸುಮಾರು 7.40 ಗಂಟೆಗೆ ಪುತ್ತೂರು ತಾಲೂಕು ಕೆದಂಬಾಡಿ ಗ್ರಾಮದ ತಿಂಗಳಾಡಿ ಎಂಬಲ್ಲಿಗೆ ತಲುಪಿದಾಗ ಕುಂಬ್ರ-ಬೆಳ್ಳಾರೆ  ರಸ್ತೆಯಲ್ಲಿ  ಕುಂಬ್ರ ಕಡೆಯಿಂದ ಬೆಳ್ಳಾರೆ ಕಡೆಗೆ KA21 B 9092  ನಂಬರ್‌ ಆಟೋರಿಕ್ಷಾವೊಂದನ್ನು ಅದರ ಚಾಲಕನು  ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ತೌಸೀಫ್‌ರವರು ತಿಂಗಳಾಡಿ ಕಡೆಯಿಂದ ಕುಂಬ್ರ ಕಡೆಗೆ ಚಲಾಯಿಸುತ್ತಿದ್ದ KA 21 Q 9115ನೇ ಮೋಟಾರ್ ಸೈಕಲಿಗೆ ಢಿಕ್ಕಿಯನ್ನುಂಟು ಮಾಡಿದ ಪರಿಣಾಮ ತೌಸೀಫ್‌ರವರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್  ರಸ್ತೆಗೆ  ಮಗುಚಿ ಬಿದ್ದು, ಫಿರ್ಯಾದಿದಾರರ  ಮುಖದಲ್ಲಿ ಬಲ ಕಣ್ಣಿನ ಬಳಿ,  ಬಲ ಕೈಯ ತೋಳಿನ  ಬಳಿ, ಬಲ ಕಾಲಿನ ಮೊಣ ಗಂಟಿನ ಬಳಿ ರಕ್ತ ಗಾಯ ಉಂಟಾಗಿದ್ದು. ಅದೇ ರೀತಿ ಮೋಟಾರ್ ಸೈಕಲನ್ನು ಚಲಾಯಿಸುತ್ತಿದ್ದ ತೌಸೀಫ್‌ನ ಬಲ ಕಾಲಿನ ಮೊಣ ಗಂಟು, ಬಲ ಕಾಲಿನ ಪಾದ, ಮುಖ ಮತ್ತಿತರ ಕಡೆಗಳಲ್ಲಿ  ರಕ್ತಗಾಯ ಆಗಿರುತ್ತದೆ. KA 21 Q 9115ನೇ  ಮೋಟಾರ್ ಸೈಕಲಿಗೆ ಢಿಕ್ಕಿಯನ್ನುಂಟು ಮಾಡಿದ ಆಟೋರಿಕ್ಷಾದ ನಂಬ್ರ KA21 B 9092  ಆಗಿದ್ದು, ಅದರ ಚಾಲಕನ ಹೆಸರು ಪ್ರಶಾಂತ ಎಂಬುದಾಗಿದ್ದು, ಸ್ಥಳದಲ್ಲಿದ್ದ ಸಾರ್ವಜನಿಕರು ಫಿರ್ಯಾದಿದಾರರು ಮತ್ತು ತೌಸೀಫ್‌ನನ್ನು ಪುತ್ತೂರು ಸಿಟಿ ಆಸ್ಪತ್ರೆಗೆ  ಕರೆದುಕೊಂಡು ಹೋದಲ್ಲಿ ಅಲ್ಲಿಯ ವೈದ್ಯರು ಫಿರ್ಯಾದಿದಾರರಿಗೆ ಹೊರ ರೋಗಿಯಾಗಿ ಚಿಕಿತ್ಸೆ ನೀಡಿದ್ದು ತೌಸೀಫ್‌ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕಳುಹಿಸಿ ಕೊಟ್ಟಿದ್ದು,.ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಅ.ಕ್ರ 86/21 ಕಲಂ 279 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸುದೇಶ್‌ ಪಿ, ಪ್ರಾಯ 25 ವರ್ಷ, ತಂದೆ: ಜಗದೀಶ,  ವಾಸ: ಹೊಸಮನೆ, ಅಂಬ್ಲಮೊಗರು ಗ್ರಾಮ, ಮಂಗಳೂರು ಎಂಬವರ ದೂರಿನಂತೆ ದಿನಾಂಕ 13-10-2021 ರಂದು 14-45 ಗಂಟೆಗೆ ಆರೋಪಿ ಸ್ಕೂಟರ್ ಸವಾರ ಹಾಫಿಲ್ ಎಂಬವರು   KA-21-EA-5308 ನೇ ನೋಂದಣಿ ನಂಬ್ರದ ಸ್ಕೂಟರನ್ನು ಚೇತನಾ ಆಸ್ಪತ್ರೆ-ಶ್ರೀಧರ ಭಟ್ ಜಂಕ್ಷನ್ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆ ಕಡೆಯಿಂದ ಶ್ರೀಧರ ಭಟ್ ಜಂಕ್ಷನ್ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸ್ಬಾ ಗ್ರಾಮದ ಪುತ್ತೂರು ಎಸ್ಬಿಐ ಬ್ಯಾಂಕ್ನ ಎದುರು ಯಾವುದೇ ಸೂಚನೆಯನ್ನು ನೀಡದೇ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಎಸ್ಬಿಐ ಬ್ಯಾಂಕ್ ಕಡೆಗೆ ಒಮ್ಮೆಲೇ ತಿರುಗಿಸಿ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಚೇತನಾ ಆಸ್ಪತ್ರೆ  ಕಡೆಯಿಂದ ಶ್ರೀಧರ ಭಟ್ ಜಂಕ್ಷನ್ ಕಡೆಗೆ  ಚಲಾಯಿಸಿಕೊಂಡು ಹೋಗುತ್ತಿದ್ದ KA-21-EB-3345 ನೇ ನೋಂದಣಿ ನಂಬ್ರದ ಸ್ಕೂಟರಿಗೆ ಅಪಘಾತವಾಗಿ ಪಿರ್ಯಾದುದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು,  ಬಲ ಕಾಲಿನ ಪಾದಕ್ಕೆ ರಕ್ತಗಾಯ, ಎಡಕೈ ಅಂಗೈಗೆ ರಕ್ತಗಾಯ, ಬಲಕಾಲಿನ ಮೊಣಗಂಟಿಗೆ ಮತ್ತು ಎಡಕೈಯ ಮೊಣಕೈಗೆ ತರಚಿದ ಗಾಯವಾಗಿ ಚಿಕಿತ್ಸೆ ಬಗ್ಗೆ ಪುತ್ತೂರು ಚೇತನಾ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  126/2021 ಕಲಂ: 279, 337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ 14.10.2021 ರಂದು ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಅ.ಕ್ರ 87/21 ಕಲಂ 323,506,504 498(ಎ) ಐಪಿಸಿ   ಕಲಂ:3,4ವರದಕ್ಷಿಣೆ ಕಾಯ್ದೆ1961 ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 2

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ನೇತ್ರಾವತಿ, ತಂದೆ: ಅಂಗಾರ ಮನೆ: ಶಾಂತಿನಗರ, ಮುರುಳ್ಯಗ್ರಾಮ ಸುಳ್ಯ ತಾಲೂಕು ಎಂಬವರ ದೂರಿನಂತೆ ಸುಳ್ಯ ತಾಲೂಕು ಮುರುಳ್ಯ ಗ್ರಾಮದ ಶಾಂತಿನಗರ ಎಂಬಲ್ಲಿ ಅಂಗಾರ ಎಂಬವರ ಮನೆಯಲ್ಲಿ ವಾಸವಿದ್ದ  ಪ್ರದೀಪ, ಪ್ರಾಯ 21ವರ್ಷ, ತಂದೆ: ದಿ||ಶೀನ, ವಾಸ: ಬಂಬಿಲ ಮನೆ, ಪಾಲ್ತಾಡು ಗ್ರಾಮ, ಕಡಬ ತಾಲೂಕು ಎಂಬವರು ದಿನಾಂಕ: 13-10-2021 ರಂದು ಸಂಜೆ 4.00ಗಂಟೆಗೆ ವಾಹನ ತೊಳೆಯುವ ಕೆಲಸಕ್ಕೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೋದವರು ದಿನಾಂಕ 14-10-2021ರಂದು 10.00ಗಂಟೆಗೆ ಭಾಗಿರತಿ ಮುರುಳ್ಯ ಎಂಬವರ ಬಾಬ್ತು ಜಮೀನಿನಲ್ಲಿ ಇರುವ ಗೇರು ಮರದ ಕೊಂಬೆಗೆ ಚೂಡಿದಾರದ ಶಾಲಿನಿಂದ ನೇಣು ಬಿಗಿದು ಮೃತಪಟ್ಟು ಪತ್ತೆಯಾಗಿದ್ದು. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ ಯು.ಡಿ.ಆರ್ ಕ್ರಮಾಂಕ:21/2021 ಕಾನೂನಿನ ಕಲಂ:ಕಲಂ 174  ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ನಾರಾಯಣ ಪೂಜಾರಿ, ಪ್ರಾಯ: 56 ವರ್ಷ, ತಂದೆ: ದಿ/ ಬೊಗ್ರ ಪೂಜಾರಿ , ವಾಸ: ಕುಂಡಡ್ಕ  ಮನೆ, ಪುತ್ತಿ ಲ  ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದಿದಾರರ ಹೆಂಡತಿ ಮೃತೆ ಶ್ರೀಮತಿ ಪ್ರೇಮ ಬಿ (48 ವರ್ಷ) ಎಂಬವರು ದಿನಾಂಕ: 14.10.2021 ರಂದು ಬೆಳಿಗ್ಗೆ 09.30 ತನ್ನ ಮನೆಯಾದ ಬೆಳ್ತಂಗಡಿ ತಾಲೂಕು ಪುತ್ತಿಲ ಗ್ರಾಮದ ಕುಂಡಡ್ಕ ಎಂಬಲ್ಲಿ ತನ್ನ ಅಡಿಕೆ ತೋಟದಲ್ಲಿ ಅಡಿಕೆ  ಹೆಕ್ಕಲು ಹೋದವರು ವಾಪಾಸು ಸಮಯ ಸುಮಾರು 11.30 ಗಂಟೆಯಾದರೂ ಮನೆಗೆ ಬಾರದೇ ಇದ್ದುದರಿಂದ ಪಿರ್ಯಾದಿದಾರರು ತೋಟಕ್ಕೆ ಹೋಗಿ ನೋಡಲಾಗಿ ಹೆಂಡತಿ ತೋಟದಲ್ಲಿ ಕಾಣದೇ ಇದ್ದು ಸುತ್ತಮುತ್ತ ಹುಡುಕಲಾಗಿ ಎಲ್ಲಿಯೂ ಕಾಣದೇ ಇದ್ದುದರಿಂದ ಬಳಿಕ ತೋಟದ ಕೆರೆಯ ಬಳಿ ಕಾಲು ಜಾರಿದ ಗುರುತು ನೋಡಿ ಪಿರ್ಯಾದಿದಾರರು ಅಣ್ಣನಾದ ರಾಮಪ್ಪ ಪೂಜಾರಿ ಎಂಬವರಿಗೆ ಮಾಹಿತಿ ನೀಡಿ ಅವರ ಸಹಾಯದಿಂದ ಕೆರೆಗೆ ಇಳಿದು ನೋಡಲಾಗಿ ಮೃತೆ ಶ್ರೀಮತಿ ಪ್ರೇಮರವರು ಕೆರೆ ನೀರಿನಲ್ಲಿ ದೊರೆತಿದ್ದು, ಕೂಡಲೇ ನೀರಿನಿಂದ ಹೊರ ತೆಗೆದು ಬದುಕಿರಬಹುದೆಂದು ಭಾವಿಸಿ ಆರೈಕೆ ಮಾಡಿ ಅಂಬುಲೆನ್ಸ್ ನಲ್ಲಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದು, ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ಯುಡಿಆರ್‌ ಸಂಖ್ಯೆ 14/2021ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 15-10-2021 10:52 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080