ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಪ್ರವೀಣ (39) ತಂದೆ: ಸಂಜೀವ ಆಚಾರ್ಯ, ವಾಸ: ಕನ್ಯಾಯ ಮನೆ, ನೆರಿಯಾ ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ:03-12-2021 ರಂದು  ತನ್ನ ಬಾಬ್ತು ಮೋಟಾರು ಸೈಕಲ್ ನಲ್ಲಿ  ಉಜಿರೆಯಿಂದ ಧಮಸ್ಥಳ ಕಡೆಗೆ ಸವಾರಿಮಾಡಿಕೊಂಡು ಹೋಗುತ್ತಿರುವ ಸಮಯ    ಸುಮಾರು ರಾತ್ರಿ 9:45 ಗಂಟೆಗೆ ಬೆಳ್ತಂಗಡಿ ತಾಲೂಕು  ಉಜಿರೆ ಗ್ರಾಮದ  ನೀರಚಿಲುಮೆ ಎಂಬಲ್ಲಿಗೆ ತಲುಪಿದಾಗ ಅವರ  ಹಿಂದಿನಿಂದ ಬರುತ್ತಿದ್ದ ದ್ವಿ ಚಕ್ರ ವಾಹನ   ಸವಾರ ಕೆ ಎ 18 ಇ ಎಚ್ 0077 ನೇ ದ್ವಿ ಚಕ್ರ  ವಾಹನವನ್ನು  ದುಡುಕುತನದಿಂದ ಚಲಾಯಿಸಿಕೊಂಡು ಬಂದು ಕಾರೊಂದನ್ನು ಓವರಟೇಕ್ ಮಾಡಿ  ವಿರುದ್ದ ದಿಕ್ಕಿನಿಂದ  ಬರುತ್ತಿದ್ದ ,ಎಂ ಎಚ್ 04 ಇ ಯು 1758 ನೇ ದ್ವಿ ಚಕ್ರ  ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ದ್ವಿ ಚಕ್ರ ವಾಹನಗಳು ರಸ್ತೆಗೆ ಬಿದ್ದು. ಅಪಘಾತಕ್ಕೊಳಗಾದ ದ್ವಿಚಕ್ರದಲ್ಲಿದ್ದ ಸವಾರ ರಘುನಾಯಕ್ ರವರಿಗೆ ಎಡ ಹಣೆಯ ಮೇಲ್ಭಾಗದಲ್ಲಿ ರಕ್ತ ಗಾಯ, ಎಡ ಕಾಲಿನ ಕೋಲು ಕಾಲಿಗೆ ಗುದ್ದಿದ ಹಾಗೂ ರಕ್ತ ಗಾಯ, ಮತ್ತು ಸಹ ಸವಾರೆಗೆ ಎಡ ಕಾಲಿನ ಮಂಡಿ ಮತ್ತು ಎಡ ಕಾಲಿನ ಪಾದಕ್ಕೆ ತರಚಿದ ಗಾಯ ಹಾಗೂ ಅಪಘಾತ ನಡೆಸಿದ ದ್ವಿ ಚಕ್ರ ವಾಹನದ ಸವಾರನಿಗೂ ಎಡ ಪಾದದ ಹೆಬ್ಬೆರಳು, ಎಡ ಹಣೆ. ಎಡ ಕಣ್ಣಿನ ಹುಬ್ಬಿಗೆ, ಬಲಭುಜಕ್ಕೆ ಗುದ್ದಿದ ಗಾಯವಾಗಿದ್ದು ಗಾಯಾಳುಗಳು ಚಿಕಿತ್ಸೆ ಬಗ್ಗೆ ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ದಾಖಲಾಗಿದ್ದು,  ನಂತರ ಅಪಘಾತಕ್ಕೊಳಗಾದ  ಸವಾರ ರಘು ನಾಯಕ್ ರವರು ಹೆಚ್ಚಿನ ಚಿಕಿತ್ಸೆಯ ಬಗ್ಗೆ  ಮಂಗಳೂರಿನ ಆಸ್ಪತ್ರೆಗೆ  ದಾಖಲಾಗಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 90/2021, ಕಲಂ; 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಜಯರಾಮ.ಪಿ ಪ್ರಾಯ 56 ವರ್ಷ, ತಂದೆ: ಪೂವಪ್ಪ ಗೌಡ, ವಾಸ: ನೆಲಪ್ಪಾಲು ಮನೆ, ಪಡ್ನೂರು ಗ್ರಾಮ ಮತ್ತು ಅಂಚೆ, ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 03-12-2021 ರಂದು 20-30 ಗಂಟೆಗೆ ಆರೋಪಿ ಸ್ಕೂಟರ ಸವಾರ ಅಬ್ದುಲ್ ಮಜೀದ್ ಎಂಬವರು KA-21-Y-7300ನೇ ನೋಂದಣಿ ನಂಬ್ರದ ಸ್ಕೂಟರನ್ನು ಬೊಳುವಾರು-ದರ್ಬೆ ಸಾರ್ವಜನಿಕ ಮುಖ್ಯ ರಸ್ತೆಯಲ್ಲಿ ದರ್ಬೆ ಕಡೆಯಿಂದ ಬೊಳುವಾರು ಕಡೆಗೆ  ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಶ್ರೀಧರ್ ಭಟ್ ಅಂಗಡಿ ಬಳಿಯ ಹೆಗ್ಡೆ ಆರ್ಕೆಡಿನ ಎದುರು  ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬದಿಗೆ ಚಲಾಯಿಸಿದ ಪರಿಣಾಮ, ಹಳೆ ಪೊಲೀಸ್ ಸ್ಟೇಷನ್ ಕಡೆಯಿಂದ ಪುತ್ತೂರು ಬಸ್ ನಿಲ್ದಾಣದ ಕಡೆಗೆ ರಸ್ತೆಯ ಬಲಭಾಗದಲ್ಲಿ ನಡೆದುಕೊಂಡು ಹೊಗುತ್ತಿದ್ದ ಪಿರ್ಯಾದುದಾರರ ಚಿಕ್ಕಪ್ಪ ಕೇಶವ ಗೌಡರವರಿಗೆ ಸ್ಕೂಟರ್ ಅಪಘಾತವಾಗಿ ಗಾಯಗೊಂಡು ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕತ್ಸೆಗೆ ಮಂಗಳೂರಿನ ಎ ಜೆ ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆ ಪಲಿಸದೆ ಕೇಶವ ಗೌಡರವರರು ದಿನಾಂಕ 04.12.2021 ರಂದು 02.14 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 149/2021 ಕಲಂ: 279,304(A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಯೂಸಪ್ ಎ ಕೆ (55) ತಂದೆ: ಪೂಕರ್ ಹಾಜಿ ವಾಸ: ಕಾಕೇಂಗಾಡು ಅಂಚೆ, ಮರ್ಕುಂಞ ಗ್ರಾಮ, ಇರಿಟಿ ತಾಲೂಕು ಕಣ್ಣೂರು ಜಿಲ್ಲೆ ,ಕೇರಳ ಎಂಬವರ ದೂರಿನಂತೆ ದಿನಾಂಕ: 03.12.2021 ರಂದು ತಮ್ಮ ಬಾಬ್ತು ವಾಹನ ನಂಬ್ರ ಕೆಎಲ್ 16 ಡಿ 8770 ನೇ ಮಿನೀ ಗೂಡ್ಸ್ ಟಿಟಿಯಲ್ಲಿ ನೀರಿನ ಬಾಟಿಲಗಳನ್ನು ತುಂಬಿಕೊಂಡು ಕಡಬ ತಾಲೂಕಿನ ಸವಣೂರಿನಿಂದ ಮಾಣಿ –ಮೈಸೂರು ರಸ್ತೆಯ ಸುಳ್ಯ ಮಾರ್ಗವಾಗಿ ಕೊಡಗು ಜಿಲ್ಲೆಯ ವಿರಾಜಪೇಟೆಗೆ ಹೋಗುವರೇ ಸಮಯ ಸುಮಾರು 22:37 ಗಂಟೆಗೆ ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಪೆಲ್ತಡ್ಕ ಪಯಸ್ವಿನಿ ಜ್ಯೂಸ್ ಸೆಂಟರ್ ಬಳಿ ತಲುಪುತ್ತಿದ್ದನಂತೆ ಕಲ್ಲುಗುಂಡಿ ಕಡೆಯಿಂದ ಸುಳ್ಯ ಕಡೆಗೆ ಒಂದು ಮೋಟಾರ್ ಸೈಕಲ್ ಸವಾರ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಮೋಟಾರ್ ಸೈಕಲ್ ನ್ನು ಆತನ ತೀರ ಬಲಬದಿಗೆ ಸವಾರಿ ಮಾಡಿಕೊಂಡು ಬಂದು ಪಿರ್ಯಾದುದಾರರು ಚಲಿಸುತ್ತಿದ್ದ ಟಿಟಿ ವಾಹನಕ್ಕೆ ಡಿಕ್ಕಿವುಂಟು ಮಾಡಿದ ಪರಿಣಾಮ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯವಾದವರನ್ನು ಪಿರ್ಯಾದುದಾರರು ಮತ್ತು ಟಿಟಿ ವಾಹನದ ಕ್ಲೀನರ್ ಲತೀಫ್ ರವರೊಂದಿಗೆ ಚಿಕಿತ್ಸೆಯ ಬಗ್ಗೆ ಆಂಬುಲೇನ್ಸ್ ವೊಂದರಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಅಲ್ಲಿನ ವೈದ್ಯರು ಮೋಟಾರ್ ಸೈಕಲ್ ಸವಾರನನ್ನು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ, ಅಕ್ರ 91/2021 ಕಲಂ: 279,304(A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 ವಿಟ್ಲ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶಬರೀಶ ಪ್ರಾಯ 19 ತಂದೆ:ಸತೀಶ್‌ ಶೆಟ್ಟಿ     ವಾಸ:ಎರುಂಬು ಮನೆ, ಅಳಿಕೆ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ:03-12-2021 ರಂದು 18.00 ಗಂಟೆ ಸಮಯಕ್ಕೆ ಬಂಟ್ವಾಳ ತಾಲೂಕು ಕೇಪು ಗ್ರಾಮದ ಪಡಿಬಾಗಿಲು ಎಂಬಲ್ಲಿ ವಿಟ್ಲ-ಕಾಸರಗೋಡು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ವಿಟ್ಲ ಕಡೆಯಿಂದ ತನ್ನ ಮನೆಗೆ ಕಡೆಗೆ ಮೋಟಾರು ಸೈಕಲು  ಕೆಎ-19-ಇಹೆಚ್‌-6324 ನೇಯದರಲ್ಲಿ ಹಿಂಬದಿ ಸವಾರನಾಗಿ ಪ್ರಯಾಣಿಸುತ್ತಿದ್ದಾಗ ತನ್ನ ಎದುರಿನಿಂದ ಅಂದರೆ ಕಾಸರಗೋಡು ಕಡೆಯಿಂದ ವಿಟ್ಲ ಕಡೆಗೆ ಕೆಎ-19-ಎನ್‌-9854ನೇ ಮಾರುತಿ 800 ಕಾರನ್ನು ಅದರ ಚಾಲಕ ಪ್ರವೀಣ್‌ ಡಿ ಸೋಜಾ ಎಂಬವರು ಅತಿವೇಗ ಹಾಗೂ ನಿರ್ಲಕ್ಷತನದಿಂದ ರಸ್ತೆಯ ಬಲಬದಿಗೆ ಚಲಾಯಿಸಿಕೊಂಡು ಬಂದು ಮಿಥುನರವರು ಸವಾರಿ  ಮಾಡುತ್ತಿದ್ದ ಮೋಟಾರು ಸೈಕಲ್‌ ನಂಬ್ರ ಕೆಎ-19-ಇಹೆಚ್‌-6324 ನೇಯದಕ್ಕೆ ಅಪಘಾತಪಡಿಸಿದ್ದು, ಪರಿಣಾಮ ಮೋಟಾರು ಸೈಕಲ್‌ ಸವಾರರಿಬ್ಬರು ಮೋಟಾರು ಸೈಕಲು ಸಮೇತ ರಸ್ತೆಗೆ ಬಿದ್ದಿದ್ದು ಅಪಘಾತದಲ್ಲಿ ಮೋಟಾರು ಸೈಕಲು ಸವಾರ ಮಿಥುನ್ ನ ಮುಖದ ಭಾಗಕ್ಕೆ ರಕ್ತಗಾಯವಾಗಿರುತ್ತದೆ. ಸಹಸವಾರನಾದ ಪಿರ್ಯಾಧಿದಾರರಿಗೆ ಸಣ್ಣ ಪುಟ್ಟ ತರಚಿದ ಗಾಯಗಳಾಗಿದ್ದು. ಗಾಯಾಳು ಮಿಥುನ್‌ರವರು ಚಿಕಿತ್ಸೆಯ ಬಗ್ಗೆ  ಮಂಗಳೂರಿನ ಪಾದರ್‌ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 159/2021  ಕಲಂ:279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಯೋಗೀಶ್, ಪ್ರಾಯ: 35 ವರ್ಷ, ತಂದೆ: ದಾಮೋದರ ಪೂಜಾರಿ, ವಾಸ: ಮೈರಾರು ಮನೆ, ಒಡಿನ್ಳಾಳ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ:04-12-2021 ರಂದು ನೆರೆಯ ಸದಾನಂದ ಎಂಬವರಿಂದ ಪಿರ್ಯಾದಿದಾರರ ತಂದೆ ಅವರ ಮನೆಯ ಸೋಫಾದಲ್ಲಿ ಕುಳಿತ ಸ್ಥಿತಿಯಲ್ಲಿ ಇರುವುದಾಗಿಯೂ ಮಾತನಾಡುವುದಿಲ್ಲ ಎಂಬುದಾಗಿ  ಮಾಹಿತಿ ತಿಳಿದು ಕೂಡಲೇ ಪಿರ್ಯಾದಿದಾರರು ಮನೆಯವರೊಂದಿಗೆ ಬಂದು ನೋಡಲಾಗಿ ಪಿರ್ಯಾದಿ ದಾರರ ತಂದೆ ಸೋಫಾದಲ್ಲಿ ಕುಳಿತ ಸ್ಥಿತಿಯಲ್ಲಿ ಇದ್ದು, ಮಾತ ನಾಡದೇ ಇದ್ದುದ್ದರಿಂದ ಕೂಡಲೇ ಅವರನ್ನು ಬೆಳ್ತಂಗಡಿ ಸರ ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ  ಮೃತಪಟ್ಟಿರುವುದಾಗಿ ತಿಳಿಸಿದ್ದು,ಈ ಬಗ್ಗೆ ಬೆಳ್ತಂಗಡಿ ಠಾಣಾ UDR ನಂಬ್ರ: 39-2021  ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 05-12-2021 01:06 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080