ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ಸುಳ್ಯ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಮನೋಜ್ ಕೆ,ಜೆ (28) ತಂದೆ: ಜರ್ನಾಧನ ವಾಸ: ಬಂಗ್ಲೆಗುಡ್ಡೆ ಮನೆ, ಸಂಪಾಜೆ ಗ್ರಾಮ,ಸುಳ್ಯ ತಾಲೂಕು ರವರು ದಿನಾಂಕ 29.07.2021 ರಂದು ತಾವು ಕೆಲಸ ಮಾಡುತ್ತಿರುವ  ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಕೆಎಸ್ ಆರ್ ಸಿ ಬಸ್ ನಿಲ್ದಾಣದ ಎದುರಿನಲ್ಲಿರುವ ಪರಶಿನಿ ಜ್ಯುವೆಲರಿ ಅಂಗಡಿಯ ಮುಂದೆ ನಿಂತುಕೊಂಡಿರುವ ಸಮಯ ಗಾಂಧಿನಗರ ಕಡೆಯಿಂದ ಪೈಚಾರು ಕಡೆಗೆ ಕೆಎ 21 ಎನ್ 0037 ನೇ ಬೊಲೆರೋ ಜೀಪಿನ ಚಾಲಕ ಮಹಮ್ಮದ್ ನಜೀರ್ ಎಂಬಾತನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ವಾಹನವನ್ನು ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಗೋಪಾಲ ಎಂಬವರಿಗೆ ಡಿಕ್ಕಿವುಂಟು ಮಾಡಿದ ಪರಿಣಾಮ ಗೋಪಾಲರವರಿಗೆ ತಲೆಗೆ ಹಾಗೂ ಹಣೆಗೆ ಮತ್ತು ದೇಹದ ಇತರ ಭಾಗಗಳಲ್ಲಿ ರಕ್ತಗಾಯವಾಗಿದ್ದವರನ್ನು ಪಿರ್ಯಾದುದಾರರು ಮತ್ತು ಇತರರು ಆಸ್ಪತ್ರೆಗೆ ಕಳುಹಿಸಿ ಕೊಟ್ಟಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ. 53/2021  ಕಲಂ : 279, 337  IPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 1

 

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಜಿ ಬಾಬು  ಪ್ರಾಯ  54 ವರ್ಷ       ತಂದೆ ದಿ: ಗಣೇಶನ್‌, ವಾಸ:  ಮರುತಂಬಾಕಂ ಏಕಾಂಬರ ನಲ್ಲೂರು, ವಾಲಾಜ ತಾಲೂಕು  ವೆಲ್ಲೂರು  ಜಿಲ್ಲೆ ತಮಿಳುನಾಡು ರಾಜ್ಯ ರವರು ಲಾರಿ ಟಿಎನ್‌ 73 ಎಂ 3499ರಲ್ಲಿ ರಬ್ಬರ್‌ ಶೀಟ್‌ಗಳನ್ನು  ಲೋಡ್‌ ಮಾಡಿಕೊಂಡು ಬಂದು ಕಡಬ ತಾಲೂಕು  ಶಿರಾಡಿ ಗ್ರಾಮದ ಗುಂಡ್ಯ ಎಂಬಲ್ಲಿ ದಿನಾಂಕ; 25-07-2021ರಂದು ಬೆಳಿಗ್ಗೆ 07-30 ಗಂಟೆಗೆ ನಿಲ್ಲಿಸಿ  ಹೋಗಿದ್ದು ಯಾರೋ ಕಳ್ಳರು  ದಿನಾಂಕ; 25-07-2021ರಂದು ಬೆಳಿಗ್ಗೆ 07-30 ಗಂಟೆಯಿಂದ ದಿನಾಂಕ: 28-07-2021ರಂದು ಮದ್ಯಾಹ್ನ 1.00 ಗಂಟೆಗೆ ಕಡಬ ತಾಲೂಕು  ಶಿರಾಡಿ ಗ್ರಾಮದ ಗುಂಡ್ಯ ಎಂಬಲ್ಲಿ  ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಬದಿಯಲ್ಲಿ  ನಿಲ್ಲಿಸಿದ್ದ ಲಾರಿ ಟಿಎನ್‌ 73 ಎಂ 3499 ನೇದರಲ್ಲಿ   ಲೋಡ್‌ ಮಾಡಿದ ರಬ್ಬರ್‌ ಶೀಟ್‌ಗಳನ್ನು ಅದರ ಮೇಲೆ ಹಾಕಲಾದ ಟರ್ಪಾಲ್‌ಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿ ಟರ್ಪಾಲ್‌ ಸರಿಸಿ  ಲಾರಿಯಲ್ಲಿ ಲೋಡ್‌ ಮಾಡಿದ್ದ  ರಬ್ಬರ್‌ ಶೀಟ್‌ಗಳಿರುವ  ಬಂಡಲ್‌ಗಳ  ಪೈಕಿ  ತಲಾ 25 ಕೆ ಜಿ ತೂಕದ ರಬ್ಬರ್‌ ಶೀಟ್‌ಗಳಿರುವ ಸುಮಾರು 35 ಬಂಡಲ್‌ಗಳನ್ನು ಕಳವು ಮಾಡಿಕೊಂಡು ಮಾಡಿಕೊಂಡು ಹೋಗಿದ್ದು ಅಂದಾಜು ಮೌಲ್ಯ ರೂ 1,45,000/- ಆಗಿರುತ್ತದೆ  ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 72/2021 ಕಲಂ:379 ಭಾ.ದಂ.ಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ ಪ್ರಕರಣ: 1

 

ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮಂಜುನಾಥ ರಾವ್(45) ತಂದೆ:ದಿ|ರಾಮ ಕೃಷ್ಣ ಮದ್ಯಸ್ಥ, ವಾಸ:ರಾಘವೇಂದ್ರ ನಿಲಯ, ಪಾರಬೈಲು ಉಜಿರೆ  ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ:29.07.2021 ರಂದು ಬೆಳಿಗ್ಗೆ 08.29 ಗಂಟೆ ಸಮಯಕ್ಕೆ ಪ್ರಕರಣದ ಆರೋಪಿತನಾದ ಕೃಷ್ಣರಾವ್ ಎಂಬಾತನು ಫಿರ್ಯಾದಿದಾರರ ಬಾಬ್ತು ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಪಾರಬೈಲು ಎಂಬಲ್ಲಿಯ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಅಡಿಕೆ ಮತ್ತು ತೆಂಗಿನ ಕಾಯಿಯನ್ನು ಹೆಕ್ಕುತ್ತಿದ್ದುದನ್ನು ಗಮನಿಸಿ ಆಕ್ಷೇಪಪಡಿಸಿದಾಗ ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಂತೆ ಇರುವ ಸಿಮೆಂಟ್ ತುಂಡನ್ನು ಫಿರ್ಯಾದಿದಾರರಿಗೆ ಬಿಸಾಡಿದ ಪರಿಣಾಮ ಫಿರ್ಯಾದಿದಾರರ ಹಣೆಗೆ ರಕ್ತಗಾಯವಾಗಿ ಉಜಿರೆ ಬೆನಕಾ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣಾ ಅ.ಕ್ರ 62/2021 ಕಲಂ: 447,504, 324 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ಕಡಬ ಪೊಲೀಸ್ ಠಾಣೆ : ಕಡಬ ಪೊಲೀಸ್ ಠಾಣಾ  ಪೊಲೀಸ್ ಉಪ ನಿರೀಕ್ಷಕರಿಗೆ ಕಡಬ ತಾಲೂಕು, ಕೊಯಿಲಾ ಗ್ರಾಮದ ಅಂಬಾ ಕುಂಡ್ಯಾಡಿ ಎಂಬಲ್ಲಿ ಸಾರ್ವಜನಿಕರು ಹಣವನ್ನು ಪಣವಾಗಿಟ್ಟುಕೊಂಡು ಉಲಾಯಿ-ಪಿದಾಯಿ ಎಂಬ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ ಬಗ್ಗೆ ಮಾಹಿತಿ ಮೇರೆಗೆ  ಠಾಣಾ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಅಕ್ರಮವಾಗಿ ಉಲಾಯಿ-ಪಿದಾಯಿ ಜುಗಾರಿ ಆಟದಲ್ಲಿ ನಿರತರಾಗಿದ್ದ ಆರೋಪಿಗಳ ಪೈಕಿ ಐವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು, ಉಳಿದ ಆರೋಪಿತರು ತಪ್ಪಿಸಿಕೊಂಡಿದ್ದು, ಆರೋಪಿಗಳು ಜುಗಾರಿ ಆಟಕ್ಕೆ ಉಪಯೋಗಿಸಿದ್ದ  2000 ರೂ ಮುಖ ಬೆಲೆಯ 1 ನೋಟು, 500 ರೂ ಮುಖ ಬೆಲೆಯ 12 ನೋಟುಗಳು, 100 ರೂ ಮುಖ ಬೆಲೆಯ  5 ನೋಟುಗಳು ಹಾಗೂ 50 ರೂ ಮುಖ ಬೆಲೆಯ 6 ನೋಟುಗಳು ಮತ್ತು 20 ರೂ ಮುಖ ಬೆಲೆಯ 5 ನೋಟುಗಳು  10 ರೂ ಮುಖ ಬೆಲೆಯ 4 ನೋಟುಗಳು  ಒಟ್ಟು ರೂ 8940 /- ನಗದು ಹಣ ಹಾಗೂ ಆಟಕ್ಕೆ ಉಪಯೋಗಿಸಿದ 44 ಇಸ್ಪಿಟ್‌ ಎಲೆಗಳನ್ನು ಹಾಗೂ ನೀಲಿ ಬಣ್ಣದ ಟಾರ್ಪಲ್‌ ನ್ನು ಮತ್ತು ತಕ್ಷೀರು ಸ್ಥಳದಲ್ಲಿದ್ದ ಆರೋಪಿತರ  ಕೆ.ಎ -21 ಸಿ-1127 ಆಟೋರಿಕ್ಷಾ  ವಾಹನ ಮತ್ತು ಕೆ.ಎ-21 ಬಿ-7719 ಆಟೋರಿಕ್ಷಾ ವಾಹನ ಹಾಗೂ ಕೆ.ಎ-21 ಹೆಚ್-7044 ನೇ ಮೋಟಾರ್‌ ಸೈಕಲ್‌ ವಾಹನಗಳನ್ನು ಸ್ವಾಧೀನಪಡಿಸಿಕೊಂಡು ಕಡಬ ಠಾಣಾ ಅ.ಕ್ರ 60/2021 ಕಲಂ 87 KP ACT ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

 

ವಿಟ್ಲ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಕೇಶವ ಗೌಡ ಪ್ರಾಯ 48 ವರ್ಷ ತಂದೆ ದೇವಪ್ಪ ಗೌಡ ಬುಡಜಾಲು ಮನೆ ನಿಡ್ಲೆ ಗ್ರಾಮ ಬೆಳ್ತಂಗಡಿ ತಾಲೂಕು ದ.ಕ ಜಿಲ್ಲೆ ರವರ ತಮ್ಮ ಮೃತ ಬಾಲಕೃಷ್ಣ ವಿಟ್ಲಪಡ್ನೂರು ಗ್ರಾಮದ ಕೊಡಂಗೈ ಮೂರ್ಜೆಬೆಟ್ಟಿನಲ್ಲಿ ಸಂಸಾರದೊಂದಿಗೆ ವಾಸವಾಗಿದ್ದು ಕಳೆದ 3 ತಿಂಗಳಿಂದ ಎಲ್ಲಿಗೂ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಯಾವಾಗಲೂ ಮದ್ಯಪಾನ ಮಾಡಿಕೊಂಡಿದ್ದು. ದಿನಾಂಕ:28.07.2021 ರಂದು ರಾತ್ರಿ 9:00 ಗಂಟೆಗೆ ತಮ್ಮನು ಊಟ ಮಾಡುವಂತೆ ಕರೆದರು ಊಟ ಮಾಡದೇ ಆತನು ಮಲಗುವ ಕೋಣೆಯಲ್ಲಿ ಮಲಗಿರುತ್ತಾನೆ. ದಿನಾಂಕ 29.07.2021 ರಂದು ಬೆಳಗ್ಗೆ 06.00 ಗಂಟೆಗೆ ತಮ್ಮನನ್ನು ಎಬ್ಬಿಸಲು ಹೋದಾಗ ತಮ್ಮನ ಬಾಯಿಯಲ್ಲಿ ಜೋಲ್ಲು ಸೊರುತ್ತಿದ್ದು ಯಾವುದೋ ವಿಷ ಪದರ್ಥ ಸೇವಿಸಿರುವಂತೆ ಕಂಡು ಬಂದಿರುತ್ತದೆ ಕೂಡಲೇ ಆತನ ಹೆಂಡತಿ ಹಾಗೂ ಮನೆಯವರು ಅಂಬುಲೆನ್ಸ್ ನಲ್ಲಿ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಾಗ ವೈದ್ಯರು ಪರೀಕ್ಷಿಸಿ ತಮ್ಮನು ಮೃತಪಟ್ಟಿರುವುದಾಗಿ ನುಡಿದಿರುತ್ತಾರೆ. ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 19/2021  ಕಲಂ 174  ಸಿ ಅರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 30-07-2021 10:22 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080