ಅಭಿಪ್ರಾಯ / ಸಲಹೆಗಳು

ಕೊಲೆ ಬೆದರಿಕೆ ಪ್ರಕರಣ: 3

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಲೇಖಶ್ರೀ ಬಿ  ತಂದೆ: ದುಗ್ಗಣ್ಣ ಗೌಡ ವಾಸ: ಬೀರಿಗ ಮನೆ ಚಿಕ್ಕಮುಡ್ನೂರು ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿರವರು ದಿನಾಂಕ: 30-06-2021 ರಂದು 09:30 ಗಂಟೆ ಸಮಯಕ್ಕೆ ಕಛೇರಿಯಲ್ಲಿರುವ ಸಮಯ ಪಿರ್ಯಾದಿದಾರರ ಅಣ್ಣ ವಿನಂತ್ ರವರು ದೂರವಾಣಿ ಕರೆ ಮಾಡಿ ಆರೋಪಿಗಳಾದ 1) ಹೊನ್ನಪ್ಪ ಗೌಡ 2) ಸಂದೀಪ್ 3) ಜಯಂತಿ 4) ಇಂದಿರಾ 5) ಸಂದ್ಯಾ ರವರು ಕೈಯಲ್ಲಿ ಮಾರಾಕಾಯುಧಗಳಾದ  ಕಲ್ಲು, ದೊಣ್ಣೆಯನ್ನು ಹಿಡಿದು ಪಿರ್ಯಾದಿದಾರರ ಪಟ್ಟಾ ಸ್ಥಳವಾದ ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಬೀರಿಗ ಎಂಬಲ್ಲಿರುವ ಸರ್ವೇ ನಂಬ್ರ 76-ಪಿ-1 ನೇದಕ್ಕೆ ಅಕ್ರಮ ಪ್ರವೇಶ ಮಾಡಿ ಹಿಟಾಚಿ ಕೆಲಸಕ್ಕೆ ಅಡ್ಡಿ ಪಡಿಸಿ ಪಿರ್ಯಾದಿದಾರರ ಅಣ್ಣ ವಿನಂತ, ಶೋಭಾ, ನಳಿನಿ, ರೋಹಿಣಿ ಮೋನಪ್ಪ ಗೌಡರವರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಈ ಜಾಗದಲ್ಲಿ ಕೆಲಸ ಮಾಡಿದರೇ ಜಾಗ್ರತೆ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ ಜೀವ ಬೆದರಿಕೆ ಒಡ್ಡಿ ಕೈಯಲ್ಲಿದ್ದ ಕಲ್ಲುಗಳನ್ನು ಬಿಸಾಡಿರುತ್ತಾರೆ . ಹಿಟಾಚಿ  ಚಾಲಕನಿಗೆ ಕೆಲಸ ಮಾಡಿದರೇ ಜಾಗ್ರತೆ ಎಂದು ಬೈದು ಬೆದರಿಸಿ ಕೆಲಸ ನಿಲ್ಲಿಸಿರುತ್ತಾರೆ. ಪಿರ್ಯಾದಿದಾರರು ಕಛೇರಿ ಮುಗಿಸಿ 12:45 ಗಂಟೆಗೆ ಸದ್ರಿ ಸ್ಥಳಕ್ಕೆ ಹೋದಾಗ ಆರೋಪಿ ಸಂದ್ಯಾರವರು ಪಿರ್ಯಾದಿದಾರರ ಪಟ್ಟಾ ಸ್ಥಳದಲ್ಲಿ ಹಿಟಾಚಿಯನ್ನು  ಕೆಲಸ ಮಾಡದಂತೆ ತಡೆದು ನಿಲ್ಲಿಸಿ  ಪಿರ್ಯಾದಿದಾರರನ್ನು ನೋಡಿ 1 ನೇ ಆರೋಪಿ ಹೊನ್ನಪ್ಪ ಗೌಡ, ಎರಡನೇ ಆರೋಪಿ, ಸಂದೀಪ್ , 5ನೇ ಆರೋಪಿ ಸಂದ್ಯಾ ಪಿರ್ಯಾದಿದಾರನ್ನುದ್ದೇಶಿಸಿ ಇದೇ ಜಾಗದಲ್ಲಿ ನಿನ್ನನ್ನು ಹೂತು ಹಾಕುವುದಾಗಿ ಜೀವ ಬೆದರಿಕೆ ಒಡ್ಡಿರುವುದಾಗಿದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಅಕ್ರ: 52/2021 ಕಲಂ:143, 147, 148, 447, 341,504,506 ಜೊತೆಗೆ 149 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಚಂದಪ್ಪ ಪೂಜಾರಿ ಪ್ರಾಯ 60 ವರ್ಷ ತಂದೆ ಈಶ್ವರ ಭಟ್ ವಾಸ ಜೋಗಿಬೆಟ್ಟು ಮನೆ ಅನಂತಾಡಿ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ತನ್ನ ಅಣ್ಣ ನೋಣಯ್ಯ ಪೂಜಾರಿಯವರ ಹಸು ಪಿರ್ಯಾದುದಾರರ  ಮನೆಯಾದ ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ಜೋಗಿಬೆಟ್ಟಿನಲ್ಲಿರುವ  ತನ್ನ ಮನೆಯ ಬದಿಯಲ್ಲಿರುವ ದನದ ಹಟ್ಟಿಗೆ ದಿನಾಂಕ:30.06.2021ರಂದು ಬಂದಿರುವುದನ್ನು ಗಮನಿಸಿ ಹಸುವನ್ನು ಓಡಿಸಿ ತನ್ನ ಮನೆಯ ಕಡೆಗೆ ಮಣ್ಣು ರಸ್ತೆಯಲ್ಲಿ  ಮದ್ಯಾಹ್ನ ಸಮಯ 2:30 ಗಂಟೆಗೆ ಬಂರುವಾಗ ಆರೋಪಿ ನೋಣಯ್ಯ ಪೂಜಾರಿ ಮತ್ತು ಆತನ ಹೆಂಡತಿ ಸರೋಜಿನಿ ಪಿರ್ಯಾದುದಾರರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ನೋಣಯ್ಯ ಪುಜಾರಿ ಹಾಗೂ ಆತನ ಹೆಂಡತಿ  ರಕ್ತ ಗಾಯ ಮಾಡಿ ಇನ್ನು ಮುಂದಕ್ಕೆ ಹಸುವಿನ ವಿಚಾರಕ್ಕೆ ಬಂದರೆ ಕೊಲ್ಲದೇ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 90/2021  ಕಲಂ: 341.323.324.504.506.34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ನೋಣಯ್ಯ ಪೂಜಾರಿ  ಪ್ರಾಯ 60 ವರ್ಷ ತಂದೆ ಈಶ್ವರ ಭಟ್ ವಾಸ ಜೋಗಿಬೆಟ್ಟು ಮನೆ ಅನಂತಾಡಿ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರಾದ ನೋಣ್ಣಯ್ಯ ಪೂಜಾರಿಯವರಿಗೆ  ಅವರ ತಮ್ಮ ಚಂದಪ್ಪ ಪೂಜಾರಿಯವರು ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ಜೋಗಿಬೆಟ್ಟು ಎಂಬಲ್ಲಿನ ತಮ್ಮ ಜಮೀನಿನಲ್ಲಿ ಮೇಯಲು ಕಟ್ಟಿ ಹಾಕಿದ್ದ ಹಸುವಿನ ಹಗ್ಗವನ್ನು ದಿನಾಂಕ:30.06.2021ರಂದು  ಕತ್ತಿಯಿಂದ ತುಂಡು ಮಾಡಿ ಓಡಿಸಿಕೊಂಡು ಬರುತ್ತಿರುವುದಾಗಿ ಕುಮಾರಿ ಶೀಲ ಎಂಬವರು ಪಿರ್ಯಾದುದಾರರಿಗೆ ದೂರವಾಣಿ ಮುಖಾಂತರ ಮಾಹಿತಿ ನೀಡಿದ ಪ್ರಕಾರ ಪಿರ್ಯಾದುದಾರರು ಮದ್ಯಾಹ್ನ ಸಮಯ ಸುಮಾರು 2:30 ಗಂಟೆಗೆ ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿಗೆ ಬಂದಾಗ ಆರೋಪಿ ಚಂದಪ್ಪ ಪೂಜಾರಿ ತಡೆದು ನಿಲ್ಲಿಸಿ ತನ್ನ ಕೈಯಲ್ಲಿದ್ದ ಹಗ್ಗದಿಂದ ಕುತ್ತಿಗೆಗೆ ಹಾಕಿ ಇಬ್ಬರಿಗೂ ಉರುಡಾಟವಾಗುವಾಗಿದ್ದು.ಇವರ ಬೊಬ್ಬೆ ಕೇಳಿ ಕುಮಾರಿ ಶೀಲ ಮತ್ತು ಪಿರ್ಯಾದುದಾರ ಹೆಂಡತಿ ಸ್ಥಳಕ್ಕೆ ಬಂದು ಬಿಡಿಸಿರುತ್ತಾರೆ.ಆ ಸಮಯ ಆರೋಪಿಯ ಹೆಂಡತಿ ಶ್ರೀಮತಿ ಯಶೋದ ಅವಾಚ್ಯ ಶಬ್ದಗಳಿಂದ ಬೈದು ಮುಂದಕ್ಕೆ ನಮ್ಮ ವಿಷಯಕ್ಕೆ ಬಂದರೆ ಕೊಲ್ಲದೇ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 91/2021  ಕಲಂ: 341. 323. 324.504.506.34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

 

ಇತರೆ ಪ್ರಕರಣ: 2

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಉದಯರವಿ.ಎಂ.ವೈ ಪೊಲೀಸು ಉಪನಿರೀಕ್ಷಕರು ಪುತ್ತೂರು ಗ್ರಾಮಾಂತರ ಠಾಣೆರವರು ದಿನಾಂಕ 30.06.2021 ರಂದು ಬೆಳಿಗ್ಗೆ  9.30 ಗಂಟೆಗೆ ಬೆಟ್ಟಂಪಾಡಿ ಮಿತ್ತಡ್ಕ ಕಡೆಯಿಂದ ಒಡ್ಯ  ಕಡೆಗೆ ಬಂದ ಪಿಕಪ್‌ ವಾಹನವನ್ನು ನಿಲ್ಲಿಸಿದಾಗ ಪಿಕಪ್ ವಾಹನದಲ್ಲಿದ್ದ  ವ್ಯಕ್ತಿಯೊಬ್ಬ ವಾಹನದಿಂದ ಇಳಿದು, ಓಡಿ ಹೋಗಿದ್ದು, ವಾಹನದ ಚಾಲಕನು ಕೂಡಾ ಓಡಿ ಹೋಗಲು ಪ್ರಯತ್ನಿಸಿದವನನ್ನು ಸಿಬ್ಬಂದಿಗಳೊಂದಿಗೆ ತಡೆದು ನಿಲ್ಲಿಸಿ, ಪರಿಶೀಲಿಸಿದಾಗ ಸದ್ರಿ ವಾಹನದ ಹಿಂಬದಿ ಬಾಡಿಯಲ್ಲಿ ನಸು ಕಂದು  ಬಣ್ಣದ 2 ಹಸುಗಳಿರುವುದು ಕಂಡು ಬಂದಿದ್ದು, ಪಿಕಪ್‌ ವಾಹನದ ಚಾಲಕನಲ್ಲಿ ಸದ್ರಿ ಹಸುಗಳನ್ನು ಸಾಗಾಟ ಮಾಡುಲು ಪರವಾನಿಗೆ ಇದೆಯೇ ಎಂದು ಕೇಳಿದಾಗ ಹಸುಗಳನ್ನು  ಸಾಗಾಟ ಮಾಡಲು ಪರವಾನಿಗೆ ಮತ್ತು ಪಶು ವೈದ್ಯಾಧಿಕಾರಿಯವರ ಪ್ರಮಾಣಪತ್ರಗಳು ಇರದೇ ಇದ್ದು, ಸದ್ರಿ ಜಾನುವಾರುಗಳನ್ನು  ಬೆಳಿಯೂರುಕಟ್ಟೆಯ  ಸಿದ್ದಿಕ್ ಎಂಬವರಿಂದ ಖರೀದಿ ಮಾಡಿ ಪಿಕಪ್ ವಾಹನದಲ್ಲಿ ತುಂಬಿಸಿಕೊಂಡು ಮಾಂಸ ಮಾಡುವ ಉದ್ದೇಶಕ್ಕಾಗಿ ಕೇರಳ ಕಡೆಗೆ ಸಾಗಾಟ ಮಾಡುತ್ತಿರುವುದಾಗಿ ತಿಳಿಸಿದ್ದು, ಆತನ ಹೆಸರು ವಿಳಾಸ ಕೇಳಲಾಗಿ ಹಂಝ ಎ. ಪ್ರಾಯ-  42 ವರ್ಷ, ತಂದೆ- ಮಹಮ್ಮದ್‌ಕುಂಞಿ, ವಾಸ- ಕರ್ಕುಂಜ ಮನೆ, ಪುತ್ತೂರು ಕಸ್ಬಾ ಗ್ರಾಮ, ಪುತ್ತೂರು ತಾಲೂಕು ಎಂಬುದಾಗಿಯೂ ವಾಹನದಿಂದ ಇಳಿದು ಓಡಿ ಹೋದವನು ತನಗೆ ಹಸುಗಳನ್ನು ಮಾರಾಟ ಮಾಡಿದ ಬೆಳಿಯೂರುಕಟ್ಟೆಯ ಸಿದ್ದಿಕ್ ಎಂಬುವವನಾಗಿದ್ದು, ಸದ್ರಿ ಹಂಝನು  ಬೆಳಿಯೂರುಕಟ್ಟೆಯ ಸಿದ್ದಿಕ್ ಎಂಬವನಿಂದ ಹಸುಗಳನ್ನು ಖರೀದಿ ಮಾಡಿ, ಯಾವುದೇ ಪರವಾನಿಗೆಯನ್ನು ಹೊಂದದೇ  ಮಾಂಸ  ಮಾಡುವ ಉದ್ದೇಶದಿಂದ ಬೆಳಿಯೂರುಕಟ್ಟೆಯ ಸಿದ್ದಿಕ್ ನೊಂದಿಗೆ  ಸೇರಿಕೊಂಡು ಕೇರಳ ರಾಜ್ಯಕ್ಕೆ ಸಾಗಾಟ ಮಾಡುತ್ತಿದ್ದು, ಸದ್ರಿ ಹಂಝ ಮತ್ತು ಆರೋಪಿಗಳು ಹಸುಗಳನ್ನು ಸಾಗಾಟ ಮಾಡಲು ಉಪಯೋಗಿಸಿದ  ಅಂದಾಜು 4,50,000/- ರೂಪಾಯಿ ಮೌಲ್ಯದ  KA21 B 3411  ನೇ ಪಿಕಪ್ ವಾಹನ, ಹಾಗೂ ಸದ್ರಿ ಪಿಕಪ್‌ನಲ್ಲಿದ್ದ  ತಲಾ 20,000/-ರೂಪಾಯಿಯಂತೆ ಒಟ್ಟು ರೂಪಾಯಿ 40,000/-  ಮೌಲ್ಯದ 2ಹಸುಗಳನ್ನು ಕೂಡಾ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಆ.ಕ್ರ 56/21 ಕಲಂ: , 6, 7, 12 THE KARNATAKA PREVENTION OF SLAUGHTER AND PRESERVATION OF CATTLE ORDINANCE-2020ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ  30.06.2021 ರಂದು ಪುತ್ತೂರು ಗ್ರಾಮಾಂತರ ಠಾಣಾ ಆ.ಕ್ರ  57/21 ಕಲಂ 120(ಬಿ) , 420, 384, 506 ಐಪಿಸಿ ಮತ್ತು 66 (ಈ) ಐಟಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 01-07-2021 04:47 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080