ಅಪಘಾತ ಪ್ರಕರಣ: ೦3
ವಿಟ್ಲ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ರಂಜನ್ ಪಿ ಸಿ (28)ತಂದೆ:ಚಂದ್ರಶೇಖರ ವಾಸ:ನೆಹರು ನಗರ ಮನೆ ಕಬಕ ಗ್ರಾಮ ಪುತ್ತೂರು ತಾಲೂಕು ರವರು ತಮ್ಮ ಬಾಬ್ತು ಕೆಎ 19 ಎಬಿ 0631 ನಂಬ್ರದ ಕಂಟೈನರ್ ಗೂಡ್ಸ್ ವಾಹನದಲ್ಲಿ ಪುತ್ತೂರಿನ ನೆಹರು ನಗರದ ತನ್ನ ಮನೆ ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಬಂಟ್ವಾಳ ತಾಲೂಕು ನೆಟ್ಲ ಮುಡ್ನೂರು ಗ್ರಾಮ ಕೊಡಾಜೆ ಮಸೀದಿಯ ಕ್ರಾಸ್ ಬಳಿ ಹೋಗುತ್ತಿರುವಾಗ ಮಾಣಿ ಕಡೆಯಿಂದ ಪುತ್ತೂರು ಕಡೆಗೆ ಬರುತ್ತಿದ್ದ ಕೆಎ 41 ಎಂ 896 ನಂಬ್ರದ ಆಲ್ಟೋ ಕಾರಿನ ಚಾಲಕ ಅಜಾಗರೂಕತೆಯಿಂದ ತನ್ನ ತಪ್ಪು ಮಾರ್ಗವಾಗಿ ಚಾಲನೆ ಮಾಡಿ ಕಂಟೈನರ್ ಗೂಡ್ಸ್ ವಾಹನಕ್ಕೆ ಡಿಕ್ಕಿಪಡಿಸಿದ ಪರಿಣಾಮ ಕಾರಿನ ಚಾಲಕನ ತಲೆ ಹಾಗೂ ಮುಖಕ್ಕೆ ರಕ್ತಗಾಯವಾಗಿರುವುದಾಗಿದೆ ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಅ.ಕ್ರ 46/2021 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಅದಾಮ್ ಎಸ್, ಪ್ರಾಯ 47 ವರ್ಷ, ತಂದೆ: ದಿ. ಮಹಮ್ಮದ್ ವಾಸ: ಪೆರಮೊಗೇರು ಮನೆ, ಕೆದಿಲ ಅಂಚೆ, ಪೇರಮೊಗೇರು, ಬಂಟ್ವಾಳ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 01-04-2021 ರಂದು 14-00 ಗಂಟೆಗೆ ಆರೋಪಿ ಕಾರು ಚಾಲಕ ಪ್ರವೀಣ ಶೆಟ್ಟಿ ಎಂಬವರು KA-19-AB-2690 ನೇ ನೋಂದಣಿ ನಂಬ್ರದ ಕಾರನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಗಡಿಯಾರ ಮಸೀದಿ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ತೀರಾ ರಾಂಗ್ ಸೈಡಿಗೆ ಚಲಾಯಿಸಿದ ಪರಿಣಾಮ, ಅಶ್ರಫ್ ರವರು ಚಾಲಕರಾಗಿ ಬೀಪಾತಿಮ (60ವರ್ಷ), ಅತಾಹುಲ್ಲಾ (35ವರ್ಷ), ನಸೀದಾ (30ವರ್ಷ), ಮಾಸೀದಾ (2½ವರ್ಷ), ಮುಬಾಸಿರ್ (5ವರ್ಷ) ರವರನ್ನು ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಪಾಟ್ರಕೋಡಿ ಕಡೆಯಿಂದ ಪೇರಮೊಗರು ಕಡೆಗೆ ಹೆದ್ದಾರಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದ KA-21-B-8782 ನೇ ನೋಂದಣಿ ನಂಬ್ರದ ಅಟೋರಿಕ್ಷಾ ವಾಹನಕ್ಕೆ ಅಪಘಾತವಾಗಿ, ರಿಕ್ಷಾ ಚಾಲಕ ಹಾಗೂ ಪ್ರಯಾಣಿಕರೆಲ್ಲರಿಗೂ ಗಾಯಗಳಾಗಿ, ಚಿಕಿತ್ಸೆಗೆ ಕಾರೊಂದರಲ್ಲಿ ಮಂಗಳೂರು ಆಸ್ಪತ್ರೆಗೆ ಕಳುಹಿಸಲಾಗಿದೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 59/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ನಿಖಿಲ್ ಎಂ.ವಿ, ಪ್ರಾಯ 21 ವರ್ಷ, ತಂದೆ: ವಸಂತ ನಾಯ್ಕ ವಾಸ: ಮಾಲ್ತೋಟ್ಟು ಮನೆ, ಪಡ್ನೂರು ಅಂಚೆ ಮತ್ತು ಗ್ರಾಮ, ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 01-04-2021 ರಂದು ಆರೋಪಿ ಮಿನಿ ಗೂಡ್ಸ್ ವಾಹನ ಚಾಲಕ ಸಿದ್ದಿಕ್ ಅಕ್ಬರ್ ಎಂಬವರು KA-70-3228 ನೇ ನೋಂದಣಿ ನಂಬ್ರದ ಮಿನಿ ಗೂಡ್ಸ್ ವಾಹನವನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರು ಕಡೆಯಿಂದ ಮಾಣಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕಬಕ ಗ್ರಾಮದ ಮಂಜಲ್ಪಡ್ಪು ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಾಂಗ್ ಸೈಡಿಗೆ ಚಲಾಯಿಸಿದ ಪರಿಣಾಮ, ಹರ್ಷಿತ್ ರವರು ಸವಾರರಾಗಿ ಸಂದೀಪ್ ಶೆಟ್ಟಿ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಮುರ ಕಡೆಯಿಂದ ಸುಳ್ಯ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-19-EN-6088 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲಿಗೆ ಮಿನಿ ಗೂಡ್ಸ್ ವಾಹನ ಅಪಘಾತವಾಗಿ, ಸವಾರ ಹರ್ಷಿತ್ ರವರಿಗೆ ಮುಖಕ್ಕೆ ರಕ್ತಗಾಯ ಮತ್ತು ಸಹಸವಾರ ಸಂದೀಪ್ ಶೆಟ್ಟಿರವರಿಗೆ ಮುಖಕ್ಕೆ ತಲೆಗೆ ಗಾಯಗಳಾಗಿ, ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಕೆಎಂಸಿ ಆಸ್ಪತ್ರೆಗೆ ಕಳುಹಿಸಲಾಗಿದೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 60/2021 ಕಲಂ: 279, 337 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ: ೦1
ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಧೀರಜ್ ರಾವ್ ಎಸ್ ಪ್ರಾಯ 24 ವರ್ಷ ತಂದೆ ದಿ ದಿವಾಕರ ರಾವ್ ವಾಸ ಬೊಳ್ಳಿಯಮಜಲು ಮನೆ ಸುಳ್ಯ ಕಸಬಾ ಗ್ರಾಮ ಸುಳ್ಯ ತಾಲೂಕು ರವರ ಬಾಬ್ತು ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಹಳೆಬಸ್ ನಿಲ್ದಾಣದ ಬಳಿಯಲ್ಲಿರುವ ಮೋಹನ್ ಜ್ಯುವೆಲ್ಲರಿ ಮಾರ್ಟ್ ನಿಂದ ದಿನಾಂಕ: 31.03.2021 ರಂದು ಸಮಯ ಸುಮಾರು 19:45 ಗಂಟೆಯಿಂದ ದಿನಾಂಕ 01.04.2021 ರ ಬೆಳಿಗ್ಗೆ 06:25 ರ ಮದ್ಯೆ ಯಾರೋ ಕಳ್ಳರು ಅಂಗಡಿಯ ಶಟರನ್ನು ಮುರಿದು ಒಳಪ್ರವೇಶಿಸಿ ಅಂಗಡಿಯ ಒಳಗಿದ್ದ ಒಟ್ಟು ಚಿನ್ನಾಭರಣ 180 ಗ್ರಾಂ ಅದರ ಅಂದಾಜು ಮೌಲ್ಯ 7,50,000/- ರೂ ಹಾಗೂ ಕ್ಯಾಶ್ ಡ್ರಾವರಿನಲ್ಲಿದ್ದ ಅಂದಾಜು 50,000/- ನಗದು ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅ.ಕ್ರ 21/2021 ಕಲಂ 457,380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಜೀವಬೆದರಿಕೆ ಪ್ರಕರಣ: ೦2
ಬೆಳ್ತಂಗಡಿ ಪೊಲೀಸ್ ಠಾಣೆ : ದಿನಾಂಕ 31.03.2021 ರಂದು ಸಂಜೆಯ ವೇಳೆ ಬೆಳ್ತಂಗಡಿ ಕುಪ್ಪೆಟ್ಟು ನಿವಾಸಿ ಅಬ್ದುಲ್ ರಹೀಮ್ ತಮ್ಮ ಪಿಕ್ ಅಪ್ ವಾಹನಕ್ಕೆ ದುರಸ್ತಿಗಾಗಿ ಮಹಮ್ಮದ್ ಮುಸ್ತಾಫ ಎಂಬವರ ಜೊತೆ ಬೆಳ್ತಂಗಡಿ ಚರ್ಚ್ ರೋಡ್ ಗೆ ಬಂದಿದ್ದವರು ಆ ಬಳಿಕ ಸವಣಾಲಿನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ತೆರಳಿ ರಾತ್ರಿ ಊಟ ಮುಗಿಸಿ ಮನೆಗೆ ಹಿಂತಿರುಗುವ ವೇಳೆ ಸವಣಾಲಿನಿಂದ ಸ್ವಲ್ಪ ಮುಂದೆ ಸಾಗುತ್ತಿದ್ದಾಗ ಸಮಯ ಸುಮಾರು 10.30-10.45 ವೇಳೆಗೆ ಮೇಲಂತಬೆಟ್ಟು ಗ್ರಾಮ ಪಂಚಾಯತ್ ಬಳಿ ತಲುಪಿದಾಗ ಬೈಕ್ ನಲ್ಲಿ ಬಂದ ಇಬ್ಬರು ವಾಹನ ನಿಲ್ಲಿಸಲು ಸೂಚಿಸಿದ್ದು, ಸದರಿಯವರು ವಾಹನ ನಿಲ್ಲಿಸಿದಾಗ ಓಮ್ನಿ ಕಾರಿನಲ್ಲಿ ಬಂದ ಕೆಲವರು ಸೇರಿದಂತೆ ಒಂದು ಗುಂಪು ದನ ಕಳ್ಳತನದ ಆರೋಪ ಹೊರಿಸಿ ದೊಣ್ಣೆ ಮತ್ತು ಪಾದರಕ್ಷೆಗಳಿಂದ ಹಲ್ಲೆ ನಡೆಸಿ, ಸದರಿಯವರ ಪಿಕ್ ಅಪ್ ವಾಹನವನ್ನು ಜಖಂಗೊಳಿಸಿ, ಜೀವ ಬೆದರಿಕೆ ಹಾಕಿರುತ್ತಾರೆ. ಹಲ್ಲೆಯಿಂದ ರಕ್ತಗಾಯಗೊಂಡ ಅಬ್ದುಲ್ ರಹೀಮ್ ಮತ್ತು ಮಹಮ್ಮದ್ ಮುಸ್ತಾಫ ರವರನ್ನು ಅಲ್ಲಿಗೆ ಬಂದ ಓರ್ವರು ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಹಲ್ಲೆಗೊಳಗಾದ ಅಬ್ದುಲ್ ರಹೀಮ್ ರವರು ಹಲ್ಲೆ ನಡೆಸಿದವರಲ್ಲಿ ಸಾಬು, ರಾಜೇಶ್ ಭಟ್, ರಾಕೇಶ್ ಭಟ್, ಗುರುಪ್ರಸಾದ್, ಲೋಕೇಶ್ ಮತ್ತು ಚಿದಾನಂದ ಎಂಬವರುಗಳನ್ನು ಗುರುತಿಸಿದ್ದು, ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ 143, 147, 341, 504 506 323 324 326 355 427 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ ರಾಜೇಶ್ ಭಟ್, ರಾಕೇಶ್ ಭಟ್, ಗುರುಪ್ರಸಾದ್, ಲೋಕೇಶ್ ಮತ್ತು ಚಿದಾನಂದ ಎಂಬವರುಗಳನ್ನು ಬಂಧಿಸಿದ್ದು, ತನಿಖೆ ಪ್ರಗತಿಯಲ್ಲಿದೆ.
ಕಡಬ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ವಸಂತ ಎಂ (26) ತಂದೆ : ಪದ್ಮಾನಾಭ ವಾಸ: ಮಿತ್ತಬೈಲ್ ಮನೆ ಗ್ರಾಮ ; ಕೊಂಬಾರು ಕಡಬ ತಾಲೂಕು ರವರು ದಯಾನಂದ, ಸುಜೀತ್ ಮತ್ತು ಜನಾರ್ಧನ ಗೌಡ ಎಂಬವರೊಂದಿಗೆ ದಿನಾಂಕ:31.03.2021 ರಂದು ಇಡ್ಯಡ್ಕ ಎಂಬಲ್ಲಿರುವ ಗಂಗಾಧರ ಗೌಡ ಎಂಬವರ ಮನೆಗೆ ಸೋಲಾರ್ ಹಾಕುವ ಕೆಲಸಕ್ಕೆ ಹೋಗಿದ್ದು ಅಲ್ಲಿ ಕೆಲಸ ಮುಗಿಸಿ ಜನಾರ್ಧನ ಗೌಡ ರವರ ಓಮ್ನಿ ಕಾರಿನಲ್ಲಿ ವಾಪಸು ಮನೆಗೆ ಬರುವರೇ ಕೊಂಬಾರು ಗ್ರಾಮದ ಮಣಿಬಾಂಡ ಎಂಬಲ್ಲಿಗೆ ತುಲುಪಿದಾಗ ಸುಂದರ ಎಂಬಾತನು ರಸ್ತೆಗೆ ಬಂದು ಓಮ್ನಿ ಕಾರನ್ನು ತಡೆದು ನಿಲ್ಲಿಸಿ ಚಾಲಕ ಜನಾರ್ಧನ ಗೌಡರಿಗೆ ಅವಾಚ್ಚ ಶಬ್ದಗಳಿಂದ ಬೈಯಲು ಪ್ರಾರಂಬಿಸಿದಾಗ ಪಿರ್ಯಾದುದಾರರು ಕಾರಿನಿಂದ ಇಳಿದು ಜನಾರ್ಧನ ಗೌಡರಿಗೆ ಯಾಕೆ ಬೈಯುತ್ತಿಯ ಎಂದು ಕೇಳಿದಾಗ ಸುಂದರನು ಪಿರ್ಯಾದುದಾರರನ್ನು ಉದ್ದೇಶಿಸಿ ನನ್ನನ್ನು ಕೇಳಲು ನೀನು ಯಾರು ಎಂದು ಹೇಳಿ ಅವಾಚ್ಚ ಶಬ್ದಗಳಿಂದ ಬೈದು ಅಲ್ಲಿಯೇ ಇದ್ದ ಕಲ್ಲನ್ನು ತೆಗೆದು ಪಿರ್ಯಾದುದಾರರಿಗೆ ಬಿಸಾಡಿದಾಗ ಕಲ್ಲು ಪಿರ್ಯಾದಿಯ ಎಡ ಕೆನ್ನೆಗೆ ತಾಗಿ ರಕ್ತ ಗಾಯವಾಗಿದ್ದು ನಂತರ ಪಿರ್ಯಾದುದಾರರು ಬೊಬ್ಬೆ ಹೋಡೆದಾಗ ಸುಂದರನು ನನ್ನ ವಿಚಾರಕ್ಕೆ ನೀನು ಬಂದರೆ ನಿನ್ನನ್ನು ಜೀವ ಸಹಿತ ಬೀಡುವುದಿಲ್ಲ ಎಂದು ಜೀವ ಬೇದರಿಕೆ ಹಾಕಿ ಹೋಗಿರುತ್ತಾನೆ. ಈ ಬಗ್ಗೆ ಕಡಬ ಠಾಣಾ ಅ.ಕ್ರ 26/2021 ಕಲಂ 341.504.324. 506 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೆ ಪ್ರಕರಣ: ೦1
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಜ್ಞಾನಪ್ರಕಾಶ್ ಪ್ರಾಯ 31 ವರ್ಷ ಗಂಡ: ದಿ! ರಾಮಸ್ವಾಮಿ ವಾಸ: ಸಿಆರ್ ಸಿ ಕಾಲೋನಿ ಕೌಡಿಚ್ಚಾರ್ ಅರಿಯಡ್ಕ ಗ್ರಾಮ ಪುತ್ತೂರು ತಾಲೂಕು ರವರು ರಬ್ಬರ್ ಟ್ಯಾಪಿಂಗ್ ಕೆಲಸ ಮಾಡಿಕೊಂಡಿದ್ದು, ದಿನಾಂಕ 31.03.2021 ರಂದು ರಬ್ಬರ್ ಟ್ಯಾಪಿಂಗ್ ಕೆಲಸ ಮುಗಿಸಿಕೊಂಡು ಮನೆಯಲ್ಲಿಯೇ ಇದ್ದ ಸಮಯ ರಾತ್ರಿ ಫಿರ್ಯಾದಿದಾರರ ಪರಿಚಯದ ಸಿಆರ್‌ಸಿ ಕಾಲನಿಯ ನಿವಾಸಿ ವೇಲುಮಣಿ ಎಂಬವರು ಫಿರ್ಯಾದಿದಾರರ ಮನೆಯ ಬಳಿ ಬಂದು ವಿನಾ ಕಾರಣ ಮಾತಿನ ತಕರಾರು ತೆಗೆದಾಗ ಫಿರ್ಯಾದಿದಾರರು ಮನೆಯ ಒಳಗಿನಿಂದ ಅಂಗಳಕ್ಕೆ ಬಂದಾಗ ವೇಲುಮಣಿಯು ಅವರ ಕೈಯಲ್ಲಿದ್ದ ಕತ್ತಿಯಿಂದ ಫಿರ್ಯಾದಿದಾರರಿಗೆ ಕಡಿಯಲು ಕತ್ತಿಯನ್ನು ಎತ್ತಿದಾಗ ಫಿರ್ಯಾದಿದಾರರು ಎಡ ಕೈಯನ್ನು ಅಡ್ಡ ಹಿಡಿದಾಗ ಫಿರ್ಯಾದಿದಾರರ ಎಡ ಕೈಗೆ ಕತ್ತಿಯಿಂದ ಕಡಿದಿದ್ದು, ಅಲ್ಲದೇ ಕತ್ತಿಯ ಹಿಮ್ಮಡಿಯಿಂದ ಫಿರ್ಯಾದಿದಾರರ ಮೊಣ ಕಾಲಿನ ಗಂಟಿಗೆ ಹೊಡೆದಿದ್ದು, ಆ ಸಮಯ ಫಿರ್ಯಾದಿದಾರರು ಜೋರಾಗಿ ಬೊಬ್ಬೆ ಹಾಕುವುದನ್ನು ಕೇಳಿ ಕಾಲನಿಯಲ್ಲಿದ್ದ ನೆರೆಕರೆಯವರು ಬರುವುದನ್ನು ನೋಡಿ ವೇಲುಮಣಿಯು ಕತ್ತಿಯನ್ನು ಪಿರ್ಯಾದಿದಾರರ ಮನೆಯ ಬಳಿ ಬಿಸಾಡಿ ಅಲ್ಲಿಂದ ಹೊರಟು ಹೋಗಿದ್ದು, ವೇಲುಮಣಿಯು ಕತ್ತಿಯನ್ನು ಬೀಸಿದಾಗ ಫಿರ್ಯಾದಿದಾರರ ಎಡ ಕೈ ಯ ಮುಂಗೈಗೆ ರಕ್ತ ಗಾಯ ಮತ್ತು, ಬಲ ಕಾಲಿನ ಮೊಣಗಂಟಿನ ಬಳಿ ಗುದ್ದಿದ ಹಾಗೂ ತರಚಿದ ಗಾಯವಾದ್ದು, ಫಿರ್ಯಾದಿದಾರರನ್ನು ಚಿಕಿತ್ಸೆಯ ಬಗ್ಗೆ ನೆರೆಮನೆಯ ರವಿರಾಜಾ ಎಂಬವರು ಕಾರಿನಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಆ.ಕ್ರ 26/21 ಕಲಂ: 324 ಐ.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦2
ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶಾಂತಿಪ್ರಸಾದ್ ಜೈನ್, ಪ್ರಾಯ: 70 ವರ್ಷ, ತಂದೆ:ದಿ|ಎಂ.ಎನ್. ಅಧಿಕಾರಿ, ದೊಂಡೋಲೆ ಅಂಗನವಾಡಿ ಹತ್ತಿರ, ಧರ್ಮಸ್ಥಳ ಗ್ರಾಮ, ಬೆಳ್ತಂಗಡಿ ತಾಲೂಕು ರವರ ಮಗ ಸುಧೀರ್ ಜೈನ್(45) ರವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಅರ್ಧದಲ್ಲಿಯೇ ನಿಲ್ಲಿಸಿ ಸರಿಯಾಗಿ ಕೆಲಸವಿಲ್ಲದೇ ಅಲ್ಲಲ್ಲಿ ಸುತ್ತಾಡಿಕೊಂಡು ಕೆಲಸವಿಲ್ಲಧೇ ಭಿಕ್ಷೆ ಬೇಡುತ್ತಾ ಭಿಕ್ಷೆಯಿಂದ ಬಂದ ಹಣದಿಂದ ಅಮಲು ಪದಾರ್ಥ ಸೇವಿಸಿಕೊಂಡು ಪೇಟೆಗಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದವರು ದಿನಾಂಕ:31.03.2021 ರಂದು ರಾತ್ರಿಯಿಂದ ದಿ:01.04.2021 ರಂದು ಬೆಳಿಗ್ಗೆ 08.00 ಗಂಟೆ ಯಾವುದೋ ಕಾಯಿಲೆಯಿಂದ ಅಥವಾ ಹೃದಯಾಘಾತ ಅಥವಾ ಇನ್ಯಾವುದೋ ಕಾರಣದಿಂದ ಬೆಳ್ತಂಗಡಿ ತಾಲೂಕು ಸಂತೆಕಟ್ಟೆ ಎಂಬಲ್ಲಿ ಮಲಗಿದ್ದಲ್ಲಿಯೇ ಮೃತಪಟ್ಟಿರುವುದಾಗಿದೆ ಈ ಬಗ್ಗೆ ಬೆಳ್ತಂಗಡಿ ಠಾಣಾ UDR ನಂಬ್ರ: 14/2021 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ವಿಘ್ನೇಶ ಪ್ರಾಯ;45 ವರ್ಷ ತಂದೆ; ಜನಾರ್ಧನ ರಾವ್ ವಾಸ: ವೆಂಕಟ್ರಮಣ ಕೃಪ ಕನ್ಯಾಡಿ-2 ಧರ್ಮಸ್ಥಳ ಗ್ರಾಮ ಬೆಳ್ತಂಗಡಿ ರವರು ಶ್ರೀಕ್ಷೇತ್ರ ಧರ್ಮಸ್ಥಳ ಮಾಹಿತಿ ಕಛೇರಿಯಲ್ಲಿ ನಗರ ನೈರ್ಮಲೀಕರಣದ ಉಸ್ತುವಾರಿಯಾಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ;24-03-2021 ರಂದು 10.00 ಗಂಟೆಯ ಸಮಯಕ್ಕೆ ಮಾಹಿತಿ ಕಛೇರಿಯ ಬಿ ಬ್ಲಾಕ್ ನಲ್ಲಿ ಸುಮಾರು 30-35 ವರ್ಷ ಪ್ರಾಯದ ಅಪರಿಚಿತ ಗಂಡಸು ವ್ಯಕ್ತಿಯು ಅಸೌಖ್ಯದಿಂದ ಬಳಲುತ್ತಿದ್ದವರನ್ನು 108 ಅಂಬುಲಾನ್ಸ್ ನಲ್ಲಿ ಚಿಕಿತ್ಸೆಯ ಬಗ್ಗೆ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಸದ್ರಿ ವ್ಯಕ್ತಿಯು ದಿನಾಂಕ;30-03-2021 ರಂದು ಮೃತಪಟ್ಟಿರುತ್ತಾನೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಯುಡಿಆರ್ ನಂ:25/2021 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ