ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ವಾಸು ನಾಯ್ಕ ಪ್ರಾಯ 55 ವರ್ಷ ತಂದೆ: ದಿ| ಅಂಗಾರ ನಾಯ್ಕ ವಾಸ: ಕುಕ್ಕೇಂದ್ರ ಮನೆ, ಮಾಚಾರು, ಉಜಿರೆ ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ: 16-04-2021 ರಂದು ಪಿರ್ಯಾದಿದಾರರು ಕೆಎ 18 ಎ 1852 ನೇ ಪಿಕ್ ಆಫ್ ವಾಹನದಲ್ಲಿ ಸಹ ಪ್ರಯಾಣಿಕನಾಗಿ ಕುಳಿತುಕೊಂಡು ಪಿಕ್ ಆಫ್ ವಾಹನವನ್ನು ಸಂತೋಷರವರು ಚಲಾಯಿಸಿಕೊಂಡು ಉಜಿರೆ ಕಡೆಯಿಂದ ಸೋಮಂತಡ್ಕ ಕಡೆಗೆ ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ 10.15 ಗಂಟೆಗೆ ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ ಮುಂಡಾಜೆ ಶೀಟ್ ಬಳಿ ತಲುಪುತ್ತಿದ್ದಂತೆ ವಿರುದ್ದ ದಿಕ್ಕಿನಿಂದ ಅಂದರೆ ಸೋಮಂತಡ್ಕ ಕಡೆಯಿಂದ ಉಜಿರೆ ಕಡೆಗೆ ಕೆಎ 20 ವಿ 6319 ನೇ ಮೋಟಾರು ಸೈಕಲ್ ನ್ನು ಅದರ ಸವಾರ, ಸಹ ಸವಾರನನ್ನು ಕುಳ್ಳಿರಿಸಿಕೊಂಡು ದುಡುಕುತನದಿಂದ ರಸ್ತೆಯ ಬಲಬದಿಗೆ ಸವಾರಿ ಮಾಡಿಕೊಂಡು ಬಂದು ಪಿಕ್ ಆಫ್ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರ ಮತ್ತು ಸಹ ಸವಾರ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಮೋಟಾರು ಸೈಕಲ್ ಸವಾರ ಸುದೀಫ್ ರವರು ತಲೆಗೆ, ಮೈ ಕೈಗೆ ತೀವ್ರ ರಕ್ತಗಾಯಗೊಂಡು ಸ್ಥಳದಲ್ಲಿ ಮೃತಪಟ್ಟಿದ್ದು ಸಹ ಸವಾರ ಪ್ರಶಾಂತ ರವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಕಡೆಯ ಆಸ್ಪತ್ರೆಗೆ ಕೊಂಡುಹೋಗಿರುತ್ತಾರೆ.ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 36/2021, ಕಲಂ; 279,338,  304(ಎ) ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಫಾತಿಮತ್‌ ಫರ್ಜಾನಾ, ಪ್ರಾಯ 15 ರ್ಷ, ತಂದೆ: ಎಸ್‌ ಇಬ್ರಾಹಿಂ, ವಾಸ:  ಕೋನಾಡಿ ಮನೆ, ಹಿರೇಬಂಡಾಡಿ  ಅಂಚೆ ಮತ್ತು ಗ್ರಾಮ,  ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 16-04-2021 ರಂದು 08-30 ಗಂಟೆಗೆ ಆರೋಪಿ ಮೋಟಾರ್‌ ಸೈಕಲ್‌ ಸವಾರ ನಿಶಾಂತ್‌ ಎಂಬವರು KA-02-W-69  ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲ್‌ನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ನೆಲ್ಯಾಡಿ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಗಾಂಧಿಪಾರ್ಕ್‌ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಹೆದ್ದಾರಿಯ ತೀರಾ ಬದಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರಾದ ಫಾತಿಮತ್‌ ಫರ್ಜಾನಾ ( 15 ವರ್ಷ) ಎಂಬವರು ಮರಿಯಮ್‌ ಅಫೀಜಾ ರವರೊಂದಿಗೆ ಹೆದ್ದಾರಿ ದಾಟಲು ಆರಂಭಿಸಿದಾಗ ಮೋಟಾರ್‌ ಸೈಕಲ್‌ ಪಿರ್ಯಾದುದಾರರಿಗೆ ಅಪಘಾತವಾಗಿ ಪಿರ್ಯಾದುದಾರರು ಮತ್ತು ಮೋಟಾರ್‌ ಸೈಕಲ್‌ ಸವಾರ ರಸ್ತೆಗೆ ಬಿದ್ದು, ಪಿರ್ಯಾದುದಾರರಿಗೆ ಬಲಕೋಲು ಕಾಲಿಗೆ ಗುದ್ದಿ ತರಚಿದ ಗಾಯ, ಎಡಭುಜಕ್ಕೆ ಗುದ್ದಿದ ಒಳನೋವು, ತಲೆಯ ಎಡ ಹಿಂಬದಿ ತೂತು ಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಪುತ್ತೂರು ಸಿಟಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  73/2021 ಕಲಂ: 279, 337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಜೇವನ್‌ ಬಿ.ಕೆ, ಪ್ರಾಯ 21 ರ್ಷ, ತಂದೆ: ಬಾಲಕೃಷ್ಣ ಗೌಡ, ವಾಸ:  ಕಟ್ಟೆ ಮನೆ, ಬಲ್ನಾಡು ಗ್ರಾಮ,  ಪುತ್ತೂರು ಎಂಬವರ ದೂರಿನಂತೆ ದಿನಾಂಕ 16-04-2021 ರಂದು 10-25 ಗಂಟೆಗೆ ಆರೋಪಿ ಮೋಟಾರ್‌ ಸೈಕಲ್‌ ಸವಾರ ಆರ್‌ ಮಣಿ ಮುರುಗನ್‌ ಎಂಬವರು KA-70-H-2220 ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲ್‌ ನಲ್ಲಿ ಶುಭ ಮುರುಗನ್‌ ಎಂಬವರನ್ನು ಸಹಸವಾರೆಯನ್ನಾಗಿ ಕುಳ್ಳಿರಿಸಿಕೊಂಡು ಉರ್ಲಾಂಡಿ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಉರ್ಲಾಂಡಿ ಎಂಬಲ್ಲಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಹೆದ್ದಾರಿಯಲ್ಲಿ ಪಿರ್ಯಾದುದಾರರು ಸವಾರರಾಗಿ, ಜಯಶ್ರೀ ಎಂಬವರು ಸಹಸವಾರೆಯಾಗಿ ಮುರ ಕಡೆಯಿಂದ ಬಲ್ನಾಡು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-Q-1196 ನೇ ನೋಂದಣಿ ನಂಬ್ರದ ಸ್ಕೂಟರ್‌ಗೆ  ಅಪಘಾತವಾಗಿ, ಎರಡೂ ವಾಹನಗಳು ರಸ್ತೆಗೆ ಬಿದ್ದು, ಪಿರ್ಯಾದುದಾರರಿಗೆ ಬಲಕೋಲು ಕೈಗೆ, , ಬಲಕೈ ತಟ್ಟಿಗೆ, ಬಲಮೊಣಕಾಲಿಗೆ, ಬಲಕಾಲು ಮಣಿಗಂಟು ಹಾಗೂ ಪಾದಕ್ಕೆ ತರಚಿದ ಗಾಯ, ಜಯಶ್ರೀರವರಿಗೆ ತಲೆಯ ಎಡಭಾಗದಲ್ಲಿ, ಕುತ್ತಿಗೆಗೆ, ಸೊಂಟದ ಎಡಭಾಗದಲ್ಲಿ, ಎರಡೂ ಭುಜಕ್ಕೆ ಗುದ್ದಿದ ನೋವುಗಳಾಗಿದ್ದು,  ಆರೋಪಿ ಸವಾರ ಮತ್ತು ಸಹಸವಾರೆಗೂ ಗಾಯಗಳಾಗಿ, ಎಲ್ಲರೂ ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ:  74/2021 ಕಲಂ: 279, 337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸುರೇಶ ಪ್ರಾಯ 22 ವರ್ಷ ತಂದೆ: ಹನುಮಂತ ವಾಸ:ನಾರ್ಯ ಮನೆ,ಧರ್ಮಸ್ಥಳ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ: 11-04-2021 ರಂದು ಪಿರ್ಯಾದಿದಾರರು ಕೆಲಸ ಮುಗಿಸಿಕೊಂಡು ವಾಪಸ್ಸು ಸಂಜೆ ಮನೆಗೆ ಹೋಗುವರೇ ಉಜಿರೆಯಿಂದ ಬಸ್ಸಿನಲ್ಲಿ ಉಜಿರೆ-ಧರ್ಮಸ್ಥಳ ರಸ್ತೆಯಲ್ಲಿ ಹೋಗುತ್ತಿರುವಾಗ ಸಮಯ ಸಂಜೆ 7.00 ಗಂಟೆಗೆ ಬೆಳ್ತಂಗಡಿ  ತಾಲೂಕು ಉಜಿರೆ ಗ್ರಾಮದ ನೀರಚಿಲುಮೆ ಎಂಬಲ್ಲಿಗೆ ತಲುಪುತ್ತಿದ್ದಂತೆ ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ ಬಸ್‌ ನ  ಎದುರುಗಡೆಯಿಂದ ಒಂದು ಕೆಎ 21 ಡಬ್ಲ್ಯೂ 2920 ನೇ ಮೋಟಾರು ಸೈಕಲ್ ನ್ನು ಅದರ ಸವಾರ ದುಡುಕುತನದಿಂದ ಧರ್ಮಸ್ಥಳ ಕಡೆಗೆ ಸವಾರಿಮಾಡಿಕೊಂಡು ಹೋಗಿ ಆತನ ಚಾಲನಾಹತೋಟಿ ತಪ್ಪಿ ಬೈಕ್ ಸ್ಕಿಡ್ ಆಗಿ ಮಗುಚಿ ಬಿದ್ದ ಪರಿಣಾಮ ಆತನನ್ನು ಎತ್ತಿ ಉಪಚರಿಸಿ ಆತನ  ತಲೆಗೆ,ಮೈ ಕೈ ಕಾಲುಗಳಿಗೆ ರಕ್ತಗಾಯವಾಗಿದ್ದು, ನಂತರ ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಿದ್ದು ನಂತರ ಚಿಕಿತ್ಸೆಯಲ್ಲಿರುತ್ತಾ ಗಾಯಳು ನಂದೀಶ ಚಿಕಿತ್ಸೆ ಫಲಕಾರಿಯಾಗದೇ ಈ ದಿನ ದಿನಾಂಕ: 16-04-2021 ರಂದು ಬೆಳಿಗ್ಗಿನ ಜಾವ 1.15 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 37/2021, ಕಲಂ; 279,  304(ಎ)  ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮನೋಹರ ಕೊಟ್ಟಾರಿ 43 ವರ್ಷ ತಂದೆ ಲೇ|| ನಾರಾಯಣ ಕೊಟ್ಟರಿ ಮಜಿಮನೆ ತುಂಬೆ ಗ್ರಾಮ ಬಂಟ್ವಾಳ  ತಾಲೂಕು ಎಂಬವರ ದೂರಿನಂತೆ ದಿನಾಂಕ 15.04.2021 ರಂದು ತುಂಬೆ ಮಜಿಯಲ್ಲಿ ತುಳು ನಾಟಕ ಪ್ರದದರ್ಶನ ಇದ್ದುದ್ದರಿಂದ ಪಿರ್ಯಾದುದಾರರು ರಾತ್ರಿ 7.30 ಗಂಟೆಗೆ ಮನೆಯವರೆಲ್ಲರು ನಾಟಕ ನೋಡಲು ತೆರಳಿದ್ದು ರಾತ್ರಿ 11.45 ಗಂಟೆಗೆ ನಾಟಕ ಪ್ರದರ್ಶನ ಮುಗಿಸಿ  ಮನೆಗೆ ಬಂದು ಎದುರಿನ ಬಾಗಿಲು  ಬೀಗ  ತೆಗೆದು ಮನೆ ಒಳಗೆ ಬಂದಾಗ ಮನೆಯ ಕೋಣೆಯ ಗಾಡ್ರೇಜ್ ಕಪಾಟಿನ ಬೀಗ ಮುರಿದು ಬಟ್ಟೆಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿದ್ದು ,ಪಿರ್ಯಾದುದಾರರು ಇನ್ನೊಂದು ರೂಂ ನೋಡಿದಾಗ ಅದನ್ನು ಕೂಡ ಯಾವುದೋ ಸಾಧನದಿಂದ ಮುರಿದದು ಬಟ್ಟೆಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ಕಪಾಟಿನ ಒಳಗೆ ಪರ್ಸಿನಲ್ಲಿಟ್ಟಿದ್ದ ರೂ 8000/- ವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.ಹಾಗೂ ಮನೆಯ ಅಡುಗೆ ಕೋಣೆಯ ಒಳಗೆ ಹೋದಾಗ ಮನೆಯ ಹಿಂಬದಿ ಬಾಗಿಲು ತೆರೆದಿದ್ದು ನೋಡಲಾಗಿ ಯಾರೋ ಕಳ್ಳರು ರಾತ್ರಿ 7.30 ಗಂಟೆಯಿಂದ 11.45 ಗಂಟೆಯ ಮಧ್ಯೆ ಬಾಗಿಲನ್ನು ಯಾವುದೋ ಸಾಧನದಿಂದ ಮುರಿದು ಮನೆಯ ಒಳಗೆ ಪ್ರವೇಶಿಸಿ ಕಳ್ಳತನ ಮಾಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ/ಕ್ರ 45/2021 ಕಲಂ  457 380 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕೊಲೆಯತ್ನ ಪ್ರಕರಣ: 1

ವೇಣೂರು ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ತಿಮ್ಮಪ್ಪ ಪ್ರಾಯ (35) ತಂದೆ: ತನಿಯ ವಾಸ: ಕುಕ್ಕುಟು ಮನೆ, ಬೆಳಾಲು ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ: 15.04.2021 ರಂದು ಪಿರ್ಯಾಧಿರವರ ಸಂಬಂಧಿ ರೇಣುಕಾ ಎಂಬವರು ಪಿರ್ಯಾದಿದಾರರಿಗೆ  ಕರೆ ಮಾಡಿ ಅವಳ ಮನೆಯ ರಿಪೇರಿ ಮಾಡಿಕೊಡುವಂತೆ ಬರಲು ಹೇಳಿದ್ದು, ಅದರಂತೆ ಪಿರ್ಯಾದಿದಾರರು ಮನೆ ರಿಪೇರಿ ಕೆಲಸ ಮಾಡಿ ಅಲ್ಲೆ ರಾತ್ರಿ ಇದ್ದು  ರಾತ್ರಿ ಸಮಯ ಸುಮಾರು 8.00 ಗಂಟೆಗೆ  ರೇಣುಕಾಳ ಪರಿಚಯದ ಮುದ್ದಾಡಿಯ ರಿಕ್ಷಾ ಚಾಲಕ ನಿತಿನ್ @ ನಿತೇಶ್ ಎಂಬಾತನು ಬಂದು ಪಿರ್ಯಾದಿದಾರರು ಉದ್ದೇಶಿಸಿ ಬಯ್ಯುತ್ತಾ ಪಿರ್ಯಾದಿದಾರರನ್ನು ಎಳೆದುಕೊಂಡು ಮನೆಯ ಅಂಗಳಕ್ಕೆ ಬಂದು ಅಲ್ಲಿಯೇ ಅಂಗಳದಲ್ಲಿ ಇದ್ದ ಹಾರೆಯೊಂದನ್ನು ತೆಗೆದು  ಬೀಸುವಾಗ ರೇಣುಕಾಳು ಗಲಾಟೆ ಬಿಡಿಸಲು ಬಂದಿದ್ದು, ಈ ಸಮಯ ಆತನು ರೇಣುಕಾಳ ತಲೆಗೆ ಹೊಡೆದಿದ್ದು ಅವಳು ಗಾಯಗೊಂಡು ಬೊಬ್ಬೆ ಹಾಕಿ ಮಕ್ಕಳನ್ನು ಕರೆದುಕೊಂಡು ಓಡಿ ಹೋಗಿರುತ್ತಾಳೆ. ನಂತರ ಆತನು ಹಾರೆಯಿಂದ ತಲೆಗೆ , ಹಣೆಗೆ, ಮುಖಕ್ಕೆ ಕಡಿದಿದ್ದು ಪಿರ್ಯಾದಿದಾರರು  ಜೋರಾಗಿ ಕಿರುಚಾಡಿದ್ದು, ಈ ಸಮಯ ಅಲ್ಲೇ ಪಕ್ಕದ ಮನೆಯ ದಯಾನಂದ , ಸದಾಶಿವ ನಾಯ್ಕ್, ಹರೀಶ್, ನಾರಾಯಣ ಇತರರು ಬಂದಿದ್ದು, ಇವರನ್ನು ಬರುವುದನ್ನು ಕಂಡು ಆತನು ಹಾರೆಯನ್ನು ಅಲ್ಲಿಯೇ ಬಿಸಾಡಿ ನೀನು ಬದುಕಿದರೂ ಮುಂದಕ್ಕೆ ನಿನ್ನನ್ನು ಸಾಯಿಸುತ್ತೇನೆ ಎಂದು ಹೇಳಿ ಅಲ್ಲಿಂದ ಹೋಗಿರುತ್ತಾನೆ. ಅಲ್ಲಿ ಸೇರಿದ್ದವರು ಉಪಚರಿಸಿ ನಂತರ ಅಲ್ಲಿಗೆ ಬಂದ ಸುಂದರ ಹೆಗ್ಡೆ, ಸಂದೀಪ್ ರವರು ಸೇರಿ 108 ಅಂಬುಲೆನ್ಸ್ ನ್ನು ತರಿಸಿ ಚಿಕಿತ್ಸೆಯ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಅಲ್ಲಿ ತೀವ್ರ ನಿಗಾ ಘಟಕದಲ್ಲಿ ಪಿರ್ಯಾದಿದಾರರು  ಚಿಕಿತ್ಸೆಯಲ್ಲಿರುವುದಾಗಿದೆ. ನಿತಿನ್ @ ನಿತೇಶ್ ನಿಂದ ಹಲ್ಲೆಗೊಂಡ ರೇಣುಕಾ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವುದಾಗಿದೆ. ಈ ಬಗ್ಗೆ ವೇಣೂರು ಪೊಲೀಸ್  ಠಾಣಾ ಅ.ಕ್ರ: 26-21ಕಲಂ: 324, 326, 307, 504, 506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಎಂಬವರ ದೂರಿನಂತೆ ದಿನಾಂಕ: 16-04-2021 ರಂದು ವಿಟ್ಲ ಪೊಲೀಸ್‌ ಠಾಣೆಯಲ್ಲಿ ಅ.ಕ್ರ 56/2021  ಕಲಂ: 4,59,11 ಕರ್ನಾಟಕ ಗೋ ಹತ್ಯೆ ನಿಷೇಧ ಕಾಯ್ದೆ ಮತ್ತು ಕಲಂ:11(1 ) (D) ಪ್ರಾಣಿ ಹಿಂಸೆ ನಿಷೇಧ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ದಿಲೀಫ್ (30) ತಂದೆ: ಅಚ್ಚುತಾ ಕೆ,ಜಿ ವಾಸ: ಸಿರಿಮನೆ, 3-75 (H) ಲೋಕಯ್ಯಪಾಲು ಕನೀರುತೋಟ, ಕೋಟೆಕಾರ್ ಪೋಸ್ಟ್, ಸೋಮೆಶ್ವರ ಎಂಬವರ ದೂರಿನಂತೆ ಪಿರ್ಯಾದುದಾರರ ತಂದೆ: ಅಚ್ಚುತಾ ಕೆ ಜಿ (66) ಎಂಬವರು ಬಿಪಿ ಖಾಯಿಲೆಯಿಂದ ಬಳಲುತ್ತಿದ್ದವರು ದಿನಾಂಕ: 10.04.2021 ರಂದು ಸಂಬಂಧಿಕರ ಮದುವೆಗೆಂದು ಮಂಡ್ಯಕ್ಕೆ ಹೋಗಿದ್ದು, ದಿನಾಂಕ 16.04.2021 ರಂದು ವಾಪಾಸ್ ತಮ್ಮ ಮನೆಗೆ ಬರುವರೇ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಕೆಎಸ್ ಆರ್ ಟಿಸಿ ಬಸ್ ಸ್ಟ್ಯಾಂಟ್ ಬಳಿ ಸಮಯ ಸುಮಾರು 18:00 ಗಂಟೆಯಿಂದ 21:00 ಗಂಟೆಯ ನಡುವೆ ಕುತ್ತಿಗೆ ಹಾಗೂ ತಲೆಗೆ ಗಾಯಗೊಂಡು ರಕ್ತಸ್ರಾವವಾಗಿ ಮೃತಪಟ್ಟ ಬಗ್ಗೆ ಪಿರ್ಯಾದುದಾರರಿಗೆ ಪೋನ್ ಬಂದಿದ್ದು ಅದರಂತೆ ಪಿರ್ಯಾದುದಾರರು ಸುಳ್ಯ ಪೊಲೀಸ್ ಠಾಣೆಗೆ ಹೋಗಿ ವಿಚಾರಸಿದಾಗ ಮೃತ ದೇಹವನ್ನು ಸುಳ್ಯ ಕೆ,ವಿ,ಜಿ ಆಸ್ಪತ್ರೆಯಲ್ಲಿರಿಸಿರುವುದು ತಿಳಿದಿದೆ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ ಯುಡಿಅರ್‌ ನಂಬ್ರ 20/2021 ಕಲಂ 174 (3) &(iv) ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 17-04-2021 10:22 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080