ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಕೆ.ಪಿ.ಮಹಮ್ಮದ್ (65), ತಂದೆ: ಪಕ್ರಬ್ಬ, ವಾಸ: ಮಣಿಮಜಲು ಮನೆ, ಕಲ್ಲಡ್ಕ ಅಂಚೆ, ಗೋಳ್ತಮಜಲು ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 31-10-2021 ರಂದು ತನ್ನ ಬಾಬ್ತು ಸ್ಕೂಟರಿನಲ್ಲಿ ಮೇಲ್ಕಾರ್ ಕಡೆಯಿಂದ ತನ್ನ ಮನೆ ಕಡೆಗೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಾ ಸಮಯ ಸುಮಾರು 23:00 ಗಂಟೆಗೆ ಬಂಟ್ವಾಳ ತಾಲೂಕು ಪಾಣೆಮಂಗಳೂರು ಗ್ರಾಮದ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಎದುರು ತಲುಪುತ್ತಿದ್ದಂತೆ ತನ್ನ ಎದುರಿನಿಂದ ಹೋಗುತ್ತಿದ್ದ MH-46-BF-4518 ನೇ ಟ್ರೈಲರ್ ಲಾರಿಯೊಂದನ್ನು ಅದರ ಚಾಲಕ ಹಮೀದ್ ಅನ್ಸಾರಿ ಎಂಬವರು ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಕಲ್ಲಡ್ಕ ಕಡೆಯಿಂದ ತಿಲಕ್ ರಾಜ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ  KA-19-EL-6322ನೇ  ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ತಲೆಗೆ, ಹಾಗೂ ಬಲಬದಿ ಹೊಟ್ಟೆಗೆ, ಸೊಂಟಕ್ಕೆ ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಕೊಂಡು ಹೋದಾಗ ಆಸ್ಪತ್ರೆಯ ವೈದ್ಯಾಧಿಕಾರಿಯವರು 23:46 ಗಂಟೆಗೆ ಪರೀಕ್ಷಿಸಿದಾಗ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಠಾಣೆ ಅ.ಕ್ರ 113/2021 ಕಲಂ 279, 304(ಎ) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸುರೇಶ ಕೆ, ಪ್ರಾಯ  38 ವರ್ಷ, ತಂದೆ: ಧರ್ಣಪ್ಪ ಪೂಜಾರಿ, ವಾಸ: ಕೊಳಚ್ಚಾಪು ಮನೆ, ಕೆದಿಲ ಗ್ರಾಮ, ಪೇರಮೊಗ್ರು ಅಂಚೆ, ಬಂಟ್ವಾಳ  ತಾಲೂಕು ಎಂಬವರ ದೂರಿನಂತೆ ದಿನಾಂಕ 01-11-2021 ರಂದು 16-15 ಗಂಟೆಗೆ ಆರೋಪಿ ಕಾರು ಚಾಲಕ ಜೈಶಂಕರ ಎಂಬವರು KA-21-P-0876  ನೇ ನೋಂದಣಿ ನಂಬ್ರದ ಕಾರನ್ನು ಪುತ್ತೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಪುತ್ತೂರು ಕಡೆಯಿಂದ ಸವಣೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಕೊಡಿನೀರು ಎಂಬಲ್ಲಿ ಬೇರೆ ಕಾರನ್ನು ಓವರ್ಟೇಕ್ ಮಾಡಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಾಂಗ್ ಸೈಡಿಗೆ  ಚಲಾಯಿಸಿದ ಪರಿಣಾಮ, ಸೋಮಶೇಖರ ಎಂಬವರು ಸವಣೂರು ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-19-HD-9591 ನೇ ನೋಂದಣಿ ನಂಬ್ರದ ಸ್ಕೂಟರಿಗೆ ಕಾರು ಅಪಘಾತವಾಗಿ ಸೋಮಶೇಖರ ರವರು ರಸ್ತೆಗೆ ಬಿದ್ದು, ತಲೆಗೆ ಗಂಭೀರ ಗಾಯಗಳಾಗಿ, ಚಿಕಿತ್ಸೆಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ  ಮೃತಪಟ್ಟಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  132/2021 ಕಲಂ: 279, 304(ಎ)  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಬ್ದುಲ್ ರಝಾಕ್ ಪ್ರಾಯ: 46 ವರ್ಷ ತಂದೆ: ಅಬ್ದುಲ್ಲಾ ವಾಸ: ಕಂಪ ಮನೆ ಮುಂಡೂರು ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಫಿರ್ಯಾಧಿದಾರರಾದ ಆಬ್ದುಲ್ ರಝಾಕ್‌ರವರು ದಿನಾಂಕ 31.10.2021 ರಂದು ಬೆಳಿಗ್ಗೆ ಸದ್ರಿಯವರ ಮನೆಯಿಂದ ಅವರ ಬಾಬ್ತು ಕೆಎ-21-ಎಮ್ -4462ನೇ ಕಾರಿನಲ್ಲಿ ಕರ್ನೂರಿಗೆ ಮದುವೆಗೆ ಹೋಗಿ ಮಧ್ಯಾಹ್ನ ಕರ್ನೂರಿನಿಂದ ವಾಪಸ್ಸು ಮನೆಗೆ ಹೊರಟು ಫಿರ್ಯಾದಾರರು ಕಾರನ್ನು ಚಲಾಯಿಸಿಕೊಂಡು ಬರುತ್ತಾ ಮಧ್ಯಾಹ್ನ ಸಮಯ ಸುಮಾರು 01:35 ಗಂಟೆಗೆ ಪುತ್ತೂರು ತಾಲೂಕು ನೆಟ್ಟಣಿಗೆ ಮುಡ್ನೂರು ಗ್ರಾಮದ ನೂಜಿಬೈಲು ಎಂಬಲ್ಲಿಗೆ ತಲುಪಿದಾಗ ಫಿರ್ಯಾದಿದಾರರ ಎದುರುಗಡೆಯಿಂದ ಅಂದರೆ ಕಾವು ಕಡೆಯಿಂದ ಈಶ್ವರಮಂಗಲ ಕಡೆಗೆ ಒಂದು ಕಾರನ್ನು ಅದರ ಚಾಲಕನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ತೀರಾ ಬಲ ಬದಿಗೆ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರಿಗೆ ಎದುರುಗಡೆಯಿಂದ ಢಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರ ಕಾರು ಎದುರು ಜಖಂಗೊಂಡಿದ್ದು, ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಫಿರ್ಯಾದಿದಾರರ 15 ವರ್ಷ ಪ್ರಾಯದ ಮಗಳು ಫಾತಿಮತ್ ಬುಶ್ರಾ ರವರಿಗೆ ಹಣೆಗೆ ಮತ್ತು ಮೂಗಿಗೆ ರಕ್ತ ಗಾಯವಾಗಿದ್ದು, ಫಿರ್ಯಾದಿದಾರರ ಹೆಂಡತಿ ಶಕೀನಾ ರವರಿಗೆ ಎಡ ಮೊಣ ಕಾಲಿನ ಗಂಟಿಗೆ ಗುದ್ದಿದ ರೀತಿಯ ಗಾಯವಾಗಿದ್ದು, ಫಿರ್ಯಾದಿದಾರರಿಗೆ ಗಲ್ಲಕ್ಕೆ ರಕ್ತ ಗಾಯ ಹಾಗೂ ಬಲ ಭುಜಕ್ಕೆ, ಹಣೆಗೆ ಗುದ್ದಿದ ರೀತಿಯ ಗಾಯ ಹಾಗೂ ಬಲ ಮೊಣ ಕಾಲಿಗೆ ಗುದ್ದಿದ ರೀತಿಯ ಗಾಯಾವಾಗಿದ್ದು, ಅದೇ ಸಮಯ ಫಿರ್ಯಾದಿದಾರರ ಹಿಂದಿನಿಂದ ಬರುತ್ತಿದ್ದ ಫಿರ್ಯಾದಿದಾರರ ಭಾವ ಅಕ್ಬರ್ ಶಾಫಿ ರವರು ಅವರ ಬಾಬ್ತು ಜೀಪಿನಲ್ಲಿ ಚಿಕಿತ್ಸೆಯ ಬಗ್ಗೆ ಪುತ್ತೂರಿನ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಸದ್ರಿ ಆಸ್ಪತ್ರೆಯಲ್ಲಿ ಫಿರ್ಯಾದಿದಾರರು ಮತ್ತು ಅವರ ಹೆಂಡತಿರವರು ಹೊರ ರೋಗಿಯಾಗಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದು, ಮಗಳು ಫಾತಿಮತ್ ಬುಶ್ರಾರವರನ್ನು  ಹೆಚ್ಚಿನ ಚಿಕಿತ್ಸೆಯ ಬಗ್ಗೆ ಪುತ್ತೂರಿನ ಪ್ರಗತಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಫಿರ್ಯಾದಿದಾರರ ಭಾವ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಅತ್ತಾವರ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಅಲ್ಲಿಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಫಿರ್ಯಾದಿದಾರರ ಮಗಳು ಫಾತಿಮತ್ ಬುಶ್ರಾರವರಿಗೆ ಚಿಕಿತ್ಸೆ ನೀಡಿ ಒಳರೋಗಿಯನ್ನಾಗಿ ದಾಖಲಿಸಿಕೊಂಡಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಅಕ್ರ 96/2021 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮಹಮ್ಮದ್ ಪ್ರಾಯ;43 ವರ್ಷ, ತಂದೆ;ಅಬೂಬಕ್ಕರ್ , ವಾಸ; ದೇರಾಜೆ ಮನೆ ಬಂಗಾಡಿ ಅಂಚೆ ಇಂದಬೆಟ್ಟು ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದಿದಾರರು ಕೃಷಿ ಮತ್ತು ಅಡಿಕೆ ವ್ಯಾಪಾರ ಕೆಲಸ ಮಾಡಿಕೊಂಡಿರುವುದಾಗಿದೆ. ದಿನಾಂಕ; 31.10.2021ರಂದು ಸಮಯ 09.30 ಗಂಟೆಗೆ  ಪಿರ್ಯಾದಿದಾರರ ಹೆಂಡತಿ ಮತ್ತು 3 ಜನ ಮಕ್ಕಳೊಂದಿಗೆ, ಪಿರ್ಯಾದಿದಾರರ ಹೆಂಡತಿಯ ತಮ್ಮನಾದ ಸಪ್ವಾನ್ ಎಂಬಾತನ ಮದುವೆ ನಿಶ್ಚಿತಾರ್ಥದ ಬಗ್ಗೆ ಬಂಟ್ವಾಳ ತಾಲೂಕಿನ ಉಳಿ ಗ್ರಾಮಕ್ಕೆ ತೆರಳಿದ್ದು, ಪಿರ್ಯಾಧಿದಾರರು ಮನೆಯಲ್ಲಿ ಒಬ್ಬನೆ ಇದ್ದವನು ಮನೆಯಲ್ಲಿ ಚಹಾ ತಿಂಡಿ ಮಾಡಿ, ಅಲ್ಲೆ ಮನೆಯ ಹತ್ತಿರದ ಅಡಿಕೆ ತೋಟದಲ್ಲಿ ಹುಲ್ಲು ತೆಗೆಯುವ ಕೆಲಸಕ್ಕೆ ಹೋಗಿರುತ್ತಾರೆ. ಸಂಜೆ ಪಿರ್ಯಾಧಿದಾರರ ಹೆಂಡತಿ ವಾಪಾಸ್ಸು ಮನೆಗೆ ಬಂದವರು ಗಾಡ್ರೇಜ್‌ ನಲ್ಲಿದ್ದ ಮೊಬೈಲ್  ಅಲ್ಲೇ ಪಕ್ಕದಲ್ಲಿ ಚೇರ್ ಮೇಲೆ ಇರುವುದನ್ನು ಕಂಡು ಗಾಬರಿಯಿಂದ ಕಳವು ಆಗಿರಬಹುದೆಂದು ಪಿರ್ಯಾದಿದಾರರನ್ನು ಕರೆದು ನೋಡಿದಾಗ ಗಾಡ್ರೇಜ್‌ ನ ಬಾಗಿಲು ಸ್ವಲ್ಪ ತೆರೆದಿದ್ದು ಅನುಮಾನಗೊಂಡು ನೋಡಿದಾಗ ಗಾಡ್ರೇಜ್‌ ನ ಒಂದು ಲಾಕರ್ ನಲ್ಲಿ ಇರಿಸಿದ್ದ ಸುಮಾರು 12,05,200 ಮೌಲ್ಯದ  ವಿವಿಧ ರೀತಿಯ 40 ಪವನ್ ಚಿನ್ನಾಭರಣಗಳು ಕಳವಾಗಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣಾ ಅಕ್ರ  95/2021 ಕಲಂ:454, 380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 2

ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಲತಾ ಪ್ರಾಯ 38 ವರ್ಷ ಗಂಡ:ಮುರಳಿಧರ ಮಣಿಯಾಣಿ ವಾಸ:ತಚ್ಚಮೆ ಮನೆ, ಪೆರುವಾಯಿ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿದಾರರ ಅಕ್ಕ ಜಾನಕಿರವರು ಅವರ ಮಗ ಯಜ್ಞೇಶನು ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮದ ತಚ್ಚಮೆ ಎಂಬಲ್ಲಿರುವ ಪಿರ್ಯಾಧಿದಾರರ ಮನೆಯ ಪಕ್ಕದಲ್ಲಿ ವಾಸಿಸುತ್ತಿದ್ದು. ಜಾನಕಿರವರಿಗೆ ಪ್ರಸ್ತುತ ಯಾವುದೇ ಕೆಲಸ ಮಾಡಲು ಆಗದೆ ಇರುವುದರಿಂದ ಪಿರ್ಯಾಧಿದಾರರೇ ಅವರ ಯೋಗಕ್ಷೆಮ ನೋಡಿಕೊಳ್ಳುತ್ತಿದ್ದು. ದಿನಾಂಕ:31-10-2021 ರಂದು ಬೆಳಿಗ್ಗೆ 10.00 ಗಂಟೆಯ ಸಮಯಕ್ಕೆ ಜಯಂತಿಯವರೊಂದಿಗೆ ಅಕ್ಕನಿಗೆ ಚಾ,ತಿಂಡಿ ಕೊಡಲು ಹೋದಾಗ ಮನೆಯ ಅಂಗಳದಲ್ಲಿದ್ದ ಯಜ್ಞೇಶನಿಗೆ ನಿನ್ನ ತಾಯಿಯನ್ನು ಚನ್ನಾಗಿ ನೋಡಿಕೊ ಎಂದು ಪಿರ್ಯಾಧಿದಾರರು ಹೇಳಿದಕ್ಕೆ ಯಜ್ಞೇಶನು ನೀವು ನನಗೆ ಬುದ್ದಿ ಹೇಳಲು ಯಾರು? ಎಂದು ಹೇಳಿ ಅಲ್ಲಿಯೇ ಬಿದ್ದುಕೊಂಡಿದ್ದ ಒಂದು ಮರದ ರೀಪು ತುಂಡನ್ನು ತೆಗೆದುಕೊಂಡು ಪಿರ್ಯಾಧಿದಾರರ ತಲೆಯ ಭಾಗಕ್ಕೆ ಹೊಡೆದಿರುತ್ತಾನೆ, ಪರಿಣಾಮ ಪಿರ್ಯಾಧಿ ರಕ್ತಗಾಯಗೊಂಡು ಅಲ್ಲಿಯೇ ಕುಸಿದು ಬಿದ್ದಾಗ ಜಯಂತಿರವರು ಆತನನ್ನು ತಡೆದರು. ಆಗ ಯಜ್ಞೇಶನು ಮರದ ರೀಪನ್ನು ಅಲ್ಲೆ ಬಿಸಾಡಿ ಇನ್ನೂ ಮುಂದಕ್ಕೆ ನನಗೆ ಬುದ್ದಿ ಹೇಳಲು ಬಂದರೆ ನಿಮ್ಮನ್ನು ಕೊಂದು ಹಾಕುತ್ತೇನೆ ಎಂದು ಬೆದರಿಕೆ ಹಾಕಿ ಹೋಗಿರುತ್ತಾನೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 141/2021  ಕಲಂ: 324,506ಬಾಧಂಸಂಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಜನಾರ್ಧನ ಪ್ರಾಯ: 46 ವರ್ಷ, ತಂದೆ:  ಹೊನ್ನಪ್ಪ ನಾಯ್ಕ ಬಳ್ಳಕ್ಕ ಮನೆ, ಕೂತ್ಕುಂಜ ಅಂಚೆ ಗುತ್ತಿಗಾರು  ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ಸುಳ್ಯ ತಾಲೂಕು ಪಂಬೆತ್ತಾಡಿ ಗ್ರಾಮದ ಕಂಜರ್ಪಣೆ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸೇರಿದ ಭೂಮಿಯಲ್ಲಿ ಮೇಲ್ವಿಚಾರಕರಾಗಿದ್ದು, ಸದ್ರಿ ಭೂಮಿಗೆ ಸಂಬಂದಪಟ್ಟಂತೆ ಹರಿಯಪ್ಪ ಗೌಡ ಬಿನ್ ಪುಟ್ಟಪ್ಪ ಗೌಡ, ಮಂಚಿಕಟ್ಟೆ ಪಂಬೆತ್ತಾಡಿ ಗ್ರಾಮ ಎಂಬವರು ದಿನಾಂಕ: 31-10-2021 ರಂದು ಅಪರಾಹ್ನ ಸುಮಾರು 3 ಗಂಟೆಯ ಅನಂತರ ದೇವಸ್ಥಾನದ ಜಾಗಕ್ಕೆ ಅಕ್ರಮವಾಗಿ ಪ್ರವೇಶಿಸಿ ಸುಮಾರು 1 ರಿಂದ 2 ಅಡಿ ಅಗಲ ಮತ್ತು ಸುಮಾರು 20 ಅಡಿ ಉದ್ದಕ್ಕೆ ಅಗಳನ್ನು ತೆಗೆದಿರುತ್ತಾರೆ. ಈ ಬಗ್ಗೆ  ಆಕ್ಷೇಪಿಸಿದ್ದಕ್ಕೆ ಪಿರ್ಯಾದಿದಾರರಿಗೆ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ. ಅ.ಕ್ರ ನಂಬ್ರ : 76/2021, ಕಲಂ: 341,504,506 IPCಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಇತರೆ ಪ್ರಕರಣ: 2

ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಕುಮಾರಯ್ಯ (46) ತಂದೆ: ಕುಂಡ ನಾಯ್ಕ ವಾಸ: ಮಯಿಲೋಡಿ ಮನೆ, ಮಚ್ಚಿನ ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ: 30.10.2021 ರಂದು ರಾತ್ರಿ 9.30 ಗಂಟೆಗೆ ಬೆಳ್ತಂಗಡಿ ತಾಲೂಕು ಮಚ್ಚಿನ ಗ್ರಾಮದ ಮಾಯಿಲೋಡಿ ಎಂಬಲ್ಲಿ ವಿಶ್ವನಾಥ ನಾಯ್ಕ ಎಂಬವರು ತನ್ನ ಜಮೀನಿಗೆ ಬಂದಿರುವ ಕಾಡು ಪ್ರಾಣಿಗಳನ್ನು ಓಡಿಸುವರೇ  ಪರವಾನಿಗೆ ಹೊಂದಿರುವ ಎಸ್‌ಬಿಎಂಎಲ್ ಕೋವಿಯನ್ನು ಉಪಯೋಗಿಸುವಲ್ಲಿ ಅಜಾಗರೂಕತೆ ಮಾಡಿದ ಪರಿಣಾಮ ಕೋವಿ ನೆಲಕ್ಕೆ ಬಿದ್ದು, ಆಕಸ್ಮಿಕವಾಗಿ ಗುಂಡು ಸಿಡಿದು ಅಂಗಳದಲ್ಲಿ ನಿಂತಿದ್ದ  ಕುಮಾರಯ್ಯ ನಾಯ್ಕ ಎಂಬವರ ಕಾಲಿಗೆ ಗುಂಡು ತಗುಲಿ ರಕ್ತ ಗಾಯವಾದವರನ್ನು ವಿಶ್ವನಾಥ ನಾಯ್ಕ ರವರು ಆರೈಕೆ ಮಾಡಿ ಚಿಕಿತ್ಸೆಯ ಬಗ್ಗೆ ವಾಹನವೊಂದರಲ್ಲಿ ಉಜಿರೆ ಬೆನೆಕ ಆಸ್ಪತ್ರೆಗೆ  ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ವೈದ್ಯರು ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ ಮೇರೆಗೆ, ಗಾಯಾಳುವನ್ನು  ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ವೈದ್ಯರು ಗಾಯಾಳು  ಕುಮಾರಯ್ಯ ಎಂಬವರನ್ನು ಒಳ ರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 76/2021 ಕಲಂ: 337, 336 ಐಪಿಸಿ  ಮತ್ತು 30 ಶಸ್ತ್ರಾಸ್ತ್ರ  ಕಾಯ್ದೆ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ : ದಿನಾಂಕ: 01.11.2021 ರಂದು ಸುಳ್ಯ ಪೊಲೀಸ್ ಠಾಣೆ ಅ,ಕ್ರ 82/2021 ಕಲಂ: 3(1)( r) (s) SC/ST Act 2015 and 506 IPC ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಅಸ್ವಾಭಾವಿಕ ಮರಣ ಪ್ರಕರಣ: 2

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವಸಂತ ಪ್ರಾಯ 44 ವರ್ಷ ತಂದೆ; ದೇಜಪ್ಪ ಮೂಲ್ಯ  ವಾಸ;  ಕಂಚಿಲ ಮನೆ ಮಂಚಿ ಗ್ರಾಮ ಎಂಬವರ ದೂರಿನಂತೆ ಪಿರ್ಯಾದುದಾರರ  ತಂದೆ ಪ್ರಾಯಸ್ಥರಾಗಿದ್ದು ಮನೆಯಲ್ಲಿಯೇ ಇದ್ದರು  ನಿನ್ನೆ ದಿನಾಂಕ 31-10-2021 ರಂದು ರಾತ್ರಿ ಪಿರ್ಯಾದುದಾರರು ಮತ್ತು ಮನೆಯವರು  ಊಟ ಮಾಡಿ ಮಲಗಿದ್ದು  ರಾತ್ರಿ  ಸುಮಾರು 11.00 ಗಂಟೆಯ ಸಮಯಕ್ಕೆ ತಂದೆ  ಹಲವಾರು  ಬಾರಿ ವಾಂತಿ ಮಾಡಿ  ನಿತ್ರಾಣವಾಗಿದ್ದು   ಪಿರ್ಯಾದುದಾರರು  ಅವರನ್ನು  ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಬಂದು ಅಲ್ಲಿ ಪ್ರಥಮ  ಚಿಕಿತ್ಸೆ ಕೊಡಿಸಿ ನಂತರ ವೈದ್ಯರ ಸಲಹೆಯಂತೆ ಮಂಗಳೂರು ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಮಂಗಳೂರು ವೆನ್ ಲಾಕ್  ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯಲ್ಲಿದ್ದವರು ದಿನಾಂಕ 01.11.2021 ರಂದು  ರಾತ್ರಿ 3.11 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ  ತಿಳಿಸಿರುತ್ತಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಯುಡಿಆರ್ ನಂ 44-2021 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮುದರ ಪ್ರಾಯ: 58 ವರ್ಷ ತಂದೆ: ಕಿನ್ನಿಗ ವಾಸ: ಕೊರಂಗಿಲ ಮನೆ ಬೆಟ್ಟಂಪಾಡಿ ಗ್ರಾಮ ಪುತ್ತೂರು ಎಂಬವರ ದೂರಿನಂತೆ ಫಿರ್ಯಾದುದಾರರಾದ ಮುದರ,  ಪ್ರಾಯ-58 ವರ್ಷ,  ತಂದೆ-ಕಿನ್ನಿಗ, ವಾಸ- ಕೊರಿಂಗಿಲ  ಮನೆ, ಬೆಟ್ಟಂಪಾಡಿ  ಗ್ರಾಮ, ಪುತ್ತೂರು ತಾಲೂಕು ಎಂಬವರ ಮಗನಾದ ಸುಮಾರು 30 ವರ್ಷ ಪ್ರಾಯದ ವಸಂತ ಎಂಬವನು  ಕೂಲಿ ಕೆಲಸ ಮಾಡಿಕೊಂಡು ಫಿರ್ಯಾದುದಾರರ ಜೊತೆಯಲ್ಲಿ ವಾಸವಾಗಿದ್ದವನು ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಕಾರಣ ದಿನಾಂಕ; 30.10.2021 ರಂದು  ಆತನನ್ನು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿ ಆತನಿಗೆ ಚಿಕಿತ್ಸೆ ಕೊಡಿಸುತ್ತಿದ್ದು, ಈದಿನ ಸದ್ರಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ದೇರಳಕಟ್ಟೆಯ ಯೇನೆಪೋಯ ಆಸ್ಪತ್ರೆಗೆ  ಆತನನ್ನು ಕರೆದುಕೊಂಡು  ಹೋಗಿದ್ದು, ಸದ್ರಿ ಆಸ್ಪತ್ರೆಯಲ್ಲಿ ಈದಿನ ಸಂಜೆ ಸುಮಾರು 4.00 ಗಂಟೆಗೆ ಸದ್ರಿ  ವಸಂತನನ್ನು ಪರೀಕ್ಷಿಸಿದ ವೈದ್ಯಾಧಿಕಾರಿಯವರು ವಸಂತನು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಯುಡಿರ್ ನಂಬ್ರ 40/2021 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 02-11-2021 10:42 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080