ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಸಂಜೀವ ಶೆಟ್ಟಿ ಪ್ರಾಯ : 58 ವರ್ಷ ತಂದೆ: ಕಿಞಣ್ಣ ರೈ ವಾಸ: ಎರುಂಬು ಮನೆ,  ಅಳಿಕೆ ಗ್ರಾಮ, ಬಂಟ್ವಾಳ ತಾಲೂಕು ರವರು  ದಿನಾಂಕ 28-8-2021 ರಂದು ಅಗತ್ಯ ಕೆಲಸದ ನಿಮಿತ್ತ ತನ್ನ ಬಾಬ್ತು KA-19EQ-4392 ನೇ ಸ್ಕೂಟರಿನಲ್ಲಿ ಪಾಣೆಮಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಾ ಬಂಟ್ವಾಳ ತಾಲೂಕು ಪುದು ಗ್ರಾಮದ 10ನೇ ಮೈಲು ಕಲ್ಲು ಎಂಬಲ್ಲಿ ರಸ್ತೆಯ ಮತ್ತೊಂದು ಬದಿಯಲ್ಲಿರುವ ಪೆಟ್ರೋಲ್ ಪಂಪಿಗೆ ತಿರುಗಿಸಿ ಹೋಗುತ್ತಿದ್ದಂತೆ  ಮಂಗಳೂರು ಕಡೆಯಿಂದ KL-14-Q-5157 ನೇ ಕಾರನ್ನು ಅದರ ಚಾಲಕ ಮೊಹಮ್ಮದ್ ಇಮ್ರಾನ್ ರವರು ಅತೀ ವೇಗ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು  ಬಂದು  ಪಿರ್ಯಾದಿದಾರರ ಸ್ಕೂಟರಿಗೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು  ಎಡಕಾಲಿಗೆ , ಬಲಭುಜಕ್ಕೆ, ಎಡ ಮುಂಗೈಗೆ ಗುದ್ದಿದ ಹಾಗೂ ತರಚಿದ ಗಾಯಗೊಂಡವರು ಚಿಕಿತ್ಸೆಯ ಬಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 84/2021  ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವಿಟ್ಲ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಗೋಪಾಲಕೃಷ್ಣ ಪ್ರಾಯ 50 ವರ್ಷ ತಂದೆ:ಚನಿಯ ನಾಯ್ಕ್ ವಾಸ:ಕೋಪ್ರೆ ಮನೆ, ಕೇಪು ಗ್ರಾಮ ಬಂಟ್ವಾಳ ತಾಲೂಕು ರವರು ದಿನಾಂಕ:31.08.2021 ರಂದು ತಮ್ಮ ಬಾಬ್ತು ಕೆಎ 19 ಈ ಹೆಚ್‌ 5208 ನೇ ನಂಬ್ರದ ದ್ವಿ ಚಕ್ರ ವಾಹನದಲ್ಲಿ ಪುತ್ತೂರು ಕಡೆಯಿಂದ ವಿಟ್ಲ ಕಡೆಗೆ ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಚಂದಳಿಕೆ ಎಂಬಲ್ಲಿ ರಸ್ತೆಯ ಎಡ ಬದಿಯಲ್ಲಿ ಸವಾರಿ ಮಾಡಿಕೊಂಡು ಬರುತ್ತಿರುವಾಗ ವಿಟ್ಲ ಕಡೆಯಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಕೆಎ 19 ಎಇ 0547 ನಂಬ್ರದ ಕಾರಿನ ಚಾಲಕ ಪ್ರವೀಣ್‌ ಗೌಡ ಅಜಾಗರೂಕತೆ ಹಾಗೂ ತೀರ ನಿರ್ಲಕ್ಷ್ಯತನದಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಬಸ್ಸನ್ನು ಓವರ್‌ಟೇಕ್‌ ಮಾಡಿ ಪುತ್ತೂರು ಕಡೆಯಿಂದ ವಿಟ್ಲ ಕಡೆಗೆ ಬರುತ್ತಿದ್ದ ಕೆಎ 21 ಬಿ 4089 ನಂಬ್ರದ ಆಟೋ ರಿಕ್ಷಾಕ್ಕೆ ಅಪಘಾತಪಡಿಸಿ ಬಳಿಕ ಪಿರ್ಯಾದುದಾರರ ಬಾಬ್ತು ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದುದಾರರು ದ್ವಿ ಚಕ್ರ ಸಮೇತ ರಸ್ತೆಗೆ ಎಸೆಯಲ್ಪಟ್ಟು ಬಲ ಕೈ ಮದ್ಯದ ಬೆರಳಿಗೆ ರಕ್ತಗಾಯ,ಎಡ ಕೈ ಮೊಣಗಂಟು,ಎರಡು ಕಾಲುಗಳ ಮೊಣಗಂಟಿಗೆ ತರಚಿದ ಗಾಯ,ಎಡ ತೊಡೆಗೆ ಗುದ್ದಿದ ಗಾಯವಾಗಿದ್ದು. ಆಟೋ ರಿಕ್ಷಾ ಚಾಲಕ ಸುರೇಶ್‌ ರವರ ತಲೆಗೆ,ಹಣೆಗೆ,ಮೂಗಿಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 117/2021 ಕಲಂ:279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 2

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪೊಲೀಸ್‌ ಉಪನಿರೀಕ್ಷಕರು ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆ ರವರು ದಿನಾಂಕ 31.08.2021 ರಂದು ಚೇಳೂರು  ಗ್ರಾಮದ  ಬಾಕಿಮಾರು ಎಂಬಲ್ಲಿ ಅಕ್ರಮವಾಗಿ  ಜೂಜಾಟ ನಡೆಸುತ್ತಿದ್ದ  ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿ ಆರೋಪಿಗಳಾದ 1) ನಿತಿನ್ 2) ಪವನ್ ರಾಜ್ 3)ತೌಸೀಫ್ 4) ಅಬೂಬಕ್ಕರ್ 5) ಹಂಝ 6] ಶಬೀರ್ 7)ದೀವನ್ ಕುಮಾರ್ 8)ತಿಲಕ್ ರಾಜ್ 9) ಸುಮನ್ ಶೆಟ್ಟಿ 10)ಸತೀಶ 11) ಅಬ್ದುಲ್ ಅಜೀಜ್ 12) ಸತೀಶ್ 13) ಶಶಿಕುಮಾರ್  14)ರಾಘವೇಂದ್ರ 15) ಹೆನ್ರಿ ರವರನ್ನು ವಶಕ್ಕೆ ಪಡೆದು ಆಟಕ್ಕೆ ಬಳಸಿದ್ದ ವಿವಿಧ ಜಾತಿಯ ಇಸ್ಪೀಟ್ -104  ಎಲೆಗಳು, ಆಟಕ್ಕೆ ಬಳಸಿದ  ಹಣ  ರೂ 11,500/- ಗಳನ್ನು ವಶಕ್ಕೆ ಪಡೆದು ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ 101/2021 ಕಲಂ 78, 80 ಕೆ ಪಿ ಆಕ್ಟ್ ಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ.

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಉಪನಿರೀಕ್ಷಕರು ಬಂಟ್ವಾಳ ನಗರ ಪೊಲೀಸ್ ಠಾಣೆ ರವರಿಗೆ ದಿನಾಂಕ 31.08.2021  ರಂದು  ಬಂಟ್ವಾಳ ತಾಲೂಕು  ಕಳ್ಳಿಗೆ  ಗ್ರಾಮದ ಚಂದ್ರಿಕೆ ಎಂಬಲ್ಲಿ ಗುಡ್ಡದಲ್ಲಿ ಅಕ್ರಮವಾಗಿ ಕೋಳಿಅಂಕ ಜೂಜು ನಡೆಯುತ್ತಿರುವ ಬಗ್ಗೆ ಮಾಹಿತಿ ದೊರೆತಂತೆ ಸ್ಥಳಕ್ಕೆ ದಾಲಿ ನಡೆಸಿ ಆರೋಪಿಗಳಾದ 1) ವಿನಯ ಕುಮರ್ , 2) ಸುರೇಶ್ , 3) ಮುರಳಿ @ ಮುರಳಿಧರ, 4)ನಾಗೇಶ ಪೂಜಾರಿ, ರವರನ್ನು ಹಾಗೂ ಎರಡು ಹುಂಜ ಕೋಳಿಗಳನ್ನು ಹಾಗೂ ಅವುಗಳ ಕಾಳಿಗೆ ಕಟ್ಟಿದ ಎರಡು ಬಾಳು ಕತ್ತಿಗಳನ್ನು (ಕತ್ತಿಗಳು) ಹಾಗೂ ಕೃತ್ಯಕ್ಕೆ ಬಳಸಿದ ರೂ, 3,730/-ನ್ನು ವಶಕ್ಕೆ ಪಡೆದು ಬಂಟ್ವಾಳ ನಗರ ಪೋಲಿಸ್ ಠಾಣಾ ಅಕ್ರ: 102/2021 ಕಲಂ: 87 K P Act ಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ  ವೃಂದ ಪ್ರಭು ಪ್ರಾಯ 55 ವರ್ಷ ಗಂಡ ಪ್ರಕಾಶ್ ಫ್ರಭು ಬಂಟ್ವಾಳ ತಾಲೂಕು ಮೇರಮಜಲು ಗ್ರಾಮ ರವರ ಗಂಡ ಪ್ರಕಾಶ್ ಪ್ರಭುರವರು ಮನೆಯ ಸಮೀಪ ದಿನಸಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದು ಪಿರ್ಯಾದುದಾರರು  ಹೆಚ್ಚಾಗಿ 6 ತಿಂಗಳು  ಮನೆಯಲ್ಲಿ ಹಾಗೂ ಇನ್ನೂ 6 ತಿಂಗಳು  ಬೆಂಗಳೂರಿನಲ್ಲಿ ಮಗನ ಜೊತೆ ವಾಸವಾಗಿದ್ದು ತಿಂಗಳಿಗೊಮ್ಮೆ  ಮನೆಗೆ ಬರುತ್ತಿದ್ದು ದಿನಾಂಕ 08.07.2021 ರಂದು ಪಿರ್ಯಾದುದಾರರು ಬೆಂಗಳೂರಿಗೆ  ಮಗನ ಬಳಿ ಹೋಗಿದ್ದು  ಪಿರ್ಯಾದುದಾರರ ಗಂಡ ಪ್ರಕಾಶ್ ಪ್ರಭು ರವರು ಮನೆಯಲ್ಲಿ ಒಬ್ಬರೇ ಇದ್ದು ,ಪಿರ್ಯಾದುದಾರರು ದಿನಾಂಕ 28.08.2021 ರಂದು  ಬೆಳಿಗ್ಗೆ  11:00 ಗಂಟೆ ಸುಮಾರಿಗೆ ಪೋನ್ ಮಾಡಿ ಯೋಗಕ್ಷೇಮವನ್ನು ವಿಚಾರಿಸಿದ್ದು ದಿನಾಂಕ 30.08.2021 ರಂದು ಮಗನ ಮನೆಯಲ್ಲಿ  ಇದ್ದ ಸಮಯ ಮದ್ಯಾಹ್ನ ಸುಮಾರು 3.15 ಗಂಟೆಗೆ ನಮ್ಮ ಊರಿನ ಶ್ರೀನಾಥ್ ಎಂಬವರು ಪಿರ್ಯಾದುದಾರರಿಗೆ ಪೋನ್ ಕರೆ ಮಾಡಿ  “ ಪ್ರಕಾಶ ಪ್ರಭು ರವರು ಬೆಳಿಗ್ಗೆನಿಂದ  ಅಂಗಡಿಯನ್ನು ತೆರೆದಿಲ್ಲ ಬೀಡಿ ತೆಗೆದುಕೊಂಡು ಬಂದ ಹೆಂಗಸರು ಕೂಡ ಬೀಡಿಯನ್ನು ವಾಪಸ್ಸು ಹಿಡಿದುಕೊಂಡು ಹೋಗಿರುತ್ತಾರೆ ಪೋನ್ ಕೂಡ ರಿಸೀವ್ ಮಾಡಿರುವುದಿಲ್ಲ  ಮನೆಯ ಸುತ್ತ ಮುತ್ತ ನೋಡಿದೆ ಹಾಗೂ ಮನೆಯ ಡೋರ್ ಬಡಿದಿರುತ್ತೇನೆ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ ಅಲ್ಲದೇ ಮನೆಯ ಲೈಟ್ ಕೂಡ ಉರಿಯುತ್ತಿದೆ ಹಿಂಬದಿ ಡೋರ್  ತೆರೆದಿರುತ್ತದೆ ಎಂದು ಹೇಳಿದ್ದು ಆಗ ಪಿರ್ಯಾದುದಾರರು ಅವರಿಗೆ ಬೆಳಿಗ್ಗೆ ತೋಟದ ಕಡೆ  ಹೋಗಿ ತೆಂಗಿನ ಕಾಯಿ ಹೆಕ್ಕುವ ಅಬ್ಯಾಸವಿರುತ್ತದೆ  ಸ್ವಲ್ಪ ತೋಟದ ಕಡೆ ಹೋಗಿ ನೋಡಿ ಎಂದು ಹೇಳಿದ್ದು ಅದರಂತೆ ಸುಮಾರು 15 ನಿಮಿಷ ಬಿಟ್ಟು  ಶ್ರೀನಾಥ್ ರವರು  ಪೋನ್ ಮಾಡಿ  “ ನೀವು ಹೇಳಿದಂತೆ ತೋಟದ ಕಡೆ ಬಂದಿದ್ದು   ಮನೆಯ ಹಿಂಬದಿ  ತೋಡಿನ ಬದಿಯಲ್ಲಿ  ಪ್ರಕಾಶ್ ಪ್ರಭು ರವರು ಜಾರಿ ಬಿದ್ದು  ಮೃತಪಟ್ಟ ಸ್ಥಿತಿಯಲ್ಲಿ  ಕಂಡಬರುತ್ತದೆ ಎಂದು ತಿಳಿಸಿದ್ದು. ಕೂಡಲೇ ಪಿರ್ಯಾದುದಾರರು ಮಂಗಳೂರಿನಲ್ಲಿರುವ ಸೋದರ ಮಾವನ ಮಗ ಶಿವಾನಂದ ಶೆಣೈ ರವರಿಗೆ ವಿಚಾರ ತಿಳಿಸಿ ಕೂಡಲೇ ಮನೆಗೆ ಹೋಗುವಂತೆ ತಿಳಿಸಿದ್ದು ತಕ್ಷಣ ಹೊರಟು ಬರುತ್ತೇವೆ  ಎಂದು ತಿಳಿಸಿದ್ದು ಶಿವಾನಂದ ಶೆಣೈರವರು ಸ್ಥಳಕ್ಕೆ  ಹೋಗಿ   ಮೃತಹೇವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ  ಶೀತಲೀಕರಣ ಘಟಕದಲ್ಲಿ  ಇಟ್ಟಿರುವುದಾಗಿದೆ.ಪಿರ್ಯಾದುದಾರರ ಗಂಡನವರಿಗೆ ಬೆಳಿಗ್ಗೆ  ಸುಮಾರು 05.00 ಗಂಟೆಗೆ ಎದ್ದು  ತೋಟದ ಕಡೆ ಹೋಗಿ ನಂತರ ತೋಡಿನ ತೆಂಗಿನ ಕಾಯಿ ಹೆಕ್ಕುವ ಅಭ್ಯಾಸವಿದ್ದು  ಅದರಂತೆ ದಿನಾಂಕ 30.08.2021 ರಂದು ಬೆಳಿಗ್ಗೆ  ಎದ್ದು ಮನೆಯ ಹಿಂಬದಿ ಇರುವ ತೋಡಿನ ಬದಿಯಲ್ಲಿ ತೆಂಗಿನ ಕಾಯಿ ಹೆಕ್ಕುವ ಸಂದರ್ಭದಲ್ಲಿ ಆಯತಪ್ಪಿ ಆಕಸ್ಮಿಕವಾಗಿ  ತೋಡಿನ ಬದಿಗೆ ಬಿದ್ದು ಮೃತಪಟ್ಟಿರಬಹುದು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಯುಡಿಆರ್ ನಂ 30/2021 ಕಲಂ 174 ಸಿ ಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 01-09-2021 11:24 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080