ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

ಪುತ್ತೂರು ಸಂಚಾರ ಪೊಲೀಸ್ ಠಾಣೆ: ದಿನಾಂಕ 24-08-2021 ರಂದು 08-45 ಗಂಟೆಗೆ ಆರೋಪಿ ಅಟೊರಿಕ್ಷಾ ಚಾಲಕ ಸತೀಶ್‌ ಶೆಟ್ಟಿ ಎಂಬವರು KA-21-C-1099ನೇ ನೋಂದಣಿ ನಂಬ್ರದ ಅಟೋರಿಕ್ಷಾವನ್ನು ಉಪ್ಪಿನಂಗಡಿ-ಹಿರೇಬಂಡಾಡಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಉಪ್ಪಿನಂಗಡಿ ಕಡೆಯಿಂದ ಹಿರೇಬಂಡಾಡಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ರಾಮನಗರ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಾಂಗ್‌ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದಿದಾರರಾದ ರಂಜಿತ್‌ ರಾಜು ನಾಯರ್‌ ಪ್ರಾಯ 29 ವರ್ಷ, ತಂದೆ: ರಾಜು ವಾಸು ನಾಯರ್ ವಾಸ:  ಅಶ್ವೀರ್‌ ಕೌಂಪೌಂಡ್‌, ನಿನ್ನಿಕಲ್‌ ಉಪ್ಪಿನಂಗಡಿ ಗ್ರಾಮ, ಪುತ್ತೂರು ತಾಲೂಕು ಎಂಬವರು ನಿನ್ನಿಕಲ್‌ ಕಡೆಯಿಂದ ಗೋಳಿತೊಟ್ಟು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-P-3048ನೇ ನಂಬ್ರದ ಜೆಸಿಬಿ ವಾಹನಕ್ಕೆ ಅಪಘಾತವಾಗಿ, ಆರೋಪಿ ಅಟೋರಿಕ್ಷಾ ಚಾಲಕ ಸತೀಶ್‌ ಶೇಟ್ಟಿರವರಿಗೆ, ಬಲಕಾಲಿಗೆ ಗಾಯವಾಗಿ ಪತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  106/2021 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಬ್ರಮಣ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ದಾಮೋದರ್ ಪ್ರಾಯ:32 ವರ್ಷ,ತಂದೆ: ಅಣ್ಣಿ ತಡಗಜೆ,ವಾಸ: ತಡಗಜೆ ಮನೆ,ಬೆಳ್ಳಾರೆ ಗ್ರಾಮ,& ಅಂಚೆ ಸುಳ್ಯ ತಾಲೂಕು, ಎಂಬವರ ದೂರಿನಂತೆ  ದಿನಾಂಕ  24-08-2021 ರಂದು  ಬೆಳಿಗ್ಗೆ 9-30 ಗಂಟೆಗೆ  ಸುಬ್ರಹ್ಮಣ್ಯ ಕಡೆಯಿಂದ  ನಿಂತಿಕಲ್ಲು ಕಡೆಗೆ  ಪಿರ್ಯಾದಿದಾರರು   ಮೋಟಾರ್ ಸೈಕಲ್‌   KA 21  U  5930 ರಲ್ಲಿ  ಸಹ ಸವಾರ  ಸಂದೀಪ ಕಾವಿನ  ಮೂಲೆ  ರವರ ಜೊತೆಗೆ ಹೋಗುತ್ತಿರುವಾಗ ಕಡಬ ತಾಲೂಕು  ಬಳ್ಪ  ಎಂಬಲ್ಲಿಗೆ ತಲುಪಿದಾಗ ಎದುರುಗಡೆಯಿಂದ   ಮೋಟಾರ್ ಸೈಕಲ್‌   KA 21 W 4881 ನೇಯದನ್ನು  ಅದರ ಸವಾರ  ಕಿರಣ್‌ ಎಂಬಾತನು  ನಿರ್ಲಕ್ಷತೆಯಿಂದ  ರಸ್ತೆಯ  ತೀರ  ಎಡ ಬದಿಗೆ ಚಲಾಯಿಸಿ   ಡಿಕ್ಕಿ ಹೊಡೆದಿರುತ್ತದೆ.  ಪರಿಣಾಮ ಪಿರ್ಯಾದಿದಾರರ  ಕಾಲಿನ  ಬೆರಳಿನ  ಮುರಿತ ಹಾಗೂ  ಕೈ ಮತ್ತು ಬೆನ್ನಿನಲ್ಲಿ  ಗಾಯವಾಗಿದ್ದು  ಸಹ ಸವಾರ ಸಂದೀಪನ  ಕೈ ಮುರಿತ ಹಾಗೂ ತಲೆಗೆ ಪೆಟ್ಟು ಬಿದ್ದು  ಗಾಯವಾಗಿರುತ್ತದೆ..ಈ ಬಗ್ಗೆ ಸುಬ್ರಮಣ್ಯ  ಪೊಲೀಸ್ ಠಾಣೆಯಲ್ಲಿ ಅ.ಕ್ರ  : 60-2021 ,ಕಲಂ:279,337,338  ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕೊಲೆ ಯತ್ನ ಪ್ರಕರಣ: 1

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ರಾಧಾಕೃಷ್ಣ (44), ತಂದೆ: ದಿ|| ರಾಮಣ್ಣ ಪೂಜಾರಿ, ವಾಸ: ತಾರಿಗುಡ್ಡೆ ಮನೆ, ಚಿಕ್ಕಮುಡ್ನೂರು ಗ್ರಾಮ, ಪುತ್ತೂರು ಎಂಬವರ ದೂರಿನಂತೆ ದಿನಾಂಕ: 24-08-2021 ರಂದು ಸಾಯಂಕಾಲ ಫಿರ್ಯಾದಿದಾರರು ತನ್ನ ಬಾಬ್ತು ಕೆಎ 04 ಸಿ 1709 ನೇ ಇನ್ನೋವಾ ಕಾರಿನಲ್ಲಿ ಕೆಲಸದ ನಿಮಿತ್ತ ಪುತ್ತೂರು ಪೇಟೆಗೆ ಬಂದವರು ಕೆಲಸ ಮುಗಿಸಿ  ಅಲ್ಲಿಂದ ವಾಹನಕ್ಕೆ ಡೀಸೆಲ್‌‌‌ ಹಾಕಿಸುವ ಬಗ್ಗೆ ಪುತ್ತೂರು ಕಸ್ಬಾ ಗ್ರಾಮದ ದರ್ಬೆ ಜಂಕ್ಷನ್‌‌ ಬಳಿ ಇರುವ ಜಗನ್ನಾಥ ರೈ ಪಟ್ರೋಲ್ ಬಂಕ್‌‌‌ ಗೆ ರಾತ್ರಿ 08:30 ಗಂಟೆಗೆ ತಲುಪಿ ತನ್ನ ವಾಹನಕ್ಕೆ ಡೀಸೆಲ್ ಹಾಕಿಸಿ ಬಳಿಕ ಅಲ್ಲಿ ಇರುವ ಏರ್‌ ಪಂಪ್‌‌ಗೆ ಹೋಗಿ ವಾಹನದಿಂದ ಇಳಿದು ಟಯರ್‌ಗಳಿಗೆ ಗಾಳಿ ತುಂಬಿಸುವ ಸಮಯ 6  ಜನ ಆರೋಪಿಗಳಾದ ಕಿಶೊರ್‌‌‌‌‌, ರಾಕೇಶ್‌‌ ಪಂಚೋಡಿ‌, ರೆಹಮಂತ್, ಇಬ್ರಾಹಿಂ, ದೇವಿಪ್ರಸಾದ್‌ ಮತ್ತು ಅಶ್ರಫ್‌‌ ಎಂಬವರು ಒಂದು ಕಾರು ಮತ್ತು ಎರಡು ಬೈಕ್‌‌ನಲ್ಲಿ ಬಂದವರು ಅಕ್ರಮವಾಗಿ ಗುಂಪುಸೇರಿ ಫಿರ್ಯಾದುದಾರರನ್ನು ಕೊಲೆ ಮಾಡುವ ಉದ್ದೇಶದಿಂದ ಸ್ಥಳದಲ್ಲಿ ಇದ್ದ ಮಾರಕಾಯುಧವಾದ ಫೈಬರ್‌‌‌‌‌ ಪಾರ್ಕಿಂಗ್‌ ಕೋನ್‌‌‌, ನೋಪಾರ್ಕಿಂಗ್‌‌‌ ಬೋರ್ಡಿನ ಕಬ್ಬಿಣದ ಸ್ಟಾಂಡ್‌‌‌‌, ಹೆಲ್ಮೆಟ್‌‌‌ ಹಾಗೂ ಕಲ್ಲಿನಿಂದ ಪಿರ್ಯಾದಿದಾರರ ಬೆನ್ನಿಗೆ ಎಡಗೈ ಮಣಿಗಂಟಿಗೆ, ಹಣೆಯ ಎಡಬದಿಗೆ ಬಲವಾಗಿ ಹಲ್ಲೆ ಮಾಡಿ ರಕ್ತಗಾಯವನ್ನು ಉಂಟು ಮಾಡಿರುವುದಲ್ಲದೆ, ಫಿರ್ಯಾದುದಾರರ ವಾಹವನನ್ನು  ಜಖಂಗೊಳಿಸಿ ನಷ್ಟ ಉಂಟುಮಾಡಿರುತ್ತಾರೆ. ಹಲ್ಲೆಯ ಪರಿಣಾಮ ಗಾಯಗೊಂಡ ಪಿರ್ಯಾದುದಾರರು ಪುತ್ತೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿಇರುತ್ತಾರೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಅ.ಕ್ರ: 64/2021, ಕಲಂ: 143, 147, 148, 307, 324, 427 ಜೊತೆಗ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಜೀವ ಬೆದರಿಕೆ ಪ್ರಕರಣ: 1

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ರೇವತಿ(50) ಕೊಟಿಬೆಟ್ಟು ಮನೆ, ಬಡಗಬೆಳ್ಳೂರು ಗ್ರಾಮ ಎಂಬವರ ದೂರಿನಂತೆ ಪಿರ್ಯಾದುದಾರರು ಆಶಾಕಾರ್ಯ ಕರ್ತೆಯಾಗಿ ಕೆಲಸ ಮಾಡಿಕೊಂಡಿದ್ದು  ದಿನಾಂಕ 21.08.2021 ರಂದು ಬೆಳಿಗ್ಗೆ 11.00 ಗಂಟೆಗೆ  ಬಡಗಬೆಳ್ಳೂರು ಪಂಚಾಯತ್ ನಲ್ಲಿ  ಸಾರ್ವಜನಿಕ ಕೋವಿಡ್ 19 ವ್ಯಾಕ್ಸಿ ನೇಷನ್  ನಡೆಯುತ್ತಿರುವ ಸಂದರ್ಭ ದಲ್ಲಿ  ಆಶಾಕಾರ್ಯ ಕರ್ತ ರಾಗಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭ  ಆರೋಪಿ ಗೋಪಾಲ ಎಂಬವರು ಪಿರ್ಯಾದುದಾರರ ಮೇಲೆ   ವಿನಾಕಾರಣ ಆರೋಪ ಹಾಗೂ ಮನಸ್ಸಿಗೆ ನೋವಾಗುವಂತೆ ಸಾರ್ವ ಜನಿಕವಾಗಿ ಬೈದು ಹೋಗಿದ್ದು ಕೂಡಲೇ ದೇವಪ್ಪ ಎಂಬವರು  ಪಿರ್ಯಾದುದಾರರಿಗೆ  ಕರೆ ಮಾಡಿ ಪಿರ್ಯಾದುದಾರರ ಮೇಲೆ  ಇಲ್ಲಸಲ್ಲದ ಆರೋಪವನ್ನು ಹೊರಿಸಿ ಬಾಯಿಗೆ ಬಂದಂತೆ ಬೈದಿರುತ್ತಾರೆ. ಅಲ್ಲದೇ  ಪಂಚಾಯತ್ ಉಪಾದ್ಯಕ್ಷರಾದ ಮಮತಾ ರವರು ಕೂಡ ಈ ಹಿಂದೆ  ಪಿರ್ಯಾದುದಾರರ ಮೇಲೆ ಇಲ್ಲ ಸಲ್ಲದ ಆರೋಪವನ್ನು ಮಾಡುತಿದ್ದು ದ್ವೇಷ ಕಟ್ಟಿಕೊಂಡಿದ್ದು  ವ್ಯಾಕ್ಸಿನ್ ಮುಗಿದ ನಂತರ ಗೋಪಾಲರವರು  ಪಂಚಾಯತ್  ಎದುರುಗಡೆ ರೋಡ್ ನಲ್ಲಿ ನಿಂತು ಪಿರ್ಯಾದುದಾರರಿಗೆ ಮಾನಕ್ಕೆ ಕುಂದಾಗುವಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಯಲ್ಲಿ ಕಬ್ಬಿಣದ ರಾಡನ್ನು ಹಿಡಿದುಕೊಂಡು ಬಂದು ನಿನ್ನನ್ನು ಹೊಡೆದು ಸಾಯುಸುತ್ತೇನೆ ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ.ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ   97-2021 ಕಲಂ 506,509,504 R/W 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 2

ಬಂಟ್ವಾಳ ನಗರ ಪೊಲೀಸ್ ಠಾಣೆ : ದಿನಾಂಕ: 24-08-2021 ರಂದು ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ಅಕ್ರ: 99/2021 ಕಲಂ:  448,  504, 323, ಐಪಿಸಿ ಮತ್ತು ಕಲಂ: 3(1)(ಆರ್), 3(1)(ಎಸ್), 3(2)(5ಎ) ಎಸ್ ಸಿ  ಎಸ್ ಟಿ ಕಾಯ್ದೆ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವೇಣೂರು ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪಾಸ್ಕಲ್ ಪಿಂಟೋ (56),S/O ದಿ ಪೀಟರ್ ಪಿಂಟೋ ವಾಸ: ಪಿಂಟೋ ನಿವಾಸಮನೆ, ಶ್ರೀರಾಮನಗರ,ವೇಣೂರು ಕರಿಮಣೇಲು ಗ್ರಾಮ,ಬೆಳ್ತಂಗಡಿ ಎಂಬವರ ದೂರಿನಂತೆ, ವೇಣೂರು ಪೇಟೆಯಲ್ಲಿ ಪಿಂಟೋ ಕೋಲ್ಡ್ ಸ್ಟೋರೆಜ್ ಎಂಬ ಮಾಂಸದ ಅಂಗಡಿಯನ್ನು ನಡೆಸುತ್ತಿರುವುದಾಗಿದೆ. ಕೋಳಿ ಅಂಗಡಿಯಲ್ಲಿ ಅವರ  ಹೆಂಡತಿ ಮತ್ತು ಪಿರ್ಯಾದಿದಾರರು  ಕೆಲಸ ಮಾಡಿಕೊಂಡು ಹಗಲು ಸಮಯ ಅಲ್ಲೆ ಇರುವುದಾಗಿದೆ. ಪಿರ್ಯಾದಿದಾರರ  ಬಾಬ್ತು ಕೆಎ 21 ಯು 0373 ನೇ ಯಮಹಾ ಸ್ಕೂಟರ್  ಮತ್ತು ಕೆಎ 19 ಎಂಬಿ 2084 ನೇ ಓಮಿನಿ ವಾಹನವನ್ನು ಅವರ  ಮನೆಯ ಸಮೀಪ ಇರುವ ವಾಹನ ಶೆಡ್ ನಲ್ಲಿ ನಿಲ್ಲಿಸುವುದಾಗಿದೆ,   ದಿನಾಂಕ 24/08/2021 ರಂದು ಸಂಜೆ  05-15 ಗಂಟೆಗೆ  ಪಿರ್ಯಾದಿದಾರರ ವಾಹನದ ಶೆಡ್ ನಲ್ಲಿ  ಬೆಂಕಿ ಉರಿಯುತ್ತಿರುದನ್ನು ಗಮನಿಸಿ ಪಿರ್ಯಾದಿದಾರರ  ತಾಯಿಯವರು ದೂರವಾಣಿ ಕರೆ ಮಾಡಿ ತಿಳಿಸಿದಂತೆ ತಕ್ಷಣ ಅಲ್ಲಿಗೆ ಹೋಗಿ ನೋಡಲಾಗಿ ಅವರ  ಬಾಬ್ತು ಕೆಎ 21 ಯು 0373 ನೇ  ಯಮಹಾ ಸ್ಕೂಟರ್  ಸಂಪೂರ್ಣವಾಗಿ ಬೆಂಕಿಯಲ್ಲಿ ಸುಡುತ್ತಿದ್ದು , ಅದರ ಪಕ್ಕದಲ್ಲಿದ್ದ ಕೆಎ 19 ಎಂಬಿ 2084 ನೇ ಒಮಿನಿ ವಾಹನದ ಕೂಡಾ ಭಾಗಶ; ಸುಟ್ಟಿದ್ದು ತಕ್ಷಣ ಅಲ್ಲೆ ಪಕ್ಕದಲ್ಲಿ ಅಳವಡಿಸಿದ್ದ ಬೋರ್ ವೆಲ್ ನ ನೀರಿನ ಮೂಲಕ ಬೆಂಕಿ ನಂದಿಸಿದ್ದು  , ಆದರೆ ಸ್ಕೂಟರ್ ಸಂಪೂರ್ಣ ಸುಟ್ಟು ಕರಕಲಾಗಿದ್ದು ಓಮಿನಿ ಭಾಗಶ; ಸುಟ್ಟಿರುತ್ತದೆ. ಪಿರ್ಯಾದಿದಾರರ  ಅಂಗಡಿಯಲ್ಲಿ ಸುಮಾರು  6 ತಿಂಗಳ ಮೊದಲು ಪ್ರಬಾಕರ ಎಂಬಾತನು ಕೆಲಸಕ್ಕಿದ್ದು ಆತನು ಈ ಸಮಯ ಅಲ್ಲಿದ್ದು ನನ್ನ ಬಟ್ಟೆಯನ್ನು ಈ ಹಿಂದೆ ನೀವು ಸುಟ್ಟುದ್ದೀರಿ ಅದಕ್ಕಾಗಿ ನಾನೇ ನಿಮ್ಮ ವಾಹನ ಸುಟ್ಟಿರುತ್ತೇನೆ ನೀವು ಮಾಡುವುದನ್ನು ಮಾಡಿ ಎಂದು ಹೇಳಿ ಅಲ್ಲಿಂದ ಹೋಗಿರುವುದಾಗಿದೆ. ಸುಟ್ಟು ಹೋದ ಯಮಹಾ ಮೋಟಾರು ಸೈಕಲಿನ ಅಂದಾಜು ಮೌಲ್ಯ 30.000/- ಮತ್ತು  ಓಮಿನಿ ಕಾರಿನ ಒಟ್ಟು ಅಂದಾಜು ಮೌಲ್ಯ1,20.000/- ಆಗಿದ್ದು ನಷ್ಟದ ಒಟ್ಟು ಮೊತ್ತ 1,50.000 ಆಗಿರುತ್ತದೆ. ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 54-2021 ಕಲಂ: 435, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮಧು ಎಸ್‌ ಮನೋಹರ್‌, ಪೌರಾಯುಕ್ತರು , ಪುತ್ತೂರು ನಗರ ಸಭೆ, ಪುತ್ತೂರು   ಎಂಬವರ ದೂರಿನಂತೆ ದಿನಾಂಕ 24.08.2021 ರಂದು 15.00 ಗಂಟೆಗೆ ಪುತ್ತೂರು ನಗರ ಸಭಾ ವ್ಯಾಪ್ತಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪಂಚಾಕ್ಷರಿ ಮಂಟಪದ ಬಳಿ ಒಂದು ಅನಾಥ ಶವ ಪತ್ತೆಯಾಗಿರುವುದಾಗಿ ನಗರ ಸಭಾ ಸದಸ್ಯರಾದ ಜಗನ್ನಿವಾಸ್‌ ರಾವ್‌ ಇವರು ತಿಳಿಸಿದ ಮೇರೆಗೆ ನಗರ ಸಭಾ ವತಿಯಿಂದ ಸ್ಥಳ ಪರಿಶೀಲನೆ ಮಾಡಿದ್ದು , ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ಬಲ ಭಾಗದಲ್ಲಿರುವ ಪಂಚಾಕ್ಷರಿ ಮಂಟಪದ ವೇದಿಕೆಯಲ್ಲಿ ಒಬ್ಬ ಗಂಡಸು ಅನಾಥವಾಗಿ ಮಲಗಿರುವುದು ಕಂಡು ಕಂಡು ಬಂದಿರುತ್ತದೆ , ಪರಿಶೀಲಿಸಲಾಗಿ  ಸದ್ರಿ ವ್ಯಕ್ತಿಯ ಉಸಿರಾಟ ನಿಂತಿರುವುದು ಕಂಡು ಬಂದಿದ್ದು , ಆಸುಪಾಸಿನಲ್ಲಿ ವಿಚಾರಿಸಲಾಗಿ ಸದ್ರಿ ವ್ಯಕ್ತಿಯು ದೇವಸ್ಥಾನದ ವಠಾರದಲ್ಲಿ ಭಿಕ್ಷೆ ಬೇಡುತ್ತಿದ್ದು, 2-3 ದಿನಗಳಿಂದ ಸದ್ರಿ ಸ್ಥಳದಲ್ಲಿ ರಾತ್ರಿ ಹೊತ್ತು ಮಲಗುತ್ತಿರುವುದಾಗಿ ತಿಳಿದು ಬಂದಿರುತ್ತದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಯು.ಡಿ.ಆರ್ ನಂ: 24/2021 ಕಲಂ: 174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 25-08-2021 12:42 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080