ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

ಕಡಬ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಹೊನ್ನಪ್ಪ ಪ್ರಾಯ:27 ವರ್ಷ, ತಂದೆ: ಗೋಜ ವಾಸ: ನಗ್ರಿ ಮನೆ,ಅಲಂಕಾರು ಗ್ರಾಮ ,ಕಡಬ ತಾಲೂಕುಎಂಬವರ ದೂರಿನಂತೆ ಪಿರ್ಯಾದುದಾರರು .ದಿನಾಂಕ:30.10.2021 ರಂದು ಅಲಂಕಾರಿನಿಂದ ಮನೆಯಾದ ನಗ್ರಿ ಕಡೆಗೆ ಆಟೋರಿಕ್ಷಾದಲ್ಲಿ ಬಾಡಿಗೆ ಮುಗಿಸಿಕೊಂಡು ಮನೆ ಕಡೆಗೆ ಹೋಗುವರೇ ಅಲಂಕಾರು-ನಗ್ರಿ ಡಾಮಾರು ರಸ್ತೆಯಲ್ಲಿ ಅಲಂಕಾರು ಗ್ರಾಮದ ಶರವೂರು ದೇವಸ್ಥಾನದ ಬಳಿ ಕರಂದ್ಲಾಜೆ ಎಂಬಲ್ಲಿಗೆ ಸಮಯ ಸಂಜೆ 07.50 ಗಂಟೆಗೆ ತಲುಪಿದಾಗ ಅದೇ ರಸ್ತೆಯಲ್ಲಿ ಪಿರ್ಯಾದುದಾರರ  ಎದುರುಗಡೆಯಿಂದ ಕೆ.ಎ-21 ಎಕ್ಸ್-4243 ನೇ ಮೋಟಾರ್‌ ಸೈಕಲ್‌ನಲ್ಲಿ ಸವಾರನೊಬ್ಬನು ಸಹ ಸವಾರನನ್ನು ಕುಳ್ಳಿರಿಸಿಕೊಂಡು ಹೋಗುತ್ತಿದ್ದ ಸಮಯ ಏಕಾಏಕಿ ಮೋಟಾರ್‌ ಸೈಕಲ್‌ ಸ್ಕಿಡ್‌ ಆಗಿ ಮೊಟಾರ್‌ ಸೈಕಲ್‌ ಡಾಮಾರು ರಸ್ತೆಗೆ ಬಿದ್ದಿದು. ತಕ್ಷಣ ಹಿಂದಿನಿಂದ ಬರುತ್ತಿದ್ದ   ಪಿರ್ಯಾದುದಾರರು ಆಟೋರಿಕ್ಷಾವನ್ನು ನಿಲ್ಲಿಸಿ  ಅಪಘಾತವಾದಲ್ಲಿಗೆ ಹೋಗಿ ನೋಡಲಾಗಿ ಮೊಟಾರ್‌ ಸೈಕಲ್‌ ಸವಾರನು ಪಿರ್ಯಾದುದಾರರ  ಅಣ್ಣನ ಮಗನಾದ ರಕ್ಷೀತ್‌ ಎನ್‌ ಎಂಬುವನಾಗಿದ್ದು ಹಿಂಬದಿ ಸವಾರ ಪಿರ್ಯಾದಿಯ  ಮತ್ತೋಬ್ಬ ಅಣ್ಣ  ಅಣ್ಣು ಎನ್‌ ಎಂಬಾತನಾಗಿರುತ್ತಾನೆ ನಂತರ ಗಾಯಗೊಂಡವರನ್ನು ನೋಡಲಾಗಿ  ರಕ್ಷೀತ್‌ ನಿಗೆ ಸಣ್ಣಪುಟ್ಟ ತರಚಿದ ಗಾಯವಾಗಿದ್ದು ಅಣ್ಣು.ಎನ್‌ ಎಂಬಾತನಿಗೆ ಎಡಕಾಲಿನ ಮಂಡಿಗೆ ಗುದ್ದಿದ ಗಾಯ ಮತ್ತು ಮುಖಕ್ಕೆ ತರಚಿದ ಗಾಯವಾಗಿದ್ದು.. ಆ ವೇಳೆಗೆ ಸ್ಥಳಕ್ಕೆ ಬಂದ ಪಿರ್ಯಾದುದಾರರ ಅಣ್ಣನಾದ ರುಕ್ಮಯ್ಯ, ಮಲ್ಲೇಶ್‌ ಹಾಗೂ ರಕ್ಷೀತ್‌ ಹಾಗೂ ಪಿರ್ಯಾದುದಾರರು ಸೇರಿಕೊಂಡು ಅಣ್ಣು ಎಂಬಾತನನ್ನು ಉಪಚರಿಸಿ ತಕ್ಷಣ ಪಿರ್ಯಾದುದಾರರ  ಆಟೋರಿಕ್ಷಾದಲ್ಲಿ  ಪುತ್ತೂರಿಗೆ ಕರೆದುಕೊಂಡು ಹೋಗಿ ಹಿತಾ ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಕಡಬ ಠಾಣಾ ಅ.ಕ್ರ 90/2021 ಕಲಂ. 279.337  IPC   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮೋಹನ ದಾಸ ರೈ (70) ತಂದೆ:ವೆಂಕಪ್ಪ ರೈ ವಾಸ:ಧನವಂತರಿ ನಿಲಯ ರೈ ಕಂಪೌಂಡ ಕೆಂಪಿಮಜಲು ಉಪ್ಪಿನಂಗಡಿ ಗ್ರಾಮ ಪುತ್ತೂರು ಎಂಬವರ ದೂರಿನಂತೆ ಫಿರ್ಯಾಧಿರವರು ಕೃಷಿಕನಾಗಿ ಕೆಲಸ ಮಾಡಿಕೊಂಡಿದ್ದು . ಮನೆಯ ಬಳಿ  ಸುಮಾರು ಎರಡು ವರೆ ಎಕರೆ ಕೃಷಿ ಜಾಗವಿದ್ದು ಸದ್ರಿ ಸ್ಥಳದಲ್ಲಿ ಕೃಷಿ ಮಾಡುತ್ತಿದ್ದು ಸುಮಾರು 800 ಅಡಿಕೆ ಮರಗಳು ಇರುತ್ತದೆ, ನಮ್ಮ ತೋಟದಲ್ಲಿ ಹಲವು ಸಲ ಬಿದ್ದ ಹಸಿ ಅಡಿಕೆ ಕಳ್ಳತನ ಆಗಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿರುತ್ತದೆ. ದಿನಾಂಕ 31/10/2021 ರಂದು ಬೆಳಿಗ್ಗೆ 7.30 ಗಂಟೆಗೆ ನೆರೆಯ ರಘುರಾಮನೊಂದಿಗೆ ತೋಟದಲ್ಲಿರುವ ಅಡಿಕೆಯನ್ನು ಒಂದು ಪ್ಲಾಸ್ಟಿಕ ಗೋಣೆಯಲ್ಲಿ ತುಂಬಿಸುತ್ತಿರುವುದು ಕಂಡು ಬಂದಿದ್ದು, ಕೂಢಲೆ ನಾವು ಇಬ್ಬರು ಆತನನ್ನು ಹಿಡಿದು ವಿಚಾರಿಸಿದಾಗ ಆತನು ತನ್ನ ಹೆಸರು ರತನ, ನಾನು ಕರವೇಲನ ವಾಸಿ ಎಂದು ತಿಳಿಸಿದ್ದು ನಾನು ಇಲ್ಲಿ ಬಿದ್ದ ಅಡಿಕೆಯನ್ನು ಕಳ್ಳತನ ಮಾಡಿ ಮಾರಟ ಮಾಡಿ ಹಣ ಮಾಡುವ ಉದ್ದೇಶದಿಂದ ಇಲ್ಲಿಗೆ ಬರುವದಾಗಿ ತಿಳಿಸಿದ್ದು. ಆತನು ಪ್ಲಾಸ್ಟಿಕ ಗೋಣಿಯಲ್ಲಿ ತುಂಬಿಸಿರುವ ಹಸಿ ಅಡಿಕೆಯನ್ನು ನೋಡಲಾಗಿ ಸುಮಾರು 4 ಕೆಜಿ ಯಷ್ಟು ಅಡಿಕೆ ಇರುವದನ್ನು ಕಂಡು ಬರುತ್ತದೆ. ಕಳ್ಳತನದ ಅಡಿಕೆ ಮೌಲ್ಯ ಅಂದಾಜು 500/- ರೂಪಾಯಿ ಆಗಿರಬಹುದು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 120/21 ಕಲಂ:379 ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಹಲ್ಲೆ ಪ್ರಕರಣ: 1

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಕರುಣಾಕರ , ಪ್ರಾಯ: 36 ವರ್ಷ, ತಂದೆ: ಸಂಕಪ್ಪ ಪೂಜಾರಿ, ವಾಸ: ಕಲ್ಲೇಗ ಮುರ ಮನೆ , ಕಬಕ ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಫಿರ್ಯಾದಿರವರು ದಿನಾಂಕ 31.10.2021 ರಂದು ಬೊಳ್ವಾರು ವಿಶ್ವಕರ್ಮ ಹಾಲ್‌ ಕಾರ್ಯಕ್ರಮ ಮುಗಿಸಿ ತನ್ನ ಬಾಬ್ತು ಕೆಎ 21 ಇಎ 8989 ಮೋಟಾರು ಸೈಕಲ್‌ನಲ್ಲಿ ಮನೆ ಕಡೆ ಬರುತ್ತಾ ಸಂಜೆ ಸುಮಾರು 5.30 ಗಂಟೆಗೆ ಕಬಕ ಗ್ರಾಮದ ನಗರ ಜಂಕ್ಷನ್‌ಗೆ ತಲುಪಿದಾಗ ಫಿರ್ಯಾದಿದಾರರ ಮೋಟಾರು ಸೈಕಲ್‌ಗೆ ಹಾಗೂ ಅಟೋ ರಿಕ್ಷಾಕ್ಕೆ ಅಪಘಾತ ನಡೆದಿದ್ದು ಆ ಸಮಯ ಫಿರ್ಯಾದಿದಾರರು ತನ್ನ ಮೋಟಾರು ಸೈಕಲ್‌ನಿಂದ ಇಳಿದು ಅಟೋ ಚಾಲಕನಲ್ಲಿ ಮಾತನಾಡಿ , ಅಪಘಾತದಿಂದ ಫಿರ್ಯಾದಿದಾರರಿಗೆ ನೋವಾಗಿರುವುದರಿಂದ ಆಸ್ಪತ್ರೆಗೆ ಹೋಗುವರೇ ತನ್ನ ಮೋಟಾರು ಸೈಕಲ್‌ನ್ನು ಚಾಲು ಮಾಡಿದಾಗ ಆರೋಪಿ ಸಾಹಿಲ್‌ ಎಂಬಾತನು ಏಕಾಏಕಿ ಫಿರ್ಯಾದಿದಾರರ ಬಳಿಗೆ ಬಂದು ಮೋಟಾರು ಸೈಕಲ್‌ನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹಲ್ಲೆ ನಡೆಸಿ, ಅಲ್ಲೇ ಇದ್ದ ಸೋಡಾ ಬಾಟ್ಲಿಯನ್ನು ಹೆಕ್ಕಿಕೊಂಡಿದ್ದು,  ಅಷ್ಟರಲ್ಲಿ ಫಿರ್ಯಾದಿದಾರರ ಪರಿಚಯದ ನಾಗೇಶ್ ಹಾಗೂ ಇತತರು ಬರುವುದನ್ನು ನೋಡಿ ಆರೋಪಿ ಅಲ್ಲಿಂದ ಹೊರಟು ಹೋಗಿರುವುದಾಗಿದೆ. ಈ ಬಗ್ಗೆ ಪುತ್ತೂರು ನಗರ ಠಾಣಾ ಅಕ್ರ 86/2021 ಕಲಂ: 341,504,323 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 01-11-2021 10:33 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080