ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

 

ಸುಬ್ರಹ್ಮಣ್ಯ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಪ್ರದೀಪ, ಪ್ರಾಯ 33 ವರ್ಷ, ತಂದೆ:ಮುನಿಯಪ್ಪ ವಾಸ: #295 ಒಪಟೀಶ್ವರ ನಗರ, ಅರಿಶಿನ ಕುಂಟೆ,  ಬೆಂಗಳೂರು ರವರು  ದಿನಾಂಕ: 31-12-2021 ರಂದು ರಾತ್ರಿ 10:30 ಗಂಟೆಗೆ ಅವರ ಬಾಬ್ತು ಕಾರು ನಂಬ್ರ ಕೆಎ 03 ಎಮ್ ಹೆಚ್ 2629 ನೇದರಲ್ಲಿ ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮಕ್ಕೆ ತಲುಪಿ  ಶ್ರೀನಿಧಿಕೇತನ  ಲಾಡ್ಜ್ ನಲ್ಲಿ ಉಳಿದುಕೊಂಡು ದಿನಾಂಕ: 01.01.2022 ರಂದು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜಾ ಸಮಯ ತಿಳಿದುಕೊಂಡು ಪುನಃ ಲಾಡ್ಜ್  ಕಡೆಗೆ ಹೋಗುವ ದಾರಿಯಲ್ಲಿ ಸುಬ್ರಹ್ಮಣ್ಯದ ವನದುರ್ಗಾ ದೇವಿ ದೇವಸ್ಥಾನದ ಎದುರು ಬೆಳಿಗ್ಗೆ 06:00 ಗಂಟೆ ಸಮಯ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರಿಗೆ ಬೆಕ್ಕು ಅಡ್ಡ ಬಂದು ಕೂಡಲೇ ಕಾರನ್ನು ನಿಲ್ಲಿಸಿದ ಸಮಯ ಹಿಂಬದಿಯಿಂದ ಒಂದು ಆಟೋರಿಕ್ಷಾ ತೀರಾ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕೆಎ 21 ಸಿ 2266 ನೇ ಆಟೋರಿಕ್ಷಾವು ಮಗುಚಿ ಬಿದ್ದಿದ್ದು, ನಂತರ ಅದರಲ್ಲಿದ್ದ  ಪ್ರಯಾಣಿಕರಲ್ಲಿ ಒಬ್ಬರಿಗೆ ತೀವ್ರ ಗಾಯವಾಗಿದ್ದು, ಅವರ ಹೆಸರು ಬುದ್ದಿ ಸಾಗರ್, ಬೆಂಗಳೂರು ಎಂದು ತಿಳಿಸಿದ್ದು, ಆಟೋರಿಕ್ಷಾ ಚಾಲಕ ಜಯಪ್ರಕಾಶ್ ರವರಿಗೆ ಬಲಕೈ ಹಾಗೂ ಎಡಕಾಲಿಗೆ ತರಚಿದ ಗಾಯ ಹಾಗೂ ಗುದ್ದಿದ ಗಾಯವಾಗಿದ್ದು, ಸದ್ರಿಯವರನ್ನು ಕೂಡಲೇ 108 ಆ್ಯಂಬುಲೆನ್ಸ್ ನಲ್ಲಿ ಚಿಕಿತ್ಸೆ ಬಗ್ಗೆ ಕಳುಹಿಸಿಕೊಟ್ಟಿರುವುದಾಗಿದ್ದು, ಸದ್ರಿ ಅಪಘಾತದಲ್ಲಿ ಎರಡೂ ವಾಹನಗಳು ಜಖಂಗೊಂಡಿರುತ್ತವೆ. ಈ ಬಗ್ಗೆ ಸುಬ್ರಹ್ಮಣ್ಯ ಠಾಣಾ ಅ.ಕ್ರ ನಂಬ್ರ 01-2022 ಕಲಂ:  279, 338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಉಪ್ಪಿನಂಗಡಿ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಚಂದ್ರಶೇಕರನ್ ಪ್ರಾಯ 50 ವರ್ಷ ತಂದೆ:: ರೋಸಿ ನಾಯ್ಡು ವಾಸ:ನಂ: 50/1ಎ, 1ಬಿ ಪೆರಿಯಾಪಲಿಯಂ ರಸ್ತೆ ಝನಪಚತ್ತಮಂ ಕ್ರಾಸ್ ರೋಡ್ ಚೆನೈ ತಮಿಳನಾಡು ರವರು ನೀಡಿದ ದೂರೇನೆಂದರೆ  ದಿನಾಂಕ: 31-12-2021 15.30 ಗಂಟೆಗೆ ಕಡಬ ತಾಲೂಕು ಶಿರಾಡಿ ಗ್ರಾಮದ ಬರ್ಚಿನಹಳ್ಳ ಎಂಬಲ್ಲಿ ಪಿರ್ಯಾದಿದಾರರು ಟಿಎನ್‌18 ಎಕೆ 9516 ನೇ ಬ್ರೀಜಾ ಕಾರಿನಲ್ಲಿ  ತನ್ನ ಹೆಂಡತಿ ವನಿತಾ ಸಿ, ಮಗ ಜಗದೀಶ್‌  ಮಗಳು ಮದುಮಿತಾ  ಹಾಗೂ ಅಣ್ಣ  ಕೆ ವಿಜಯನ್‌ ರವರನ್ನು ಕುಳ್ಳಿರಿಸಿಕೊಂಡು ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಕಾರನ್ನು ಚಲಾಯಿಸಿಕೊಂಡು ಬರುತ್ತಿರುವಾಗ  ಟೆಂಪೋ ಟ್ರಾವೆಲ್ಲರ್  ಕೆಎ:21ಬಿ 9654 ನೇದನ್ನು ಅದರ ಚಾಲಕ  ಅತೀ ವೇಗ ಹಾಗೂ ಅಜಾಗೂಕತೆಯಿಂದ  ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಹೊಡೆದು  ಪಿರ್ಯಾದಿದಾರರ ಕಾರು ಜಖಂ ಗೊಂಡು ಪಿರ್ಯಾದಿದಾರರ  ತಲೆಯ ಎಡಬಾಗಕ್ಕೆ ಮ  ಎದುರಿನ ಸೀಟಿನಲ್ಲಿ ಕುಳಿತಿದ್ದ   ಪಿರ್ಯಾದಿದಾರರ ಅಣ್ಣ ವಿಜಯನ್‌ ರವರಿಗೆ ಹಣೆಯ ಬಲಬದಿಗೆ  ಪತ್ನಿ ವನಿತಾ ಸಿ ರವರಿಗೆ ಎದೆಗೆ ಗುದ್ದಿದ ನಮೂನೆಯ ಗಾಯ, ಹಾಗೂ ಮಗ ಜಗದೀಶ್‌ ರವರ ಬಲಕಾಲಿಗೆ ರಕ್ತಗಾಯವಾಗಿರುವುದಲ್ಲದೆ ಟೆಂಪೋ ಟ್ರಾವೆಲ್ಲರ್‌ ನಲ್ಲಿದ್ದ ಪ್ರಯಾಣಿಕರಿಗೆ ಕೂಡಾ ಗಾಯವಾಗಿದ್ದು ಗಾಯಾಳುಗಳಾದ ಪಿರ್ಯಾದಿದಾರರು ಮತ್ತು ಪಿರ್ಯಾದಿದಾರರ ಕಾರಿನಲ್ಲಿದ್ದ ಗಾಯಾಳುಗಳು ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವುದಾಗಿದೆ ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 01/2022 ಕಲಂ 279 337  ಐ ಪಿ ಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಅಜೀದ್  ಪ್ರಾಯ: 54ವರ್ಷ ಗಂಡ:ಮಹಮ್ಮದ್ ವಾಸ:ಮಲೆಬೆಟ್ಟು 5 ಸೆನ್ಸ್ ಮನೆ, ಕೊಯ್ಯುರು ಗ್ರಾಮ, ಬೆಳ್ತಂಗಡಿ ತಾಲೂಕು ರವರು ದಿನಾಂಕ: 31-12-2021 ರಂದು ರಬ್ಬರ್ ತೋಟದ ಕೆಲಸದ ಬಗ್ಗೆ ಧರ್ನಪ್ಪ ರವರ ಬಾಬ್ತು ದ್ವಿ ಚಕ್ರ ವಾಹನ ಕೆಎ 21 ಆರ್ 4920 ನೇ ಸವಾರರಾಗಿ ದರ್ನಪ್ಪರವರು ಪಿರ್ಯಾದಿದಾರರು ಸಹ ಸವಾರನಾಗಿ ಕುಳಿತುಕೊಂಡು ಸಂಜೆ ಸುಮಾರು 5:00 ಗಂಟೆಗೆ ಕೊಯ್ಯುರು ಗ್ರಾಮದ ಅಂತರ ಕಡೆಗೆ ಹೋಗುವ ರಸ್ತೆಯ ಬಳಿ ತಲುಪುತ್ತಿದ್ದಂತೆ ದನವೊಂದು ರಸ್ತೆಗೆ ಅಡ್ಡವಾಗಿ ಬಂದುದರಿಂದ ದ್ವಿ ಚಕ್ರ ವಾಹನದ ಸವಾರ ದರ್ನಪ್ಪ ರವರು ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಹತೋಟಿ ತಪ್ಪಿ ಸ್ಕಿಡ್  ಆಗಿ ರಸ್ತೆಯ ತೀರಾ ಬಲಬದಿಗೆ ಬಲಮಗ್ಗುಲಾಗಿ  ಬಿದ್ದ ಪರಿಣಾಮ ಪಿರ್ಯಾದುದಾರರ ಹಣೆ ಮೂಗಿಗೆ ಬಲಬದಿಯ ಮುಖಕ್ಕೆ ಗುದ್ದಿದ ಗಾಯವಾಗಿದ್ದು ಸವಾರ ಧರ್ನಪ್ಪ ತಲೆಗೆ ರಕ್ತ ಗಾಯವಾಗಿದ್ದು, ನಾನು ಚಿಕಿತ್ಸೆಯ ಬಗ್ಗೆ  ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಧರ್ನಪ್ಪ ರವರು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 1/2022, ಕಲಂ; 279,337 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ ಪ್ರಕರಣ: 1

 

ವಿಟ್ಲ ಪೊಲೀಸ್ ಠಾಣೆ : ಪಿರ್ಯಾದಿದಾರರಾದ.ಈ ಬಗ್ಗೆ ಪಿರ್ಯಾದಿದಾರರಾದ ಮಹಮ್ಮದ್ ಅಶ್ರಫ್ ಕೊಡಂಗೈ ಪ್ರಾಯ 36 ವರ್ಷ ತಂದೆ:ಇಬ್ರಾಹಿಂ ವಾಸ:ಕೊಡಂಗಾಯಿ ಮನೆ, ವಿಟ್ಲ ಪಡ್ನೂರು ಗ್ರಾಮ ಬಂಟ್ವಾಳ ತಾಲೂಕು ರವರು ದಿನಾಂಕ:31-12-2021 ರಂದು ಕೊಡಂಗಾಯಿ ಎಂಬಲ್ಲಿರುವ ಜೆರಾಕ್ಸ ಅಂಗಡಿಯನ್ನು ಬಂದ್ ಮಾಡಿ ಮನೆಗೆ ರಾತ್ರಿ 11.17 ಗಂಟೆಯ ಸಮಯಕ್ಕೆ ಬಂಟ್ವಾಳ ತಾಲೂಕು ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ಶಾಲೆಯ ಬಳಿ ನಡೆದುಕೊಂಡು ಹೋಗುತ್ತಿರುವಾಗ ಆರೋಪಿ ಹಸೈನಾರ್ @ ಹಸನ್ ದಿಕನಾಜೆ ಎಂಬಾತನು ಪಿರ್ಯಾಧಿದಾರರನ್ನು ತಡೆದು ನಿಲ್ಲಿಸಿ ನಿನ್ನ ಹೆಂಡತಿಯ ಮುಖಾಂತರ ನನ್ನ ಮೇಲೆ ಕೇಸು ನೀಡಿದ್ದಿಯಲ್ಲಾ ನಾನು ಅರೆಸ್ಟ ಆಗುವ ಮೊದಲು ನಿನ್ನನ್ನು ಹಾಗೂ ನಿನ್ನ ಕುಟುಂಬದವರನ್ನು ಕೊಂದು ಹಾಕುತ್ತೇನೆ ಎಂದು ಬೆದರಿಕೆ ಹಾಕಿ ಅವಾಚ್ಯ ಶಬ್ದದಿಂದ ಬೈದು ಪಿರ್ಯಾಧಿಯನ್ನು ದೂಡಿ ಹಾಕಿದ ಪರಿಣಾಮ ಪಿರ್ಯಾಧಿದಾರರು ನೆಲಕ್ಕೆಬಿದ್ದು  ಸೊಂಟದ ಭಾಗಕ್ಕೆ ಗುದ್ದಿದ ನೋವು  ಹಾಗೂ ಎಡ ಕೈ , ಬಲ ಕೈ ಮತ್ತು ಮುಖಕ್ಕೆ ರಕ್ತಗಾಯವಾಗಿರುತ್ತದೆ. ಫಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ಪುತ್ತೂರು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ಫಿರ್ಯಾದಿದಾರರ ಪತ್ನಿಗೆ ಆರೋಪಿಯು ಹಲ್ಲೆ ನಡೆಸಿದ ಬಗ್ಗೆ ವಿಟ್ಲ ಠಾಣೆಗೆ ದೂರು ನೀಡಿರುವ ಕೋಪದಿಂದ ಈ ಕೃತ್ಯ ನಡೆಸಿರುವುದಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಅ.ಕ್ರ 01/2022 ಕಲಂ:341, 504, 506, 323 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮಧುಕರ ಎಲ್ ಪ್ರಾಯ;27 ವರ್ಷ ತಂದೆ; ಲಕ್ಷ್ಮಣ ವಿ  ವಾಸ; ಬಸವೇಶ್ವರ  ಲೇಔಟ ನಾಗಶೆಟ್ಟಿ ಹಳ್ಳಿ ಸಂಜಯನಗರ ಬೆಂಗಳೂರು ರವರು ನೀಡಿದ ದೂರೇನೆಂದರೆ ದಿನಾಂಕ:31-12-2021 ರಂದು ರಾತ್ರಿ 10..00 ಗಂಟೆ ಸಮಯಕ್ಕೆ  ಪಿರ್ಯಾದುದಾರರು ತನ್ನ ಸ್ನೇಹಿತರಾದ ಕೆ ರಾಜು @ ಕೊಂಬು ರಾಜು, ವೆಂಕಟೇಶ, ಶ್ರೀಧರ, ರಘುರಾಮ್, ರಾಕೇಶ, ನವೀನ, ಶ್ರೀರಾಮ್, ರೋಹನ್, ಗುರುರಾಜ್ ಎಂಬವರೊಂದಿಗೆ ಶ್ರೀ ಕ್ಷೇತ್ರ ಕ್ಕೆ ಕಾರುಗಳಲ್ಲಿ ಹೊರಟು ದಿನಾಂಕ;01-01-2022 ರಂದು ಬೆಳಿಗ್ಗೆ  ಧರ್ಮಸ್ಥಳಕ್ಕೆ ತಲುಪಿ ಬೆಳಿಗ್ಗೆ 08.00 ಗಂಟೆಗೆ ನೇತ್ರಾವತಿ ಸೇತುವೆ ಕಳಗೆ ನೇತ್ರಾವತಿ ನದಿಯಲ್ಲಿ  ಸ್ನಾನ ಮಾಡುತ್ತಿರುವ ಸಮಯ ಕೊಂಬು ರಾಜು @ ಕೆ ರಾಜು ಎಂಬವರು ಆಕಸ್ಮಿಕವಾಗಿ ನದಿ ನೀರಿಗೆ ಬಿದ್ದು ಈಜುಬಾರದ ಕಾರಣ ನೀರಿನಲ್ಲಿ ಮುಳುಗಿದ್ದು 11-30 ಗಂಟೆ ಸಮಯಕ್ಕೆ ಮೃತ ದೇಹ ಪತ್ತೆಯಾಗಿದ್ದು ಮೃತನು ನದಿಯಲ್ಲಿ ಸ್ನಾನ ಮಾಡುತ್ತಿರುವ ಸಮಯ ಆಕಸ್ಮಿಕವಾಗಿ ಕಾಲು ಜಾರಿ ನದಿನೀರಿಗೆ ಬಿದ್ದು ಈಜುಬಾರದ ಕಾರಣ ನೀರಿನಲ್ಲಿ ಮುಳುಗಿ ಉಸಿರುಕಟ್ಟಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆ ಯು ಡಿ ಆರ್ 01/2022 ಕಲಂ: 174 ಸಿಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 02-01-2022 12:43 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080