ಅಭಿಪ್ರಾಯ / ಸಲಹೆಗಳು

ಕಾಣೆ ಪ್ರಕರಣ: 1

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ರೇಣುಕಾ ಗಂಡ: ಅಭಿಷೇಕ್ ವಾಸ: ಹೊಸವಕ್ಕಲು  ಮನೆ, ನೆಲ್ಯಾಡಿ ಗ್ರಾಮ ಕಡಬ ಎಂಬವರ ದೂರಿನಂತೆ ಪಿರ್ಯಾಧಿರವರ ಗಂಡ ಅಭಿಷೇಕ್ ರವರು ದಿನಾಂಕ: 06-02-2021 ರಂದು ಸಂಜೆ 06.00 ಗಂಟೆಗೆ ತನ್ನ ಹೆಂಡತಿ ಮನೆಯಾದ ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ  ನಡುಮಜಲು ಎಂಬಲ್ಲಿಂದ ಬೆಂಗಳೂರಿಗೆ ಕೆಲಸಕ್ಕೆ ಹೋಗುತ್ತೇನೆಂದು ಪಿರ್ಯಾದುದಾರರಲ್ಲಿ ಹೇಳಿ   ಹೋದವರು ಇಲ್ಲಿಯವರೆಗೆ ಬಾರದೇ ಇದ್ದು ಅವರ ಮೊಬೈಲ್ ಸ್ವಿಚ್ಚ್ ಆಫ್ ಬರುತ್ತಿದ್ದು, ಅವರ ಸ್ನೇಹಿತರಲ್ಲಿ ಸಂಬಂಧಿಕರಲ್ಲಿ ವಿಚಾರಿಸಿದಲ್ಲಿ ಅವರ ಸುಳಿವು ದೊರೆಯಲಿಲ್ಲ, ಅವರು ಬರಬಹುದು ಎಂಬ ನಿರೀಕ್ಷೆಯಲ್ಲಿದ್ದು, ಇಲ್ಲಿಯವರೆಗೆ ಬಾರದೇ ಇದ್ದ ಕಾರಣ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ 31-2021 ಕಲಂ: ಗಂಡಸು ಕಾಣೆ ಪ್ರಕರಣ ದಾಖಲಾಗಿರುತ್ತದೆ.

 

 

ಕೊಲೆ ಬೆದರಿಕೆ ಪ್ರಕರಣ: 1

ಸುಬ್ರಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ದಿನೇಶ್, ಪ್ರಾಯ: 38 ವರ್ಷ, ತಂದೆ: ಕುಶಾಲಪ್ಪ ಗೌಡ, ವಾಸ: ಪೂಜಾರಿ ಮನೆ, ಐವತ್ತೊಕ್ಲು ಗ್ರಾಮ, ಸುಳ್ಯ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ: 30.05.2021 ರಂದು ಸುಳ್ಯ ತಾಲೂಕು ಐವತ್ತೊಕ್ಲು ಗ್ರಾಮದ ಕರಂಬು ಮನೆ ನಿವಾಸಿ ಪ್ರಶಾಂತ್ ಎಂಬವರ ಮನೆಗೆ ಕೆಲಸಕ್ಕೆ ಹೋಗಿದ್ದು, ಕೆಲಸ ಮುಗಿಸಿ ಪ್ರಶಾಂತರವರೊಂದಿಗೆ ಪಿರ್ಯಾದಿದಾರರು ಪಂಜ ಪೇಟೆಗೆಂದು ಬರುತ್ತಿರುವ ಸಮಯ ಸಂಜೆ ಸುಮಾರು 4:00 ಗಂಟೆಗೆ ಪಾಂಡಿಗದ್ದೆ ಎಂಬಲ್ಲಿಗೆ ತಲುಪಿದಾಗ  ಆರೋಪಿಗಳಾದ ಜಗದೀಶ, ಮಹೇಶ, ಸತೀಶ ಹಾಗೂ ಇತರ 7 ಜನರು ಸೇರಿ ಸಮಾನ ಉದ್ದೇಶಿತರಾಗಿ ಅಕ್ರಮ ಕೂಟ ಸೇರಿ  ಕೈಯಲ್ಲಿ ಮಾರಕಾಯುಧವಾದ ಕತ್ತಿ, ಮರದ ದೊಣ್ಣೆ ಹಿಡಿದು ಪಿರ್ಯಾದಿದಾರರನ್ನು ಮತ್ತು ಪ್ರಶಾಂತ್ ನನ್ನು ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಪಿರ್ಯಾದಿದಾರರ ಮೊಬೈಲ್ ನ್ನು ಕಸಿದುಕೊಂಡು ಜೀವ ಬೆದರಿಕೆ ಒಡ್ಡಿದ್ದು, ಹೊಟ್ಟೆಯ ಭಾಗ ಮತ್ತು ಇತರ ಕಡೆ ಗಾಯಗೊಂಡ ಪಿರ್ಯಾದಿದಾರರು ದಿನಾಂಕ: 30.05.2021 ರಂದು ಸುಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದು ದಿನಾಂಕ: 31-05-2021 ರಂದು ಎದೆನೋವು ಕಾಣಿಸಿಕೊಂಡಿದ್ದರಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಪುತ್ತೂರಿನ ಆದರ್ಶ ಆಸ್ಪತ್ರೆಗೆ ಹೋಗಿರುತ್ತಾರೆ. ಈ ಬಗ್ಗೆ ಸುಬ್ರಮಣ್ಯ ಪೊಲೀಸ್ ಠಾಣಾ ಅ.ಕ್ರ 32-2021 u/s Sec 143, 147, 148, 324, 341, 504, 506 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

ಬೆಳ್ತಂಗಡಿ ಪೊಲೀಸ್ ಠಾಣೆ : ದಿನಾಂಕ:01.06.2021 ರಂದು 10.15 ಗಂಟೆಗೆ ಪುಂಜಾಲಕಟ್ಟೆ ಪೊಲೀಸ್‌ ಠಾಣಾ ಉಪನಿರೀಕ್ಷಕರು ಠಾಣಾ ಸಿಬ್ಬಂದಿಯ ಜೊತೆ ಬೆಳ್ತಂಗಡಿ ತಾಲೂಕು ಗರ್ಡಾಡಿ  ಗ್ರಾಮದ ಕಾಣೇಲು ನಿವಾಸಿ ಭೋಜ ಎಂಬವರ ಮನೆಗೆ ಧಾಳಿ ನಡೆಸಿ ವಿವಿಧ ನಮೂನೆಯ ರೂ. 42,356/-  ಮೌಲ್ಯದ  58.68   ಲೀಟರ್ ಮಧ್ಯ ಹಾಗೂ 82.53 ಲೀಟರ್ ಬೀರ್‌ ಗಳನ್ನು ಹಾಗೂ ನಗದು  ರೂ. 14125/-ನ್ನು ಮಹಜರು ಮೂಲಕ ಸ್ವಾಧೀನ ಪಡಿಸಿದ್ದು, ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಅ.ಕ್ರ 56/2021 ಕಲಂ: 32,34 ಕೆಇ ಆಕ್ಟ್  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ  01.06.2021 ರಂದು ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಆ.ಕ್ರ 46/21 ಕಲಂ: 448, 354  ಐ.ಪಿ.ಸಿ.ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸ್ವಾತಿ ತಂದೆ: ಲಿಂಗಪ್ಪ ಪೂಜಾರಿ ವಾಸ: ಪೆರಿಯೋಡಿ ಬೀಡು ಬರೆ ಮನೆ, ಕಳ್ಳಿಗೆ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರ ತಂದೆ ಲಿಂಗಪ್ಪ ಪೂಜಾರಿರವರು ಅನಾರೋಗ್ಯದಿಂದ ಬಳಲುತ್ತಿದ್ದು, ಈ ಬಗ್ಗೆ ಚಿಕಿತ್ಸೆಯನ್ನು ಪಡೆದಿದ್ದು, ದಿನಾಂಕ 01.06.2021 ರಂದು ಬೆಳಿಗ್ಗೆ 9.00 ಗಂಟೆಯ ಸಮಯಕ್ಕೆ ಬಿ ಮೂಡ ಗ್ರಾಮದ ತಲಪಾಡಿ ಸಿಟಿ ಪ್ಲಾಜಾ ಕಟ್ಟಡದ ಹಿಂಬದಿಯಲ್ಲಿ ರಕ್ತ ವಾಂತಿ ಮಾಡಿ ಮೃತಪಟ್ಟಿರುವ ವಿಚಾರ ಸ್ಥಳೀಯರ ಮುಖಾಂತರ ಪಿರ್ಯಾದಿದಾರರಿಗೆ ತಿಳಿದು ಬಂದಿರುತ್ತದೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 21-2021 ಕಲಂ  174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 02-06-2021 01:35 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080