ಅಭಿಪ್ರಾಯ / ಸಲಹೆಗಳು

ಹಲ್ಲೆ ಪ್ರಕರಣ: 1

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಕೆ ಮಹಮ್ಮದ್ ಕುಂಞು ಪ್ರಾಯ  55 ವರ್ಷ ತಂದೆ ಮೊಯಿದಿನ್  ಸುಲ್ತಾನ್ ನಗರ ಮನೆ ನಾವೂರು ಗ್ರಾಮ ಬಂಟ್ವಾಳ ತಾಲೂಕು ರವರು ದೊಡ್ಡ ಮಗನ ಹೆಂಡತಿ ಹಾಗು ಅವರ ಮಕ್ಕಳೊಂದಿಗೆ ವಾಸವಾಗಿದ್ದು ದೊಡ್ಡ ಮಗ ವಿದೇಶದಲ್ಲಿದ್ದು, ಪಿರ್ಯಾದುದಾರರ ಸಣ್ಣ ಮಗ ಇರ್ಷಾದನು ಕೊಳ್ತಮಜಲಿನಲ್ಲಿ ವಾಸ ಮಾಡಿಕೊಂಡಿದ್ದವನು ಮನೆಗೆ ಬಂದವನು ದಿನಾಂಕ 27.06.2021 ರಂದು  ಪಿರ್ಯಾದುದಾರರ ಸೊಸೆ ಮಕ್ಕಳಿಗೆ ಚಹಾ ಮಾಡಲೆಂದು ಅಡುಗೆ ಕೋಣೆಗೆ ಹೋಗಿ ಚಹ ಮಾಡುತ್ತಿರುವಾಗ  ಇರ್ಷಾದನು  ಅಡುಗೆ ಕೋಣೆಗೆ ಹೋಗಿ ಚಹ ಮಾಡುವ ಸ್ಟೀಲ್ ಪಾತ್ರೆಯನ್ನು ಚಹ ಕುದಿಯುತ್ತಿದ್ದಂತೆ ಒಲೆಯಿಂದ ತೆಗೆದು ಸೊಸೆಯ ಮುಖಕ್ಕೆ ಹೊಡೆದಿದ್ದು ಆ ಸಮಯ ಪಿರ್ಯಾದುದಾರರ ಸೊಸೆ ಬೊಬ್ಬೆ ಹಾಕಿದಾಗ ಪಿರ್ಯಾದುದಾರರು ಅಡುಗೆ ಕೋಣೆಗೆ ಹೋಗಿ ಜಗಳ ಮಾಡುತ್ತಿರುವ ಬಗ್ಗೆ ಕೇಳಿದಾಗ ಇರ್ಷಾದನು ಚಹ ಮಾಡುವ ಸ್ಟೀಲ್ ಪಾತ್ರೆಯನ್ನು ತೆಗೆದುಕೊಂಡು ಪಿರ್ಯಾದುದಾರರ ಬಲಕೈಗೆ ಹೊಡೆದು ಚಾ ಕುಡಿಯುವ ಗಾಜಿನ ಗ್ಲಾಸ್ ನಿಂದ ಪಿರ್ಯಾದುದಾರರ ತಲೆಗೆ ಹೊಡೆದಿದ್ದು ,ಸ್ಟೀಲ್ ಪಾತ್ರೆಯ ಹಿಡಿಯಿಂದ  ಎಡಕೈ ಮೊಣಗಂಟಿಗೆ  ಹೊಡೆದಿರುವುದರಿಂದ ರಕ್ತ ಬರುವ ಗಾಯವಾಗಿದ್ದು ,ಗಾಜಿನ ಗ್ಲಾಸ್ ನಿಂದ ತಲೆಗೆ  ಹೊಡೆದಿರುವುದರಿಂದ  ತಲೆಯ ಎಡಭಾಗಕ್ಕೆ ರಕ್ತ ಗಾಯವಾಗಿದ್ದು  ಪಿರ್ಯಾದುದಾರರ ಸೊಸೆಗೆ  ಸ್ಟೀಲ್ ಪಾತ್ರೆಯಿಂದ ಹೊಡೆದ ಪರಿಣಾಮ ಹಣೆಯ ಬಲ ಬದಿಗೆ ರಕ್ತಗಾಯವಾಗಿರುತ್ತದೆ.  ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ   70-2021 ಕಲಂ 324, 354 ಐಪಿಸಿ    ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

 

ವೇಣೂರು ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶಾಂತಪ್ಪ ಪ್ರಾಯ 31 ತಂದೆ: ಅಣ್ಣು  ವಾಸ: ಹಿಮರೋಡಿ  ಮನೆ ಬಡಗಕಾರಂದೂರು ಗ್ರಾಮ ಬೆಳ್ತಂಗಡಿ ರವರ ಅಣ್ಣ ಓಬಯ್ಯ(37) ಎಂಬವರು ಪುತ್ತೂರಿನ ಕುರಿಯ ಗ್ರಾಮದ ಹೊನ್ನಮ್ಮ ಎಂಬವರನ್ನು  ವಿವಾಹವಾಗಿದ್ದು  ಕಳೆದ 2 ವರ್ಷಗಳಿಂದ ಹೆಂಡತಿಯೊಂದಿಗೆ  ಮನಸ್ಥಾಪದಿಂದ ಬೇರೆ ಬೇರೆಯಾಗಿದ್ದು  ಹೊನ್ನಮ್ಮರವರು  ಅವರ ತವರು ಮನೆಯಲ್ಲಿಯೇ ವಾಸವಿರುತ್ತಾರೆ.  ಓಬಯ್ಯನು ಪಿರ್ಯಾದಿದಾರರ ಮನೆಯಲ್ಲಿದ್ದು  ಸ್ಥಳೀಯವಾಗಿ ಕೂಲಿ ಕೆಲಸದ ಬಗ್ಗೆ ಹೋಗುತ್ತಿದ್ದು ದಿನಾಂಕ 27-06-2021 ಕೂಡಾ ಮದ್ಯಾಹ್ನ ದವೆರೆಗೆ  ಕೆಲಸಕ್ಕೆ ಹೋಗಿ ಮನೆಗೆ ಬಂದಿದ್ದು ಸಂಜೆ  ಮನೆಯಲ್ಲಿದ್ದ ಸಮಯ ಅವರಿಗೇ ತೀವ್ರ ಎದೆ ನೋವು ಕಾಣಿಸಿದ್ದು ಪಿರ್ಯಾದಿದಾರರು  ಹಾಗೂ ಅವರ ತಮ್ಮ ರಮೇಶ ಹಾಗೂ ಸಂಬಂದಿಕರಾದ ಕೊರಗಪ್ಪ ರವರು ಸೇರಿ  ಅಳದಂಗಡಿಯ ಸ್ಥಳೀಯ ವೈದ್ಯರಲ್ಲಿ ತೋರಿಸಿ ನಂತರ ಸೇವಾ ಭಾರತಿ ಅಂಬುಲೇನ್ಸ್‌  ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ  ತಲುಪಿದಾಗ  ಅಲ್ಲಿನ ವೈದ್ಯರು  ಪರೀಕ್ಷಿಸಿ ಓಬಯ್ಯರವರು   ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಯುಡಿ ಆರ್ ನಂಬ್ರ : 16 - 2021 ಕಲಂ: 174 ಸಿ ಆರ್ ಪಿ ಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುಂಜಾಲಕಟ್ಟೆ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ನವೀನ ಪೂಜಾರಿ, ಪ್ರಾಯ: 40 ವರ್ಷ, ತಂದೆ: ದಿ| ಬಾಬು ಪೂಜಾರಿ, ವಾಸ: ಹಟ್ಟತ್ತೋಡಿ ಮನೆ, ಕುಕ್ಕಳ ಗ್ರಾಮ, ಬೆಳ್ತಂಗಡಿ ತಾಲೂಕು ರವರ ತಮ್ಮ 30 ವರ್ಷ ಪ್ರಾಯದ ತುಕರಾಮ ಎಂಬವರು ಫಿರ್ಯಾಧಿದಾರರೊಂದಿಗೆ ಬೆಳ್ತಂಗಡಿ ತಾಲೂಕು, ಕುಕ್ಕಳ ಗ್ರಾಮದ, ಹಟ್ಟತ್ತೋಡಿ ಎಂಬಲ್ಲಿ ವಾಸವಾಗಿದ್ದವರು ಕೂಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ: 26.06.2021 ರಂದು ಕರ್ಫ್ಯೂ ಇದ್ದ ಕಾರಣ ಕೆಲಸಕ್ಕೆ ಹೋಗದೆ ಮನೆಯಲ್ಲಿ ಇದ್ದವನು ಯಾವುದೋ ಕಾರಣಕ್ಕೆ ತನ್ನ ಮನೆಯ ಎದುರು ಇರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆ UDR NO 05/2021 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 28-06-2021 01:40 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080