ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ಪುಂಜಾಲಕಟ್ಟೆ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಕಾಂತಪ್ಪ, ಪ್ರಾಯ 42 ವರ್ಷ, ತಂದೆ: ನಕ್ಕುರ ನಾಯ್ಕ, ವಾಸ: ನಾರ್ಯ ಮನೆ ತಣ್ಣೀರುಪಂಥ ಗ್ರಾಮ, ಬೆಳ್ತಂಗಡಿ ತಾಲೂಕು ರವರು ದಿನಾಂಕ: 29.11.2022  ರಂದು  ಬಳ್ಳಮಂಜ  ಷಷ್ಠಿ  ಜಾತ್ರೆಗೆ ಹೋಗುವ ಸಲುವಾಗಿ ನೇರಳೆಕಟ್ಟೆ ಎಂಬಲ್ಲಿ ಕಲ್ಲೇರಿ ಕಡೆಯಿಂದ ಬರುತ್ತಿದ್ದ ಆಟೋ ರಿಕ್ಷಾವೊಂದಕ್ಕೆ  ನಿಲ್ಲಿಸುವಂತೆ ಸೂಚಿಸಿ ಅದರ ಆಟೋ ಚಾಲಕ ಆಟೋ ನಿಲ್ಲಿಸಿದ್ದು ಆಟೋ ರಿಕ್ಷಾಕ್ಕೆ ಹತ್ತಿದಾಗ ಪಿರ್ಯಾದಿದಾರರಿಗೆ ಪರಿಚಯವಿದ್ದ ಶ್ರೀಮತಿ ಗುಲಾಬಿ ಹಾಗೂ ಇತರ 3 ಮಂದಿ ಪ್ರಯಾಣಿಕರಿದ್ದರು. ಆಟೋ ರಿಕ್ಷಾವು ಬೆಳ್ತಂಗಡಿ ತಾಲೂಕು ಮಚ್ಚಿನ ಗ್ರಾಮದ ಬೆರ್ಬಲಾಜೆ ಎಂಬಲ್ಲಿಗೆ ತಲುಪಿದಾಗ ಅದರ ಚಾಲಕ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಿಕ್ಷಾ ಚಲಾಯಿಸಿದ ಪರಿಣಾಮ ಆಟೋ ರಿಕ್ಷಾ  ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಗೆ ಹೋಗಿ ಚರಂಡಿಗೆ ಬಿದ್ದಿದ್ದು  ಇದರಿಂದಾಗಿ ಆಟೋ ರಿಕ್ಷಾದಲ್ಲಿದ್ದ ಪಿರ್ಯಾದಿದಾರರಿಗೆ ಹಣೆಗೆ ಹಾಗೂ ಬಲಕೈ ಬೆರಳಿಗೆ ಗುದ್ದಿದ ಗಾಯವಾಗಿದ್ದು, ಆಟೋ ರಿಕ್ಷಾದಲ್ಲಿದ್ದ ಇತರ ಪ್ರಯಾಣಿಕರನ್ನು ಆರೈಕೆ ಮಾಡಿ ನೋಡಿದಾಗ ಪಿರ್ಯಾದಿ ಪರಿಚಯದ ಶ್ರೀಮತಿ ಗುಲಾಬಿರವರಿಗೆ ಬಲಕೈಗೆ ಗುದ್ದಿದ ಹಾಗೂ ತಲೆಗೆ ತರಚಿದ ರಕ್ತಗಾಯವಾಗಿದ್ದು ಇನ್ನೊಬ್ಬ ಮಹಿಳೆ ಶ್ರೀಮತಿ ಕಮಲರವರಿಗೆ ಸೊಂಟಕ್ಕೆ ಗುದ್ದಿದ ಗಾಯವಾಗಿರುತ್ತದೆ. ಉಳಿದ ಪ್ರಯಾಣಿಕರಿಗೆ ಯಾವುದೇ ಗಾಯವಾಗಿರುವುದಿಲ್ಲ. ಗಾಯಗೊಂಡ ಪಿರ್ಯಾದಿದಾರರು ಹಾಗೂ ಉಳಿದ ಪ್ರಯಾಣಿಕರು ಪುಂಜಾಲಕಟ್ಟೆ  ಸರಕಾರಿ ಆಸ್ಪತ್ರೆಗೆ ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿದ್ದು ಪಿರ್ಯಾದಿದಾರರು ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿದ್ದು ಶ್ರೀಮತಿ ಗುಲಾಬಿ ಹಾಗೂ ಶ್ರೀಮತಿ ಕಮಲರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಆಟೋವೊಂದರಲ್ಲಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 91/2022 ಕಲಂ: 279, 337 ಐಪಿಸಿ ಜೊತೆಗೆ ಕಲಂ: 134(ಎ)(ಬಿ) ಮೋ.ವಾ.ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 4

 

ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಅನಂತ, ತಂದೆ: ಅಣ್ಣು ನಾಯ್ಕ, ವಾಸ:  ಕುಂಟಾಲ ಪಲ್ಕೆ ಮನೆ, ಮುಂಡಾಜೆ ಗ್ರಾಮ, ಬೆಳ್ತಂಗಡಿ ತಾಲೂಕು ರವರ ತಂದೆ ಅಣ್ಣು ನಲ್ಕೆ (66) ಎಂಬವರು ದಿನಾಂಕ:30-11-2022 ರಂದು ಬೆಳ್ತಂಗಡಿ ತಾಲೂಕು ಇಂದಬೆಟ್ಟು ಗ್ರಾಮದ ಕುವೈತ್ಯಾರು  ಎಂಬಲ್ಲಿ ನವೀನ್ ಎಂಬವರ ಬಾಬ್ತು  ಅಡಿಕೆ ತೋಟದಲ್ಲಿ  ಕೆಲಸ ಮಾಡುತ್ತಿರುವ ಸಮಯ ತೋಟದಲ್ಲಿ ಅಗತ್ಯವಿಲ್ಲದ  ಅಡಿಕೆ ಮರವನ್ನು  ನೌಫಾಲ್ ಎಂಬವರು  ಕಡಿಯುತ್ತಿರುವ ಸಮಯ ಅಡಿಕೆ ಮರವೊಂದು ಆಕಸ್ಮಿಕ ವಾಗಿ ಪಿರ್ಯಾದಿದಾರರ ತಂದೆಯ ತಲೆಗೆ ಬಿದ್ದು ಗಾಯಗೊಂಡವರನ್ನು ನೌಫಾಲ್ ರವರು  ತೋಟದ ಮಾಲಿಕ ನವೀನ್ ರವರ  ಜೊತೆಯಲ್ಲಿ  ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ  ಚಿಕಿತ್ಸೆಗೆ ಕರೆದುಕೊಂಡು ಬಂದಾಗ ದಾರಿ ಮದ್ಯೆ ಪಿರ್ಯಾದಿದಾರರ ತಂದೆ ಅಣ್ಣು ನಲ್ಕೆಯವರು  ಮೃತ ಪಟ್ಟಿರುವುದಾಗಿದೆ ಈ ಬಗ್ಗೆ ಬೆಳ್ತಂಗಡಿ ಠಾಣಾ UDR ನಂಬ್ರ: 52/2022 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ರೇಷ್ಮಾ ಜೂಲಿಯೆಟ್ ಲೋಬೋ ಗಂಡ:ಪ್ರವೀಣ್ ಪಿಂಟೋ, ವಾಸ;ಶಿವಾಜಿನಗರ ಮನೆ, ಕುವೆಟ್ಟು ಗ್ರಾಮ, ಬೆಳ್ತಂಗಡಿ ತಾಲೂಕು ರವರ ಗಂಡ ಪ್ರವೀಣ್ ಪಿಂಟೊ  (37) ಎಂಬವರು ದಿನಾಂಕ:29-11-2022ರಂದು ರಾತ್ರಿ ಓಡಿಲ್ನಾಳ  ಗ್ರಾಮದ ಅಮರ್ ಜಾಲ್ ಎಂಬಲ್ಲಿಗೆ ಮೆಹಂದಿ ಕಾರ್ಯಕ್ರಮಕ್ಕೆ ಎಂದು  ಪಿರ್ಯಾದಿದಾರರಲ್ಲಿ ಹೇಳಿ ಹೋಗಿದ್ದು, ರಾತ್ರಿ 01-39 ಗಂಟೆಗೆ ಪಿರ್ಯಾದಿದಾರರು ಅವರ ಗಂಡನಿಗೆ  ಕರೆ ಮಾಡಿದಾಗ ಈಗ ಬರುತ್ತೇನೆ ಎಂದು ತಿಳಿಸಿದವರು ಮನೆಗೆ ಬಾರದೇ ಇದ್ದು,  ದಿನಾಂಕ: 30-11-2022 ರಂದು  ಪಿರ್ಯಾದಿದಾರರ ಗಂಡನ  ಡ್ರೈವಿಂಗ್ ಲೈಸನ್ಸ್  ಹಾಗೂ ಕೆಲವು ದಾಖಲೆಗಳು ಗುರುವಾಯನಕೆರೆ ಕೆರೆಯ ಬಳಿ ಸಿಕ್ಕಿದ್ದು, ಬಳಿಕ ಹುಡುಕಾಡಲಾಗಿ ಪ್ರವೀಣ್ ಪಿಂಟೋರವರ ಮೃತದೇಹವು ಗುರುವಾಯನಕೆರೆ ಕೆರೆಯಲ್ಲಿ ಸಿಕ್ಕಿದ್ದು, ಈ ಬಗ್ಗೆ ಬೆಳ್ತಂಗಡಿ ಠಾಣಾ ಯುಡಿಆರ್ ಸಂ: 53/2022 ಕಲಂ: 174(3)&(iv)  ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಚೋಮ, ಪ್ರಾಯ: 40 ವರ್ಷತಂದೆ: ದಿ|| ಬಾಬು ವಾಸ: ಅಶೋಕನಗರ ಧರ್ಮಸ್ಥಳ ಗ್ರಾಮ, ಬೆಳ್ತಂಗಡಿ ತಾಲೂಕು  ರವರು  ಧರ್ಮಸ್ಥಳ ದೇವಸ್ಥಾನದ ಮಾಹಿತಿ ಕಛೇರಿಯಲ್ಲಿ ಸ್ವಚ್ಚತಾ ಕೆಲಸ ಮಾಡಿಕೊಂಡಿದ್ದು. ದಿನಾಂಕ: 27.11.2022 ರಂದು ಬೆಳಿಗ್ಗೆ ಕರ್ತವ್ಯದಲ್ಲಿದ್ದ ಸಮಯ 10.00 ಗಂಟೆಗೆ ಧರ್ಮಸ್ಥಳ ದೇವಸ್ಥಾನ ವಠಾರದ ಕೆಎಸ್ ಆರ್ ಟಿಸಿ ಬಸ್ಸು ನಿಲ್ದಾಣದ ಬಳಿ ಇರುವ ಉಚಿತ ಶೌಚಾಲಯದ ಬಳಿ ಓರ್ವ ಅಪರಿಚಿತ ಗಂಡಸು ಬಿದ್ದುಕೊಂಡಿದ್ದು, ಪಿರ್ಯಾದಿದಾರರು ಹಾಗೂ ಅಲ್ಲಿದ್ದ ಇತರ ಸಾರ್ವಜನಿಕರು ಸೇರಿ ಅಪರಿಚಿತ ಗಂಡಸನ್ನು ಎತ್ತಿ ಆರೈಕೆ ಮಾಡಲಾಗಿ ಅವರು ಮೇಲಕ್ಕೆ ಏಳದೇ ಇದ್ದು, ಕೂಡಲೇ ಸ್ಥಳವೊಂದಕ್ಕೆ ಅಂಬ್ಯುಲೆನ್ಸ್  ತರಿಸಿಕೊಂಡು ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಅಲ್ಲಿನ ವೈದ್ಯರು ಪರಿಕ್ಷೀಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ  ಜಿಲ್ಲಾ ವೆನ್ ಲಾಕ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಚಿಕಿತ್ಸೆಯಲ್ಲಿದ್ದರು.  ದಿನಾಂಕ:29-11-2022 ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ  ಈ ಬಗ್ಗೆ ಧರ್ಮಸ್ಥಳ  ಪೊಲೀಸ್‌ ಠಾಣೆ 71/2022 ಕಲಂ: 174 ಸಿ ಆರ್ ಪಿ ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ರವಿ ಕುಮಾರ್, ಪ್ರಾಯ: 52 ವರ್ಷ,  ತಂದೆ: ದಿ|| ಜನಾರ್ದನ ವಾಸ: ಗಣೇಶ್ ನಿಲಯ ಕೂಟದ ಕಲ್ಲು  ಧರ್ಮಸ್ಥಳ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರು ಧರ್ಮಸ್ಥಳ ಗ್ರಾಮ ಪಂಚಾಯತ್  ಸದಸ್ಯರಾಗಿದ್ದು ದಿನಾಂಕ: 30.11.2022 ರಂದು ಧರ್ಮಸ್ಥಳದಲ್ಲಿದ್ದ ಸಮಯ ಸಾರ್ವಜನಿಕರೊಬ್ಬರು ದೂರವಾಣಿ ಕರೆ ಮಾಡಿ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಕೆ ಎಸ್ ಆರ್ ಟಿ ಸಿ ಹೊಸ ಬಸ್ಸು ನಿಲ್ದಾಣದ ಹಾಗೂ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯ ಮಧ್ಯದಲ್ಲಿ ಹಳೆಯ ಹಾಲಿನ ಸೊಸೈಟಿಗೆ ಹೋಗುವ ದಾರಿಯ ಬಳಿ ಓರ್ವ ಅಪರಿಚಿತ ಗಂಡಸು ಮೃತ ಪಟ್ಟಂತೆ ಮಲಗಿದ ಸ್ಥಿತಿಯಲ್ಲಿ ಕಂಡು ಬರುತ್ತಿರುವುದಾಗಿ  ತಿಳಿಸಿದ್ದು, ಅದರಂತೆ ಪಿರ್ಯಾದಿದಾರರು ಕೂಡಲೇ ಸದ್ರಿ ಸ್ಥಳಕ್ಕೆ ಹೋಗಿ ನೋಡಿದಾಗ ಹುಲ್ಲು ಗಿಡ ಗಂಟಿಗಳು ಬೆಳೆದಿರುವ ಸ್ಥಳದಲ್ಲಿ ಅಂದಾಜು ಸುಮಾರು 30-40 ಪ್ರಾಯದ ಅಪರಿಚಿತ ಗಂಡಸಿನ ಮೃತ ದೇಹವು ಅಂದಾಜು 2-3 ದಿನಗಳ ಹಿಂದೆ ಮೃತ ಪಟ್ಟಂತೆ ಮುಖವು ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿರುತ್ತದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆ 72/2022 ಕಲಂ: 174 ಸಿ ಆರ್ ಪಿ ಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ

ಇತ್ತೀಚಿನ ನವೀಕರಣ​ : 01-12-2022 12:55 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080