ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

ಬೆಳ್ಳಾರೆ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪ್ರವೀಣ.ಎಂ, 40 ವರ್ಷ, ತಂದೆ: ವಿಶ್ವನಾಥ ಶೆಟ್ಟಿ, ವಾಸ: ಮರ್ದೂರು ಮನೆ, ಎಡಮಂಗಲ ಗ್ರಾಮ, ಕಡಬ ಎಂಬವರ ದೂರಿನಂತೆ ದಿನಾಂಕ 15-11-2021 ರಂದು ಕಡಬ ತಾಲೂಕು ಎಡಮಂಗಲ ಗ್ರಾಮದ ಎಡಮಂಗಲ-ಚಾರ್ವಕ ರಸ್ತೆಯಲ್ಲಿ ಎಡಮಂಗಲ ಪೇಟೆಯಿಂದ ಕೊಳಂಬೆ ಎಂಬಲ್ಲಿಗೆ ರಬ್ಬರ್ ಟ್ಯಾಪಿಂಗ್ ವೃತ್ತಿ ಮಾಡುವ ಕೇರಳ ಮೂಲದ ಸಂತೋಷ್ ಎಂಬವರು ಅವರ ಅಣ್ಣ ಸುರೇಶ್ ಎಂಬವರನ್ನು ಸಹ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಸವಾರಿ ಮಾಡುತ್ತಿದ್ದ ಹೀರೋ ಮೆಸ್ಟ್ರೋ ಸ್ಕೂಟರ್ ನಂ KA21S-3009 ನೇಯದ್ದಕ್ಕೆ ರಸ್ತೆಯಲ್ಲಿ ನಾಯಿಯೊಂದು ಅಡ್ಡ ಬಂದ ಪರಿಣಾಮ 19-30 ಗಂಟೆಗೆ ಎಡಮಂಗಲ ಗ್ರಾಮದ ಎಡಮಂಗಲ ಎಂಬಲ್ಲಿ ಸ್ಕೂಟರ್ ಸವಾರ ಸಂತೋಷನ ಹತೋಟಿ ತಪ್ಪಿ ಮಗುಚಿ ಬಿದ್ದ ಪರಿಣಾಮ ಸ್ಕೂಟರ್ ನಲ್ಲಿ ಸಹ ಸವಾರನಾಗಿದ್ದ ಸುರೇಶ, 53 ವರ್ಷ, ತಂದೆ: ಗೋವಿಂದನ್ ಎಂಬವರು ತಲೆಗೆ ಗಂಭೀರ ಗಾಯಗೊಂಡಿದ್ದು, ಗಾಯಾಳು ಸುರೇಶ್ ರನ್ನು ಚಿಕಿತ್ಸೆಯ ಬಗ್ಗೆ 108 ಅಂಬುಲೆನ್ಸ್ ವಾಹನದಲ್ಲಿ  ಕಡಬ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿನ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ರಾತ್ರಿ 10-25 ಗಂಟೆಗೆ ಗಾಯಾಳು ಸುರೇಶ್ ನು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ..ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. ಅ.ಕ್ರ 58/2021 ಕಲಂ 279, 304(ಎ) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮಹಮ್ಮದ್ ಅಶ್ರಫ್  (50) ತಂದೆ: ಅಬ್ದುಲ್ ಖಾದರ್  ವಾಸ: ವಿದ್ಯಾಪುರ ಮನೆ ಕಬಕ ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾದಿರವರು ಕಬಕ ಗ್ರಾಮದ ಪಂಚಾಯತ್  ಬಳಿ  ದಿನಸಿ ಅಂಗಡಿಯನ್ನು ಹೊಂದಿದ್ದು    ದಿನಾಂಕ: 15-11-2021 ರಂದು  ಎಂದಿನಂತೆ ಬೆಳಿಗ್ಗೆ 7:00 ಗಂಟೆಗೆ ಅಂಗಡಿಗೆ ಬಂದು  ವ್ಯಾಪಾರ ಮಾಡಿ ರಾತ್ರಿ 8:30 ಗಂಟೆಗೆ ಅಂಗಡಿ ಬಾಗಿಲು ಬೀಗ ಹಾಕಿ ಮನೆಗೆ ಹೋಗಿದ್ದು  ದಿನಾಂಕ: 16-11-2021 ರಂದು ಬೆಳಿಗ್ಗೆ ಸುಮಾರು 5:45 ಗಂಟೆ ಸಮಯಕ್ಕೆ ಪಿರ್ಯಾದಿದಾರರ ಅಂಗಡಿಯ ಬಳಿಯ ಹೊಟೇಲ್ ನ ಅಡುಗೆಯವರು ದೂರವಾಣಿ ಕರೆ ಮಾಡಿ ಹೊಟೇಲ್ ಮತ್ತು ನಿಮ್ಮ ಅಂಗಡಿಯ ಬಾಗಿಲನ್ನು ಯಾರೋ ಕಳ್ಳರು ಬಲವಂತದಿಂದ ತೆರೆದು ಕಳ್ಳತನ ನಡೆಸಿದಂತೆ ಕಂಡು ಬರುತ್ತದೆ ಎಂದು ತಿಳಿಸಿದಂತೆ ಪಿರ್ಯಾದಿದಾರರು ಬಂದು ನೋಡಿದಾಗ ಪಿರ್ಯಾದಿದಾರರ ಅಂಗಡಿಯ ಬಾಗಿಲು ಅರೆ ತೆರೆದು ಕೊಂಡಿದ್ದು ಒಳ ಹೋಗಿ ನೋಡಿದಾಗ ಅಂಗಡಿಯ ಕ್ಯಾಶ್  ಟೇಬಲಿನ ಡ್ರಾವರ್ ನ್ನು ಮೀಟಿ  ತೆರೆದಿದ್ದು ಡ್ರಾವರ್ ಒಳಗೆ ಇದ್ದ ನಗದು ರೂಪಾಯಿ 3 ಸಾವಿರ, ಹಾಗೂ ಅಂಗಡಿಯೊಳಗೆ ಇದ್ದ ಸುಮಾರು 4 ಸಾವಿರ ಬೆಲೆಯ ಚಾಕಲೇಟ್ ಕಳವಾಗಿರುತ್ತದೆ.  ಪಿರ್ಯಾದಿದಾರರ ಅಂಗಡಿಯ ಬಳಿಯ ಹೊಟೇಲ್ ನ ಮಾಲಕರಾದ ಶಿವಶಂಕರ್ ರವರಲ್ಲಿ ವಿಚಾರಿಸಿದಾಗ ಅವರ ಹೊಟೇಲ್ ನ ಬಾಗಿಲನ್ನು ಕೂಡ ಮೀಟಿ ತೆರೆದು ಒಳಪ್ರವೇಶಿಸಿ  ಕ್ಯಾಶ್ ಡ್ರವರ್  ನಿಂದ ನಗದು ರೂ 2000/- ಹಾಗೂ ½ ಕೆ.ಜಿ ಚಾ ಹುಡಿ ಮತ್ತು ½ ಕೆ.ಜಿ ತುಪ್ಪ ಕಳವಾಗಿರುವುದಾಗಿದೆ.  ಪಕ್ಕದ ಉದಯಕುಮಾರ್ ಎಂಬವರ ಮಾಲಕತ್ವದ ಮಹಾದೇವಿ ಗ್ಯಾರೇಜಿನ ಬಾಗಿಲು ಮೀಟಿ ತೆರೆದು ನಗದು ರೂ 2000/- ನ್ನು ಕಳವು ಮಾಡಿದ್ದು ಅಲ್ಲದೇ  ರಾಮಣ್ಣ ಎಂಬವರ ಮಾಲಿಕತ್ವದ ಗ್ಯಾರೇಜಿನ ಬಾಗಿಲನ್ನು ಮೀಟಿ ತೆರೆಯಲು ಪ್ರಯತ್ನಿಸಿರುತ್ತಾರೆ. ಕಳವಾದ ನಗದು ಹಣ ಹಾಗೂ ದಿನಸಿ ಸಾಮಗ್ರಿಗಳ ಒಟ್ಟು ಮೌಲ್ಯ ಸುಮಾರು 11,500  ರೂಪಾಯಿ ಆಗಬಹುದು  .ಈ ಬಗ್ಗೆ ಪುತ್ತೂರು ನಗರ ಠಾಣಾ ಅ.ಕ್ರ: 93/2021 ಕಲಂ: 457, 380 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

ಉಪ್ಪಿನಂಗಡಿ ಪೊಲೀಸ್ ಠಾಣೆ : ದಿನಾಂಕ 16.11.2021 ರಂದು ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಅ.ಕ್ರ:140/2021 ಕಲಂ:177,323,418,420,468,506, ಜೊತೆಗೆ 34 ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 17-11-2021 10:19 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080