ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ಸುಳ್ಯ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಅಭಿಲಾಶ್ ಕೆ.ಪಿ ಪ್ರಾಯ 27 ವರ್ಷ ತಂದೆ: ಪ್ರಭಾಕರ ಕೆ. ಕೇವಳ ಮನೆ ಮಡಪ್ಪಾಡಿ ಗ್ರಾಮ ಸುಳ್ಯ ತಾಲೂಕು ರವರು ದಿನಾಂಕ 31.08.2022 ರಂದು ತನ್ನ ಭಾವ ಸುಧಾಮ ರವರ ಬಾಬ್ತು ಕಾರು ನಂಬ್ರ ಕೆಎ-05-ಎನ್‌ಎ-8904 ನೇದರಲ್ಲಿ ತಾಯಿ ವನಜ, ಅಕ್ಕ ನಿಶಾಮಣಿ, ಮತ್ತು ಎಂಟು ತಿಂಗಳ ಮಗುವಿನೊಂದಿಗೆ ಸುಳ್ಯ ಪೇಟೆಗೆ ಬಂದು ವಾಪಾಸು ಮನೆ ಕಡೆಗೆ ಎಲಿಮಲೆ-ಮಡಪ್ಪಾಡಿ ಮಾರ್ಗವಾಗಿ ಹೋಗುತ್ತಿರುವ ಸಮಯ ಸುಳ್ಯ ತಾಲೂಕು ಮರ್ಕಂಜ ಗ್ರಾಮದ ಸೇವಾಜೆ ಎಂಬಲ್ಲಿಗೆ ತಲುಪಿದಾಗ ಎದುರಿನಿಂದ ಅಂದರೆ ಮಡಪ್ಪಾಡಿ ಕಡೆಯಿಂದ ಮೋಟಾರ್ ಸೈಕಲನ್ನು ಅದರ ಸವಾರ ಹಿಂಬದಿ ಸವಾರರನ್ನು ಕುಳ್ಳಿರಿಸಿಕೊಂಡು ರಸ್ತೆಯ ತಿರುವಿನಲ್ಲಿ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಉಂಟು ಮಾಡಿದ್ದರಿಂದ ಬೈಕ್‌ನ ಸವಾರರು ಮತ್ತು ಸಹ ಸವಾರರು ರಸ್ತೆಯ ಎಸೆಯಲ್ಪಟ್ಟಿದ್ದು, ಕೂಡಲೇ ಪಿರ್ಯಾದಿದಾರರು ಹಾಗೂ ಇತರರು ಸೇರಿ ಅವರನ್ನು ಉಪಚರಿಸಿ ನೋಡಲಾಗಿ ಬೈಕ್ ಸವಾರನ ಕಾಲಿಗೆ ರಕ್ತಗಾಯ ಹಾಗೂ ಶರೀರದ ಇತರ ಕಡೆಗೆ ಗುದ್ದಿದ ಗಾಯವಾಗಿದ್ದು, ಸಹ ಸವಾರರಾಗಿದ್ದ  ಹೆಂಗಸಿಗೆ ಬಲ ಕೈಗೆ ರಕ್ತಗಾಯ ಹಾಗೂ ಇತರ ಕಡೆಗಳಿಗೆ ಗುದ್ದಿದ ಗಾಯವಾದರನ್ನು ಚಿಕಿತ್ಸೆ ಬಗ್ಗೆ ಒಂದು ವಾಹನದಲ್ಲಿ ಸುಳ್ಯಕ್ಕೆ ಕಳುಹಿಸಿಕೊಟ್ಟಿದ್ದು, ಕಾರಿನಲ್ಲಿದ್ದ ಪಿರ್ಯಾದಿದಾರರಿಗೆ ಹಾಗೂ ಇತರರಿಗೆ ಯಾವುದೇ ಗಾಯಗಳಾಗದೇ ಇದ್ದು, ಡಿಕ್ಕಿ ಉಂಟು ಮಾಡಿದ ಬೈಕಿನ ನಂಬ್ರ ನೋಡಲಾಗಿ ಕೆಎ-21-ವಿ-5900 ಆಗಿದ್ದು ಸವಾರರ ಹೆಸರು ದೀಕ್ಷಿತ್ ಎಂದು ತಿಳಿದುಬಂದಿದ್ದು, ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅ,ಕ್ರ 97/22  ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 1

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಬಿ ಲಕ್ಷ್ಮೀ ನಾರಾಯಣ ಕಿಣಿ ಪ್ರಾಯ: 51 ವರ್ಷ ತಂದೆ: ದಿ|| ಬಿ ಜನಾರ್ಧನ ಕಿಣಿ  ವಾಸ:  ಪಲ್ಲಮಜಲು ಮನೆ,  ಬಿ ಮೂಡ ಗ್ರಾಮ, ಬಂಟ್ವಾಳ ತಾಲೂಕು ರವರು ದಿನಾಂಕ: 31.08.2022 ರಂದು ನಂದಾವರ ದೇವಸ್ಥಾನ ಹಾಗೂ ಜಕ್ರಿಬೆಟ್ಟು ಗಣೇಶೋತ್ಸವಕ್ಕೆ ಹೋಗಿ ಬಳಿಕ ರಾತ್ರಿ 9.30 ಗಂಟೆಗೆ ಹೆಂಡತಿ ಹಾಗೂ ಮಗಳೊಂದಿಗೆ  ಮನೆಗೆ ಬಂದು  ಮನೆಯ ಹಿಂಭಾಗದ ಡೋರಿನ ಮೂಲಕ ಮನೆ ಪ್ರವೇಶಿಸುವರೇ ಕೀಯಿಂದ  ಬಾಗಿಲು ತೆರೆದು ಒಳಗೆ ಹೋಗಿ ಬೆಡ್ ರೂಂ ನ ಬಾಗಿಲು ನೋಡಲಾಗಿ ಯಾವುದೋ ಆಯುಧದಿಂದ ಮೀಟಿ ಬಾಗಿಲು ತೆರೆದಿದ್ದು ಸಂಶಯಗೊಂಡು ನೋಡಲಾಗಿ ಗೋದ್ರೆಜಿನಲ್ಲಿ ಇಟ್ಟಿದ್ದ 9,39,300 ರೂಪಾಯಿ  ಮೌಲ್ಯದ  ಚಿನ್ನಾಭರಣಗಳು ಇರುವ ಸ್ಟೀಲ್ ಬುತ್ತಿ ಕಾಣದೇ ಇದ್ದು ಮನೆಯಲ್ಲಿ ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ. ದಿನಾಂಕ 31.08.2022 ರಂದು ಮದ್ಯಾಹ್ನ 12:30  ಗಂಟೆಯಿಂದ ರಾತ್ರಿ 9:30 ಗಂಟೆಯ ಮದ್ಯಾವಧಿಯಲ್ಲಿ   ಯಾರೋ ಕಳ್ಳರು ಮನೆಯ ಮಾಸ್ಟರ್ ಬೆಡ್ ರೂಮಿನ ಬಾಗಿಲು ಮುರಿದು ಒಳಪ್ರವೇಶಿಸಿ ಗ್ರೋದ್ರೆಜಿನಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ: 81/2022 ಕಲಂ: 454, 457 380 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಜೀವಬೆದರಿಕೆ ಪ್ರಕರಣ: 2

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ  ಜುರೈಝ್ ಪ್ರಾಯ 22 ತಂದೆ ಅಬ್ದುಲ್ ವಾಸ ಕೌಡಿಕಟ್ಟೆ ಮನೆ ದೊಡ್ಡಹನಕೋಡು ಗ್ರಾಮ ಸೋಮರಪೇಟೆ ತಾಲುಕು ರವರು ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದು ರಾತ್ರಿ ಅಫ್ರೀದ್ ಎಂಬುವವರ ಮನೆಯಲ್ಲಿ ಉಳಿದುಕೊಳ್ಳುವುದಾಗಿದೆ. 2 ದಿನಗಳ ಹಿಂದೆ ಮೋಟಾರ್ ಸೈಕಲ್ ನಲ್ಲಿ ಅಫ್ರೀದ್ ಹುಡುಗಿಗೆ ತೊಂದರೆ ನೀಡಿದ್ದ ಎಂಬ ವಿಚಾರದಲ್ಲಿ ಅಫ್ರೀದ್ ನ  ಮೇಲೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆದ್ದರಿಂದ ಅಫ್ರೀದನು ಪೊಲೀಸರು ಹುಡುಕುತ್ತಿದ್ದಾರೆ ಎಂಬ ಕಾರಣಕ್ಕೆ ಅಡಗಿ ಕುಳಿತ್ತಿದ್ದು ಈ ವಿಚಾರವಾಗಿ ಅಫ್ರೀದ್ ಮಾವ ನೌಷಾದ್ ಎಂಬುವವರಿಗೆ ಕಂಚಿನಡ್ಕಪದವು ಎಂಬಲ್ಲಿ  ಹಲ್ಲೆ ನಡೆಸಿದ್ದು ಈ ವಿಚಾರ ತಿಳಿದ ಅಫ್ರೀದ್ ನು ಕೋಪಗೊಂಡು ದಿನಾಂಕ 01.09.2022 ರಂದು ಸಮಯ ಸಂಜೆ 6.00 ಗಂಟೆಗೆ ರಮ್ಲಾತ್ ರವರ ಮನೆಯವರಿಗೆ ಸೇಡು ತೀರಿಸಿಕೊಳ್ಳತ್ತೇನೆಂದು ನಡೆದುಕೊಂಡು  ಹೋಗುತ್ತಿದ್ದ ಸಮಯ ಪಿರ್ಯಾದುದಾರರು ಅಫ್ರೀದ್ ನ ನನ್ನು ಹೋಗದಂತೆ ತಡೆಯಲು ಹಿಂದೆ ಹೋಗುತ್ತಿದ್ದು ಸಜೀಪನಡು ಕ್ರಾಸ್ ಹೋಗುವ ಜಂಕ್ಷನ್ ಬಳಿ ತಲುಪುತ್ತಿದ್ದಂತೆ ರಸ್ತೆಯಲ್ಲಿ 10-12 ಜನರು ಸೇರಿಕೊಂಡು ಅಫ್ರೀದ್ ನನ್ನು ಉದ್ದೇಶಿಸಿ ಕಬ್ಬಿಣದ ರಾಡ್ ಮತ್ತು ಸುತ್ತಿಗೆಯನ್ನು ಹಿಡಿದುಕೊಂಡು ಎಲ್ಲಿಗೆ ಹೋಗುತ್ತೀಯಾ ಎಂದು ತಡೆದು ನಿಲ್ಲಿಸಿ ಕೇಳಿದಾಗ ,ರಮ್ಲಾತ್ ರವರ ಮನೆಯವರು ನನ್ನ ಮಾವನಿಗೆ ಹೊಡೆದಿರುತ್ತಾರೆ .ಅವರನ್ನು ಬಿಡುವುದಿಲ್ಲ ಎಂದು ಅಫ್ರೀದ್  ಹೇಳಿದ್ದು ಅವರೊಳಗೆ ಜಗಳ ಆಗಿದ್ದು ಸದ್ರಿ ಸ್ಥಳದಲ್ಲಿ ಜನರು ಅಫ್ರೀದ್ ನನ್ನು ನೀನು ಕಂಚಿನಡ್ಕ ಪದುವಿಗೆ ಹೋಗಬೇಡ  ಎಂದು ಹೇಳಿದಾಗ ಅಫ್ರೀದ್ ನು ಮತ್ತು ಅಲ್ಲಿದ್ದ ಜನರ ನಡುವೆ  ಜಟಾಪಟಿ ನಡೆದಿದ್ದು ಅಫ್ರೀದ್ ನ ಕೈಯ್ಯಲ್ಲಿದ್ದ ರಾಡ್ ನ್ನು ಎಳೆದು ಅಫ್ರೀದ್ ಗೆ ರಾಡಿನಿಂದ ಹಲ್ಲೆ ನಡೆಸಿದ್ದು ಉಳಿದವರು ಸೇರಿ ಹಲ್ಲೆ ನಡೆಸಿರುತ್ತಾರೆ. ಅಫ್ರೀದ್ ನ ಜೊತೆಯಲ್ಲಿದ್ದ ಪಿರ್ಯಾದುದಾರರನ್ನು  ಉದ್ದೇಶಿಸಿ ನೀನು ಕೂಡ ಅವನ ಜೊತೆ ಸೇರಿಕೊಂಡಿದ್ದೀಯಾ ಎಂದು ಪಿರ್ಯಾದುದಾರರಿಗೆ ಕೈಯಿಂದ ಹಲ್ಲೆ ನಡೆಸಿ ಕಂಚಿನಡ್ಕಪದವಿಗೆ ಕಾಲಿಟ್ಟರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹೋಗಿರುತ್ತಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಅ,ಕ್ರ  67-2022 .ಕಲಂ  143, 147, 148, 504, 506, 341, 323, 324 ಜೊತೆಗೆ 149 ಐಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಡಬ ಪೊಲೀಸ್ ಠಾಣೆ :ಪಿರ್ಯಾದಿದಾರರಾದ 1.ಜಯಕರ ಪೂಜಾರಿ (47)  ತಂದೆ:ದಿ|. ಮೋನಪ್ಪ ಪೂಜಾರಿ ವಾಸ:ಕಲ್ಲೇರಿ ಮನೆ ಆಲಂಕಾರು ಗ್ರಾಮ ಕಡಬ ತಾಲೂಕು ರವರು ತನ್ನ ಸಂಸಾರದೊಂದಿಗೆ ವಾಸಿಸುತ್ತಿದ್ದು ಅಲಂಕಾರು ಪೇಟೆಯಲ್ಲಿ ಹೋಟೆಲ್‌ ಉದ್ಯಮ ಮಾಡಿಕೊಂಡಿರುವುದಾಗಿರುತ್ತದೆ. ದಿನಾಂಕ:31.08.2022 ರಂದು ಆರೋಪಿತನಾದ ಬಾಸ್ಕರ ಎಂಬಾತನು ಸಮಯ ಸಂಜೆ 05.35 ಗಂಟೆಗೆ ಪಿರ್ಯಾದುದಾರರ ಹೋಟೇಲ್‌ಗೆ ಮದ್ಯದ ಬಾಟಲಿಯನ್ನು ಹಿಡಿದುಕೊಂಡು ಬಂದು  ಸೋಡ ಕೊಡುವಂತೆ ಪಿರ್ಯಾದುದಾರರಲ್ಲಿ ಕೇಳಿದಾಗ ಪಿರ್ಯಾದುದಾರರು ಇಲ್ಲಿ ಮದ್ಯ ಕುಡಿಯ ಬೇಡ ಎಂದು ಹೇಳಿದಾಗ ಆರೋಪಿತನು ಬಿಡದೇ ಸೋಡಾವನ್ನು ತೆಗೆದುಕೊಂಡು ಅಲ್ಲಿಯೇ ಗ್ಲಾಸ್‌ನಲ್ಲಿ ಹಾಕಿಕೊಂಡು ಮದ್ಯ ಸೇವನೆ ಮಾಡಿದ್ದು ಬಳಿಕ ಆತನಿಗೆ ವಾಂತಿ ಬಂದು ವಾಂತಿ ಮಾಡುವಾಗ ಪಿರ್ಯಾದುದಾರರು ಇಲ್ಲಿ ವಾಂತಿ ಮಾಡಬೇಡ ಎಂದು  ಹೇಳಿದಾಗ ಒಂದು ಸೊಡಾಕ್ಕೆ ಹತ್ತು ರೂಪಾಯಿ ತೆಗೆದುಕೊಳ್ಳುತ್ತಿಯಾ ಎಂದು ಬೈದು ಆಗ ಪಿರ್ಯಾದಿ  ಮತ್ತು ಆರೋಪಿತನಿಗೆ ಜಗಳವಾಗಿದ್ದು ಬಳಿಕ ಆರೋಪಿತನು ಹೊರಗೆ ಹೋಗಿ ಆತನ ಆಟೋರಿಕ್ಷಾದಲ್ಲಿದ್ದ ಕತ್ತಿಯನ್ನು ತೆಗದುಕೊಂಡು ಬಂದು ಹೋಟೇಲ್‌ನಲ್ಲಿದ್ದ ಪಿರ್ಯಾದುದಾರರರಿಗೆ ಕಡಿದಿದ್ದು ಪಿರ್ಯಾದುದಾರರು ಹಿಂದೆ ಸರಿದಿದ್ದರಿಂದ ಕತ್ತಿಯು ಪಿರ್ಯಾದಿಯ ಎಡ ಕೈಗೆ ತಾಗಿರುತ್ತದೆ.  ನಂತರ ಆರೋಪಿತನು ದಿನಾಂಕ:01.09.2022 ರಂದು ಬೆಳಗ್ಗೆ 10.00 ಗಂಟೆಗೆ ಪುನ: ಪಿರ್ಯಾದುದಾರರ ಹೋಟೇಲ್‌ಗೆ ಹೋಗಿ  ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾನೆ ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಅ.ಕ್ರ 73/2022 ಕಲಂ: ಕಲಂ:504,324,506  IPC. ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಇತರೆ ಪ್ರಕರಣ: 1

 

ವಿಟ್ಲ ಪೊಲೀಸ್ ಠಾಣೆ : ಪೊಲೀಸ್‌ ನೀರಿಕ್ಷಕರು ವಿಟ್ಲ ಠಾಣೆ ರವರು ಸಿಬ್ಬಂದಿಗಳೊಂದಿಗೆ ದಿನಾಂಕ 01-09-2022 ರಂದು ಬಂಟ್ವಾಳ ತಾಲೂಕು ಪುಣಚ ಗ್ರಾಮದ ಕೊಲ್ಲಪದವು ಸಾರ್ವಜನಿಕ ಬಸ್ಸು ನಿಲ್ದಾಣದ ಬಳಿಗೆ ತಲುಪಿ ವಾಹನ ತಪಾಸಣೆ ಮಾಡುತ್ತಿದ್ದಾಗ ಶರವು ಕಡೆಯಿಂದ ಸಾರಡ್ಕ ಕಡೆಗೆ ಕೆಎಲ್‌-14-ಎನ್‌-3805ನೇ ಓಮ್ನಿ ಕಾರಿನಲ್ಲಿ ನಾರಾಯಣ ನಾಯ್ಕ ಮತ್ತು ಸಂತೋಷ ಕುಮಾರ್‌ ರವರು ಬಲ್ನಾಡು ಗ್ರಾಮದ ಕುಮಾರ್‌ ಹೊಳ್ಳ ಎಂಬವರಿಂದ ನಸು ಕೆಂಪು ಬಣ್ಣದ ದನದ ಗಂಡು ಕರುವನ್ನು ಖರೀದಿ ಮಾಡಿ ಅದನ್ನು ಕಾರಿನಲ್ಲಿ ತುಂಬಿಸಿ ಅದರ  ಕುತ್ತಿಗೆಗೆ ಮತ್ತು ಕಾಲುಗಳಿಗೆ ಹಗ್ಗದಿಂದ ಹಿಂಸಾತ್ಮಕ ರೀತಿಯಲ್ಲಿ ಬಿಗಿದು ಕಟ್ಟಿ ಮಾಂಸ ಮಾಡುವ ಉದ್ದೇಶಕ್ಕಾಗಿ ಕೇರಳ ಕಡೆಗೆ ಅಕ್ರಮವಾಗಿ ಸಾಗಾಟ ಮಾಡಿರುವುದನ್ನು ಸ್ವಾಧೀನಪಡಿಸಿಕೊಂಡಿದ್ದು ಅದರ ಅಂದಾಜು ಮೌಲ್ಯ ಸುಮಾರು 2000/- ರೂ ಗಳು, ಓಮ್ನಿ ಕಾರಿನ ಅಂದಾಜು ಮೌಲ್ಯ ಸುಮಾರು ಸುಮಾರು 1,50,000/- ರೂ ಗಳು ಆಗಿದ್ದು, ಆರೋಪಿಗಳ ವಿರುಧ್ದ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 137/2022  ಕಲಂ: 5,6,7,12 KARNATAKA PREVENTION OF COW SLANGHTER & CATTLE PREVENTION ACT 2020 ಮತ್ತು ಕಲಂ 11(1)(ಎ),11(1)(ಡಿ) PREVENTION OF CRUELTY TO ANIMALS ACT, 1960. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 02-09-2022 12:25 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080