ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

ಪುತ್ತೂರು ಗ್ರಾಮಾಂತರ  ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಬೇಬಿ ಸಾಲ್ಯಾನ್, ಪ್ರಾಯ: 55 ವರ್ಷ, ತಂದೆ: ದಿ. ಆನಂದ  ಕೋಟ್ಯಾನ್. ವಾಸ-ಕಳವಾರು ಆಶ್ರಯ ಕಾಲೊನಿ  ಮನೆ, ಕಳವಾರು   ಗ್ರಾಮ, ಮಂಗಳೂರು  ತಾಲೂಕು ಎಂಬವರ ದೂರಿನಂತೆ  ದಿನಾಂಕ:-20.02.2022ರಂದು ತನ್ನ ಪತ್ನಿ ನೇತ್ರಾವತಿ ಮತ್ತು ಮಕ್ಕಳಾದ  ಚೇತನ್, ದೀಪಾ ಮತ್ತು ಜ್ಯೋತಿ ಎಂಬವರೊಂದಿಗೆ ರಾಜೀವ್ ಎಂಬವರು ಚಲಾಯಿಸುತ್ತಿದ್ದ KA02 ME3774ನೇ ಕಾರಿನಲ್ಲಿ ತನ್ನ  ಮನೆಯಿಂದ ಹೊರಟು ತಲಕಾವೇರಿಗೆ ತೆರಳಿ ವಾಪಾಸು ಸದ್ರಿ ಕಾರಿನಲ್ಲಿ ತನ್ನ ಮನೆಯ ಕಡೆಗೆ ಬರುತ್ತಾ ಸಂಜೆ ಸುಮಾರು 4.00 ಗಂಟೆಗೆ ಮೈಸೂರು -ಮಾಣಿ ಹೆದ್ದಾರಿಯಲ್ಲಿ ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಮಡ್ಯಂಗಳ ಎಂಬಲ್ಲಿಗೆ ತಲುಪಿದಾಗ  ಮಾಣಿ ಕಡೆಯಿಂದ ಮೈಸೂರು ಕಡೆಗೆ ಕಾರೊಂದನ್ನು ಅದರ ಚಾಲಕನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ರಸ್ತೆಯ ಬಲಬದಿಗೆ ಚಲಾಯಿಸಿ, ಫಿರ್ಯಾದುದಾರರು ಪ್ರಯಾಣಿಸುತ್ತಿದ್ದ ಕಾರಿನ ಮುಂಭಾಗಕ್ಕೆ ಢಿಕ್ಕಿಯುಂಟು ಮಾಡಿದ್ದು, ಈ ಅಪಘಾತದಿಂದಾಗಿ ಎರಡೂ ವಾಹನಗಳು ಜಖಂಗೊಂಡಿದ್ದಲ್ಲದೇ KA02 ME 3774ನೇ ಕಾರಿನಲ್ಲಿದ್ದ ಫಿರ್ಯಾದುದಾರರ ಗಲ್ಲ ಮತ್ತು ಬಲ ಕಾಲಿನ ಮಂಡಿಗೆ ರಕ್ತಗಾಯ ಮತ್ತು ಗುದ್ದಿದ ರೀತಿಯ ಗಾಯ , ಚಾಲಕ  ರಾಜೀವ್‌ರವರ ಕಾಲು ಮತ್ತು ಕೈಗೆ ಗಾಯ ಮತ್ತು ಎದೆಗೆ ಗುದ್ದಿದ ರೀತಿಯ ನೋವು, ನೇತ್ರಾವತಿಯವರ ಬಲ ಕೈ ಮತ್ತು ಬಲ ಕಾಲಿಗೆ ಗುದ್ದಿದ ರೀತಿಯ ಗಾಯ, ಚೇತನ್‌ರವರ ಬಲ ಕೈಗೆ ಗುದ್ದಿದ ರೀತಿಯ ಗಾಯ, ದೀಪಾ ಮತ್ತು ಜ್ಯೋತಿಯವರಿಗೆ ದೇಹದ ಅಲ್ಲಲ್ಲಿ ರಕ್ತ ಗಾಯ ಮತ್ತು ಗುದ್ದಿದ ರೀತಿಯ ಗಾಯವಾಗಿದ್ದು, KA19 MK 0196ನೇ ಕಾರಿನ ಚಾಲಕ ಮತ್ತು ಅದರಲ್ಲಿದ್ದ ಪ್ರಯಾಣಿಕರೊಬ್ಬರಿಗೆ ಸಣ್ಣಪುಟ್ಟ ಗಾಯವಾಗಿರುತ್ತದೆ. ಈ ಅಪಘಾತದ  ಗಾಯಾಳುಗಳಾದ  ಫಿರ್ಯಾದುದಾರರು ಮತ್ತು ನೇತ್ರಾವತಿ, ಚೇತನ್ ಎಂಬವರು ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ದೀಪಾ ಮತ್ತು ಜ್ಯೋತಿ ಎಂಬವರನ್ನು ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗಿದ್ದು, KA02 ME3774ನೇ ಕಾರಿನ ಚಾಲಕ ರಾಜೀವ್‌ರವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಸದ್ರಿಯವರನ್ನು ಪರೀಕ್ಷಿಸಿದ ವೈದ್ಯಾಧಿಕಾರಿಯವರು ರಾಜೀವ್‌ರವರು ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ,  ಈ ಬಗ್ಗೆ ಪುತ್ತೂರು ಗ್ರಾಮಾಂತರ  ಠಾಣಾ ಆ.ಕ್ರ 25/22  ಕಲಂ: 279, 337 338  304(ಎ)ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ಳಾರೆ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಡಿ.ಎ ನಾಸೀರ್ ,ಪ್ರಾಯ 33 ವರ್ಷ ತಂದೆ; ಅಬೂಬಕ್ಕರ್ , ವಾಸ; ದರ್ಖಾಸು ಮನೆ ಗೂನಡ್ಕ ಅಂಚೆ ಸಂಪಾಜೆ ಗ್ರಾಮ ಸುಳ್ಯ  ತಾಲೂಕು, ಎಂಬವರ ದೂರಿನಂತೆ ದಿನಾಂಕ 19-02-2022  ರಂದು ಬೆಳಂದೂರು ಎಂಬಲ್ಲಿಗೆ ಅವರ ಬಾಬ್ತು ಸ್ಕೂಟಿ ನಂಬ್ರ ಕೆಎ 21-ಎಕ್ಸ್ 1684 ನೇದರಲ್ಲಿ ಕೂಲಿ ಕೆಲಸಕ್ಕೆಂದು ಹೋದವರು ಕೆಲಸ ಮುಗಿಸಿ ಸಂಜೆ ಅದೇ ಸ್ಕೂಟಿಯಲ್ಲಿ ಮಾಯಿಲಪ್ಪ ಎಂಬವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು ಬರುತ್ತಿರುವಾಗ ಸಮಯ ಸುಮಾರು 18-30 ಗಂಟೆಗೆ ಕಡಬ ತಾಲೂಕು ಬೆಳಂದೂರು ಗ್ರಾಮದ ಗುಂಡಿನಾರು ಎಂಬಲ್ಲಿಗೆ ತಲುಪಿದಾಗ ಎದುರುಗಡೆಯಿಂದ ಸ್ವಿಪ್ಟ್ ಕಾರು ನಂಬ್ರ ಕೆಎ 21- ಝೆಡ್ -3621 ನೇದನ್ನು ಅದರ ಚಾಲಕನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟಿಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರರಿಬ್ಬರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಸವಾರ ಡಿ ಎ ನಾಸೀರ್ ರವರಿಗೆ ಬಲಕೋಲುಕಾಲಿಗೆ  ರಕ್ತಗಾಯ ಹಾಗೂ ಗುದ್ದಿದ ಗಾಯವುಂಟಾಗಿದ್ದು ,ಸಹಸವಾರರಿಗೆ ಯಾವುದೇ ಗಾಯವಾಗಿರುವುದಿಲ್ಲ ಗಾಯಾಳುವನ್ನು ಚಿಕಿತ್ಸೆ ಬಗ್ಗೆ ಕಾಣಿಯೂರು ಖಾಸಾಗಿ ಆಸ್ಪತ್ರೆ ಕೊಂಡುಹೋದಾಗ ಅಲ್ಲಿಯ ವೈಧ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೇಲ್ದರ್ಜೆ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ ಮೇರೆಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ ತಂದಾಗ ವೈಧ್ಯರು ಚಿಕಿತ್ಸೆ ನೀಡಿ ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. 17/2022 ಕಲಂ 279,  337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 2

ಕಡಬ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಹರೀಶ್ ಎಮ್    ಪ್ರಾಯ: 51 ವರ್ಷ, ತಂದೆ: ಮುತ್ತನ್    ವಾಸ: ಬೆದ್ರಜೆ   ಮನೆ , ಕೊಡಿಂಬಾಳ   ಗ್ರಾಮ, ಕಡಬ ತಾಲೂಕು ಎಂಬವರ ದೂರಿನಂತೆ ತಾನು  ಕಡಬ ಪಟ್ಟಣ್ಣ ಪಂಚಾಯಾತ್ ನಲ್ಲಿ ಬಿಲ್ ಕಲೆಕ್ಟರ್ ಆಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 20-02-2022 ರಂದು ಸಂಚೆ 05-00 ಗಂಟೆಗೆ ಸುಂದರ ಪೂಜಾರಿ ಎಂಬವರು ದೂರವಾಣಿ ಕರೆ ಮಾಡಿ ಕಡಬ ಸರಕಾರಿ ಅಸ್ವತ್ರೆಯ ಹಿಂದುಗಡೆ ಕೊಡಿಂಬಾಳ ಗ್ರಾಮದ ಸಾಕೀರ್ ಇಸ್ಮಾಯಿಲ್ ಎಂಬುವರ ಖಾಲಿ ಜಮೀನಿನಲ್ಲಿ ಸುಮಾರು 50-55 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತ ದೇಹ  ಇರುವುದಾಗಿ ತಿಳಿಸಿದಂತೆ ಪಿರ್ಯಾದುದಾರರು ಅಲ್ಲಿ ಹೋಗಿ ನೋಡಲಾಗಿ ಅಪರಿಚಿತ ಗಂಡಸು ಸುಮಾರು 3 ರಿಂದ 4 ದಿನಾಗಳ ಹಿಂದೆ ಯಾವೂದೋ ವಿಷ ಪದರ್ಥವನ್ನು ವಿಪರಿತವಾಗಿ ಸೇವನೆ ಮಾಡಿ ಅಸ್ವಸ್ಥಗೊಂಡು ಬಿದ್ದುಕೊಂಡವರು ಮಲಗಿದ್ದಲಿಯೇ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕಡಬ ಠಾಣಾ ಯು.ಡಿ.ಆರ್ ನಂ:08/2022 ಕಲಂ. 174  (3) (4) Crpc   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುಂಜಾಲಕಟ್ಟೆ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಗೋಪಾಲಕೃಷ್ಣ , ಪ್ರಾಯ: 46 ವರ್ಷ, ತಂದೆ: ಶ್ರೀನಿವಾಸ ಪ್ರಭು , ವಾಸ: ಹನ್ನಡ್ಕ ಮನೆ, ಉಳಿ ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ತನ್ನ ತಮ್ಮ ಮೃತ ಮನೋಹರ  ಹೆಚ್. (45 ವರ್ಷ) ಎಂಬವರು ದಿನಾಂಕ: 20.02.2022 ರಂದು  ಬಂಟ್ವಾಳ ತಾಲೂಕು ಉಳಿ ಗ್ರಾಮದ ಕಕ್ಕೆ ಪದವು ಪಂಚದುರ್ಗಾ ಫ್ರೌಢಶಾಲೆಯ ಮೈದಾನದಲ್ಲಿ ಸ್ಥಳೀಯ ಯುವಕರೊಂದಿಗೆ ಕ್ರಿಕೆಟ್ ಆಟ ಆಡುತ್ತಿದ್ದ ಸಮಯ ಸುಮಾರು 14.30 ಗಂಟೆಗೆ ಕ್ರಿಕೆಟ್ ಆಟದ ಮಧ್ಯೆ ಅಸ್ವಸ್ಥರಾಗಿ ಎದೆ ನೋವು ಆಗುತ್ತಿರುವುದಾಗಿ ಅಲ್ಲಿದ್ದವರಲ್ಲಿ ತಿಳಿಸಿದ್ದು, ಅಲ್ಲಿ ಸೇರಿದ್ದವರು ಕೂಡಲೇ ಚಿಕಿತ್ಸೆ ಬಗ್ಗೆ ವಾಹನವೊಂದರಲ್ಲಿ ಬಂಟ್ವಾಳ ಸರಕಾರಿ ಅಸ್ಪತ್ರೆಗೆ ಕರೆ ತಂದಿದ್ದು, ಅಲ್ಲಿನ ವೈದ್ಯರು ಮನೋಹರ್ ಹೆಚ್. ರವರನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್‌ ಠಾಣೆ. ಯು.ಡಿ.ಆರ್ ನಂ:06/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 21-02-2022 10:34 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080