ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಚಂದ್ರಶೇಖರಯ್ಯ ಹೆಚ್ ಕೆ ಪ್ರಾಯ 45 ವರ್ಷ, ವಾಸ: ಕೃಷ್ಣಪ್ಪ, ವಾಸ: ಅಟ್ಟಾವರ ಅಂಚೆ, ಹೊಸಲ್ಳಿ ಗ್ರಾಮ, ದುದ್ದ ಹೋಬಳಿ, ಹಾಸನ ತಾಲೂಕು ಮತ್ತು ಜಿಲ್ಲೆ ರವರು ನೀಡಿದ ದೂರಿನಂತೆ ದಿನಾಂಕ 31-08-2022 ರಂದು ಆರೋಪಿ ಮೋಟಾರ್ ಸೈಕಲ್ ಸವಾರ ಹಸನಬ್ಬ ಎಂಬವರು  KA-19-HH-9483 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಮಂಗಳೂರು ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗಿ,  ಪುತ್ತೂರು ತಾಲೂಕು 34 ನೇ ನೆಕ್ಕಿಲಾಡಿ ಗ್ರಾಮದ ನೆಕ್ಕಿಲಾಡಿ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಹೆದ್ದಾರಿಯ ರಾಂಗ್‌ ಸೈಡಿಗೆ ಚಲಾಯಿಸಿದ ಪರಿಣಾಮ, ಮೋಟಾರ್ ಸೈಕಲ್ ಸ್ಕಿಡ್ ಆಗಿ, ಪಿರ್ಯಾದುದಾರಾದ ಚಂದ್ರಶೇಖರಯ್ಯ ಹೆಚ್ಕೆ ರವರು ಸುಬ್ರಹ್ಮಣ್ಯ ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡುಹೋಗುತ್ತಿದ್ದ  KA-19-F-3072ನೇ ನೋಂದಣಿ ನಂಬ್ರದ ಕೆ ಎಸ್ ಆರ್‌ ಟಿ ಸಿ ಬಸ್ಸಿನ ಮುಂಭಾಗಕ್ಕೆ ಮೋಟಾರ್ ಸೈಕಲ್ ಅಪಘಾತವಾಗಿ, ಸವಾರನಿಗೆ ತಲೆಗೆ ಕೈಗೆ ಮತ್ತು ಕಾಲುಗಳಿಗೆ ಗಾಯವಾಗಿ ಚಿಕಿತ್ಸೆ ಬಗ್ಗೆ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ  ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 139/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 2

 

ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಕಾಂತಪ್ಪ ನ್ಯಾಕ ಪ್ರಾಯ:60 ವರ್ಷ ತಂದೆ; ಐತಪ್ಪ ನ್ಯಾಕ ವಾಸ; ಕುರ್ಮಾಣಿ ಮನೆ ಉಜಿರೆ ಗ್ರಾಮ ಬೆಳ್ತಂಗಡಿ ತಾಲೂಕು ರವರ ಬಾಬ್ತು ಉಜಿರೆ ಗ್ರಾಮದ  ಸ ನಂಬ್ರ 265/11 ರಲ್ಲಿ 1.84 ಎಕ್ರೆ ಮತ್ತು ಸ ನಂಬ್ರ 265/26 ರಲ್ಲಿ 0.42 ಎಕ್ರೆ ಸ್ಥಿರಾಸ್ತಿಗಳನ್ನು ಅಭಿವೃದ್ಧಿ ಪಡಿಸಲು ಪಿರ್ಯಾದುದಾರರನ್ನು ನಂಬಿಸಿ  ಸ ನಂಬ್ರ 265/11 ಕ್ಕೆ ಅಧಿಕಾರ ಪತ್ರ 265/26 ಕ್ಕೆ ದಿನಾಂಕ:06-01-2017 ರಂದು ನೊಂದಾಯಿತ ಕ್ರಯಸಾಧನವನ್ನು ಬರೆಯಿಸಿಕೊಂಡು ಪಿರ್ಯಾದುದಾರರಿಗೆ 1ನೇ ಆರೋಪಿತನಾದ ರಾಜೇಶ ಆರ್ ಶೆಣೈ ಎಂಬಾತನು  ಸಾಲ ತೆಗೆಯಿಸಿಕೊಡುವುದಾಗಿ ನಂಬಿಸಿ ವಿಶ್ವಾಸದಿಂದ  ಪಿರ್ಯಾದುದಾರರ  ಸಹಿ ಪಡೆದು 2ನೇ ಆರೋಪಿತನೊಂದಿಗೆ ಸೇರಿ ಮೇಲೆ ತಿಳಿಸಿದ ಸ್ಥಿರಾಸ್ತಿಗಳಿಗೆ  ರೂ 20,00,000  ಸಾಲವನ್ನು ಕಾನೂನು ಬಾಹಿರವಾಗಿ ಮಾಡಿ ಪಿರ್ಯಾದುದಾರರಿಗೆ ವಂಚಿಸಿರುತ್ತಾರೆ ಹಾಗೂ ಸ್ಥಿರಾಸ್ತಿಗಳನ್ನು  ಸ್ವಾಧಿನಪಡಿಸಿಕೊಳ್ಳಲು ಪ್ರಯತ್ನಿಸಿರುತ್ತಾರೆ ಮತ್ತು ದಿನಾಂಕ;18-12-2021 ರಂದು ಪಿರ್ಯಾದುದಾರರ ಹಕ್ಕಿನ ಸ್ಥಿರಾಸ್ತಿಗಳಿಗೆ ಅಕ್ರಮ ಪ್ರವೇಶಮಾಡಿ ಪಿರ್ಯಾದುದಾರರನ್ನು ವಂಚಿಸುವ ಉದ್ದೇಶದಿಂದ ಅವರ ಸ್ಥಿರಾಸ್ತಿಯಿಂದ ಹೊರಹಾಕಲು ಪ್ರಯತ್ನಿಸಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಪೊಲೀಸ್  ಠಾಣೆ ಅ,ಕ್ರ 55 ಕಲಂ: 420,423,447 ಜೊತೆಗೆ 34 ಐಪಿಸಿ ಮತ್ತು ಕಲಂ:3(1)(F) sc/st act-2015 ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಡಬ ಪೊಲೀಸ್ ಠಾಣೆ : ಪೊಲೀಸ್ ಉಪ ನೀರೀಕ್ಷಕರು ಕಡಬ ಪೊಲೀಸ್ ಠಾಣೆ ರವರಿಗೆ ದಿನಾಂಕ:31.08.2022 ರಂದು 112 ತುರ್ತು ವಾಹನದಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಯವರು ದೂರವಾಣಿ ಕರೆ ಮಾಡಿ ಠಾಣಾ ವ್ಯಾಪ್ತಿಯ ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಪುಳಿಕುಕ್ಕು ಮುರಾ ಚಡಾವು ಎಂಬಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆದು ನಿಲ್ಲಿಸಿರುವುದಾಗಿ ತಿಳಿಸಿದಂತೆ ಪಿರ್ಯಾದುದಾರರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತಲುಪಿ ನೋಡಲಾಗಿ KA-46 6097 ನೇ ಪಿಕಪ್‌ ವಾಹನದಲ್ಲಿ ಅಕ್ರಮವಾಗಿ ಹಿಂಸಾತ್ಮಕವಾಗಿ ಯಾವುದೇ ಪರವಾನಗಿ ಇಲ್ಲದೇ 4 ಜಾನುವಾರುಗಳನ್ನು ತುಂಬಿಸಿ ಅಕ್ರಮವಾಗಿ ಮಾಂಸ ಮಾಡಿ ಮಾರಾಟ ಮಾಡುವರೇ ಸಾಗಾಟ ಮಾಡುತಿರುವುದಾಗಿರುತ್ತದೆ. ಪಿಕಪ್‌ ವಾಹನದಲ್ಲಿದ್ದ ಆರೋಪಿತನಾದ ಜಯಪ್ರಕಾಶ್‌ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದು ಪಿಕಪ್‌ ವಾಹನದ ಚಾಲಕ ಆರೋಪಿ ಸುಧೀರ್‌ ಎಂಬಾತನು ಪಿಕಪ್‌ ವಾಹನವನ್ನು ಬಿಟ್ಟು ಓಡಿ ಹೋಗಿರುವುದಾಗಿರುತ್ತದೆ. ಪಿಕಪ್‌ ವಾಹನದಲ್ಲಿದ್ದ 4 ಜಾನುವಾರುಗಳನ್ನು ಮತ್ತು  KA-46 6097 ನೇ ಪಿಕಪ್‌ ವಾಹನವನ್ನು ಪಂಚರ ಸಮಕ್ಷಮದಲ್ಲಿ ಮಹಜರು ಮುಖೇನಾ ಸ್ವಾದೀನಪಡಿಸಿಕೊಂಡಿದ್ದು ಪಿಕಪ್‌ ವಾಹನದ ಮೌಲ್ಯ ಅಂದಾಜು 5,00,000/- ಹಾಗೂ 4 ಜಾನುವಾರಗಳ ಮೌಲ್ಯ 18,000/- ಆಗಬಹುದು ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಅ.ಕ್ರ 72/2022 ಕಲಂ: ಕಲಂ:4.5.12 ಕರ್ನಾಟಕ ಜಾನುವಾರು ಹತ್ಯ ಸಂರಕ್ಷಾ ಕಾಯ್ದೆ 2020 ಮತ್ತು ಕಲಂ: 66(1).192(A) ಇಂಡಿಯನ್ ಮೋಟಾರ್ ವೆಹಿಕಲ್ ಆಕ್ಟ್ 1988 ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಉಮೇಶ ಭಟ್ ಪ್ರಾಯ 59 ವರ್ಷ ತಂದೆ:ಹೆಚ್ ಈಶ್ವರ ಭಟ್ ವಾಸ:ಹತ್ತೊಕ್ಕಲು ಮನೆ ಇಳಂತಿಲ ಅಂಚೆ ಮತ್ತು ಗ್ರಾಮ ಬೆಳ್ತಂಗಡಿ ತಾಲೂಕು ರವರ ತಾಯಿ ಶ್ರೀಮತಿ ದೇವಕಿ ಅಮ್ಮ ಎಂಬವರು ಪ್ರತಿದಿನ ಕೈ ಯಲ್ಲಿ ವಾಕಿಂಗ್ ಸ್ಟಿಕ್ಕನ್ನು ಹಿಡಿದುಕೊಂಡು ತೋಟದಲ್ಲಿ ನಡೆದಾಡುತ್ತಿದ್ದರು. ಪಿರ್ಯದುದಾರರ ತೋಟದ ಮದ್ಯದಲ್ಲಿ ದಂಡೆ ಇಲ್ಲದ ತೆರೆದ ಕೆರೆಯೊಂದು ಇರುತ್ತದೆ. ದಿನಾಂಕ: 31-08-2022 ರಂದು 10.30 ಗಂಟೆಗೆ  ತಾಯಿ ತೋಟಕ್ಕೆ ನಡೆಯಲು ಹೋಗಿದ್ದವರು 11.30 ಗಂಟೆಯಾದರು ಮನೆಗೆ ವಾಪಾಸು ಬಾರದೆ ಇದ್ದ ಕಾರಣ ಹುಡುಕಾಡಿಕೊಂಡು ತೋಟಕ್ಕೆ ಹೋಗಿದ್ದು, ತಾಯಿಯು ಉಪಯೋಗಿಸುತ್ತಿದ್ದ ವಾಕಿಂಗ್ ಸ್ಟಿಕ್ ಇದ್ದು, ಸಂಶಯಗೊಂಡು ಸಂಬಂಧಿಕರಿಗೆ ಹಾಗೂ ನೆರೆಕರೆಯವರಿಗೆ ತಿಳಿಸಿದೆನು ಕೂಡಲೇ ಅವರೆಲ್ಲರು ತೋಟದ ಕಡೆಗೆ ಬಂದರು. ನಂತರ ಈಜುಗಾರರ ತಂಡದವರಿಗೆ ಕೆರೆಯಲ್ಲಿ ಹುಡುಕಾಡಿದಲ್ಲಿ 14.00 ಗಂಟೆಯ ಸಮಯಕ್ಕೆ ತಾಯಿಯ ಮೃತದೇಹ ಕೆರೆಯಲ್ಲಿ ಸಿಕ್ಕಿರುತ್ತದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಯುಡಿಆರ್ ನಂಬ್ರ 24/2022 ಕಲಂ:174 CRPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 01-09-2022 10:54 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080