ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ಉಪ್ಪಿನಂಗಡಿ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಪ್ರಕಾಶ್.ಕೆ, ಪ್ರಾಯ   ವರ್ಷ, ತಂದೆ: ಬಾಬು ಕುಂಬಾರ, ವಾಸ: ಶ್ರೀರಾಮ ನಗರ ಮನೆ,ಬಂದಾರು ಗ್ರಾಮ ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 29.04.2021 ರಂದು  17.30 ಗಂಟೆ ಸಮಯಕ್ಕೆ  ಕಡಬ  ತಾಲೂಕು ಶಿರಾಡಿ ಗ್ರಾಮದ ಬರ್ಚಿನ ಹಳ್ಳ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ  ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಟೈನರ್ ಲಾರಿ ನಂಬ್ರ  ಕೆಎ 19 ಎಬಿ 2741 ನೇದನ್ನು ಅದರ ಚಾಲಕ  ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಯಿಂದ ಚಲಾಯಿಸಿಕೊಂಡು ಬಂದು ಮಂಗಳೂರು ಕಡೆಯಿಂದ ಪಿರ್ಯಾದಿದಾರರು ಚಲಾಯಿಸಿಕೊಂಡು ಬರುತ್ತಿದ್ದ  ಟ್ಯಾಂಕರ್ ಲಾರಿ ನಂಬ್ರ ಕೆಎ 55 6823 ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳ ಜಖಂಗೊಂಡಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ  40/2021  ಕಲಂ 279 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

 

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ತಿಮ್ಮಪ್ಪ ಪೂಜಾರಿ, ಪ್ರಾಯ 50 ವರ್ಷ,ತಂದೆ: ಜಿನ್ನಪ್ಪ ಪೂಜಾರಿ, ವಾಸ: ಕೊಂಡೆಜಾಲು ಮನೆ, ಕಣಿಯೂರು ಗ್ರಾಮ, ಬೆಳ್ತಂಗಡಿ ತಾಲೂಕು ರವರ ತಾಯಿ ಅಪ್ಪಿ, ಪ್ರಾಯ 76 ವರ್ಷ ಎಂಬವರು ಬಿ.ಪಿ.ಕಾಯಿಲೆ, ಶುಗರ್ ಕಾಯಿಲೆ ಮತ್ತು ಹೃದಯ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದವರನ್ನು ದಿನಾಂಕ 27.04.2021 ರಂದು ಕಾಯಿಲೆ ಜೋರಾಗಿರುವುದರಿಂದ ಉಜಿರೆ ಬೆನಕ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆಯಲ್ಲಿದ್ದು ಚಿಕಿತ್ಸೆಯಲ್ಲಿರುತ್ತಾ ದಿನಾಂಕ 30.04.2021 ರಂದು 00.30 ಗಂಟೆಗೆ ಬೆನಕ ಆಸ್ಪತ್ರೆಯ ವೈದ್ಯಾಧಿಕಾರಿಯವರು ಕೊರೊನಾ ಪಾಸಿಟಿವ್ ಬಂದ ಕಾರಣ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಅಪ್ಪಿಯವರನ್ನು ಒಂದು ಆ್ಯಂಬುಲೆನ್ಸಿನಲ್ಲಿ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿಯ ವೈದ್ಯಾಧಿಕಾರಿಯವರು ದಿನಾಂಕ 30.04.2021 ರಂದು 01.15 ಗಂಟೆಗೆ ಪರೀಕ್ಷಿಸಿ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಯು.ಡಿ.ಆರ್ ನಂ. 15/2021 ಕಲಂ: 174 ಸಿ.ಆರ್.ಪಿ.ಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಶ್ರೀಮತಿ ಲಲಿತಾ ಪ್ರಾಯ-57  ವರ್ಷಗಂಡ- ವೆಂಕಪ್ಪ ನಾಯ್ಕವಾಸ- ನೆಲ್ಲಿತ್ತಡ್ಕ  ಮನೆ, ನಿಡ್ಪಳ್ಳಿ ಗ್ರಾಮ  ಪುತ್ತೂರು ತಾಲೂಕು ರವರು ದಿನಾಂಕ 25.04.2021 ರಂದು ತನ್ನ ಗಂಡ ವೆಂಕಪ್ಪ ನಾಯ್ಕ್ ಮತ್ತು ಮಗ ಬಾಲಕೃಷ್ಣ ನಾಯ್ಕರವನೊಂದಿಗೆ ಮನೆಯಲ್ಲಿದ್ದ ಸಮಯ ಬಾಲಕೃಷ್ಣ ನಾಯ್ಕ್‌ ನು ಏಕಾಏಕಿ ಆಸ್ವಸ್ಥಗೊಂಡಿದ್ದು, ವಿಚಾರಿಸಲಾಗಿ ತಾನು ವಿಷ ಸೇವಿಸಿರುವುದಾಗಿ ತಿಳಿಸಿದಂತೆ ಕೂಡಲೇ ಪಿರ್ಯಾದಿದಾರರು ಮತ್ತು ಅವರ ಗಂಡ ಮಗ ಬಾಲಕೃಷ್ಣನನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದಲ್ಲಿ ವೈದ್ಯರು ಪರೀಕ್ಷಿಸಿ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ಕರೆ ತಂದಲ್ಲಿ ವೈದ್ಯರು ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆಯಲ್ಲಿದ್ದವರು ದಿನಾಂಕ 29.04.2021 ರಂದು ರಾತ್ರಿ 9.00 ಗಂಟೆಗೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುವುದಾಗಿದೆ.  ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆ  ಯುಡಿಅರ್ ನಂಬ್ರ 17/21  ಕಲo: 174 ಸಿಅರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 01-05-2021 11:37 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080