ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ವಿಘ್ನೇಶ್‌ ಡಿ, ಪ್ರಾಯ 31 ವರ್ಷ, ತಂದೆ: ಬಾಬುರಾಯ ಗೌಡ ವಾಸ: ದೇವರಮಾರು ಮನೆ, ಕರಾಯ ಅಂಚೆ & ಗ್ರಾಮ, ಬೆಳ್ತಂಗಡಿ ತಾಲೂಕು ರವರು ನೀಡಿದ ದೂರೇನೆಂದರೆ ದಿನಾಂಕ 28-02-2021 ರಂದು ಆರೋಪಿ ಕಾರು ಚಾಲಕ ದೇವರಾಜ್‌ ಎಂಬವರು KL-07-V-7152 ನೇ ನೋಂದಣಿ ನಂಬ್ರದ ಕಾರನ್ನು ಉಪ್ಪಿನಂಗಡಿ-ಗುರುವಾಯನಕೆರೆ ಸಾರ್ವಜನಿಕ ರಸ್ತೆಯಲ್ಲಿ ಉಪ್ಪಿನಂಗಡಿ ಕಡೆಯಿಂದ ಗುರುವಾಯಕೆರೆ ಕಡೆಗೆ ಚಲಾಯಿಸಿಕೊಂಡು ಹೋಗಿ, ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಕರಾಯ ಜಂಕ್ಷನ್‌ನಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್‌ ಸೈಡ್‌ಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ವಿಘ್ನೇಶ ಡಿ ರವರು ದೇವರಮಾರು ಅವರ ಮನೆ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ  KA-05-MA-8821 ನೇ ನೋಂದಣಿ ನಂಬ್ರದ ಕಾರಿಗೆ ಅಪಘಾತವಾಗಿ, ಪಿರ್ಯಾದುದಾರರಿಗೆ ಬಲಕಾಲಿನ ಪಾದ ಹಾಗೂ ಕೋಲು ಕಾಲಿಗೆ ಗುದ್ದಿದ ರಕ್ತಗಾಯಗಳಾಗಿ, ಉಪ್ಪಿನಂಗಡಿಯ ಸೂರ್ಯಂಬೈಲು ಸೆಂಟರ್‌ನಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ  ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಆರೋಪಿ ಕಾರಿನಲ್ಲಿದ್ದ ಪ್ರಯಾಣಿಕರಾದ ಮಣಿ ಮತ್ತು ಸವಿತಾರವರಿಗೂ ಗಾಯಗಳಾಗಿದ್ದು ಚಿಕಿತ್ಸೆಗೆ ಕರೆದುಕೊಂಡು ಹೋಗಿರುತ್ತಾರೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  40/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಡಬ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ವಿಶ್ವನಾಥಗೌಡ ಪ್ರಾಯ:48 ವರ್ಷ ತಂದೆ: ಶಾಂತಪ್ಪಗೌಡ, ವಾಸ: ಹೊಸ್ಮಠ  ಗುಡ್ಡೆ ಮನೆ, ಕುಟ್ರುಪ್ಪಾಡಿ ಗ್ರಾಮ ಕಡಬ ತಾಲೂಕು ರವರು ದಿನಾಂಕ:28.02.2021 ರಂದು ಬೆಳಗ್ಗೆ 06.30 ಗಂಟೆಗೆ ತಮ್ಮ ಮನೆಗೆ ಕುಡಿಯುವ ನೀರು ತರುವರೇ ಕಡಬ-ಸುಬ್ರಹ್ಮಣ್ಯ ರಾಜ್ಯ ರಸ್ತೆ ಬದಿಯಲ್ಲಿರುವ ಸರ್ಕಾರಿ ಕುಡಿಯುವ ನೀರು ಭಾವಿ ಕಡೆಗೆ ಡಾಮಾರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಉಪ್ಪಿನಂಗಡಿ ಕಡೆಯಿಂದ ಆರೋಪಿತನಾದ ಗುರುಪ್ರಸಾದ್‌ ಎಂಬಾತನು KA-21 U-7564 ನೇ ಹಿರೋ ಸ್ಪ್ಲೆಂಡರ್‌  ಪ್ರೋ  ಮೋಟಾರ್‌ ಸೈಕಲ್‌ನಲ್ಲಿ  ತನ್ನ ಅಜ್ಜಿಯಾದ ಸುಂದರಿ ಎಂಬವರನ್ನು ಸಹ ಸವಾರೆಯಾಗಿ ಕುಳ್ಳಿರಿಸಿಕೊಂಡು ಬರುತ್ತಿದ್ದು ಡಾಮಾರು ರಸ್ತೆಯಲ್ಲಿರುವ ಎತ್ತರದ ಉಬ್ಬಿನ (ಹಂಸ್) ಬಳಿ ವೇಗವಾಗಿ ಅಜಾಗರೂಕತೆಯಿಂದ ತನ್ನ ಮೋಟಾರ್‌ ಸೈಕಲ್‌ ಚಲಾಯಿಸಿದ ಪರಿಣಾಮ ಹಿಂಬದಿ ಸವಾರೆಯಾದ  ಆರೋಪಿತನ ಅಜ್ಜಿಯಾದ ಸುಂದರಿ ಎಂಬವರು  ರಸ್ತೆಗೆ ಬಿದ್ದು ತಲೆಯ ಹಿಂಬದಿಗೆ  ರಕ್ತಗಾಯವಾಗಿರುತ್ತದೆ ನಂತರ  ಗಾಯಗೊಂಡವರನ್ನು ತಕ್ಷಣ 108 ಅಂಬ್ಯಲೆನ್ಸ್ ನಲ್ಲಿ ಕಡಬ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷೀಸಿದಾಗ ಗಾಯಾಳು ಸುಂದರಿ ಎಂಬವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಡಬ ಠಾಣಾ ಅ.ಕ್ರ 17/2021 ಕಲಂ 279  304 (A) IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಬ್ರಹ್ಮಣ್ಯ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಕುಸುಮಾಧರ, ಪ್ರಾಯ:42 ವರ್ಷ, ತಂದೆ: ಸೋಮಪ್ಪ ಗೌಡ, ವಾಸ: ಪೊಸೊಳಿಕೆ ಮನೆ, ರೇಖ್ಯ ಗ್ರಾಮ,, ಬೆಳ್ತಂಗಡಿ ತಾಲುಕು  ರವರು ದಿನಾಂಕ: 27.02.2021 ರಂದು ಅವರ ಬಾಬ್ತು ಕೆಎ 21 ಇಎ 3825 ನೇ ಆ್ಯಕ್ಟೀವಾ ಹೊಂಡಾ ಸ್ಕೂಟರ್ ನಲ್ಲಿ ಅವರ ತಮ್ಮನಾದ ವಿಶ್ವನಾಥ, ಪ್ರಾಯ: 40 ವರ್ಷ ಎಂಬವರನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಕೊಳತ್ತು ತರವಾಡು ಎಂಬಲ್ಲಿ ಕುಟುಂಬದ ದೈವಗಳ ಕಾರ್ಯಕ್ರಮಕ್ಕೆ ಹೋಗಿ ಮರಳಿ ಮನೆ ಕಡೆಗೆ ಹೊರಟಿರುವಾಗ ಸುಳ್ಯ ತಾಲೂಕು ಐವತ್ತೊಕ್ಲು ಗ್ರಾಮದ ಕರಿಕ್ಕಳ ಜಂಕ್ಷನ್ ನಿಂದ ಸ್ವಲ್ಪ ಮುಂದೆ ಕೆಎ 51 ಎಮ್ ಬಿ 6837 ನೇ ಬುಲೆರೋ ಜೀಪ್ ಪಂಜದಿಂದ ಬೆಳ್ಳಾರೆ ಕಡೆಗೆ ಹೊರಟ ಜೀಪ್ ನ ಚಾಲಕ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ವಾಹನ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದು ಪಿರ್ಯಾದಿದಾರರ ಕೆಎ 21 ಇಎ 3825 ನೇ ಆ್ಯಕ್ಟೀವಾ ಹೊಂಡಾ ಸ್ಕೂಟರ್ ನ ಮದ್ಯಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ನ ಚಾಲಕನಿಗೆ ಭುಜ, ತೋಳು, ತಲೆ ಮತ್ತು ಕಾಲಿಗೆ ಗುದ್ದಿದ ರಕ್ತಗಾಯವಾಗಿರುತ್ತದೆ. ಹಾಗೂ ಹಿಂಬದಿ ಸಹಸವಾರನಾದ ವಿಶ್ವನಾಥ ರಿಗೆ ಬಲಗಾಲಿನ ತೊಡೆ ಭಾಗದಲ್ಲಿ ಮೂಳೆಮುರಿತ ಹಾಗೂ ಪಾದದ ಬೆರಳಿನಲ್ಲಿ ಜಜ್ಜಿದ ಗಾಯವಾಗಿರುತ್ತದೆ. ಕೆಎ 51 ಎಮ್ ಬಿ 6837 ನೇ ಬುಲೆರೋ ಜೀಪ್ ಚಾಲಕ ನ ಹೆಸರು ಪಿಲಿಫ್ ಎಂಬುದಾಗಿ ತಿಳಿದು ಬಂದಿರುತ್ತದೆ ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಅ.ಕ್ರ ನಂಬ್ರ : 11-2021 ,ಕಲಂ: 279, 337,338 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 2

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ರಾಧಾಕೃಷ್ಣ ಪ್ರಾಯ 38 ವರ್ಷ ತಂದೆ: ನೀಲಪ್ಪ ನಾಯ್ಕ್ ವಾಸ: ಹಸಂತ್ತಡ್ಕ ಮನೆ, ಬಲ್ನಾಡು ಗ್ರಾಮ ಪುತ್ತೂರು ತಾಲೂಕು  ರವರು ಸುಮಾರು 40 ದಿನಗಳ ಹಿಂದೆ ತಮ್ಮ ತೋಟದಿಂದ ತೆಗೆದ ಹಣ್ಣಡಿಕೆಯನ್ನು ಮನೆಯ ಬಳಿ ಇರುವ ಅಡಿಕೆ ಒಣಗಿಸುವ ಅಂಗಳದಲ್ಲಿ ಒಟ್ಟು 3 ಅಂಕಣಗಳಲ್ಲಿ ಒಣಗಲು ಹಾಕಿದ್ದು ದಿನಾಂಕ 26.02.2021 ರಂದು ಸಂಜೆ ಸುಮಾರು 6.00 ಗಂಟೆಗೆ ಅಂಗಳದಲ್ಲಿ ಒಣಗಲು ಹಾಕಿದ ಅಡಿಕೆಗಳು ಯಥಾಸ್ಥಿತಿಯಲ್ಲಿದ್ದು, ದಿನಾಂಕ 27.02.2021 ರಂದು ಬೆಳಿಗ್ಗೆ 06.00 ಗಂಟೆಗೆ ನೋಡಿದಾಗ ಸದ್ರಿ ಅಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆಯ ಪೈಕಿ 1 ಅಂಕಣದಲ್ಲಿದ್ದ ಸುಮಾರು 6000 ಸುಲಿಯದ ಅಡಿಕೆಗಳನ್ನು ಕಳವು ಮಾಡಿರುವುದು ಕಂಡು ಬಂದಿದ್ದು, ದಿನಾಂಕ 26.02.2021 ರ ಸಂಜೆ 6.00 ಗಂಟೆಯಿಂದ ದಿನಾಂಕ 27.02.2021 ರ ಬೆಳಿಗ್ಗೆ 06.00 ಗಂಟೆಯ ಮಧ್ಯೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ 6000 ಸುಲಿಯ ಅಡಿಕೆಯ ಮೌಲ್ಯ ಅಂದಾಜು 24000/- ಆಗಿರುತ್ತದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆ ಆ.ಕ್ರ 17/21 ಕಲಂ:379  ಐ.ಪಿ.ಸಿ.ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ಳಾರೆ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ನಂದಕುಮಾರ್ ಕೆ ಪ್ರಾಯ 41 ವರ್ಷ, ತಂದೆ: ಕೆ ಕೃಷ್ಣ ಭಟ್, ವಾಸ; ಓಣಿಬಾಗಿಲು ಮನೆ, ಪೆರುವಾಯಿ ಗ್ರಾಮ ಮತ್ತು ಅಂಚೆ, ಬಂಟ್ವಾಳ ತಾಲೂಕು ರವರು ಸ್ವಾಮಿ ಪ್ರಸಾದ್ ಕನ್ಸಟ್ರಕ್ಷಶನ್ ಸಂಸ್ಥೆಯ ಸೂಪರ್ ವೈಸರ್ ಆಗಿದ್ದು, ದಿನಾಂಕ 28.02.2021 ರಂದು ಫಿರ್ಯಾದಿದಾರರು ಕಡಬ ತಾಲೂಕು ಬೆಳಂದೂರು ಗ್ರಾಮದ ಪಳ್ಳತ್ತಾರು ಸೈಟಿಗೆ ರೈಟರ್ ಅಕ್ಷಯ್ ಹಾಗೂ ರಶ್ಮಿತ್ ರವರೊಂದಿಗೆ ಹೋದ ಸಮಯ ಸದ್ರಿ ಸಂಸ್ಥೆಯಲ್ಲಿ ಕೆಲಸ ಮಾಡುವ ಟ್ರಾಕ್ಟರ್ ಚಾಲಕ ಹಾಗೂ ಅಪರೇಟರ್ ಚೋಟು ಕುಮಾರ್ ಎಂಬಾತನು ಸೈಟಿನಲ್ಲಿರಿಸಿದ್ದ ಸಂಸ್ಥೆಯ ರೋಡ್ ರೋಲರ್ ಯಂತ್ರದಿಂದ ಒಂದು ಕ್ಯಾನಿಗೆ ಸಣ್ಣ ಪೈಪು ಮುಖೇನ ಡೀಸೆಲ್ ಕಳ್ಳತನ ಮಾಡಿ ತುಂಬಿಸುತ್ತಿದ್ದು ಫಿರ್ಯಾದಿದಾರರು ಹತ್ತಿರ ಹೋದಾಗ ಆತನು ಪೈಪು ಮತ್ತು ಡೀಸೆಲ್ ತುಂಬಿದ ಕ್ಯಾನನ್ನು ಅಲ್ಲಿಯೇ ಬಿಟ್ಟು ಓಡಿ ಪರಾರಿಯಾಗಿದ್ದು ಸ್ಥಳದಲ್ಲಿ 20 ಲೀಟರ್ ಕ್ಯಾನ್ ಮತ್ತು ಸಣ್ಣ ಪೈಪು ಇದ್ದು, ಕ್ಯಾನಿನಲ್ಲಿ ಸುಮಾರು 15 ಲೀಟರ್ ನಷ್ಟು ಡೀಸೆಲ್ ಇಂಧನ ತುಂಬಿಸಿರುವುದು ಕಂಡು ಬಂದಿದ್ದು ಇದರ ಅಂದಾಜು ಮೌಲ್ಯ ರೂ 1280 ಆಗಬಹುದು. ಅಪಾದಿತ ಚೋಟು ಕುಮಾರ್ ರೋಡ್ ರೋಲರ್ ಯಂತ್ರದಿಂದ ಮಾಲೀಕರ ಅನುಮತಿಯಿಲ್ಲದೇ ಡೀಸೆಲ್ ಕಳವು ಮಾಡಿರುತ್ತಾನೆ, ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ ಅ.ಕ್ರ 10/2021 ಕಲಂ 381 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಕಡಬ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಕೆ. ಕೊರಗಪ್ಪ ಗೌಡ ಪ್ರಾಯ 52 ವರ್ಷ ತಂದೆ; ದಿ. ದುಗಣ್ಣ ಗೌಡ ವಾಸ ; ಪುತ್ತಿಲ ಬಾರೆತ್ತಾಡಿ ಮನೆ ಬಲ್ಯ ಗ್ರಾಮ ಕಡಬ ತಾಲೂಕು  ರವರಿಗೆ ಎರಡು ಜನ ಗಂಡು ಮಕ್ಕಳು ಹಾಗೂ ಒಂದು ಹೆಣ್ಣು  ಮಗಳಿದ್ದು ಮಗಳಾದ ಮೃತ ರಮ್ಯ ಪ್ರಾಯ 23 ವರ್ಷ ಎಂಬುವರು  BBM ವಿದ್ಯಾಬ್ಯಾಸ ಮಾಡಿಕೊಂಡು ಕುಟ್ರುಪ್ಪಾಡಿ ಗ್ರಾಮದ ಹೊಸ್ಮಠ ಎಂಬಲ್ಲಿನ ಸ್ಥಳಿಯ ಸಹಕಾರಿ ಬ್ಯಾಂಕಿನಲ್ಲಿ ಖಾಸಗಿ ಕೆಲಸ ಮಾಡಿಕೊಂಡಿದ್ದು ಪಿರ್ಯಾದುದಾರರು ದಿನಾಂಕ:28.02.2021 ರಂದು ಸಂಜೆ ಸಮಯ 06-30 ಗಂಟೆಗೆ ಆಲಂಕಾರಿನಲ್ಲಿ ಟಿಪ್ಪಾರ್ ಲಾರಿಯಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ಸಮಾಯ ಪಿರ್ಯಾದಿಯ ನೆರೆಯ ನಿವಾಸಿ ಉದಯ ಕುಮಾರ್ ಎಂಬುವರು ಪಿರ್ಯಾದುದಾರರ ಮೊಬೈಲ್ ಗೆ ದೂರವಾಣಿ ಕರೆ ಮಾಡಿ ಪಿರ್ಯಾದುದಾರರ ಮಗಳಾದ ರಮ್ಯಳು ಮನೆಯಲ್ಲಿ ತನು ಧರಿಸಿದ್ದ ಚೂಡಿದಾರದ ಶಾಲಿನಿಂದ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ  ತಿಳಿಸಿದಂತೆ ಪಿರ್ಯಾದುದಾರರು ಮನೆಗೆ ಬಂದು ತನ್ನ ಹೆಂಡತಿಯಲ್ಲಿ ವಿಚಾರಿಸಲಾಗಿ ಮೃತ ರಮ್ಯಳು ಸಮಯ ಸಂಜೆ 06-00 ಗಂಟೆಗೆ ಅವಳು ಮಲಗಿಕೊಳ್ಳುವ ಕೋಣೆಯಲ್ಲಿ ಅವಳು ಧರಿಸಿದ್ದ ಚೂಡಿದಾರದ ಶಾಲಿನಿಂದ ನೇಣು ಹಾಕಿಕೊಂಡಿದ್ದು ಇದನ್ನು  ಪಿರ್ಯಾದಿಯ ಹೆಂಡತಿ ಮತ್ತು ಅತನ ಮಗ ಪುಷ್ಪರಾಜ್ ಎಂಬುವರು ನೋಡಿ ಮೃತ ರಮ್ಯಳ ದೇಹವನ್ನು ಮಂಚದ ಮೇಲೆ ಮಲಗಿಸಿರುವುದಾಗಿ ಪಿರ್ಯಾದಿದಾರಾರಿಗೆ ತಿಳಿಸಿದ್ದು ಪಿರ್ಯಾದಿಯ ಮಗಳಾದ ಮೃತ ರಮ್ಯಳು ಪಿರ್ಯಾದಿಯ ಮನೆಯ ಪಕ್ಕದ ನಿವಾಸಿಯನ್ನು ಪ್ತೀತಿಸುತ್ತಿದ್ದ ಬಗ್ಗೆ ಮನೆಯಲ್ಲಿ ತಿಳಿದು ಪಿರ್ಯಾದುದಾರರು ಈ ಸಂಬಂದ ಮಾಡುವುದು ಬೇಡವೆಂದು ಹಾಗೂ ಬೇರೆ ಉತ್ತಮ ಸಂಬಂದ ನೋಡಿ ಮದುವೆ ಮಾಡುವುದಾಗಿ ತಿಳುವಳಿಕೆ ನಿಡಿದ್ದು  ಇದೇ ಕಾರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಈ ಬಗ್ಗೆ ಕಡಬ ಠಾಣಾ ಯು.ಡಿ.ಆರ್ ನಂಬ್ರ 04/2021 ಕಲಂ: 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 01-03-2021 11:22 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080