ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಬ್ದುಲ್ ಲತೀಫ್ ಪ್ರಾಯ : 31 ವರ್ಷತಂದೆ: ಪಿ.ಜೆ.ಯೂಸುಫ್ವಾಸ: ಪಿತ್ಲಗುಡ್ಡೆ ಮನೆ,  ನರಿಕೊಂಬು ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 31-08-2021 ರಂದು ಪಿರ್ಯಾದಿದಾರರು ತನ್ನ ಅಣ್ಣ ಇಮ್ತಿಯಾಜ್ ರವರ ಬಾಬ್ತು KA-20-AB-1233 ನೇ ಮೋಟಾರು ಸೈಕಲಿನಲ್ಲಿ ಸಹಸವಾರನಾಗಿ ಕುಳಿತು ಇಮ್ತಿಯಾಜ್ ರವರು  ತನ್ನ ಮನೆಯಿಂದ ಗೂಡಿನಬಳಿ ಎಂಬಲ್ಲಿಗೆ ಚಲಾಯಿಸಿಕೊಂಡು ಹೋಗುತ್ತಾ ಸಮಯ ಮಧ್ಯಾಹ್ನ 15:30 ಗಂಟೆಗೆ ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ನೆಹರು ನಗರ ಎಂಬಲ್ಲಿಗೆ ತಲುಪಿದಾಗ ಇಮ್ತಿಯಾಜ್ ರವರು ಮೋಟಾರು ಸೈಕಲನ್ನು ಅತೀ ವೇಗ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದ ಪರಿಣಾಮ ಮೋಟಾರು ಸೈಕಲ್ ಸ್ಕಿಡ್ ಆಗಿ ಸವಾರ ಹಾಗೂ ಸಹ ಸವಾರರವರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಬಲ ಕೈಯ ಮುಂಗೈಗೆ ಗುದ್ದಿದ ಗಾಯವಾಗಿದ್ದು ಇಮ್ತಿಯಾಜ್ ರವರ ಮೈಗೆ ಗುದ್ದಿದ ನೋವು ಆಗಿರುತ್ತದೆ. ಗಾಯಗೊಂಡ ಗಾಯಾಳುಗಳು ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 85/2021  ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರಾಜೇಶ ಕೆ, ಪ್ರಾಯ 35 ವರ್ಷ, ತಂದೆ: ದಿ|| ಐತಪ್ಪ ದೇವಾಡಿಗ, ವಾಸ:  ರಾಘವೇಂದ್ರ ಮಠ ಬಳಿ ಮನೆ, 34 ನೇ ನೆಕ್ಕಿಲಾಡಿ ಗ್ರಾಮ, ನೆಕ್ಕಿಲಾಡಿ ಅಂಚೆ, ಪುತ್ತೂರು ಎಂಬವರ ದೂರಿನಂತೆ ದಿನಾಂಕ 01-09-2021 ರಂದು 07-30 ಗಂಟೆಗೆ ಆರೋಪಿ ಕಾರು ಚಾಲಕ ಈಶ್ವರ ಭಟ್ ಬಿ ಎಂಬವರು KA-21-Z-2631 ನೇ ನೋಂದಣಿ ನಂಬ್ರದ ಕಾರನ್ನು ಉಪ್ಪಿನಂಗಡಿ-ಪುತ್ತೂರು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಪುತ್ತೂರು ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ನೆಕ್ಕಿಲಾಡಿ ಗ್ರಾಮದ ಬೇರಿಕೆ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಾಂಗ್ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದಿದಾರರಾದ ರಾಜೇಶ ಕೆ ಎಂಬವರು ಉಪ್ಪಿನಂಗಡಿ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-U-1088 ನೇ ನೋಂದಣಿ  ನಂಬ್ರದ ಮೋಟಾರ್ ಸೈಕಲ್ಗೆ  ಅಪಘಾತವಾಗಿ, ಪಿರ್ಯಾದುದಾರರ ತಲೆಯ ಎಡಭಾಗಕ್ಕೆ, ಎಡಕಿವಿಗೆ ಗುದ್ದಿದ ಹಾಗೂ ರಕ್ತಗಾಯ, ಎಡಕೈಗೆ, ಬಲಕಾಲಿನ ಮೊಣಗಂಟಿಗೆ, ಎಡಕಾಲಿನ ಮೊಣಗಂಟಿಗೆ ತರಚಿದ ಗಾಯಗಳಾಗಿದ್ದು, ಚಿಕಿತ್ಸೆ ಬಗ್ಗೆ ಪುತ್ತೂರು ಪ್ರಗತಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  109/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವೇಣೂರು ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಜಾನ್ ಡಿ ಕುನ್ನಾ [51] ತಂದೆ: ಪಾಸ್ಕಲ್ ಡೀ ಕುನ್ನಾ ವಾಸ: ಒರಿಮಾರು ಮನೆ ನಾರಾವಿ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ: 31/08/2021 ರಂದು ಪಿರ್ಯಾದಿದಾರರಾದ ಜಾನ್ ಡಿ ಕುನ್ನಾರವರು ತನ್ನ ಹೆಂಡತಿ ರೋಜ ಡಿ ಸೋಜರವಳ ಜೊತೆಯಲ್ಲಿ ನಾರಾವಿ ಪೇಟೆಗೆ ಬಂದವರು ವಾಪಸ್ಸು ಮನೆಗೆ  ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಾ, ಮದ್ಯಾಹ್ನ ಸುಮಾರು  13:45 ಗಂಟೆಗೆ ನಾರಾವಿ ಗ್ರಾಮದ ನಾರಾವಿ ಪೇಟೆಯಿಂದ ಸ್ವಲ್ಪ ಕೆಳಗೆ ಶ್ರೀನಿವಾಸ ಕಿಣಿ ಅವರ ಮನೆಯ ಬಳಿ ತಲುಪಿದಾಗ ನಮ್ಮ ಎದುರುನಿಂದ ಅಂದರೆ ಕಾರ್ಕಳ ಕಡೆಯಿಂದ ಕಬ್ಬಿಣದ ರಾಡ್ ನ್ನು ತುಂಬಿಕೊಂಡು ಬರುತ್ತಿದ್ದ, ಪಿಕಪ್ ನಂತೆ ಕಾಣುವ ವಾಹನವನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗುರೂಕತೆಯಿಂದ ಚಲಾಯಿಸಿಕೊಂಡು ಬಂದು, ಪಿರ್ಯಾದಿದಾರರ ಹೆಂಡತಿ ರೋಜ ಡಿ ಸೋಜರವರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಅವರ ಹಣೆಗೆ ರಕ್ತ ಗಾಯವಾಗಿರುತ್ತದೆ. ಗಾಯಗೊಂಡ ರೋಜ ಡಿಸೋಜ್ ರವರು ಮಂಗಳೂರು ವೆನ್ ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಫಘಾತ ನಡೆಸಿದ ವಾಹನವನ್ನು ಅದರ ಚಾಲಕ ಸ್ಥಳದಲ್ಲಿ ನಿಲ್ಲಿಸದೆ ಗಾಯಾಳನ್ನು ಉಪಚರಿಸಿದೆ ಗಾಯಾಳನ್ನು ಆಸ್ಪತ್ರೆಗೆ ಸಾಗಿಸದೆ,  ಸಂಬಂಧ ಪಟ್ಟವರಿಗೆ ಮಾಹಿತಿ ನೀಡದೆ ವಾಹನದೊಂದಿಗೆ ಪರಾರಿಯಾಗಿರುತ್ತಾನೆ. ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ: 56-2021 ಕಲಂ: 279, 337 ಐಪಿಸಿ ಮತ್ತು ಕಲಂ: 134 (a) (b) ಜೊತೆಗೆ 187 IMV Act   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಾಣೆ  ಪ್ರಕರಣ: 1

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ .ಮಹಮ್ಮದ್ ಇಕ್ಬಾಲ್ (32) ತಂದೆ:ದಿ|| ಕೆ.ಇಸ್ಮಾಯಿಲ್ ವಾಸ: ಕೆಮ್ಮಾರ ಮನೆ ಹಿರೇಬಂಡಾಡಿ ಗ್ರಾಮದ ಪುತ್ತೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರ ತಮ್ಮನಾದ ಮಹಮ್ಮದ್ ಶಫೀಕ್ ಪ್ರಾಯ 18 ವರ್ಷ ಎಂಬಾತನು ದಿನಾಂಕ 01-09-2021 ರಂದು ಮದ್ಯಾಹ್ನ 3 ಗಂಟೆಗೆ ಪುತ್ತೂರು ತಾಲೂಕು ಹಿರೇಬಂಡಾಡಿ ಗ್ರಾಮದ ಕೆಮ್ಮಾರ ಎಂಬಲ್ಲಿರುವ ಕೆಮ್ಮಾರ ಹೊಳೆಯ ನೀರಿನಲ್ಲಿ ಕೈಕಾಲು ತೊಳೆಯಲು ಹೋದವನು ಆಕಸ್ಮಿಕವಾಗಿ ಕಾಲು ಜಾರಿ ಹೊಳೆಯ ನೀರಿಗೆ ಬಿದ್ದು ಹೊಳೆ ನೀರಿನಲ್ಲಿ ಮುಳುಗಿ ಕಾಣೆಯಾಗಿರುತ್ತಾನೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ  82/2021  ಕಲಂ:ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 2

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಎಸ್ ಅಶೋಕ್ ಆಚಾರ್ಯ(52) ತಂದೆ ತಿಮ್ಮಯ್ಯ ಆಚಾರ್ಯ, ವಾಸ ಸಿದ್ದಕಟ್ಟೆ ಸರ್ಕಾರಿ ಕಾಲೇಜು  ಬಳಿ, ಸಂಗಬೆಟ್ಟು ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ 31.08.2021 ರಂದು ಸಂಜೆ ಸುಮಾರು 6.30 ಗಂಟೆಗೆ ಸಿದ್ದಕಟ್ಟೆ ಪೇಟೆಯಲ್ಲಿ ಪಿಗ್ಮಿ ಕಲೆಕ್ಷನ್ ಮಾಡಿ ಬೈಕ್ ನಲ್ಲಿ   ಹೊರಡುವಾಗ ಆರೋಪಿತ ಶ್ರೀಧರ ಪೂಜಾರಿ ರವರು  ಪಿರ್ಯಾದುದಾರರ ಬಳಿ ಬಂದು  ಮೋಟರ್ ಸೈಕಲ್ ಗೆ ಅಡ್ಡ ನಿಂತು ಜೀವ ಬೆದರಿಕೆಯನ್ನು ಹಾಕಿ ಹೋಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ   102/2021    ಕಲಂ 341,504,506  ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಗಣೇಶ್ (26) ತಂದೆ ಅಶೋಕ್ ಪೂಜಾರಿ  ಸುಜೀರ್ ಬದಿಗುಡ್ಡೆ ಮನೆ, ಪುದು ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ವೆಲ್ಟಿಂಗ್ ಕೆಲಸ ಮಾಡಿಕೊಂಡಿದ್ದು ದಿನಾಂಕ 30.08.2021 ರಂದು ರಾತ್ರಿ ಸಮಯ ಪಿರ್ಯಾದುದಾರರ ಸ್ನೇಹಿತ ನವೀನನು ಕಾರ್ತೀಕನ ಆಟೋರಿಕ್ಷಾವನ್ನು ತೆಗೆದುಕೊಂಡು ಮಾರಿಪಳ್ಳಕ್ಕೆ ಹೋಗಿ ಸುಜೀರ್ ಬದಿಗುಡ್ಡೆ ಎಂಬಲ್ಲಿಗೆ ಬರುವಾಗ ನಾಸೀರ್ ಎಂಬಾತನಿಗೆ ರಿಕ್ಷಾ ತಾಗಿ ಈ ಬಗ್ಗೆ ಇಬ್ಬರಲ್ಲು ಮಾತುಕತೆಯಾಗಿದ್ದು  ಆ ಸಮಯ ಆಸ್ಕರ್ ಮತ್ತು ಇತರರು ಬಂದು ಗಲಾಟೆ ಮಾಡಿದ್ದು ಗಲಾಟೆಯ ಸದ್ದು ಕೇಳಿ ಕಾರ್ತಿಕ್ ಮತ್ತು ಪಿರ್ಯಾದುದಾರರು ಹೋದಾಗ ಆರೋಪಿಗಳು ಬಾಟಲಿ ಮತ್ತು ಕಲ್ಲುಗಳನ್ನು ಎಸೆದು ಪಿರ್ಯಾದುದಾರರು, ಹಾಗೂ ನವೀನ್ ಮತ್ತು ಕಾರ್ತಿಕನಿಗೆ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ  ಅವರಿಬ್ಬರು ದಾಖಲಾಗಿದ್ದು   ಗಲಾಟೆ ಸಮಯ ಪಿರ್ಯಾದುದಾರರು ಅಲ್ಲಿಂದ ಓಡಿ ಹೋಗಿದ್ದು ಚಿಕಿತ್ಸೆ ಪಡೆದಿರುವುದಿಲ್ಲ ಇದೇ ವಿಚಾರದಲ್ಲಿ  ದಿನಾಂಕ 31.08.2021 ರಂದು ಸಾಯಾಂಕಾಲ ಪಿರ್ಯಾದುದಾರರು ಅವರ ಬಾಬ್ತು ಆಕ್ವೀವ್ ಹೋಂಡದಲ್ಲಿ ಬಿ ಸಿ ರೋಡ್  ಹೋಗಿ ವಾಪಸ್ಸು ಮನೆಗೆ  ಬರುತ್ತಾ ಮಾರಿಪಳ್ಳ ಎಂಬಲ್ಲಿ ಗೆ ಸಂಜೆ 5.45 ಗಂಟೆಗೆ ತಲುಪಿದಾಗ ಪಿರ್ಯಾದುದಾರರ ಪರಿಚಯದ ಹಕೀಂ ಎಂಬುವವನು ಆತನ ಆಕ್ಟೀವಾ ಹೋಂಡಾವನ್ನು ಪಿರ್ಯಾದುದಾರರ ಆಕ್ಟಿವಾ ಹೋಂಡಾಕ್ಕೆ ತಡೆದು ನಿಲ್ಲಿಸಿ ನೀವು ನಾಸೀರ್ ಹಾಗೂ ಅಸ್ಕರ್ ಮತ್ತು ಇತರರ ಮೇಲೆ ಪೊಲೀಸ್ ಠಾಣೆಗೆ ಕೊಟ್ಟ ದೂರನ್ನು ಹಿಂದಕ್ಕೆ ಪಡೆಯಬೇಕು ಇಲ್ಲವಾದಲ್ಲಿ ನೀನು ಈ ಪರಿಸರದಲ್ಲಿ ಹೇಗೆ ಓಡಾಡುತ್ತೀರಿ ನಿಮಗೆ ಮನೆಗೆ ಹೋಗಲು ಇದೇ ರಸ್ತೆ ಬೇಕಲ್ಲ ಆಗ ನಾವು ನಿಮ್ಮನ್ನು ನೋಡಿಕೊಳ್ಳುತ್ತೇವೆ ಎಂದು ಅವ್ಯಾಚ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ   103/2021    ಕಲಂ 341,504,506  ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

ಬಂಟ್ವಾಳ ನಗರ ಪೊಲೀಸ್ ಠಾಣೆ : ರಶ್ಮಿ ತಹಶೀಲ್ದಾರರು ಬಂಟ್ವಾಳ  ತಾಲೂಕು ಆಫೀಸ ಬಿ ಸಿ ರೋಡ ಬಿ ಮೂಡ ಗ್ರಾಮ ಬಂಟ್ವಾಳ ತಾಲೂಕುರವರು ದಿನಾಂಕ 31/08/2021 ರಂದು ಬೆಳಿಗ್ಗೆ 11.30 ಗಂಟೆಗೆ ಬಿ ಮೂಡ ಗ್ರಾಮದ ಬಿ ಸಿ ರೋಡಿನ ತಾಲೂಕು ಆಫೀಸ್ ನಲ್ಲಿ ಕೋವಿಡ್-19 ಕ್ಕೆ ಸಂಬಂಧಪಟ್ಟಂತೆ ವ್ಯಾಕ್ಸಿನ್ ಹಾಗೂ ಕಾರ್ಮಿಕ ವರ್ಗದವರಿಗೆ ಉಚಿತ್ ಕಿಟ್ ವಿತರಿಸಲ್ಪಡುವ ಸಂದರ್ಭದಲ್ಲಿ ಏಕಪಕ್ಷೀಯವಾದ ರ್ತಿರ್ಮಾನಗಳನ್ನು ತೆಗೆದುಕೊಂಡು ದುರುಪಯೋಗಪಡಿಸಲಾಗುತ್ತಿದೆ ಎಂಬ ಆರೋಪವನ್ನು ಇಟ್ಟುಕೊಂಡು ಸುಮಾರು 50 ರಿಂದ 60 ಜನರಿದ್ದ ಗುಂಪೂಂದು ಯಾವುದೇ ಪುರ್ವಾನುಮತಿಯನ್ನು ಪಡೆದುಕೊಳ್ಳದೇ ಹಾಗೂ ಭದ್ರತೆಗೆ ಅವಕಾಶಗಳನ್ನು ನೀಡದೇ ಏಕಾ-ಏಕಿಯಾಗಿ ಸಾರ್ವಜನಿಕ ಕಛೇರಿಗಳುಳ್ಳ ಬಂಟ್ವಾಳ ಮಿನಿ ವಿಧಾನ (ತಾಲೂಕು ಆಫೀಸ್) ಒಳ ಆವರಣಕ್ಕೆ ಪ್ರವೇಶಿಸಿದ್ದಲ್ಲದೇ ಫೋಷಣೆಗಳನ್ನು ಕೂಗುತ್ತ,  ತಾಲೂಕು ಕಛೇರಿಯನ್ನೊಳಗೊಂಡಂತೆ ಇತರ ಕಛೇರಿಗಳ ದಿನನಿತ್ಯದ ಕೆಲಸ-ಕಾರ್ಯಗಳಿಗೆ ತೊಂದರೆಯನ್ನುಂಟು ಮಾಡಿರುವುದಲ್ಲದೇ ಶಾಂತಿಯುತವಾಗಿ ಪ್ರತಿಭಟನೆಯನ್ನು ನಡೆಸದೆ ಹಾಗೂ ಸದ್ರಿ ಕಛೇರಿಯ ಆವರಣದಲ್ಲಿದ್ದ ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿಯುಂಟಾಗಿದ್ದು ಕಂಡು ಬರುತ್ತದೆ. ಪ್ರತಿಭಟನೆಯ ಸಂದರ್ಭದಲ್ಲಿ ಆರೋಪಿತರು ಸರಕಾರದ ಕೋವಿಡ್-19 ಮಾರ್ಗಸೂಚಿಗಳನ್ನು ಹಾಗೂ ಪರಿಷ್ಕೃತ ಆದೇಶಗಳನ್ನು ಉಲ್ಲಂಘಿಸಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಅಕ್ರ: 103/2021 ಕಲಂ: 143, 147, 427, 269, 270 ಜೊತೆ 149 ಐಪಿಸಿ ಹಾಗೂ ಕಲಂ: 5 (1)  ಕರ್ನಾಟಕ ಸಾಂಕ್ರಾಮಿಕ ರೋಗಗಳ ಆಧ್ಯಾದೇಶ ಕಾಯ್ದೆ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಪೂರ್ಣಿಮ (29) ಗಂಡ; ವಸಂತ ವಾಸ; ಕವಟೆ ಮನೆ ಲಾಯಿಲ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಫಿರ್ಯಾದಿದಾರರ ಗಂಡ ವಸಂತ ಪ್ರಾಯ 33 ವರ್ಷದವರು ಸುಮಾರು 6 ತಿಂಗಳಿನಿಂದ ಮಾನಸಿಕವಾಗಿ ವರ್ತಿಸಿದ್ದವರು ದಿನಾಂಕ; 30.08.2021 ರಂದು ಪಿರ್ಯಾದಿದಾರರು ಕೆಲಸಕ್ಕೆ ಹೋಗಿದ್ದ ಸಮಯ ಮಧ್ಯಾಹ್ನ 3.00 ಗಂಟೆಗೆ ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಕಾವಟೆ ಎಂಬಲ್ಲಿ ತನ್ನ ಮನೆಯಲ್ಲಿ ತಾನು ವಿಷ ಪದಾರ್ಥ ಸೇವಿಸಿರುವುದಾಗಿ ಪಿರ್ಯಾದಿದಾರರಿಗೆ ಗಂಡ ವಸಂತರವರು ಪೋನ್‌ ನಲ್ಲಿ ತಿಳಿಸಿದಂತೆ ಪಿರ್ಯಾದಿದಾರರು ಮನೆಗೆ ಬಂದು ಗಂಡ ವಸಂತರವರನ್ನು ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಪ್ರಥಮ ಚಿಕಿತ್ಸೆಯನ್ನು ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಜಿಲ್ಲಾ ವೆನ್ಲಾಕ್  ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿ ಚಿಕಿತ್ಸೆಯಲ್ಲಿ ಇದ್ದವರು ದಿನಾಂಕ;01.09.2021 ರಂದು ಬೆಳಿಗ್ಗೆ 09.52 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣಾ ಯುಡಿಆರ್ ನಂ: 27/2021. ಕಲಂ:174 ಸಿಆರ್.ಪಿ.ಸಿ.      ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 02-09-2021 09:38 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080