ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

 

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ನೀತಾ ಕೆ.ಎಸ್(34) ಗಂಡ: ಪಿ ಶಿವಾನಂದ ಭಂಡಾರಿ ವಾಸ: ಶ್ರೀ ಬನಶಂಕರಿ ಮನೆ, ಪಣೆಜಾಲು ಓಡಿಲ್ನಾಳ ಗ್ರಾಮ ಬೆಳ್ತಂಗಡಿ ತಾಲೂಕು ರವರು ದಿನಾಂಕ:28-02-2022 ರಂದು  ತನ್ನ ಬಾಬ್ತು KA70 H 2646 ನೇ ದ್ವಿ ಚಕ್ರ ವಾಹನದಲ್ಲಿ ಬೆಳ್ತಂಗಡಿ-ಗುರುವಾಯನಕೆರೆ ರಸ್ತೆಯಲ್ಲಿ ಗುರುವಾಯನಕೆರೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಬೆಳ್ತಂಗಡಿ ತಾಲೂಕು ಬೆಳ್ತಂಗಡಿ ಕಸಬಾ ಗ್ರಾಮದ ಜೈನ್‌ ಪೇಟೆ ತೀರುವಿನ ಬಳಿ ತಲುಪುತ್ತಿದ್ದಂತೆ ಅವರ ಹಿಂದಿನಿಂದ ಅಂದರೆ ಬೆಳ್ತಂಗಡಿ ಕಡೆಯಿಂದ ಗುರುವಾಯನಕೆರೆ ಕಡೆಗೆ ಒಂದು ಆಟೋರಿಕ್ಷಾವನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ದ್ವಿ ಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ದ್ವಿ ಚಕ್ರ ವಾಹನ ಸಮೇತ ರಸ್ತೆಗೆ ಬಿದ್ದು ಬಲ ಕೆನ್ನೆಗೆ,ಬಲ ಕಣ್ಣಿನ ಹುಬ್ಬಿನ ಮೇಲೆ, ಬಲ ಕೈಯ ಮುಂಗೈ ಮತ್ತು ಅಂಗೈ ಹಾಗೂ ಬೆರಳುಗಳಿಗೆ ತರಚಿದ ಗಾಯಗೊಂಡು ಚಿಕಿತ್ಸೆ ಬಗ್ಗೆ ಗುರುವಾಯನಕೆರೆ ಅಭಯ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 37/2022 ಕಲಂ; 279,337 ಭಾದಂಸಂ. ಮತ್ತು ಕಲಂ: 134 ಎ&ಬಿ ಜೊತೆಗೆ 187 ಐ ಎಂ ವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಮಂಜಪ್ಪ ಸಪಲ್ಯ(65) ತಂದೆ: ಲಿಂಗಪ್ಪ ಸಪಲ್ಯ ವಾಸ: ಬೊಟ್ಟುಗುಡ್ಡೆ ಮನೆ, ಬೆಳ್ತಂಗಡಿ ಕಸಬಾ ಗ್ರಾಮ, ಬೆಳ್ತಂಗಡಿ ತಾಲೂಕು ರವರು ದಿನಾಂಕ:01-03-2022 ರಂದು KA 47 M 191 ನೇ ಕಾರನ್ನು ಬೆಳ್ತಂಗಡಿ ಕಡೆಯಿಂದ ಗುರುವಾಯನಕೆರೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವ ಸಮಯ ಬೆಳ್ತಂಗಡಿ ತಾಲೂಕು ಬೆಳ್ತಂಗಡಿ ಕಸಬಾ ಗ್ರಾಮದ ಹಳೆಕೋಟೆ ಎಂಬಲ್ಲಿಗೆ ತಲುಪುತ್ತಿದ್ದಂತೆ ಅವರ ವಿರುದ್ದ ದಿಕ್ಕಿನಿಂದ ಅಂದರೆ ಗುರುವಾಯನಕೆರೆ ಕಡೆಯಿಂದ ಬೆಳ್ತಂಗಡಿ ಕಡೆಗೆ KA19 AA 6939 ನೇ 407 ಟೆಂಪೊವನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಕೊಂಡು ಬಂದು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡು ಕಾರಿನಲ್ಲಿದ್ದ ಪಿರ್ಯಾದಿದಾರರಿಗೆ ಹಣೆಗೆ, ಎದೆಗೆ ಗುದ್ದಿದ ಗಾಯ ಎಡಕಾಲಿನ ಬೆರಳುಗಳಿಗೆ ರಕ್ತಗಾಯವಾಗಿದ್ದು ಗಾಯಾಳು ಚಿಕಿತ್ಸೆ ಬಗ್ಗೆ ಗುರುವಾಯನಕೆರೆ ಅಭಯ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 38/2022 ಕಲಂ; 279,337ಭಾದಂಸಂ.  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ನಾರಾಯಣ, ಪ್ರಾಯ 48 ವರ್ಷ, ತಂದೆ: ನಾಗಪ್ಪ ಕೆ,  ವಾಸ: ಕುಕ್ಕೆಟ್ಟಿ ಮನೆ, ಸಂಪಾಜೆ ಗ್ರಾಮ, ಮಡಿಕೇರಿ ತಾಲೂಕು ರವರು  ದಿನಾಂಕ 01.03.2022 ರಂದು ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಗಡಿಕಲ್ಲು ಎಂಬಲ್ಲಿ ತಮ್ಮ ಬಾಬ್ತು ಬೈಕ್ ನಲ್ಲಿ ಹೋಗುತ್ತಿರುವ ಸಮಯ ಒಬ್ಬ ವ್ಯಕ್ತಿಯು ರಸ್ತೆಯ ಬದಿಯಲ್ಲಿ ಎಡಕಾಲು ಜಜ್ಜಿ ಹೋದ ಸ್ಥಿತಿಯಲ್ಲಿ ಹಾಗೂ ಬಲಕಾಲಿನ ಮೇಲೆ ಹಾಗೂ ಶರೀರದ ಇತರ ಭಾಗಗಳಿಲ್ಲಿ ತರಚಿದ ಗಾಯವಾಗಿ ಬಿದ್ದುಕೊಂಡಿದ್ದವರನ್ನು  ಕಂಡು ಆತನ ಬಳಿಗೆ ಹೋಗಿ ನೋಡಲಾಗಿ ಸದ್ರಿ ವ್ಯಕ್ತಿಯು ಪಿರ್ಯಾದುದಾರರಿಗೆ ಪರಿಚಯದ ಸರೋಜಕುಮಾರ (60) ಆಗಿದ್ದು, ಪಿರ್ಯಾದುದಾರರು ಹಾಗೂ ಇತರರು ಮತ್ತು ಸರೋಜಕುಮಾರ ಅವರ ಮಗ ಸೃಜನ್ ರವರು ಜೀಪಿನಲ್ಲಿ ಚಿಕಿತ್ಸೆಯ ಬಗ್ಗೆ ಸುಳ್ಯ ಕೆ,ವಿ,ಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಎ, ಜೆ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡುತ್ತಿರುವ ಸಮಯ ಸುಮಾರು 10:19 ಗಂಟೆಗೆ ಸರೋಜಕುಮಾರ್ ರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ವೈದ್ಯರು ದೃಡಪಡಿಸಿರುತ್ತಾರೆ. ಹಾಗೂ ಸದ್ರಿ ಮೃತ ಪಟ್ಟ ಸರೋಜಕುಮಾರ ರವರಿಗೆ   ಬೆಳಿಗ್ಗೆ ವಾಕಿಂಗ್ ಹೋಗುವ ಅಭ್ಯಾಸವಿದ್ದು, ರಸ್ತೆಯ ಬದಿ ವಾಕಿಂಗ್ ಹೋಗುತ್ತಿರುವ ಸಮಯ ಯಾವುದೋ ವಾಹನ ಡಿಕ್ಕಿವುಂಟು ಮಾಡಿ, ವಾಹನವನ್ನು ನಿಲ್ಲಿಸದೇ ಹೋಗಿರುವುದಾಗಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಅ.ಕ್ರ 27/2022 ಕಲಂ ಕಲಂ : 279, 304(A)  IPC ಜೊತೆಗೆ 134(ಎ)&ಬಿ) ಐ.ಎಂ.ವಿ ಕಾಯಿದೆ  ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಮಹತ್ವ ಎಂ, ಪ್ರಾಯ : 22 ವರ್ಷ, ತಂದೆ; ಕೃಷ್ಣಪ್ಪ ಪೂಜಾರಿ, ವಾಸ; ಮೈಂದನಡ್ಕ ಮನೆ, ಬಡಗನ್ನೂರು ಗ್ರಾಮ, ಪುತ್ತೂರು ತಾಲೂಕುರವರು ಕೆಂಪು ಕಲ್ಲಿನ ಲಾರಿಯಲ್ಲಿ ಲೋಡಿಂಗ್ ಕೆಲಸ ಮಾಡಿಕೊಂಡಿದ್ದು, ದಿನಾಂಕ 01-03-2022 ರಂದು ಬೆಳಿಗ್ಗೆ ಫಿರ್ಯಾದಿದಾರರು ಮತ್ತು ಲಾರಿಯ ಚಾಲಕರಾದ ಫಝಲ್‌ ರಹಿಮಾನ್‌ ರವರು ಪುತ್ತೂರಿನ ಗ್ಯಾರೇಜಿನಲ್ಲಿ  ಟಯರ್ ಬದಲಿಸಲು ಇಟ್ಟಿದ್ದ ಲಾರಿಯನ್ನು ತರುವರೇ ಮೈಂದನಡ್ಕದಿಂದ KA21 Y 7453 ನೇ ಮೋಟಾರ್ ಸೈಕಲಿನ್ನು ಫಝಲ್ ರಹಿಮಾನ್‌ರವರು ಸವಾರಿ ಮಾಡಿಕೊಂಡು ಫಿರ್ಯಾದಿದಾರರು ಸದ್ರಿ ಮೋಟಾರ್ ಸೈಕಲಿನಲ್ಲಿ ಹಿಂಬದಿ ಸವಾರನಾಗಿ ಕುಳಿತುಕೊಂಡು, ಮಾಣಿ- ಮೈಸೂರು ಹೆದ್ದಾರಿಯಲ್ಲಿ ಸೆಂಟ್ಯಾರು ಕಡೆಯಿಂದ ಪುತ್ತೂರು ಕಡೆಗೆ ಹೋಗುತ್ತಾ ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಸಂಪ್ಯ  ಎಂಬಲ್ಲಿರುವ ಕಮ್ಮಾಡಿ ಮೈದಾನದ ಬಳಿಗೆ  ಬೆಳಿಗ್ಗೆ ಸುಮಾರು 5.30 ಗಂಟೆಗೆ ತಲುಪಿದಾಗ ಸದ್ರಿ ಡಾಮಾರು ರಸ್ತೆಯಲ್ಲಿ ಮರದ ದಿಮ್ಮಿಗಳು ತುಂಬಿದ್ದ ಲಾರಿಯನ್ನು ಅದರ ಚಾಲಕರು ನಿರ್ಲಕ್ಷತನದಿಂದ ಡಾಮಾರು ರಸ್ತೆಯಲ್ಲಿ ನಿಲ್ಲಿಸಿದ್ದು, ಸದ್ರಿ ಲಾರಿಯ ಇಂಡಿಕೇಟರ್ ಅಥವಾ ಸೂಚನೆಯನ್ನು ನೀಡುವ ಯಾವುದೇ ದೀಪವನ್ನು ಉರಿಸದೇ, ಸದ್ರಿ ಲಾರಿಯ ಹಿಂಬದಿಯ ಬಾಗಿಲನ್ನು ಇಳಿಬಿಟ್ಟು, ಮರದ ದಿಮ್ಮಿ ಹಾಗೂ ಲಾರಿಯ ಹಿಂಬದಿಯಲ್ಲಿ ಯಾವುದೇ ರಿಫ್ಲೆಕ್ಟರ್ ಕೂಡಾ ಅಳವಡಿಸದೇ ಇದ್ದುದರಿಂದ ರಾತ್ರಿ ವೇಳೆಯಲ್ಲಿ ಮೋಟಾರ್ ಸೈಕಲನ್ನು ಸವಾರಿ ಮಾಡುತ್ತಿದ್ದ ಫಝಲ್‌ರಹಿಮಾನ್‌ರವರಿಗೆ ಡಾಮಾರು ರಸ್ತೆಯಲ್ಲಿ ಸದ್ರಿ ಲಾರಿಯು ನಿಂತಿರುವುದು ಗೋಚರಿಸದೇ ಸದ್ರಿಯವರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ನಿಂತಿದ್ದ ಲಾರಿಯ ಹಿಂಬದಿಗೆ ಢಿಕ್ಕಿಯಾಗಿದ್ದು, ಈ ಅಪಘಾತದಿಂದಾಗಿ  ಫಝಲ್‌ ರಹಿಮಾನ್‌ರವರ ಮುಖ, ಕುತ್ತಿಗೆ, ತಲೆ ಮತ್ತಿತರ ಕಡೆಗಳಲ್ಲಿ ರಕ್ತ ಗಾಯ ಮತ್ತು ಗುದ್ದಿದ ರೀತಿಯ ಗಾಯವಾಗಿದ್ದು,  ಫಿರ್ಯಾದಿದಾರರಿಗೆ ಮುಖಕ್ಕೆ ಮತ್ತು ಎಡ ಕೈ ಹೆಬ್ಬೆರಳಿಗೆ ಸಣ್ಣಪುಟ್ಟ ಗಾಯವಾಗಿದ್ದು, ಫಝಲ್‌ ರಹಿಮಾನ್‌ರವರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ಕೂಡಾ ಜಖಂಗೊಂಡಿರುತ್ತದೆ. ಈ ಅಪಘಾತಕ್ಕೆ ಕಾರಣವಾದ ಲಾರಿಯ ನೋಂದಣಿ ನಂಬ್ರ  ನಂಬ್ರ KA18 B 4723 ಆಗಿದ್ದು, ಅದರ ಚಾಲಕನ ಹೆಸರು ಕೆ.ಮಹಮ್ಮದಾಲಿ ಎಂಬುದಾಗಿದ್ದು, ಗಾಯಗೊಂಡ ಫಝಲ್‌ ರಹಿಮಾನ್‌ ಮತ್ತು ಫಿರ್ಯಾದಿದಾರರನ್ನು  ಅಪಘಾತ ಸ್ಥಳದಲ್ಲಿ ಸೇರಿದವರು ಚಿಕಿತ್ಸೆ ಬಗ್ಗೆ ಕಳುಹಿಸಿಕೊಟ್ಟಿರುತ್ತಾರೆ.  ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಅಕ್ರ 27/2022 ಕಲಂ 283, 279, 337 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಬಂಟ್ವಾಳ ಗ್ರಾಮಾಂತರ ಪೊಲೀಸು ಠಾಣಾ ಸಿಬ್ಬಂದಿಯವರು ದಿನಾಂಕ 01-03-2022 ರಂದು ಸಿದ್ದಕಟ್ಟೆ ಸಂತೆ ಮಾರುಕಟ್ಟೆಯ ಬಳಿ ಇರುವ ಸಮಯ ಸಾರ್ವಜನಿಕ ರಸ್ತೆಯಲ್ಲಿ ಮೂವರು ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ  ಸಾರ್ವಜನಿಕವಾಗಿ   ಅವಾಚ್ಯ ಶಬ್ದದಿಂದ ಬೈಯುತ್ತಿದ್ದು ರಸ್ತೆ ಬದಿಯಲ್ಲಿ ಇಬ್ಬರು, ಒಬ್ಬಾತನನ್ನು ಉದ್ದೇಶಿಸಿ  ನಾನು ಬಟ್ಟೆ ಅಂಗಡಿ ಇಟ್ಟ ಸ್ಥಳದಲ್ಲಿ ನೀನು ಯಾಕೆ ಬಟ್ಟೆ ಅಂಗಡಿ ಇಟ್ಟೀದ್ದೀಯಾ? ಅಲ್ಲಿಂದ  ತೆಗಿ ಎಂದು ಬೈದಾಡಿಕೊಂಡು  ಪರಸ್ಪರ ಉರುಡಾಟ ನಡೆಸಿ  ಹೊಡೆದಾಡಿಕೊಂಡಿದ್ದು ಇದನ್ನು ಕಂಡ  ಪೊಲೀಸರು  ಅಲ್ಲಿಗೆ ಹೋಗಿ  ಮೂವರನ್ನು ಹಿಡಿದು ವಶಕ್ಕೆ ಪಡಕೊಂಡು  ಒಬ್ಬಾತನ ಹೆಸರು ಕೇಳಲಾಗಿ  ಮೊಹಮ್ಮದ್ ಆಲಿ ಪ್ರಾಯ 36 ವರ್ಷ ಎಂದು ತಿಳಿಸಿದ್ದು  ಇನ್ನಿಬ್ಬರ ಹೆಸರು ವಿಳಾಸ ಕೇಳಲಾಗಿ ಮೊಹಮ್ಮದ್ ಆರೀಪ್  ಇನ್ನೊಬ್ಬನ ಹೆಸರು ಮಹಮ್ಮದ್ ರವೂಪ್ ಪ್ರಾಯ 26 ವರ್ಷ   ಎಂಬುವುದಾಗಿ ತಿಳಿಸಿದ್ದು, ತಿಳಿಸಿರುತ್ತಾರೆ. ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ರಸ್ತೆ ಬದಿಯಲ್ಲಿ ಒಬ್ಬರಿಗೊಬ್ಬರು  ಪರಸ್ಪರ   ಬೈದಾಡಿಕೊಂಡು  ಉರುಡಾಟ ನಡೆಸಿ  ಹೊಡೆದಾಡಿಕೊಂಡು  ಸಾರ್ವಜನಿಕ ಸ್ಥಳದಲ್ಲಿ ಶಾಂತಿ ಭಂಗ ಮಾಡಿದ   ಮೊಹಮ್ಮದ್ ಆಲಿ, ಮೊಹಮ್ಮದ್ ಆರೀಪ್, ಮಹಮ್ಮದ್ ರವೂಪ್ ರವರನ್ನು ಬೆಳಿಗ್ಗೆ 7.30 ಗಂಟೆಗೆ ವಶಕ್ಕೆ ಪಡಕೊಂಡು ಠಾಣೆಗೆ ಬಂದು ಬಂಟ್ವಾಳ ಗ್ರಾಮಾಂತರ ಠಾಣೆ ಅ,ಕ್ರ 17-2022 ಕಲಂ 160 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ವೆಂಕಟೇಶ ಜಿ ಎಮ್ ಪ್ರಾಯ:47 ವರ್ಷ ತಂದೆ; ದಿ/ ಮಾದೇ ಗೌಡ ವಾಸ: ಗೌಡನಹಳ್ಳಿ ಮನೆ ಮತ್ತು ಗ್ರಾಮ ಅಂಬಳೆ ಅಂಚೆ ಚಿಕ್ಕಮಗಳೂರು ತಾಲೂಕು ರವರು ಸ್ನೇಹಿತ ಚಂದ್ರಶೇಖರರೊಂದಿಗೆ ದಿನಾಂಕ: 28-02-2022 ರಂದು ಬೆಳಗ್ಗೆ 05.30 ಗಂಟೆಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದೆಯಾತ್ರೆ ಹೊರಟು ದಿನಾಂಕ:  01-03-2022 ರಂದು ಮಧ್ಯಾಹ್ನ 2.30 ಗಂಟೆಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತಲುಪಿ ನೇತ್ರಾವತಿ ನದಿಗೆ ಸ್ನಾನಕ್ಕೆಂದು ಸಮಯ ಸುಮಾರು 3.00 ಗಂಟೆಗೆ ಹೋಗಿ ಸ್ನಾನ ಮಾಡುತ್ತಿರುವ ಸಮಯ ಆಕಸ್ಮಿಕವಾಗಿ ಕಾಲು ಜಾರಿ ನದಿ ನೀರಿಗೆ ಬಿದ್ದು ಈಜಲು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಗಿರುತ್ತದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆ ಯು ಡಿ ಆರ್ 13/2022 ಕಲಂ: 174 ಸಿಆರ್ ಪಿ ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 02-03-2022 06:11 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080