ಅಪಘಾತ ಪ್ರಕರಣ: ೦3
ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಹಸನಬ್ಬ (42) ತಂದೆ: ಬಡುವ ಕುಂಞ, ವಾಸ: ಎರ್ನೋಡಿ ಮನೆ, ಉಜಿರೆ, ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ: 17-07-2021 ರಂದು ಅಗತ್ಯ ಕೆಲಸದ ನಿಮಿತ್ತ ಉಜಿರೆ ಪೇಟೆಗೆ ಹೋಗಿ ವಾಪಾಸ್ ಮನೆ ಕಡೆಗೆ ಬರುವರೇ ಉಜಿರೆಯಿಂದ ಎರ್ನೋಡಿ ಕಡೆಗೆ ನಡೆದುಕೊಂಡು ಬರುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 7:೦೦ ಗಂಟೆಗೆ ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಉಜಿರೆ ವಿ.ಎಸ್ ಶಾಮಿಯಾನ ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರ ಹಿಂದಿನಿಂದ ಅಂದರೆ ಉಜಿರೆ ಕಡೆಯಿಂದ ಬೆಳ್ತಂಗಡಿ ಕಡೆಗೆ ಒಂದು ಕಾರನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಬಲ ಕಾಲಿನ ಮೊಣ ಗಂಟಿಗೆ ಗುದ್ದಿದ ಗಾಯವಾಗಿದ್ದು. ಗಾಯಾಳು ಉಜಿರೆ ಬೆನಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣಾ ಅ.ಕ್ರ: 55/2021, ಕಲಂ; 279,337 ಭಾದಂಸಂ. ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸ್ವರಾಜ್ (22) ತಂದೆ: ಸತೀಶ್ ಪೂಜಾರಿ, ವಾಸ: ಆಶ್ರಯ ಯೋಜನೆ, ಕಂಚಿಮಾರು ಬೈಲು ಮನೆ, ಧರ್ಮಸ್ಥಳ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ: 17-07-2021 ರಂದು ತನ್ನ ಬಾಬ್ತು ಕೆ ಎ 21 ಆರ್ 6431 ನೇ ದ್ವಿಚಕ್ರ ವಾಹನವನ್ನು ಉಜಿರೆ ಕಡೆಯಿಂದ ಧರ್ಮಸ್ಥಳ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವಾಗ ಸಮಯ ಸುಮಾರು ಸಂಜೆ 6:45 ಗಂಟೆಗೆ ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಉಜಿರೆ ನ್ಯಾಚುರೋಪತಿ ಕಾಲೇಜು ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರ ಮುಂದೆ ಅಂದರೆ ರಸ್ತೆಯ ಎಡ ಬದಿಯಲ್ಲಿ ನಿಲ್ಲಿಸಿದ್ದ ಕೆ ಎ 19 ಎಂ ಬಿ 4934ನೇ ಕಾರನ್ನು ಅದರ ಚಾಲಕ ದುಡುಕು ತನದಿಂದ ಬಲಕ್ಕೆ ತಿರುಗಿಸಿ ಚಲಾಯಿಸಿ ಪಿರ್ಯಾದಿದಾರರ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ದ್ವಿ ಚಕ್ರ ವಾಹನ ಸಮೇತ ರಸ್ತೆಗೆ ಬಿದ್ದು ಹಣೆಗೆ ತರಚಿದ ಗಾಯ, ಹಲ್ಲಿಗೆ ಗುದ್ದಿದ ಗಾಯವಾಗಿದ್ದು, ಗಾಯಾಳು ಉಜಿರೆ ಬೆನಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣಾ ಅ.ಕ್ರ: 56/2021, ಕಲಂ; 279,337 ಭಾದಂಸಂ. ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ನೀಲಮ್ಮ (28) ಗಂಡ: ಲಕ್ಷ್ಮಣ, ವಾಸ: ಕಳಸಗಿರಿ ಮನೆ, ಅಡ್ಡೂರು ಗ್ರಾಮ, ಮಂಗಳೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ 02.03.2021 ರಂದು ಕೂಲಿ ಕೆಲಸದ ನಿಮಿತ್ತ KA-70-3091 ನೇ ಟೆಂಪೋ ವಾಹನದಲ್ಲಿ ಮುಲ್ಲರಪಟ್ನಕ್ಕೆ ಹೋದವರು ಕೆಲಸ ಮುಗಿಸಿ ಅಡ್ಡೂರು ಕಡೆಗೆ ವಾಪಾಸು ಬರುತ್ತಾ ಸಮಯ ಸುಮಾರು ಮಧ್ಯಾಹ್ನ 2:30 ಗಂಟೆಗೆ ಬಂಟ್ವಾಳ ತಾಲೂಕು ಅರಳ ಗ್ರಾಮದ ನೆಲ್ಲಿಮಾರು ಎಂಬಲ್ಲಿಗೆ ತಲುಪಿದಾಗ ಟೆಂಪೋ ವಾಹನವನ್ನು ಅದರ ಚಾಲಕ ಅಬ್ದುಲ್ ರಹಿಮಾನ್ ಎಂಬವರು ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಟೆಂಪೋ ವಾಹನ ಮಗುಚಿ ಬಿದ್ದು ಪಿರ್ಯಾದಿದಾರರ ಎಡಭುಜಕ್ಕೆ ಗುದ್ದಿದ ಗಾಯವಾಗಿ ಬಿ.ಸಿ.ರೋಡ್ ಸೋಮಯಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಅಪಘಾತದ ಸಮಯ ಟೆಂಪೋ ಚಾಲಕ ಅಬ್ದುಲ್ ರಹಿಮಾನ್ ರವರು ಚಿಕಿತ್ಸೆಯ ವೆಚ್ಚ ಭರಿಸುವುದಾಗಿ ತಿಳಿಸಿದ್ದು ಇದೀಗ ನಿರಾಕರಿಸಿರುವುದರಿಂದ ವಿಳಂಬವಾಗಿ ದೂರು ನೀಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 61/2021 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕೊಲೆ ಬೆದರಿಕೆ ಪ್ರಕರಣ: ೦1
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಫಿರ್ಯಾದಿದಾರರಾದ ಶ್ರೀಮತಿ ಹೇಮಾವತಿ ಎಸ್ ಪ್ರಾಯ 39 ವರ್ಷ ಗಂಡ: ದಯಾಣಂದ ಪೂಜಾರಿ ಕರ್ನಪ್ಪಾಡಿ ಮನೆ, ನಿಡ್ಪಳ್ಳಿ ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾದಿರವರ ಗಂಡ ದಯಾನಂದ ಪೂಜಾರಿ, ಅತ್ತೆ ಶ್ರೀಮತಿ ಸುಶೀಲ ಮಕ್ಕಳಾದ ನಿಶ್ಮಿತಾ, ಹಶ್ಮಿತಾ ರವರೊಂದಿಗೆ ವಾಸವಾಗಿದ್ದು, ದಿನಾಂಕ 18.07.2021 ರಂದು ಮಧ್ಯಾಹ್ನ 1.00 ಗಂಟೆಗೆ ಮನೆಯ ಸಿಟೌಟ್‌ನಲ್ಲಿ ಇದ್ದ ಸಮಯ ದಯಾನಂದ ಪೂಜಾರಿರವರು ಪಿರ್ಯಾದಿದಾರರನ್ನು ಉದ್ದೇಶಿಸಿ ಅವ್ಯಾಚ ಶಬ್ದಗಳಿಂದ ಬೈದು ನಿಮ್ಮ ಮನೆಗೆ ನಾನು ಯಾಕೆ ಬರಬೇಕು ನಾನು ನಿನ್ನ ಮನೆಗೆ ಬರುವುದಿಲ್ಲ ಎಂದು ಹೇಳಿ ಮನೆಯಲ್ಲಿಯೇ ಇದ್ದ ಮರದ ಕೋಲಿನಿಂದ ಪಿರ್ಯಾದಿದಾರರ ಎಡಕೈಯ ರಟ್ಟೆಗೆ, ಎಡ ಕೈಯ ಹೆಬ್ಬೆರಳಿಗೆ ಮತ್ತು ತಲೆಗೆ ಹೊಡೆದು ಗಾಯಗೊಳಿಸಿ ಇನ್ನು ಈ ಮನೆಯಲ್ಲಿದ್ದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿದ್ದು, ನೋವು ಜಾಸ್ತಿಯಾದ ಕಾರಣ ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಪುತ್ತೂರು ಆಸ್ಪತ್ರೆಗೆ ಬಂದಲ್ಲಿ ವೈದ್ಯರು ಒಳರೋಗಿಯಾಗಿ ದಾಖಲಿಸಿದ್ದಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆ ಆ.ಕ್ರ 63/21 ಕಲಂ: 504, 324, 506 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೆ ಪ್ರಕರಣ: ೦2
ಬಂಟ್ವಾಳ ನಗರ ಪೊಲೀಸ್ ಠಾಣೆ : ದಿನಾಂಕ: 18-06-2021 ರಂದು ಸಂಜೆ 19.00 ಗಂಟೆಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಕ್ರ: 82/2021 ಕಲಂ: 448, 506, 354, 324 ಜೊತೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ವಿಟ್ಲ ಪೊಲೀಸ್ ಠಾಣೆ : ದಿನಾಂಕ:18-07-2021 ರಂದು ಕರುಣಾಕರ ಎಂ ಸಹಾಯಕ ಪೊಲೀಸ್ ಉಪನಿರೀಕ್ಷಕರು ವಿಟ್ಲ ಪೊಲೀಸ್ ಠಾಣೆ ಮತ್ತು ಠಾಣಾ ಸಿಬ್ಬಂದಿಗಳಾದ ಪ್ರೋಬೆಷನರಿ ಪಿಎಸ್ಐ ಮಂಜುನಾಥ, ಹೆಚ್ ಸಿ 1044 ನೇ ಡ್ಯಾನಿ ಫ್ರಾನ್ಸಿಸ್ ತಾವ್ರೋ, ಪಿಸಿ 2389 ಪ್ರತಾಪ್ ರೆಡ್ಡಿ, ಪಿಸಿ 385 ಲೋಕೇಶ್ ಎಪಿಸಿ 78 ಪ್ರವೀಣ್ ರವರು ಹಾಗೂ ಪಂಚರನ್ನು ಜೊತೆಯಲ್ಲಿ ಕರೆದುಕೊಂಡು ಇಲಾಖಾ ಜೀಪಿನಲ್ಲಿ ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಅಡ್ಡದ ಬೀದಿ ಎಂಬಲ್ಲಿಗೆ 16.30 ಗಂಟೆಗೆ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಉಲಾಯಿ-ಪಿದಾಯಿ ಆಟವಾಡುವುದನ್ನು ಪತ್ತೆ ಮಾಡಿದ್ದು. ಅಲ್ಲಿದ್ದ ಜನರನ್ನು ಸುತ್ತುವರಿದು ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ ಉಲಾಯಿ-ಪಿದಾಯಿ ಆಟವಾಡುತ್ತಿರುವುದು ಕಂಡ ಪಿರ್ಯಾಧಿ ಹಾಗೂ ಸಿಬ್ಬಂದಿಗಳು ಕೂಡಲೇ ಸ್ಥಳಕ್ಕೆ ದಾಳಿ ಮಾಡಿ ಸದ್ರಿಯವರನ್ನು ಹಿಡಿಯಲು ಪ್ರಯತ್ನಿಸಲಾಗಿ ಸಮವಸ್ತ್ರದಲ್ಲಿದ್ದ ಪಿರ್ಯಾಧಿ ಹಾಗೂ ಸಿಬ್ಬಂದಿಗಳು ನೋಡಿದ ಆಪಾದಿತರು ಓಡಲು ಪ್ರಯತ್ನಿಸಿದವರ ಪೈಕಿ ಬೆನ್ನಟ್ಟಿ ಹಿಡಿದು ವಿಚಾರಿಸಲಾಗಿ ಮಂಜುನಾಥ, ತಮ್ಮು ಯಾನೆ ರುಕ್ಮ. ಮಹೇಶ್, ಹರೀಶ್, ಮನೋಜ್, ವಿನೋದ್, ಕಿಶೋರ್,ಅನಂತೇಶ್ ಎಂದು ತಿಳಿಸಿ ತಾವು ಹಣವನ್ನು ಪಣವನ್ನಾಗಿಟ್ಟು ಉಲಾಯಿ-ಪಿದಾಯಿ ಆಟವಾಡುತ್ತಿರುವುದಾಗಿ ತಮ್ಮ ತಪ್ಪನ್ನು ಒಪ್ಪಿಕೊಂಡಿರುತ್ತಾರೆ ಬಳಿಕ ಪಂಚರ ಸಮಕ್ಷಮ ಸ್ಥಳದಲ್ಲಿದ್ದ 1).ಹಳೆಯ ಕನ್ನಡ ದಿನಪತ್ರಿಕೆ, ಹಾಗೂ 2.) ನಗದು ಣ 1600/-ರೂಪಾಯಿ. 3) ವಿವಿದ ಜಾತಿಯ ಇಸ್ಪೀಟು ಎಲೆಗಳು-52, 4.) ಒಪ್ಪೋ ಕಂಪನಿಯ ಮೋಬೈಲ್‌ಗಳು-02 (ಅಂದಾಜು ಮೌಲ್ಯ-ಎರಡು ಸಾವಿರ ರೂಪಾಯಿ) 5). ಮೊಟೊರೊಲ ಕಂಪೆನಿಯ ಮೊಬೈಲ್ -01 (ಅಂದಾಜು ಮೌಲ್ಯ - ಒಂದು ಸಾವಿರ ರೂಪಾಯಿ) 6). ಸ್ಯಾಮ್ ಸಾಂಗ್ ಕಂಪನಿಯ ಮೊಬೈಲ್ -03- (ಅಂದಾಜು ಮೌಲ್ಯ-ಮೂರು ಸಾವಿರ) 7) ನೋಕಿಯಾ ಕಂಪನಿಯ ಮೊಬೈಲ್-01- (ಅಂದಾಜು ಮೌಲ್ಯ -500) 8)ಲಾವ ಕಂಪನಿಯ ಮೊಬೈಲ್ -01- (ಅಂದಾಜು ಮೌಲ್ಯ -500) ಆಗಬಹುದು ಸ್ವಾದೀನಪಡಿಸಿಕೊಂಡ ಸ್ವತ್ತುಗಳ ಒಟ್ಟು ಅಂದಾಜು ಮೌಲ್ಯ -8600/- ರೂ ಆಗಬಹುದು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಅ.ಕ್ರ 97/2021 ಕಲಂ: 87 ಕೆಪಿ ಆಕ್ಟ್ ನಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦1
ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಜಯಂತ, ಪ್ರಾಯ: 27 ವರ್ಷ, ತಂದೆ: ಶಿವಪ್ಪ, ವಾಸ: ಶಕ್ತಿನಗರ, ಮಾಲಾಡಿ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಫಿರ್ಯಾಧಿದಾರರಾದ ಜಯಂತ ಎಂಬವರ ತಂದೆ ಶಿವಪ್ಪ (53 ವರ್ಷ) ಎಂಬವರು ದಿನಾಂಕ: 17.07.2021 ರಂದು ರಾತ್ರಿ 10:00 ಗಂಟೆಯಿಂದ ಮರುದಿನ ಬೆಳಿಗ್ಗೆ 06.00 ಗಂಟೆಯ ಮಧ್ಯದ ಅವದಿಯಲ್ಲಿ ಅಂತ್ಯಸಂಸ್ಕಾರಕ್ಕೆ ಹಾಕಿದ್ದ ಶಾಮಿಯಾನದ ಕಬ್ಬಿಣದ ಕಂಬಕ್ಕೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆ. UDR NO 08/2021 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.