ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಗಣೇಶ್ (48) ತಂದೆ: ದೇವು ಪೂಜಾರಿ ವಾಸ: ರಾಯರಡ್ಕ ಮರೋಡಿ  ಗ್ರಾಮ  ಬೆಳ್ತಂಗಡಿ ತಾಲೂಕು ರವರು ದಿನಾಂಕ: 26-02-2022 ರಂದು ತನ್ನ ಬಾಬ್ತು KA21 R 1002 ನೇ ಮೋಟಾರು ಸೈಕಲ್ ನಲ್ಲಿ ಸೊಮಂತಡ್ಕ ಕಡೆಯಿಂದ ದಿಡುಪೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವ ಸಮಯ ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ ದೇವಿಗುಡಿ ಎಂಬಲ್ಲಿಗೆ ತಲುಪುತ್ತಿದ್ದಂತೆ ಅವರ ವಿರುದ್ದ ದಿಕ್ಕಿನಿಂದ ಸೊಮಂತಡ್ಕ ಕಡೆಯಿಂದ ದಿಡುಪೆ ಕಡೆಗೆ ನೊಂದಣಿಯಾಗದ ಹೊಸ ಮೋಟಾರ್ ಸೈಕಲ್ ನ್ನು ಅದರ ಸವಾರ ದುಡುಕುತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ತಲೆಗೆ,  ಬಲ ಕಣ್ಣಿನ ಬದಿ ಗುದ್ದಿದ ಗಾಯ, ಎಡ ಕಾಲಿಗೆ ಎಡ ಕೈ ಗೆ ಗುದ್ದಿದ ಗಾಯವಾಗಿರುತ್ತದೆ ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 36/2022 ಕಲಂ; 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಡಬ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಜನಾರ್ಧನ ಕೆ  ಪ್ರಾಯ(50),ತಂದೆ: ಅಣ್ಣು ಗೌಡ ,ವಾಸ: ಕೆರ್ನಡ್ಕ   ಮನೆ, ನೂಜಿಬಾಳ್ತಿಲ ಗ್ರಾಮ ಕಡಬ ತಾಲೂಕು ರವರು ಅಂಚೆ ಕಛೇರಿಯಲ್ಲಿ ಆಂಚೆ ಪಾಲಕರಾಗಿ  ಕೆಲಸ ಮಾಡಿಕೊಂಡಿದ್ದು ದಿನಾಂಕ 26-02-2022 ರಂದು ಮಗಳು ನಿರೀಕ್ಷ ಕೆ ಜೆ ಪ್ರಾಯ 7 ವರ್ಷ ಎಂಬವರು ನೂಜಿಬಾಳ್ತಿಲ ಗ್ರಾಮದ ಅಡೆಂಜ ಸರಕಾರಿ  ಕಿರಿಯ  ಪ್ರಾಥಮಿಕ ಶಾಲೆಗೆ ಹೋದವಳು ಮಧ್ಯಾಹ್ನ ಶಾಲೆ ಬಿಟ್ಟು ಮನೆಕಡೆಗೆ ಬರುತ್ತಿರುವಾಗ ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಕೆರ್ನಡ್ಕ ಎಂಬಲ್ಲಿ ಹಾದು ಹೋಗುವ  ಕಲ್ಲುಗುಡ್ಡೆ-ಅಡೆಂಜ ಡಾಮಾರು ರಸ್ತೆಯ ಬದಿಯಲ್ಲಿ ಇರುವ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯ ಮೋಟಾರ್ ಸೈಕಲ್ ಕೆ ಎ 21 ವೈ4155 ನೇದನ್ನು  ಅದರ ಸವಾರ ಅಭಿಲಾಷ್  ಪಿ ಕೆ ರವರು ಅಡೆಂಜಾ ಕಡೆಯಿಂದ ಕಲ್ಲುಗುಡ್ಡೆ ಕಡೆಗೆ ಅಜಾಗರುಕತೆ ಹಾಗೂ ನಿರ್ಲಕ್ಷತನದಿಂದ ಡಾಮಾರು ರಸ್ತೆಯ ಎಡಬದಿಗೆ  ಚಲಾಯಿಸಿಕೊಂಡು ಬಂದು ಪಿರ್ಯಾದಿಯ ಮಗಳು ನಿರೀಕ್ಷಾ ಕೆ ಜೆ ರವರಿಗೆ ಡಿಕ್ಕಿ ಉಂಟು ಮಾಡಿದ ಪರಿಣಾಮ ನಿರೀಕ್ಷಾರವರು ಮಣ್ಣು ರಸ್ತೆಗೆ ಬಿದ್ದವರನ್ನು ಅಲ್ಲಿದ ಸಾರ್ವಜನಿಕರು ಎಬ್ಬಿಸಿ ಉಪಚರಿಸಿ ನೋಡಲಾಗಿ ಹಣೆಯ ಮೇಲೆ ರಕ್ತ ಗಾಯ ಹಾಗೂ ಕೈಕಾಲುಗಳಿಗೆ ತರಚಿದ ಗಾಯವಾಗಿದ್ದು ಕೂಡಲೇ ಒಂದು ಖಾಸಗಿ ವಾಹನದಲ್ಲಿ ನೆಲ್ಯಾಡಿ ಅಶ್ವಿನಿ ಅಸ್ವತ್ರೆಗೆ ಕೊಂಡು ಹೋಗುತ್ತಿರುವ ವಿಚಾರವನ್ನು ತಿಳಿದುಕೊಂಡ ಪಿರ್ಯಾದುದಾರರು ಕೂಡಲೇ ಅಸ್ವತ್ರೆಗೆ ಬಂದು ಮಗಳಿಗೆ ಪ್ರಥಮ ಚಿಕಿತ್ಸೆ ಪಡೆದುಕೊಂಡ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಪುತ್ತೂರು ಸಿ ಟಿ ಅಸ್ವತ್ರಗೆ ಕೊಂಡು ಹೊದಲ್ಲಿ ವೈದ್ಯರ ಸಲಹೆಯಂತೆ ಮಂಗಳೂರು ಫಸ್ಟ್ ನ್ಯೂರೋ ಅಸ್ವತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಾಲಾಗಿ ಚಿಕಿತ್ಸೆಯಲ್ಲಿರುತ್ತಾಳೆ. ಈ ಬಗ್ಗೆ ಕಡಬ ಠಾಣಾ ಅ.ಕ್ರ 16/2022 ಕಲಂ. 279, 337 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ ಪ್ರಕರಣ: 2

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ವಿಶ್ವನಾಥ ಪ್ರಾಯ 56 ವರ್ಷ ತಂದೆ: ದಿ ರಾಮಣ್ಣ ಪೂಜಾರಿ   ವಾಸ: ದಾಸಕೋಡಿ ಮನೆ ಬಾಳ್ತಿಲ ಗ್ರಾಮ ಬಂಟ್ವಾಳ ತಾಲೂಕು ರವರ ಮಗನಾದ ಹಾರ್ದಿಕ್ ಪದವಿ ವಿದ್ಯಾಭ್ಯಾಸ್ ಮುಗಿಸಿ ಮನೆಯಲ್ಲಿ ಇದ್ದು, ದಿನಾಂಕ 28-02-2022 ರಂದು ಬೆಳಿಗ್ಗೆ ಪಿರ್ಯಾಧಿದಾರರು ಯಾವುದಾದರೂ ಉದ್ಯೋಗ ಮಾಡು ಎಂದು ಸಲಹೆ ನೀಡಿದ್ದು, ಆದರೆ ಪಿರ್ಯಾಧಿದಾರರ ಮಗ ಸಲಹೆಯನ್ನು ಪರಿಗಣಿಸದೇ ಮನೆಯಿಂದ ಹೊರಗೆ ಹೋದವನು ಬೆಳಿಗ್ಗೆ 10.00 ಗಂಟೆಗೆ ಸಮಯಕ್ಕೆ ಮನೆಗೆ ಬಂದು ಏಕಾಏಕಿಯಾಗಿ ದೊಣ್ಣೆಯನ್ನು ಹಿಡಿದುಕೊಂಡು ಬಂದು ಪಿರ್ಯಾಧಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾಧಿದಾರರ ಕಾಲರನ್ನು ಹಿಡಿದು ಎಳೆದು ದೊಣ್ಣೆಯಿಂದ ಎಡಕಾಲಿಗೆ, ಎಡತೋಳಿಗೆ ಹೊಡೆದು ಗಾಯವನ್ನು ಉಂಟು ಮಾಡಿದಲ್ಲದೆ ಕೈಯಿಂದ ಬೆನ್ನಿಗೆ ಹೊಡೆದು ನೋವು ಉಂಟು ಮಾಡಿ ದೊಣ್ಣೆಯನ್ನು ಅಲ್ಲಿಯೇ ಬಿಸಾಡಿ ಮನೆಯಿಂದ ಹೊರಗೆ ಹೋಗಿರುತ್ತಾನೆ ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 22/2022  ಕಲಂ: 504, 324, 323 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವೇಣೂರು ಪೊಲೀಸ್ ಠಾಣೆ :ಪಿರ್ಯಾದಿದಾರರಾದ ರಮೇಶ (36)  ತಂದೆ- ಅಣ್ಣು ಪೂಜಾರಿ  ವಾಸ: ಲಕ್ಷ್ಮೀ ನಿವಾಸ ಮನೆ, ಸಾವ್ಯ   ಗ್ರಾಮ, ಬೆಳ್ತಂಗಡಿ ತಾಲೂಕು ರವರು ದಿನಾಂಕ: 22-02-2022 ರಂದು ತನ್ನ ಮನೆಯ ಎದುರು ಮನೆಯ ವಾಸಿ ಗೋಪಾಲ ಮೂಲ್ಯರವರ ಮನೆಯಲ್ಲಿ ಸತ್ಯನಾರಾಯಣ ಪೂಜೆ ಮತ್ತು ದೈವ ಕೋಲ ಕಾರ್ಯಕ್ರಮ ಇದ್ದುದರಿಂದ ಅಲ್ಲಿಗೆ ಹೋದ ಸಮಯ ರಾತ್ರಿ ಸುಮಾರು 11-00 ಗಂಟೆಗೆ ಆರೋಪಿಗಳಾದ ಫಿರ್ಯಾದಿದಾರರ ತಮ್ಮ ರಾಜೇಶ್‌, ಬಾವ ಕರುಣಾಕರ, ಅಕ್ಕ ಶಾಲಿನಿ ಮತ್ತು ತಂಗಿ ಸುಭಾಷಿಣಿ ಎಂಬವರು ಕೂಡಾ ಅಲ್ಲಿಗೆ ಬಂದಿದ್ದು, ಅವರ ಪೈಕಿ ಪಿರ್ಯಾದಿದಾರರ ಬಾವ ಕರುಣಾಕರ ಎಂಬವರು ಮಾವನ ಜಾಗವನ್ನು ನೀನು ವೀಲುನಾಮೆ ಯಾಕೆ ಮಾಡಿಕೊಂಡಿದ್ದೀಯಾ? ಎಂದು ವಿಚಾರಿಸಿದ್ದಕ್ಕೆ ಫಿರ್ಯಾದಿದಾರರು ಈ ವಿಚಾರವು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ಇರುವುದಾಗಿ ತಿಳಿಸಿದ್ದು, ಆರೋಪಿಗಳಾದ 1)ರಾಜೇಶ್‌, 2)ಕರುಣಾಕರ, 3)ಶಾಲಿನಿ, 4)ಸುಭಾಷಿಣಿ   ಇವರುಗಳು ಏಕಾ ಏಕಿ ಫಿರ್ಯಾದಿದಾರರ ಬಳಿ ಬಂದು ರಾಜೇಶ್‌ ಎಂಬಾತನು ಹೂವಿನ ಚಟ್ಟಿಯಿಂದ  ಫಿರ್ಯಾದಿದಾರರ ಎಡ ಭುಜಕ್ಕೆ ಹೊಡೆದಿರುತ್ತಾರೆ. ಶಾಲಿನಿ ಮತ್ತು ಸುಭಾಷಿಣಿ ಎಂಬವರುಗಳು ಸೇರಿ ಫಿರ್ಯಾದಿದಾರರ ಕುತ್ತಿಗೆ ಹಿಡಿದು ಎಳೆದಾಡಿ ಕುತ್ತಿಗೆಯಲ್ಲಿದ್ದ ಬಂಗಾರದ ಚೈನನ್ನು ತುಂಡು ಮಾಡಿರುತ್ತಾರೆ. ಕರುಣಾಕರ ಎಂಬವರು ಕಬ್ಬಿಣದ ರಾಡ್‌ನಿಂದ ಬಲಕಾಲಿನ ಪಾದಕ್ಕೆ ಹೊಡೆದಿರುತ್ತಾರೆ. ನಂತರ ನಮಗೆ ಪಾಲು ಕೊಡದಿದ್ದರೆ ಫಿರ್ಯಾದಿದಾರರನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿರುತ್ತಾರೆ. ಆ ಸಮಯ ಸ್ಥಳದಲ್ಲಿದ್ದ ಸುಂದರ ಬಂಗೇರ ಮತ್ತು ನಂದೀಶರವರುಗಳು ಆರೋಪಿಗಳು ಇನ್ನಷ್ಟು ಹಲ್ಲೆ ನಡೆಸದಂತೆ ತಡೆದಿರುತ್ತಾರೆ. ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 16-2022 ಕಲಂ :323, 324,506 ಜೊತೆಗೆ 34  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಹರೀಶ ಬಿ ಪ್ರಾಯ 29 ವರ್ಷ,ತಂದೆ: ನಾರಾಯಣ, ವಾಸ: ಪಾಲ್ತಾಡು ಕಾಲನಿ ಮನೆ, ಕೊಳ್ತಿಗೆ ಗ್ರಾಮ, ಪುತ್ತೂರು ತಾಲೂಕು, ದ.ಕ. ಜಿಲ್ಲೆ ರವರ ತಂದೆ ನಾರಾಯಣ ಪ್ರಾಯ 52 ವರ್ಷ ರವರು ವಿಪರೀತ ಮದ್ಯ ಸೇವನೆ ಮಾಡುವ ಚಟವನ್ನು ಹೊಂದಿದ್ದು, ಇದರಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆ ಹೊಂದಿ ಕೆಲವು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದವರು ದಿನಾಂಕ 27.02.2022 ರಂದು ಬೆಳಿಗ್ಗೆ 07-00 ಗಂಟೆಗೆ ಅವರ ಕುಟುಂಬದ ತರವಾಡು ಮನೆಯಾದ ಬಂಬಿಲ ಎಂಬಲ್ಲಿಗೆ ದೈವದ ಕಾರ್ಯಕ್ರಮ ಇರುವುದಾಗಿ ಹೇಳಿ ಹೋದವರು ದಿನಾಂಕ 28.02.2022 ರಂದು ಬೆಳಿಗ್ಗೆ 07-30 ಗಂಟೆಯ ಮಧ್ಯೆ ಪುತ್ತೂರು ಕೊಳ್ತಿಗೆ ಗ್ರಾಮದ ಬಾಕಿಜಾಲು ಸರಕಾರಿ ಗೇರು ಮರದ ತೋಟದಲ್ಲಿರುವ ಗೇರು ಮರಕ್ಕೆ ನೈಲಾನ್ ಹಗ್ಗವನ್ನು ಕಟ್ಟಿ ನೇಣು ಬಿಗಿದು ನೇತಾಡುತ್ತಿರುವುದು ಕಂಡು ಬಂದಿದ್ದು, ಅವರು ಮಾನಸಿಕ ಖಿನ್ನತೆಗೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಯು.ಡಿ.ಆರ್  06/2022 ಕಲಂ 174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 01-03-2022 10:31 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080