Feedback / Suggestions

ಹಲ್ಲೆ ಪ್ರಕರಣ: 1

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಕೆ ಮಹಮ್ಮದ್ ಕುಂಞು ಪ್ರಾಯ  55 ವರ್ಷ ತಂದೆ ಮೊಯಿದಿನ್  ಸುಲ್ತಾನ್ ನಗರ ಮನೆ ನಾವೂರು ಗ್ರಾಮ ಬಂಟ್ವಾಳ ತಾಲೂಕು ರವರು ದೊಡ್ಡ ಮಗನ ಹೆಂಡತಿ ಹಾಗು ಅವರ ಮಕ್ಕಳೊಂದಿಗೆ ವಾಸವಾಗಿದ್ದು ದೊಡ್ಡ ಮಗ ವಿದೇಶದಲ್ಲಿದ್ದು, ಪಿರ್ಯಾದುದಾರರ ಸಣ್ಣ ಮಗ ಇರ್ಷಾದನು ಕೊಳ್ತಮಜಲಿನಲ್ಲಿ ವಾಸ ಮಾಡಿಕೊಂಡಿದ್ದವನು ಮನೆಗೆ ಬಂದವನು ದಿನಾಂಕ 27.06.2021 ರಂದು  ಪಿರ್ಯಾದುದಾರರ ಸೊಸೆ ಮಕ್ಕಳಿಗೆ ಚಹಾ ಮಾಡಲೆಂದು ಅಡುಗೆ ಕೋಣೆಗೆ ಹೋಗಿ ಚಹ ಮಾಡುತ್ತಿರುವಾಗ  ಇರ್ಷಾದನು  ಅಡುಗೆ ಕೋಣೆಗೆ ಹೋಗಿ ಚಹ ಮಾಡುವ ಸ್ಟೀಲ್ ಪಾತ್ರೆಯನ್ನು ಚಹ ಕುದಿಯುತ್ತಿದ್ದಂತೆ ಒಲೆಯಿಂದ ತೆಗೆದು ಸೊಸೆಯ ಮುಖಕ್ಕೆ ಹೊಡೆದಿದ್ದು ಆ ಸಮಯ ಪಿರ್ಯಾದುದಾರರ ಸೊಸೆ ಬೊಬ್ಬೆ ಹಾಕಿದಾಗ ಪಿರ್ಯಾದುದಾರರು ಅಡುಗೆ ಕೋಣೆಗೆ ಹೋಗಿ ಜಗಳ ಮಾಡುತ್ತಿರುವ ಬಗ್ಗೆ ಕೇಳಿದಾಗ ಇರ್ಷಾದನು ಚಹ ಮಾಡುವ ಸ್ಟೀಲ್ ಪಾತ್ರೆಯನ್ನು ತೆಗೆದುಕೊಂಡು ಪಿರ್ಯಾದುದಾರರ ಬಲಕೈಗೆ ಹೊಡೆದು ಚಾ ಕುಡಿಯುವ ಗಾಜಿನ ಗ್ಲಾಸ್ ನಿಂದ ಪಿರ್ಯಾದುದಾರರ ತಲೆಗೆ ಹೊಡೆದಿದ್ದು ,ಸ್ಟೀಲ್ ಪಾತ್ರೆಯ ಹಿಡಿಯಿಂದ  ಎಡಕೈ ಮೊಣಗಂಟಿಗೆ  ಹೊಡೆದಿರುವುದರಿಂದ ರಕ್ತ ಬರುವ ಗಾಯವಾಗಿದ್ದು ,ಗಾಜಿನ ಗ್ಲಾಸ್ ನಿಂದ ತಲೆಗೆ  ಹೊಡೆದಿರುವುದರಿಂದ  ತಲೆಯ ಎಡಭಾಗಕ್ಕೆ ರಕ್ತ ಗಾಯವಾಗಿದ್ದು  ಪಿರ್ಯಾದುದಾರರ ಸೊಸೆಗೆ  ಸ್ಟೀಲ್ ಪಾತ್ರೆಯಿಂದ ಹೊಡೆದ ಪರಿಣಾಮ ಹಣೆಯ ಬಲ ಬದಿಗೆ ರಕ್ತಗಾಯವಾಗಿರುತ್ತದೆ.  ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ   70-2021 ಕಲಂ 324, 354 ಐಪಿಸಿ    ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

 

ವೇಣೂರು ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶಾಂತಪ್ಪ ಪ್ರಾಯ 31 ತಂದೆ: ಅಣ್ಣು  ವಾಸ: ಹಿಮರೋಡಿ  ಮನೆ ಬಡಗಕಾರಂದೂರು ಗ್ರಾಮ ಬೆಳ್ತಂಗಡಿ ರವರ ಅಣ್ಣ ಓಬಯ್ಯ(37) ಎಂಬವರು ಪುತ್ತೂರಿನ ಕುರಿಯ ಗ್ರಾಮದ ಹೊನ್ನಮ್ಮ ಎಂಬವರನ್ನು  ವಿವಾಹವಾಗಿದ್ದು  ಕಳೆದ 2 ವರ್ಷಗಳಿಂದ ಹೆಂಡತಿಯೊಂದಿಗೆ  ಮನಸ್ಥಾಪದಿಂದ ಬೇರೆ ಬೇರೆಯಾಗಿದ್ದು  ಹೊನ್ನಮ್ಮರವರು  ಅವರ ತವರು ಮನೆಯಲ್ಲಿಯೇ ವಾಸವಿರುತ್ತಾರೆ.  ಓಬಯ್ಯನು ಪಿರ್ಯಾದಿದಾರರ ಮನೆಯಲ್ಲಿದ್ದು  ಸ್ಥಳೀಯವಾಗಿ ಕೂಲಿ ಕೆಲಸದ ಬಗ್ಗೆ ಹೋಗುತ್ತಿದ್ದು ದಿನಾಂಕ 27-06-2021 ಕೂಡಾ ಮದ್ಯಾಹ್ನ ದವೆರೆಗೆ  ಕೆಲಸಕ್ಕೆ ಹೋಗಿ ಮನೆಗೆ ಬಂದಿದ್ದು ಸಂಜೆ  ಮನೆಯಲ್ಲಿದ್ದ ಸಮಯ ಅವರಿಗೇ ತೀವ್ರ ಎದೆ ನೋವು ಕಾಣಿಸಿದ್ದು ಪಿರ್ಯಾದಿದಾರರು  ಹಾಗೂ ಅವರ ತಮ್ಮ ರಮೇಶ ಹಾಗೂ ಸಂಬಂದಿಕರಾದ ಕೊರಗಪ್ಪ ರವರು ಸೇರಿ  ಅಳದಂಗಡಿಯ ಸ್ಥಳೀಯ ವೈದ್ಯರಲ್ಲಿ ತೋರಿಸಿ ನಂತರ ಸೇವಾ ಭಾರತಿ ಅಂಬುಲೇನ್ಸ್‌  ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ  ತಲುಪಿದಾಗ  ಅಲ್ಲಿನ ವೈದ್ಯರು  ಪರೀಕ್ಷಿಸಿ ಓಬಯ್ಯರವರು   ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಯುಡಿ ಆರ್ ನಂಬ್ರ : 16 - 2021 ಕಲಂ: 174 ಸಿ ಆರ್ ಪಿ ಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುಂಜಾಲಕಟ್ಟೆ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ನವೀನ ಪೂಜಾರಿ, ಪ್ರಾಯ: 40 ವರ್ಷ, ತಂದೆ: ದಿ| ಬಾಬು ಪೂಜಾರಿ, ವಾಸ: ಹಟ್ಟತ್ತೋಡಿ ಮನೆ, ಕುಕ್ಕಳ ಗ್ರಾಮ, ಬೆಳ್ತಂಗಡಿ ತಾಲೂಕು ರವರ ತಮ್ಮ 30 ವರ್ಷ ಪ್ರಾಯದ ತುಕರಾಮ ಎಂಬವರು ಫಿರ್ಯಾಧಿದಾರರೊಂದಿಗೆ ಬೆಳ್ತಂಗಡಿ ತಾಲೂಕು, ಕುಕ್ಕಳ ಗ್ರಾಮದ, ಹಟ್ಟತ್ತೋಡಿ ಎಂಬಲ್ಲಿ ವಾಸವಾಗಿದ್ದವರು ಕೂಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ: 26.06.2021 ರಂದು ಕರ್ಫ್ಯೂ ಇದ್ದ ಕಾರಣ ಕೆಲಸಕ್ಕೆ ಹೋಗದೆ ಮನೆಯಲ್ಲಿ ಇದ್ದವನು ಯಾವುದೋ ಕಾರಣಕ್ಕೆ ತನ್ನ ಮನೆಯ ಎದುರು ಇರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆ UDR NO 05/2021 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 28-06-2021 01:40 PM Updated By: Dakshina Kannada District Police


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : DAKSHINA KANNADA DISTRICT POLICE
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080