ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಚೇತನ್ ಎಸ್ ಎಮ್ (29) ತಂದೆ: ಮಂಜುನಾಥ ವಾಸ: ದಂಡಿಗನಹಳ್ಳಿ ಗ್ರಾಮ ಕುಂಬೇನಹಳ್ಳಿ ಅಂಚೆ ಚನ್ನರಾಯಪಟ್ಟಣ ತಾಲೂಕು ಹಾಸನ ಜಿಲ್ಲೆ ರವರು ದಿನಾಂಕ: 28-06-2022 ರಂದು KA 55 M 0580 ನೇ ಕಾರಿನಲ್ಲಿ ಸಹ ಪ್ರಯಾಣಿಕರಾಗಿ ಪಿರ್ಯಾದಿದಾರರ ಪತ್ನಿ ಪ್ರಿಯಾ, ಮಗ ಆಕರ್ಶ್ ಹಾಗೂ ಸಂಬಂಧಿಕರಾದ ಸತ್ಯ, ಗೌರಿ, ಮನೋಜ್ ಕುಮಾರ್ ಹಾಗೂ ಸತ್ಯಕುಮಾರಿ ಎಂಬವರನ್ನು ಕುಳ್ಳಿರಿಸಿಕೊಂಡು ಧರ್ಮಸ್ಥಳ – ಕೊಕ್ಕಡ ರಸ್ತೆಯಲ್ಲಿ ಕಾರನ್ನು ಚಲಾಯಿಸಿಕೊಂಡು ಹೋಗುತ್ತಾ ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಮದ ಬುಡುಜಾಲು ಐತ್ತೂರು ಚೆಡಾವು ಎಂಬಲ್ಲಿಗೆ ತಲುಪುತ್ತಿದ್ದಂತೆ ಪಿರ್ಯಾದಿದಾರರ ವಿರುದ್ದ ದಿಕ್ಕಿನಿಂದ ಅಂದರೆ ಕೊಕ್ಕಡ ಕಡೆಯಿಂದ ಧರ್ಮಸ್ಥಳ ಕಡೆಗೆ KA 20 AB 1796 ನೇ ಇಕೋ ಆಂಬುಲೇನ್ಸ್ ವಾಹನವನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಜಖಂಗೊಂಡು ಪಿರ್ಯಾದಿದಾರರ ಕಾರಿನಲ್ಲಿದ್ದ ಗೌರಿ ರವರಿಗೆ ಬಲ ಕೈಯ ಮಣಿಕಟ್ಟಿಗೆ ಗುದ್ದಿದ ರೀತಿಯ ಗಾಯ, ಪ್ರಿಯಾ ರವರಿಗೆ ಬಲ ಕೈಯ ಮಣಿಕಟ್ಟಿಗೆ ಗುದ್ದಿದ ರೀತಿಯ ಗಾಯ ಹಾಗೂ ಸತ್ಯ ರವರಿಗೆ ಹಣೆಗೆ ಗುದ್ದಿದ ರೀತಿಯ ಗಾಯವಾಗಿರುತ್ತದೆ. ಉಳಿದಂತೆ   ಯಾರಿಗೂ ಗಾಯಗಳಾಗಿರುವುದಿಲ್ಲ. ಗಾಯಾಳುಗಳಿಗೆ ಅಗತ್ಯವಿದ್ದಲ್ಲಿ ಅವರ ಸ್ವಂತ ಊರಿಗೆ ಹೋಗಿ ಚಿಕಿತ್ಸೆ ಪಡೆಯುವುದಾಗಿ ತಿರ್ಮಾನಿಸಿ ಪ್ರಸಕ್ತ ಯಾವುದೇ ಚಿಕಿತ್ಸೆ ಪಡೆದುಕೊಂಡಿರುವುದಿಲ್ಲ ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 92/2022 ಕಲಂ: 279 337 ಭಾ ದಂ ಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪುಷ್ಟಾವತಿ ಪ್ರಾಯ: 63 ವರ್ಷ,  ಗಂಡ: ಪುಟ್ಟಣ್ಣ ಗೌಡ, ಮುರೂರು ಮನೆ, ಮಂಡೆಕೋಲು ಗ್ರಾಮ, ಸುಳ್ಯ ತಾಲೂಕು ರವರ ಎರಡನೇಯ ಮಗಳು ಗೀತಾಳನ್ನು ದೇವಚಳ್ಳ ಗ್ರಾಮದ ತಳೂರು ದಯಾನಂದ ಎಂಬವರಿಗೆ ಸುಮಾರು ಐದು ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು ಅನ್ಯೂನ್ಯತೆಯಿಂದ ಇದ್ದರು ಎರಡು ವರ್ಷದಿಂದ ಮಗಳು ದೂರವಾಣಿ ಕರೆಮಾಡಿ ಅತ್ತೆ ಸೀತಮ್ಮ, ಮೈದುನ ಜಯಪ್ರಕಾಶ, ಮೈದುನನ ಪತ್ನಿ ನಿಶ್ಮಿತಾಳು ಯಾವುದೇ ಕಾರಣವಿಲ್ಲದೆ ಕಿರುಕುಳ ನೀಡಿ ಮಾತು ಕತೆ ನಿಲ್ಲಿಸಿ ಮಾನಸಿಕ ಹಿಂಸೆ ನೀಡಿ ಸಣ್ಣಪುಟ್ಟ ವಿಷಯಗಳಿಗೆ ಜಗಳವಾಡಿ ಅವರು ಮೂರು ಜನ ಬೇರೆ ಇದ್ದು ಮಗಳನ್ನು ಪ್ರತ್ಯೇಕಿಸುತ್ತಿದ್ದರು ಎಂಬುದಾಗಿ ದೂರವಾಣಿ ಮೂಲಕ ತಿಳಿಸುತ್ತಿದ್ದು, ದಿನಾಂಕ 29.06.2022 ರಂದು ಬೆಳಿಗ್ಗೆ 08:30 ಗಂಟೆಯ ವೇಳೆಗೆ ಮಗ ಧನರಾಜ್‌‌ಗೆ ಜೀವನ್‌ ತಳೂರು ಎಂಬವರು ದೂರವಾಣಿ ಕರೆಮಾಡಿ ಮಗಳು ಗೀತಾ ಆಕೆಯ ಮಗಳು ಪೂರ್ವಿಯನ್ನು ಜೊತೆಯಲ್ಲಿ ಕರೆದುಕೊಂಡು ಮನೆಯ ಹತ್ತಿರವಿರುವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವರೇ ಹಾರಿದ್ದು ಅವರನ್ನು ಸ್ಥಳಿಯರು ಸೇರಿ ಬಾವಿಯಿಂದ ಮೇಲಕ್ಕೆ ಎತ್ತಿ ಚಿಕಿತ್ಸೆ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿರುವುದಾಗಿ ತಿಳಿಸಿದ್ದು ನಂತರ ಆಸ್ಪತ್ರೆಗೆ ಬಂದಿದ್ದು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯವರು ಪರೀಕ್ಷಿಸಿ ಮಗಳು ಗೀತಾ ಮೃತಪಟ್ಟಿರುವುದಾಗಿಯೂ ಅವಳ ಮಗಳು ಪೂರ್ವಿಯನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿರುತ್ತಾರೆ, ಈ ಬಗ್ಗೆ ಸುಬ್ರಹ್ಮಣ್ಯ  ಪೊಲೀಸ್ ಠಾಣೆ   ಅ.ಕ್ರ ನಂಬ್ರ 67/2022 ಕಲಂ:304(B),306 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

 

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಬಾಲಕೃಷ್ಣ, ಪ್ರಾಯ: 46 ವರ್ಷ,  ತಂದೆ: ಬಾಬು ಶೆಟ್ಟಿ, ವಾಸ: ವಿದೂಷ ನಗರ, ಚಂದ್ರ ನಿಲಯ ಮನೆ,  ಧರ್ಮಸ್ಥಳ ಗ್ರಾಮ,  ಬೆಳ್ತಂಗಡಿ ತಾಲೂಕು ರವರು ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಜೋಡುಸ್ಥಾನ ಎಂಬಲ್ಲಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದು, ಸದ್ರಿಯವರ ಅಂಗಡಿ ಬಳಿ ಸುಮಾರು 5-6 ತಿಂಗಳುಗಳಿಂದ ಬೆಂಗಳೂರು ಮೂಲದವರೆಂದು ಹೇಳಿಕೊಂಡು ಓರ್ವ ಅಪರಿಚಿತ ಮಹಿಳೆ ವಸಂತಳಾ ಬಾಯಿ ಎಂಬ ಹೆಸರಿನ ಅಂದಾಜು 65 ವರ್ಷ ಪ್ರಾಯದ ಅಪರಿಚಿತ ಹೆಂಗಸು ತಿರುಗುತ್ತಿದ್ದು, ಅಲ್ಲಿಯೇ ಪಿರ್ಯಾದಿದಾರರ ಅಂಗಡಿಯ ಬಳಿ ರಾತ್ರಿಹೊತ್ತು ಮಲಗುತ್ತಿದ್ದು, ದಿನಾಂಕ 27.06.2022 ರಂದು ಸಾಯಂಕಲ 07.00 ಗಂಟೆಗೆ ಅಸ್ವಸ್ಥಗೊಂಡು ಬಿದ್ದವರನ್ನು ಪಿರ್ಯಾದಿದಾರರು 108 ಆಂಬ್ಯುಲೆನ್ಸ್ ಗೆ ಕರೆ ಮಾಡಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಕಳುಹಿಸಿಕೊಟ್ಟಿರುತ್ತಾರೆ, ಸದ್ರಿ ಅಪರಿಚಿತ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಸರಕಾರಿ ವೆನ್ ಲಾಕ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಚಿಕಿತ್ಸೆಯಲ್ಲಿರುತ್ತಾ ದಿನಾಂಕ 29.06.2022 ರಂದು ಬೆಳಿಗ್ಗೆ 9.00 ಗಂಟೆಗೆ ಚಿಕತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆ ಯು ಡಿ ಆರ್ ನಂ 35/202 ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಕೇಶವ (54) ಚಿನ್ನಪ್ಪ ವಾಸ: ಮುಳ್ಯ ಪಂಚಿಕೋಡಿ ಮನೆ, ತೋಡಿಕಾನ ಗ್ರಾಮ, ಸುಳ್ಯ ತಾಲೂಕು ರವರು ಸರಿಯಾಗಿ ಊಟವನ್ನು ಸೇವಿಸದೇ ನಡೆದಾಡಲು ಶಕ್ತಿಯಿಲ್ಲದ ರೀತಿಯಲ್ಲಿದ್ದವರು ದಿನಾಂಕ 29.06.2022 ರಂದು ಮನೆಯಲ್ಲಿ ಸುಳ್ಯ ತಾಲೂಕು ಅರಂತೋಡಿಗೆ ಹೋಗಿ ಬರುವುದಾಗಿ ಮನೆಯವರಲ್ಲಿ ತಿಳಿಸಿ ನಂತರ ಸುಳ್ಯ ತಾಲೂಕು ತೋಡಿಕಾನ ಗ್ರಾಮದ ಪಂಚಿಕೋಡಿ ಎಂಬಲ್ಲಿ ಮೊರಿಯ ಕೆಳಗೆ ಇರುವ ನೀರಿನ ಪೈಪ್ ಗೆ ನೈಲಾನ್ ಹಗ್ಗವನ್ನು ಕಟ್ಟಿ ನಂತರ ತನ್ನ ಕುತ್ತಿಗೆಗೆ ಇನ್ನೊಂದು ತುದಿಯನ್ನು ಕಟ್ಟಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಯುಡಿಆರ್ ನಂಬ್ರ: 25/2022 ಕಲಂ:174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 01-07-2022 11:31 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080