ಅಪಘಾತ ಪ್ರಕರಣ: ೦4
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಕೆ.ವಿ.ರಕ್ಷಿತ್ ಕುಮಾರ್ ಪ್ರಾಯ:22 ವರ್ಷತಂದೆ: ದಿ|| ಕೇಶವ ಪೂಜಾರಿ ವಾಸ: ಜಕ್ರಿಬೆಟ್ಟು ಗಿರಿಗುಡ್ಡೆ ಮನೆ ಬಿ ಕಸಬಾ ಗ್ರಾಮ, ಬಂಟ್ವಾಳ ತಾಲೂಕು ರವರು ನೀಡಿದ ದೂರಿನಂತೆ ಪಿರ್ಯಾದಿದಾರರು ದಿನಾಂಕ 30.03.2022 ರಂದು ಮನೆಯಿಂದ ತನ್ನ ಸ್ನೇಹಿತ ಕಿರಣ್ ನೊಂದಿಗೆ ಆತನ ಬಾಬ್ತು KA-19-HB-7141 ನೇ ಪಲ್ಸರ್ ಮೋಟರ್ ಸೈಕಲಿನಲ್ಲಿ ಸಹಸವಾರನಾಗಿ ಕುಳಿತುಕೊಂಡು ಜಕ್ರಿಬೆಟ್ಟುವಿಗೆ ಹೋಗುತ್ತಾ ಬಂಟ್ವಾಳ ತಾಲೂಕು ಬಿ ಕಸಬಾ ಗ್ರಾಮದ ಜಕ್ರಿಬೆಟ್ಟು ಪಂಪ್ ಹೌಸ್ ಬಳಿ ತಲುಪುತ್ತಿದ್ದಂತೆ ಬಿ.ಸಿ.ರೋಡ್ ಕಡೆಯಿಂದ KA-19-ML-1553 ನೇ ಹೊಂಡಾ ಸಿಟಿ ಕಾರನ್ನು ಚಾಲಕ ಅಬ್ದುಲ್ ಸಾಬ್ ರವರು ದುಡುಕುತನ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಮೋಟರ್ ಸೈಕಲಿಗೆ ಹಾಗೂ ಎದುರಿನಿಂದ ಬರುತ್ತಿದ್ದ KA-19-AC-2764 ನೇ ಟಾಟಾ ಜಿಪ್ಪು ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು, ಅಪಘಾತದಲ್ಲಿ ಗಾಯಗೊಂಡ ಪಿರ್ಯಾದಿದಾರರು ಹಾಗೂ ಸವಾರ ಕಿರಣ್ ರವರು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಕಿರಣ್ ರವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ 38/2022 ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ರವಿಚಂದ್ರ ಪೂಜಾರಿ (48) ತಂದೆ:ಬಾಬು ಪೂಜಾರಿ ವಾಸ: ಅರ್ವದಕಲಮನೆ ಮುಂಡೂರು ಗ್ರಾಮ ಸವಣಾಲು ಅಂಚೆ ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ: 30-03-2022 ರಂದು ಬೆಳ್ತಂಗಡಿ ತಾಲೂಕು ಬೆಳ್ತಂಗಡಿ ಕಸಬಾ ಗ್ರಾಮದ ಸಂತೆಕಟ್ಟೆ ಎಂಬಲ್ಲಿ ಪಾದಚಾರಿ ಶ್ರೀಮತಿ ಲಲಿತ ರವರು ರಸ್ತೆಬ ದಾಟುತ್ತಿರುವಾಗ ಗುರುವಾಯನಕೆರೆ ಕಡೆಯಿಂದ ಬೆಳ್ತಂಗಡಿ ಕಡೆಗೆ ಕೆಎ 21 ಕ್ಯೂ 8011 ನೇ ದ್ವಿಚಕ್ರ ವಾಹನವನ್ನು ಅದರ ಸವಾರ ದುಡುಕುತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ಶ್ರೀಮತಿ ಲಲಿತ ರವರಿಗೆ ಢಿಕ್ಕಿ ಹೊಡೆದ ಪರಿಣಾಮ ಅವರು ಅಲ್ಲಿಯೇ ರಸ್ತೆಗೆ ಬಿದ್ದು ತಲೆಗೆ, ಮುಖಕ್ಕೆ, ಬಲಕೈ ಮೊಣಗಂಟಿಗೆ, ಎಡಕಾಲಿಗೆ ಗುದ್ದಿದ ತರಚಿದ ರಕ್ತಗಾಯಗೊಂಡು ಚಿಕಿತ್ಸೆ ಬಗ್ಗೆ ಮಂಗಳೂರು ಪಾಧರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣಾ ಅ.ಕ್ರ: 51/2022 ಕಲಂ; 279,337 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.
ವಿಟ್ಲ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ರಕ್ಷೀತ್ (18) ತಂದೆ: ವೆಂಕಪ್ಪ ಕುಡಿಯಾ ವಾಸ: ಪಾದೆಕಲ್ಲು ಮನೆ ಕನ್ಯಾನ ಗ್ರಾಮ ಬಂಟ್ವಾಳ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 31-03-2022 ರಂದು ಬೆಳಗ್ಗೆ ತನ್ನ ಮನೆಯಿಂದ ಅಜ್ಜಿ ಮನೆಯಾದ ಕೇರಳ ಪಾವೂರಿಗೆ ತನ್ನ ಬಾಬ್ತು ಕೆಎ-19-ಹೆಚ್ಎ-4740 ನಂಬ್ರದ ಹೊಂಡಾ ಡ್ಯೂ ಸ್ಕೂಟರ್ ನಲ್ಲಿ ಹಿಂಬದಿ ಸವಾರರಾಗಿ ತನ್ನ ತಾಯಿ ಮಿನಾಕ್ಷಿ ರವರನ್ನು ಕುಳ್ಳಿರಿಸಿಕೊಂಡು ಮಿತ್ತನಡ್ಕ–ಕುಡ್ಪಲ್ತಡ್ಕ ಸಾರ್ವಜನಿಕ ರಸ್ತೆಯಲ್ಲಿ ಮಿತ್ತನಡ್ಕ ಕಡೆಯಿಂದ ಕುಡ್ಪಲ್ತಡ್ಕ ಕಡೆಗೆ ಹೋಗುತ್ತಿರುವ ಸಮಯ ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಹೊಗೆನಾಡು ಕ್ರಾಸ್ ಬಳಿಗೆ ತಲುಪಿದಾಗ ಕುಡ್ಪಲ್ತಡ್ಕ ಕಡೆಯಿಂದ ಮಿತ್ತನಡ್ಕ ಕಡೆಗೆ ಕೆಎ-02-ಎಂಇ-7831 ನಂಬ್ರದ ರಿಡ್ಜ್ ಕಾರಿನ ಚಾಲಕ ಸುದೀರ್ ಶೆಟ್ಟಿ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಕಾರನ್ನು ತೀರಾ ಬಲ ಬದಿಗೆ ಚಲಾಯಿಸಿಕೊಂಡು ಬಂದು ಎದುರಿನಿಂದ ಪಿರ್ಯಾಧಿ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸ್ಕೂಟರ್ ಗೆ ಡಿಕ್ಕಿಯನುಂಟು ಮಾಡಿದ ಪರಿಣಾಮ ಪಿರ್ಯಾಧಿ ಹಾಗೂ ಅವರ ತಾಯಿ ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾಧಿದಾರರ ಎಡ ಕೋಲು ಕೈಗೆ ಹಾಗೂ ಎಡ ಕೋಲು ಕಾಲಿಗೆ ಗುದ್ದಿದ ಗಾಯವಾಗಿರುತ್ತದೆ, ಹಾಗೂ ಹಿಂಬದಿ ಸಹ ಸವಾರರಾದ ಪಿರ್ಯಾಧಿಯ ತಾಯಿ ಮೀನಾಕ್ಷಿಯವರಿಗೆ ಹಿಂಬದಿ ತಲೆಗೆ ರಕ್ತ ಗಾಯವಾಗಿರುತ್ತದೆ, ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಅ.ಕ್ರ 55/2022 ಕಲಂ:279,337 ಬಾಧಂಸಂ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಅಭಿರಾಮ್, ಪ್ರಾಯ 24 ವರ್ಷ, ತಂದೆ: ಕೆ.ಸಿ. ರಾಜೇಶ್ ಕುಮಾರ್, ವಾಸ: 202ಎ, ಸುರತ್ಕಲ್ ರೈಲ್ವೇ ಕ್ವಾಟ್ರಸ್, ಸುರತ್ಕಲ್, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 30-03-2022 ರಂದು ಆರೋಪಿ ಮೋಟಾರ್ ಸೈಕಲ್ ಸವಾರ ರಾಜೇಶ್ ಎಂಬವರು KA-21-EB-8585 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರು ಕಡೆಯಿಂದ ಸುಳ್ಯ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಮುಕ್ರಂಪಾಡಿ ಆಯುರ್ ನರ್ಸರಿ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ರಾಂಗ್ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಅಭಿರಾಮ್ ಎಂಬವರು ನಿತಿನ್ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಮಡಿಕೇರಿ ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-19-HE-2658 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲಿಗೆ ಅಪಘಾತವಾಗಿ, ಎರಡೂ ಮೋಟಾರ್ ಸೈಕಲಿನ ಸವಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುದಾರರಿಗೆ ಬಲಕೈ ಮತ್ತು ಬಲಕಾಲಿನ ಬೆರಳುಗಳಿಗೆ ಗಾಯ, ನಿತಿನ್ ರವರಿಗೆ ಸೊಂಟಕ್ಕೆ ಗುದ್ದಿದ ಗಾಯ ಮತ್ತು ಆರೋಪಿ ಸವಾರನಿಗೆ ತಲೆಗೆ ಹಾಗೂ ಇತರ ಭಾಗಗಳಿಗೆ ರಕ್ತಗಾಯವಾಗಿರುತ್ತದೆ. ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆತಂದಿದ್ದು, ಪಿರ್ಯಾದುದಾರರು ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು, ನಿತಿನ್ ರವರು ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಆರೋಪಿ ಸವಾರನನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 59/2022 ಕಲಂ: 279,337 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ: ೦1
ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಜನಾರ್ಧನ ಪ್ರಾಯ;45 ವರ್ಷತಂದೆ; ಕುಶಾಲಪ್ಪ ಗೌಡ ವಾಸ; ಕೋಟೆದಗುಡ್ಡೆ ಮನೆ ರೇಖ್ಯಾ ಗ್ರಾಮ ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ;30-03-2022 ರಂದು ಬೆಳಿಗ್ಗೆ ಬೆಳ್ತಂಗಡಿ ತಾಲೂಕು ರೆಖ್ಯಾ ಗ್ರಾಮದ ಕೋಟೆದಗುಡ್ಡೆ ಎಂಬಲ್ಲಿ ಪಿರ್ಯಾದುದಾರರ ಜಾಗಕ್ಕೆ ನೆರೆಯ ಶಿವರಾಜ್ ಎಂಬವರ ಸಾಕು ಕೋಳಿ ಬಂದಿದ್ದು ಇದನ್ನು ಕಂಡು ಪಿರ್ಯಾದುದಾರರು ಅದನ್ನು ಓಡಿಸಲು ಕಲ್ಲು ಹೆಕ್ಕಿ ಬಿಸಾಕಿದ್ದು ಇದನ್ನು ಕಂಡ ಶಿವರಾಜ್ ಹಾಗೂ ಶಿವರಾಜ್ ರ ಸಹೋದರ ಜನಾರ್ಧನ ಎಂಬವರು ಪಿರ್ಯಾದುದಾರರಿಗೆ ಅವ್ಯಾಚ ಶಬ್ದಗಳಿಂದ ಬೈದಾಗ ಪಿರ್ಯಾದುದಾರರು ತನ್ನ ಮನೆಯಿಂದ ಹೊರಗೆ ಸಾರ್ವಜನಿಕ ದಾರಿಗೆ ಬಂದು ಶಿವರಾಜ ಹಾಗೂ ಜನಾರ್ಧನರಲ್ಲಿ ಯಾಕೇ ನನಗೆ ಬೈಯುತ್ತೀರಿ ಎಂದು ಕೇಳಿದಾಗ ಶಿವರಾಜ್ ಒಂದು ಕಾಟು ಮರದ ಕೋಲನ್ನು ತೆಗೆದುಕೊಂಡು ಪಿರ್ಯಾದುದಾರರ ಎಡ ಕೈಗೆ , ಬಲ ಕೈಗೆ ಹಾಗೂ ತೊಡೆಗೆ ಹೊಡೆದನು. ಜನಾರ್ಧನನು ಪಿರ್ಯಾದುದಾರರ ಮುಖಕ್ಕೆ ಕೈಯಿಂದ ಹೊಡೆದು ದೂಡಿಹಾಕಿದ್ದಲ್ಲದೇ ಪಿರ್ಯಾದುದಾರರಿಗೆ ನಿನ್ನನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅಕ್ರ 23/2022 ಕಲಂ: 323,324, 504,506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦2
ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಚಂದ್ರಾವತಿ ಎಂ (40) ಗಂಡ: ಎನ್ ಹರೀಶ್ , ದುರ್ಗಾಂಬಿಕಾ ನಿಲಯ, ಗುರಿಕ್ಕಾನ, ಅಯ್ಯನಕಟ್ಟೆ ಬಾಳಿಲ ಗ್ರಾಮ, ಸುಳ್ಯ ತಾಲೂಕು ರವರ ಪಿರ್ಯಾದಿದಾರರ ಗಂಡ ಎನ್. ಹರೀಶ್ ಪ್ರಾಯ:44 ವರ್ಷ ರವರು ಶಾಲಾ ಬಸ್ನಲ್ಲಿ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದು ಮದ್ಯಪಾನ ಸೇವಿಸುವ ಚಟವನ್ನು ಹೊಂದಿದ್ದು ಹೆಚ್ಚಾಗಿ ಕುಡಿದು ಮನೆಗೆ ಬಂದು ಮಾನಸಿಕ ಸ್ಥೀಮಿತವನ್ನು ಕಳೆದುಕೊಂಡು ಕಿರಿಕಿರಿ ಮಾಡುತ್ತಿದ್ದು, ಈ ಬಗ್ಗೆ ಸುಮಾರು ಮೂರು ತಿಂಗಳ ಹಿಂದೆ ಸಂಬಂಧಿಕರೆಲ್ಲಾ ಸೇರಿ ಪಂಚಾಯತಿಕೆ ನಡೆಸಿ ಅವರಿಗೆ ಸೂಕ್ತ ತಿಳುವಳಿಕೆ ನೀಡಲಾಗಿತ್ತು. ಬಳಿಕ ಹರೀಶ್ ರವರು ಮನೆಯಲ್ಲಿ ಆಹಾರ ಸೇವಿಸದೇ ಇದ್ದು ದಿನಾಂಕ: 30-03-2022 ರಂದು ಬೆಳಿಗ್ಗೆ ಪಿರ್ಯಾದಿದಾರರ ಎಂದಿನಂತೆ ಬೆಳಿಗ್ಗೆ ಕೆಲಸಕ್ಕೆ ಹೋಗಿ ಸಂಜೆ 7.30 ಗಂಟೆಗೆ ಮನೆಗೆ ಬಂದು ಸ್ನಾನಕ್ಕೆಂದು ಹೋಗಿದ್ದು ಮಗ ಕ್ಷಿತಿಜ್ ಅಡುಗೆ ಕೋಣೆಯಲ್ಲಿದ್ದು ಆ ವೇಳೆಗೆ ಹರೀಶ್ ರವರು ಅವರ ಬಾಬ್ತು ಸ್ಕೂಟರ್ನಲ್ಲಿ ಮನೆಗೆ ಬಂದು ಸ್ಕೂಟರ್ ನಿಲ್ಲಿಸಿ ಬೊಬ್ಬೆ ಹಾಕುತ್ತಾ ಅಲ್ಲಿಯೇ ಬಿದ್ದಾಗ ಮಗ ಅಲ್ಲಿಗೆ ಹೋದಾಗ ಹರೀಶ್ರವರು ನಾನು ಸಾಯುತ್ತೇನೆ ಎಂದು ಹೇಳಿ ಸ್ಕೂಟರಿನ ಸೀಟನ್ನು ಮೇಲಕ್ಕೆ ಎತ್ತಿ ಬೆಂಕಿ ಕಡ್ಡಿಯನ್ನು ಗೀರಿ ಸ್ಕೂಟರಿಗೆ ಬೆಂಕಿ ಹಚ್ಚಿರುತ್ತಾರೆ. ಆ ವೇಳೆ ಮಗನು ಬೊಬ್ಬೆ ಹಾಕಿದ್ದು ಕೇಳಿ ಸ್ನಾನದ ಕೋಣೆಯಲ್ಲಿದ್ದ ಪಿರ್ಯಾದಿದಾರರು ನೀರನ್ನು ತೆಗೆದುಕೊಂಡು ಬಂದು ಬೆಂಕಿಯನ್ನು ಆರಿಸಿ ಹರೀಶ್ರವರನ್ನು ಪರಿಶೀಲಿಸಿದಲ್ಲಿ ಯಾವುದೋ ಕೀಟನಾಶಕದ ಘಾಟು ವಾಸನೆ ಬಂದು ಪರಿಸರದಲ್ಲಿ ಹುಡುಕಾಡಿದಾಗ ಅಂಗಳದ ಬದಿ ಹೂವಿನ ಗಿಡಗಳ ಮಧ್ಯೆ ಕೀಟನಾಶಕದ ಬಾಟಲಿಯೊಂದು ಬಿದ್ದಿದ್ದು ಕೂಡಲೇ ಆಸುಪಾಸಿನವರಿಗೆ ತಿಳಿಸಿ ಬೆಳ್ಳಾರೆಯಿಂದ ಅಂಬ್ಯಲೆನ್ಸ್ ನ್ನು ಬರಹೇಳಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿಯ ವೈದ್ಯರು ಪರೀಕ್ಷಿಸಿ ಹರೀಶ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಯು.ಡಿ.ಆರ್ ನಂ 10/2022 ಕಲಂ 174 ಸಿಆರ್ ಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬೆಳ್ಳಾರೆ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಬೆಳ್ತ ಮುಗೇರ, 68 ವರ್ಷ, ತಂದೆ: ದಿ|| ಉಕ್ರ ಮುಗೇರ, ವಾಸ: ಬೇರಿಕೆ ಮನೆ, ಸವಣೂರು ಗ್ರಾಮ, ಕಡಬ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 31-03-2022 ರಂದು ಪಿರ್ಯಾದುದಾರರ 2 ನೇ ಪತ್ನಿ ಗುಲಾಬಿರವರ ಮಗ ರವಿಶಂಕರ, 32 ವರ್ಷ ಎಂಬಾತನು ಸುಮಾರು 2 ವರ್ಷಗಳ ಹಿಂದೆ ಅರಸಿನಮಕ್ಕಿ ಕಡೆಗೆ ಕೂಲಿ ಕೆಲಸಕ್ಕೆ ಹೋದವನು ಅಲ್ಲಿಯೇ ಮದುವೆಯಾಗಿ ಪತ್ನಿ ಮನೆಯಲ್ಲಿ ವಾಸ ಇದ್ದು, ದಿನಾಂಕ 20-03-2022 ರಂದು ಸವಣೂರು ಕಡೆಗೆ ಬಂದವನು ಸವಣೂರು ಮಕ್ಕಳ ಬಸದಿ ಸಮೀಪ ಗುಡ್ಡ ಜಮೀನಿನಲ್ಲಿ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಮೃತದೇಹವು ಕೊಳೆತು ಹೋಗಿರುವುದು ದಿನಾಂಕ 31-03-2022 ರಂದು ಅಪರಾಹ್ನ 3-30 ಗಂಟೆಗೆ ಕಂಡು ಬಂದಿದ್ದು, ರವಿಶಂಕರನು ಮದ್ಯಪಾನದ ಕಾರಣ ಅಥವಾ ಇನ್ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಹೊಂದಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಯು.ಡಿ.ಆರ್ 11/2022 ಕಲಂ 174 ಸಿಆರ್ ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.