ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶ್ರೀಧರ್ ಪಿ, ಪ್ರಾಯ 46 ವರ್ಷ, ತಂದೆ: ದಿ/ ಜನಾರ್ಧನ ನಾಯಕ್,  ವಾಸ: ಪಂಜಿಗಾರು ಮನೆ, ಕಳಂಜ  ಅಂಚೆ ಮತ್ತು ಗ್ರಾಮ, ಸುಳ್ಯ ಎಂಬವರ ದೂರಿನಂತೆ ದಿನಾಂಕ 21-02-2022 ರಂದು 18-20 ಗಂಟೆಗೆ ಹೆಸರು ತಿಳಿದು ಬಾರದ ಆರೋಪಿ ಮೋಟಾರ್ ಸೈಕಲ್ ಸವಾರ KA-19-HH-1954 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲನ್ನು ದರ್ಬೆ-ಪತ್ರಾವೋ ಸರ್ಕಲ್ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಸುಳ್ಯ  ಕಡೆಯಿಂದ ದರ್ಬೆ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಪತ್ರಾವೋ ಸರ್ಕಲ್ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ರಸ್ತೆ ದಾಟಲು ರಸ್ತೆಯ ಬದಿ ನಿಂತುಕೊಂಡಿದ್ದ ಪಿರ್ಯಾದುದಾರರಿಗೆ ಡಿಕ್ಕಿಯಾಗಿ, ಪಿರ್ಯಾದುದಾರರು ರಸ್ತೆಗೆ ಬಿದ್ದು, ಬಲಕಾಲಿನ ತೊಡೆಗೆ ಗುದ್ದಿದ ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಹಿತ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಬಳಿಕ ಆರೋಪಿ ಮೋಟಾರ್ ಸೈಕಲ್ ಸವಾರ ಗಾಯಾಳುವನ್ನು ಆಸ್ಪತ್ರೆಗೆ ಕಳುಹಿಸದೇ, ಪೊಲೀಸ್ ಠಾಣೆಗೆ ಮಾಹಿತಿ ನೀಡದೇ ಪರಾರಿಯಾಗಿರುತ್ತಾರೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  32/2022 ಕಲಂ: 279, 337 ಐಪಿಸಿ&134(A&B)IMV Act ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ವಿವೇಕ್ ಆರ್ ಪ್ರಾಯ 21ವರ್ಷ, ತಂದೆ: ರಾಜು ಕೆ.  ವಾಸ: 1-4-33,F4, ವಿಶಾಲ್ ಅಪಾರ್ಟ್ಮೆಂಟ್ ತಾಲೂ,3ನೇ ಪ್ಲೋರ್, ಕುಂಜಿಬೆಟ್ಟು, ಗುಂಡಿಬೈಲು ಶಿವಾಲಿ, ಉಡುಪಿ ತಾಲೂಕು ಎಂಬವರ ದೂರಿನಂತೆ ದಿನಾಂಕ 19-02-2022 ರಂದು 04-30 ಗಂಟೆಗೆ ಆರೋಪಿ ಬಸ್ಸು ಚಾಲಕ ಮೂರ್ತಿ ಎಂಬವರು KA-20-D-5566 ನೇ ನೋಂದಣಿ ನಂಬ್ರದ ಬಸ್ಸನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಬೆಂಗಳೂರು ಕಡೆಯಿಂದ ಮಂಗಳೂರು  ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಬಸ್ಸು ಚಾಲಕನ ಹತೋಟಿ ತಪ್ಪಿ ರಸ್ತೆಯ ಎಡಭಾಗಕ್ಕೆ ಪಲ್ಟಿಯಾಗಿʼʼʼ ಬಸ್ಸು ಜಖಂಗೊಂಡು, ಪ್ರಯಾಣಿಕರಿಗೆ ಗಾಯವಾಗಿರುತ್ತದೆ. ಗಾಯಗೊಂಡ ರಾಮ್‌ ಕುಮಾರ್‌ ಮತ್ತು ಮಹಾಜಿತ್‌ ಬಹದ್ದೂರ್‌ ಎಂಬವರು ಉಡುಪಿಯ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ ಮತ್ತು ಅಮಿತಾ ಎಂಬವರಿಗೆ ಗುದ್ದಿದ ಗಾಯವಾಗಿರುತ್ತದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆಯಲ್ಲಿ  ಅ.ಕ್ರ:  33/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಉಪ್ಪಿನಂಗಡಿ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಕ್ಬರ್‌ ಸಿದ್ದಿಕ್‌ ಪ್ರಾಯ  37 ವರ್ಷ ತಂದೆ.ಮೊಹಮ್ಮದ್‌ವಾಸ:  ಗೋಳಿತೊಟ್ಟು ಜನತಾ ಕಾಲೊನಿ ಮನೆ, ಗೋಳಿತೊಟ್ಟು ಗ್ರಾಮ ಕಡಬ ಎಂಬವರ ದೂರಿನಂತೆ ದಿನಾಂಕ: 21-02-2022ರಂದು   15.00ಗಂಟೆ ಸಮಯಕ್ಕೆ ಕಡಬ ತಾಲೂಕು ಕೊಣಾಲು ಗ್ರಾಮದ ಕೋಲ್ಪೆ ಮಸೀದಿ ಬಳಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ಧಾರಿಯಲ್ಲಿ ಕೆಎ:19 ಹೆಚ್‌ ಹೆಚ್‌ 0290 ನೇ ಮೋಟಾರು ಸೈಕಲನ್ನು ಅದರ  ಸವಾರನು ಗೋಳಿತೊಟ್ಟು ಕಡೆಯಿಂದ ನೆಲ್ಯಾಡಿ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿದ್ದಾಗ ಕೋಲ್ಪೆ ಮಸೀದಿ ಬಳಿ  ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಮಣ್ಣು ರಸ್ತೆಯಲ್ಲಿ ನಿಲ್ಲಿಸಿದ್ದ ನ್ಯಾನೋ ಕಾರೊಂದನ್ನು ಅದರ ಚಾಲಕ ಯಾವುದೇ ಸೂಚನೆ ನೀಡದೆ ಅಜಾಗರೂಕತೆಯಿಂದ ಒಮ್ಮೆಲೆ ಕಾರನ್ನು ರಸ್ತೆಗೆ ಚಲಾಯಿಸಿ ಉಪ್ಪಿನಂಗಡಿ ಕಡೆಗೆ  ಕಾರನ್ನು ಚಲಾಯಿಸಿದ ಪರಿಣಾಮ ಕೆಎ:19 ಹೆಚ್‌ ಹೆಚ್‌ 0290 ನೇ ಮೋಟಾರು ಸೈಕಲ್‌ ಕಾರಿಗೆ ಡಿಕ್ಕಿ ಹೊಡೆದು ಮೋಟಾರು ಸೈಕಲ್‌ ಸವಾರ  ಹರ್ಷದ್‌ ರವರ ಎಡಕೈಗೆ  ರಕ್ತಗಾಯ ಹಾಗೂ  ಬೆನ್ನಿಗೆ  ಹಾಗೂ  ಎಡಕಾಲಿನ ಬೆರಳಿಗೆ ರಕ್ತಗಾಯವಾಗಿದ್ದು ಗಾಯಾಳು ಮಂಗಳೂರು ಹೈಲ್ಯಾಂಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವುದಾಗಿದೆ.ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 31/2022 ಕಲಂ: 279 337 ಐ ಪಿ ಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 2

 • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶಂಕರ ನಾರಾಯಣ ಭಟ್ ಪ್ರಾಯ:70 ವರ್ಷ ತಂದೆ: ದಿ|| ಗೋವಿಂದ ಭಟ್ ಕಲ್ಲಮಜಲು ಮನೆ,ಬಾರೆಬೆಟ್ಟ ಅಂಚೆ  ಕೊಳ್ನಾಡು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 21-02-2022 ರಂದು ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕಲ್ಲಮಜಲು ಎಂಬಲ್ಲಿ ಫಿರ್ಯಾದಿದಾರರ ಬಾಬ್ತು  ಅಡಿಕೆ ತೋಟವಿದ್ದು ಸದ್ರಿ ಅಡಿಕೆ ತೋಟದಿಂದ ಅಡಿಕೆ ಕಳ್ಳತನವಾಗುವ ಬಗ್ಗೆ ಸಂಶಯವಿದ್ದು ಈ ಬಗ್ಗೆ ಪಿರ್ಯಾದಿದಾರರು ಹಾಗೂ ಅವರ ಮಗ ಗೋವಿಂದರಾಜು ಹಾಗೂ ಇತರರು ತೋಟದಲ್ಲಿ ಕಾದು ಕುಳಿತಿದ್ದು ರಾತ್ರಿ ಸುಮಾರು 11.45 ಗಂಟೆಗೆ ಒಬ್ಬ ವ್ಯಕ್ತಿಯು ಪಿರ್ಯಾದುದಾರರ ತೋಟದ ಬದಿಯಲ್ಲಿರುವ ಹೊಳೆಯಿಂದ ಚಿಕ್ಕ ಟಾರ್ಚನೊಂದಿಗೆ ಪಿರ್ಯಾದುದಾರರ ತೋಟಕ್ಕೆ ಪ್ರವೇಶಿಸಿ ಅಡಿಕೆ ಹೆಕ್ಕಲು ಪ್ರಯತ್ನಿಸಿದ ಸಮಯ ಪಿರ್ಯಾದಿ ಹಾಗೂ ಇತರರು  ಕತ್ತಲೆಯಲ್ಲಿ ಆತನ ಹತ್ತಿರ ಬರುವುದನ್ನು ಕಂಡು ಆತನು ಓಡಲು ಪ್ರಯತ್ನಿಸಿದಾಗ ಪಿರ್ಯಾದಿ ಮತ್ತು ಇತರರು ಕೈಯಲ್ಲಿದ್ದ ಟಾರ್ಚ್ ಲೈಟಿನ ಬೆಳಕನ್ನು ಹಾಯಿಸಿದಾಗ ಆತನ ಗುರುತು ಸಿಕ್ಕಿರುತ್ತದೆ, ಆತನು ಕಳವು ಮಾಡಲು ಪ್ರಯತ್ನಿಸಿದ ಅಡಿಕೆಯನ್ನು ಬಿಟ್ಟು ಓಡಿ ಹೋಗಿರುವುದಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 29/2022 ಕಲಂ: 457,380,511 ಬಾಧಂಸಂ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಕಡಬ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶಶಿಕಲಾ ರೈ ಗಂಡ ; ಬಾಲಕೃಷ್ಣ ಶೆಟ್ಟೆ ವಾಸ ; ಪಾಲೆತ್ತಡ್ಕ ಮನೆ ಗ್ರಾಮ ; ಬಂಟ್ರ ಕಡಬ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ಮನೆ ವಾರ್ತೆ ಕೆಲಸ ಮಾಡಿಕೊಂಡಿದ್ದು ಸಂಸಾರದೊಂದಿಗೆ ವಾಸವಾಗಿದ್ದು ದಿನಾಂಕ 21/02/2022 ಎಂದಿನಂತೆ ಮನೆಮಂದಿಯೆಲ್ಲ  ರಾತ್ರಿ ಉಟೋಪಚಾರ ಮುಗಿಸಿಕೊಂಡು ರಾತ್ರಿ 22-45 ಗಂಟೆಗೆ  ಮನೆಯ  ಎದುರಿನ ಹಾಗೂ ಹಿಂದಿನ ಬಾಗಿಲುಗಳ ಒಳಗಿನ ಚಿಲಕ ಹಾಕಿ ಮಲಗಿದ್ದು ದಿನಾಂಕ 22-02-2022 ರಂದು ಬೆಳ್ಳಿಗೆ 06-00 ಗಂಟೆಗೆ ಎದ್ದು  ನೋಡಲಾಗಿ  ಮನೆಯ ಹಿಂಬದಿಯ ಬಾಗಿಲು ತೆರೆದಿದ್ದು ಯಾರೋ ಕಳ್ಳರು ಮನೆಯ ಹಿಂಬಾದಿಯ ಬಾಗಿಲನ್ನು ಬಲತ್ಕಾರವಾಗಿ ತಳ್ಳಿ ಮನೆಯ ಒಳ ಪ್ರವೇಶಿಸಿ ಕೋಣೆಯಲ್ಲಿ ಇದ್ದ ಗೋದ್ರೆಜ್ ಕಪಾಟನ್ನು ತೆರೆದು ಸೀರೆ ಬಟ್ಟೆ ಬರೆಗಳನ್ನು ಚಲ್ಲಾಪಿಲ್ಲಿ ಮಾಡಿದ್ದು. ಪಿಯಾದುದಾರರು ಸೀರೆಗಳ ನಡುವೆ ಇಟ್ಟಿದ ನಗದು 35.000 ರೂ / ಹಾಗೂ ಪಿರ್ಯಾದಿಯ ಗಂಡನವರು ಸೆಲ್ಪ್ ನಲ್ಲಿ ಇರಿಸಿದ್ದ ನಗದು ರೂ 30.000 ಸಾವಿರ ಮತ್ತು ಮಗನ ಯುಕೋ ಬ್ಯಾಂಕಿನ ATM ಕಾರ್ಡ್. ಹಾಗೂ ಒಂದು ಬೆಳ್ಳಿಯ ಚೈನ್ ಇದರ ಅಂದಾಜು ಬೆಲೆ 1000 ರೂ ಕಳ್ಳತನವಾಗಿರುತ್ತಾದೆ ಯರೋ ಕಳ್ಳರು ರಾತ್ರಿ ಸಮಯ ಮನೆಯ  ಹಿಂಬದಿಯ ಬಾಗಿಲನ್ನು ಬಲತ್ಕಾರವಾಗಿ ತಳ್ಳಿ ಒಳಗೆ ನುಗ್ಗಿ ಕಳವು ಮಾಡಿರುವುದಾಗಿದೆ ಕಳವು ಆದ ಅಂದಾಜು ಬೆಲೆ ನಗದು  ರೂ ಒಟ್ಟು 65.000 / ಮೊತ್ತ ಮತ್ತು ಬೆಳ್ಳಿಯ ಚೈನ್ 1000/-ರೂ ಮೊತ್ತ ಕಳವು ಮಾಡಿಕೊಂಡು ಹೋಗಿರುತ್ತಾರೆ  ಕಳುವಾದ ಒಟ್ಟು ಮೌಲ್ಯ 66.000 ರೂ ಆಗಬಹುದು. ಈ ಬಗ್ಗೆ ಕಡಬ ಠಾಣಾ ಅ.ಕ್ರ 15/2022 ಕಲಂ. 457 .380 IPC    ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಜೀವ ಬೆದರಿಕೆ ಪ್ರಕರಣ: 1

 • ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಡಿ ಚಂದಪ್ಪ ಮೂಲ್ಯ (71) ತಂದೆ; ದಿ” ಕೋರಗ ಮೂಲ್ಯ .ವಾಸ:ಅಮೂಲ್ಯ ನಿವಾಸ,ಲಕ್ಷ್ಮಿನಗರ ಉಪ್ಪಿನಂಗಡಿ ಗ್ರಾಮ ಮತ್ತು ಅಂಚೆ ಪುತ್ತೂರು ಎಂಬವರ ದೂರಿನಂತೆ ಫಿರ್ಯಾಧಿದಾರರಾದ  ಡಿ ಚಂದಪ್ಪ ಮೂಲ್ಯರವರು ಪುತ್ತೂರು ತಾಲೂಕು ಹಿರೇಬಂಡಾಡಿ ಗ್ರಾಮದ ಅಡೆಕ್ಕಲ್‌ ಎಂಬಲ್ಲಿ ಸರಕಾರದ ಅನುಮತಿ ಪಡೆದ ಹೆಚ್‌ಪಿ ಗ್ಯಾಸ್‌ ಗೋಡಾನ್‌ ನ ಕಂಪೌಂಡ್‌ನ  ಸುತ್ತಲೂ  08 ಫೀಟ್‌ ಎತ್ತರದ ತಂತಿ ಬೇಲಿ ನಿಮಿಸುತ್ತಿರುವಾಗ  ದಿನಾಂಕ 11-02-2022  ರಂದು  14:30  ಗಂಟೆಗೆ  ಆರೋಪಿಗಳಾದ ಸಿದ್ದೀಕ್‌ ಹಾಗೂ ಅವರ ಸಹೋದರರು ಮತ್ತು ಅಶೋಕ ತಂದೆ:ನಾರಾಯಾಣ ಗೌಡ ಹಾಗೂ ಇತರ ಸುಮಾರು 10-15 ಜನರು ಸೇರಿಕೊಂಡು ಫಿರ್ಯಾದಿದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ತಂತಿ ಬೇಲಿ ನಿಮೀಸಲು ಅಡ್ಡಿಪಡಿಸಿದ್ದಲ್ಲದೇ, ಕೆಲಸಗಾರರಿಗೆ ಮತ್ತು ಪಿಯಾದಿದಾರರಿಗೆ ತಂತಿ ಬೇಲಿ ನಿರ್ಮಿಸಿದರೇ, ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲವೆಂದು ಜೀವಬೆದರಿಕೆ ಒಡ್ಡಿರುತ್ತಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ:32/2022 ಕಲಂ:143,147, 149,447,506,  ಭಾದಂಸಂಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 3

 • ವಿಟ್ಲ ಪೊಲೀಸ್ ಠಾಣೆ : ದಿನಾಂಕ: 22.2.2022 ರಂದು ವಿಟ್ಲ ಪೊಲೀಸ್‌ ಠಾಣೆಯಲ್ಲಿ ಅ.ಕ್ರ 30/2022 ಕಲಂ: 498(ಎ) ಬಾಧಂಸಂ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಸುಬ್ರಹ್ಮಣ್ಯ ಪೊಲೀಸ್ ಠಾಣೆ : ದಿನಾಂಕ: 22-02-2022   ರಂದು  ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯಲ್ಲಿ ಅ.ಕ್ರ ನಂಬ್ರ 23-2022 ಕಲಂ: 498A,323,504,506, R/W 34 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬೆಳ್ತಂಗಡಿ ಪೊಲೀಸ್ ಠಾಣೆ : ದಿನಾಂಕ: 22/02/2022 ರಂದು ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಅ.ಕ್ರ  10/2022 ಕಲಂ: 354,(ಎ) 506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

 • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮೋಹನ್  ನ್ಯಾಕ್ ಪ್ರಾಯ;39 ವರ್ಷ ತಂದೆ; ಸಂಜೀವ ನ್ಯಾಕ್ ವಾಸ; ಹೊಸಕಾಪು ಮನೆ ಮುಂಡಾಜೆ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರ  ತಂದೆ ಸಂಜೀವ್  ನ್ಯಾಕ್ (65) ಎಂಬವರು ದಿನಾಂಕ;21-02-2022 ರಂದು ಎಂದಿನಂತೆ  ರಾತ್ರಿ 22.00 ಗಂಟೆಗೆ ಊಟಮಾಡಿ ಮಲಗಿರುತ್ತಾರೆ. ದಿನಾಂಕ;22-02-2022 ರಂದು  ಬೆಳಿಗ್ಗೆ 05.00  ಗಂಟೆಗೆ ಪಿರ್ಯಾದುದಾರರು  ಎದ್ದು ನೋಡಿದಾಗ ತಂದೆ ಮನೆಯಲ್ಲಿ ಇಲ್ಲದೇ ಇದ್ದು  ಅವರನ್ನು ಹುಡುಕಾಡಿದಾಗ  ಮನೆಯಿಂದ  ಸುಮಾರು 500 ಮೀಟರ್  ದೂರದಲ್ಲಿ ಇರುವ ಪಿರ್ಯಾದುದಾರರ ಜಾಗದಲ್ಲಿರುವ  ಗೇರು ಮರಕ್ಕೆ ನೈಲಾನ್ ಹಗ್ಗವನ್ನು  ಕಟ್ಟಿ ಅದರ ಇನ್ನೊಂದು ತುದಿಯನ್ನು ಕುತ್ತಿಗೆಗೆ ಕಟ್ಟಿ ನೇಣುಬಿಗಿದು  ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆ ಯು ಡಿ ಆರ್ 11/2022 ಕಲಂ: 174 ಸಿಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 23-02-2022 11:10 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080